ಮೊದಲ ಬಾರಿಗೆ ಫ್ರೆಂಚ್ ಶಬ್ದಕೋಶ ಸೇರಿದ ಬಿರಿಯಾನಿ, ಸೆಲ್ಫಿ

ಬಿರಿಯಾನಿ ಮತ್ತು ಸೆಲ್ಫಿ ಪದಗಳು ಮೊದಲ ಬಾರಿಗೆ ಪ್ರಖ್ಯಾತ ಪ್ರೆಂಚ್ ಶಬ್ದಕೋಶ 'ಲ ಪೆಟಿ ಲರೂಸ್' ಶಬ್ದ ಭಂಡಾರದ ಒಳಹೊಕ್ಕಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಬಿರಿಯಾನಿ ಮತ್ತು ಸೆಲ್ಫಿ ಪದಗಳು ಮೊದಲ ಬಾರಿಗೆ ಪ್ರಖ್ಯಾತ ಪ್ರೆಂಚ್ ಶಬ್ದಕೋಶ 'ಲ ಪೆಟಿ ಲರೂಸ್' ಶಬ್ದ ಭಂಡಾರದ ಒಳಹೊಕ್ಕಿವೆ.

ಲ ಪೆಟಿ ಲರೂಸ್ ಶಬ್ದಕೋಶಕ್ಕೆ ಇದರ ಸಂಪಾದಕರು ೧೫೦ಕ್ಕೂ ಹೆಚ್ಚು ಹೊಸ ಪದಗಳನ್ನು ಸೇರಿಸಿದ್ದಾರೆ.

ಸೆಲ್ಫಿ ಪದಕ್ಕೆ "ಸಾಮಾನ್ಯವಾಗಿ ಸ್ಮಾರ್ಟ್ ಫೋನಿಗಳಲ್ಲಿ ತೆಗೆಯುವ ಹಾಗೂ ಸಾಮಾಜಿಕ ಅಂತರ್ಜಾಲಗಳಲ್ಲಿ ಪ್ರಕಟಿಸುವ ಸ್ವಂತದ ಫೋಟೋ" ಎಂದು ಸಂಪಾದಕರು ಅರ್ಥ ನೀಡಿದ್ದಾರೆ.

ಈ ಶಬ್ಧಕೋಶದ ಇತ್ತೀಚಿನ ಮುದ್ರಣದಲ್ಲಿ ಸೇರ್ಪಡೆಯಾಗಿರುವ ಇತರ ಪ್ರಮುಖ ಪದಗಳು ಬಿರಿಯಾನಿ, ಗೋಜಿ, ವೇಗನ್ ಇತ್ಯಾದಿ.

ಈ ಶಬ್ದಕೋಶ ಪ್ರಮುಖ ವ್ಯಕ್ತಿಗಳು, ವಸ್ತುಗಳು ಮತ್ತು ಸಂಸ್ಥೆಗಳನ್ನು ಕೊಡ ಒಳಗೊಳ್ಳುತ್ತದೆ ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ.

ವ್ಯಕ್ತಿಗಳಲ್ಲಿ ಪ್ರೆಂಚ್ ಭಾಷೆಯ ತತ್ವಶಾಸ್ತ್ರಜ್ಞ ಬರ್ನಾರ್ಡ್-ಹೆನ್ರಿ ಲೆವಿ, ನಟ ಮೈಕೆಲ್ ಕೈನ್, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತಿ ಮಲಾಲ ಯೂಸೋಫ್ ಜಾಯಿ ಕೂಡ ಸೇರಿದ್ದಾರೆ.

ರಾಸೆಟ್ಟ ಬಾಹ್ಯಾಕಾಶ ಸಂಸ್ಥೆ, ಪಿಕ್ಸಾರ್ ಸ್ಟುಡಿಯೋ ಕೂಡ ಶಬ್ದಕೋಶದ ಒಳಹೊಕ್ಕಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com