ಮುಸುಕಿನಲ್ಲಿ ಸಾವು ತಂಬಾಕು

ನಿಧಾನವಾಗಿ ಮಾನವ ದೇಹವನ್ನು ಕೊಲ್ಲುವ ವಿಷವೆಂದರೆ ತಂಬಾಕು. ದೇಹವನ್ನು ಇಂಚಿಂಚಾಗಿ ಕೊಲ್ಲುವ ಶಕ್ತಿ ಇದಕ್ಕಿದೆ. ಇದು ದೇಹಕ್ಕೆ ಹಾನಿಕರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನಿಧಾನವಾಗಿ ಮಾನವ ದೇಹವನ್ನು ಕೊಲ್ಲುವ ವಿಷವೆಂದರೆ ತಂಬಾಕು. ದೇಹವನ್ನು ಇಂಚಿಂಚಾಗಿ ಕೊಲ್ಲುವ ಶಕ್ತಿ ಇದಕ್ಕಿದೆ. ಇದು ದೇಹಕ್ಕೆ ಹಾನಿಕರ ಎಂದು ಹೆಚ್ಚು ಜನರಿಗೆ ತಿಳಿದಿದ್ದರೂ, ಅದರ ಸೇವನೆ ಮಾತ್ರ ನಿಂತಿಲ್ಲ. ತಂಬಾಕು ಸೇವನೆ ಇಲ್ಲದೇ ಬದುಕೇ ಇಲ್ಲ ಎನ್ನುವ ಮನೋಭಾವನೆ ಎಷ್ಟೋ ಜನರಲ್ಲಿ ಇದೆ. ಈ ಹಿನ್ನಲೆಯಲ್ಲಿ ತಂಬಾಕು ಸೇವನೆ ಎಷ್ಟು ಅಪಾಯಕಾರಿ, ಇದು ಮುಂದಿನ ಪೀಳಿಗೆಯ ಮೇಲೆ ಎಷ್ಟು ಪರಿಣಾಮ ಬೀರಬಹುದು ಸೇರಿದಂತೆ ಜನರಲ್ಲಿ ಜಾಗೃತಿ ಮೂಡಿಸಲು ಮೇ 31 ವಿಶ್ವ ತಂಬಾಕು ನಿಷೇಧ ದಿನ ಆಚರಿಸಲಾಗುತ್ತದೆ.
ತಂಬಾಕು ಸೇವನೆಯಿಂದ ಉಂಟಾಗುವ ರೋಗ ಮತ್ತು ಸಾವು ನೋವುಗಳನ್ನು ಸರ್ವರ ಗಮನಕ್ಕೆ ತರಲು ಉದ್ದೇಶದಿಂದ ವಿಶ್ವ ಆರೋಗ್ಯ ಸಂಘಟನೆಯ ಸದಸ್ಯ ರಾಷ್ಟ್ರಗಳು ೧೯೮೭ರಲ್ಲಿ ವಿಶ್ವ ತಂಬಾಕು ನಿಷೇಧ ದಿನವನ್ನು ಆಯೋಜಿಸಿದರು. ಪ್ರತಿ ವರ್ಷ ಮೇ 31 ರಂದು ವಿಶ್ವಾದ್ಯಂತ ತಂಬಾಕು ಸೇವನೆ ನಿಷೇಧ ಮತ್ತು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತವೆ.
ವಿಶ್ವದ ಜನಸಂಖ್ಯೆಯಲ್ಲಿ ತಂಬಾಕು ಸೇವನೆಯಿಂದ ಪ್ರತೀವರ್ಷ ಮಿಲಿಯನ್ ಗಟ್ಟಲೇ ಜನರು ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸೇವನೆ ಚಟವಾಗಿ ಕ್ಯಾನ್ಸರ್, ಉಸಿರಾಟದ ತೊಂದರೆಗಳಿಗೆ ಆಹ್ವಾನ ನೀಡುವುದು. ತಂಬಾಕಿನಲ್ಲಿ ಸೈನೈಡ್, ಬೆಂಜೈನ್, ಫಾರ್ಮಲ್ ಡೀಹೈಡ್, ಮೆಥಾನಾಲ್, ಆಸಿಟಿಲಿನೆ, ಅಮೋನಿಯಂ ರಾಸಾಯನಿಕಗಳಿರುತ್ತವೆ. ಅವುಗಳಲ್ಲಿದೆ ಧೂಮಪಾನದಲ್ಲಿ ಥಾರ್, ವಿಷಕಾರಕ ಅನಿಲಗಳು ದೇಹವನ್ನು ಸೇರಿ, ನಮ್ಮ ದೇಹದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಇದರಿಂದ ದೇಹದಲ್ಲಿ ವಿಷಕಾರಕ ರಾಸಾಯನಿಕಗಳ ಪ್ರಮಾಣ ಹೆಚ್ಚಾಗಿ ಕ್ಯಾನ್ಸರ್, ಹೃದಯದಲ್ಲಿ ತೂತು ಇವುಗಳು ಉಂಟಾಗಿ ತುಂಬಾ ನೋವು ಅನುಭವಿಸಿ ಸಾಯಬೇಕಾದ ಪರಿಸ್ಥಿತಿ ಉಂಟಾಗುವುದು. ಧೂಮಪಾನ ದೇಹದ ಎಲ್ಲಾ ಭಾಗಗಳನ್ನೂ ಪ್ರಭಾವಿಸುತ್ತದೆ ಮತ್ತು ಇದರ ವಿಷ ದೇಹದಲ್ಲೇ ಉಳಿದುಬಿಡುತ್ತದೆ. ಅಲ್ಲದೇ, ಧೂಮಪಾನ ವ್ಯಸನಿಗಳಲ್ಲಿ ಲೈಂಗಿಕ ಸಾಮರ್ಥ್ಯ ಕಡಿಮೆಯಾಗುವುದು.
ಭಾರತಕ್ಕೆ 3 ನೇ ಸ್ಥಾನ
ವಿಶ್ವದಲ್ಲೇ ಅತಿ ಹೆಚ್ಚು ತಂಬಾಕು ಉತ್ಪಾದನೆ ಮತ್ತು ಬಳಕೆ ಮಾಡುವ ರಾಷ್ಟ್ರಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನ ಸಿಕ್ಕಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ತಂಬಾಕು ಬಳಕೆ ಹೆಚ್ಚಾಗಿದೆ. ಧೂಮಪಾನ ಸೇವಿಸುವರಿಗೆ ಮಾತ್ರವಲ್ಲದೇ, ಇತರರ ಮೇಲೂ ಭಾರಿ ಪರಿಣಾಮ ಬೀರಿದೆ. ಭಾರತದಲ್ಲಿರುವ 112 ಮಿಲಿಯನ್ ಜನರಲ್ಲಿ 1.3 ಬಿಲಿಯನ್ ಜನರು ತಂಬಾಕು ಚಟಕ್ಕೆ ಒಳಗಾಗಿದ್ದಾರೆ. ವರ್ಷಕ್ಕೆ ದೇಶದಲ್ಲಿ ತಂಬಾಕು ಸೇವನೆಯಿಂದ ಸುಮಾರು 10 ಲಕ್ಷ ಸಾವನ್ನಪ್ಪುತ್ತಿದ್ದಾರೆ. ಅದರಲ್ಲಿ ಯುವಕರೇ ಹೆಚ್ಚು. 2020ರೊಳಗೆ ಸಾವಿನ ಸಂಖ್ಯೆ ಶೇ.13.3ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ಶೇ.70 ಮಂದಿ ತಂಬಾಕು ಚಟದಿಂದ ದೂರ ಸರಿಯಲು ಇಚ್ಚಿಸುತ್ತಾರೆ, ವಿಪರ್ಯಾಸವೆಂದರೆ, ಕೇವಲ ಶೇ.2ರಂದು ಮಂದಿ ಇದನ್ನು ರೂಢಿಸುತ್ತಾರೆ.
ತಂಬಾಕು ಬಿಡೋದು ಹೇಗೆ?
ಇತ್ತೀಚೆಗೆ ತಂಬಾಕು ಚಟದಿಂದ ವ್ಯಕ್ತಿಯನ್ನು ದೂರವಿರಿಸಲು ವಿವಿಧ ತರಬೇತಿ ಕೇಂದ್ರಗಳು ಆರಂಭಗೊಂಡಿವೆ. ಈ ತರಬೇತಿ ಕೇಂದ್ರಗಳಲ್ಲಿ, ಆರೋಗ್ಯ. ಸಾಮಾಜಿಕ ಮತ್ತು ಆರ್ಥಿಕ ತೊಂದರೆಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಅಲ್ಲದೇ ಈ ಮುಖಾಂತರ ಯಾವ ರೀತಿ ತಂಬಾಕು ತ್ಯಜಿಸಲು ಸಹಾಯ ಮಾಡುತ್ತಾರೆ.
ಶಿಕ್ಷಣ: ಮಕ್ಕಳು ಕೂಡ ತಂಬಾಕು ಸೇವನೆ ರೂಢಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ತಂಬಾಕು ಸೇವನೆ ಹಾನಿಕಾರ ಎಂಬ ಬಗ್ಗೆ ಅರಿವು ಮೂಡಿಸುವುದರಿಂದ ಈ ಅನಾಹುತವನ್ನು ತಡೆಗಟ್ಟಬಹುದು.
ಸಲಹೆ ನೀಡಿ: ತಂಬಾಕು ಸೇವಿಸುವ ಪ್ರತಿಯೊಬ್ಬರಿಗೂ ತಂಬಾಕು ತ್ಯಜಿಸಲು ಸಲಹೆ ನೀಡಬೇಕು
ವೈದ್ಯರ ಸಲಹೆ: ಕೆಲವರು ಜೀವನದಲ್ಲಿ ಯಾವುದೋ ವಿಷಯಕ್ಕೆ ನೊಂದು ತಂಬಾಕು, ಕುಡತದ ಚಟಕ್ಕೆ ಒಳಗಾಗುತ್ತಾರೆ. ಇಂತಹವರು ವೈದ್ಯರ ಸಲಹೆ ಮ್ತತು ಕೌನ್ಸಿಂಲಿಂಗ್ ಮಾಡಿಸಿಕೊಂಡರೆ. ಇದರಿಂದ ಹೊರಬರಬಹುದು.

ರಾಜ್ಯ ಸರ್ಕಾರ ತಂಬಾಕು ಉತ್ಪಾದನೆ ಮತ್ತು ಸೇವನೆ ಮೇಲೆ ನಿಷೇಧವೇರಬೇಕು. ಆಗ ಮಾತ್ರ ಹಾನಿಕಾರಕ ಚಟವನ್ನು ತಡೆಗಟ್ಟಬಹುದು. ತಂಬಾಕು ಉತ್ಪಾದನೆ ಹೆಚ್ಚಾದಷ್ಟು, ಸೇವನೆ ಹೆಚ್ಚಾಗುತ್ತದೆ. ಮನೆಯಲ್ಲಿ ಒಬ್ಬ ವ್ಯಕ್ತಿ ಧೂಮಪಾನ ಮಾಡಿದರೆ, ಅದರಿಂದ ಇಡೀ ಮನೆಮಂದಿಗೆಲ್ಲ ರೋಗ ಬರುತ್ತದೆ. ಇದರ ಬಗ್ಗೆ ಮತ್ತಷ್ಟು ಅರಿವು ಮೂಡಿಸುವ ಅಗತ್ಯವಿದೆ.
-ಡಾ. ಸಯ್ಯದ್ ತೌಶೀಬ್
ನಾರಾಯಣ ಹೃದಯಾಲಯದ ವೈದ್ಯರು

-ಮೈನಾಶ್ರೀ.ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com