ಭಾರತದ ಬ್ಯಾಡ್ಮಿಂಟನ್ ಸೆನ್ಷೇಷನ್ ಪಿವಿ ಸಿಂಧು ಲೈಫ್ ಸೀಕ್ರೆಟ್ಸ್!

ರಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಪ್ರಸ್ತುತ ಭಾರತದಾದ್ಯಂತ ಶ್ಲಾಘನೆಗೆ ಪಾತ್ರರಾಗಿರುವ ಪಿವಿ ಸಿಂಧೂ ಅವರ ಜೀವನದ ಕೆಲ ಪ್ರಮುಖ ಅಂಶಗಳು ಇಲ್ಲಿವೆ.
ಬೆಳ್ಳಿ ಗೆದ್ದ ಪಿವಿ ಸಿಂಧೂ
ಬೆಳ್ಳಿ ಗೆದ್ದ ಪಿವಿ ಸಿಂಧೂ

ಹೈದರಾಬಾದ್: ರಿಯೊ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಪ್ರಸ್ತುತ ಭಾರತದಾದ್ಯಂತ ಶ್ಲಾಘನೆಗೆ ಪಾತ್ರರಾಗಿರುವ ಪಿವಿ ಸಿಂಧೂ ಅವರ ಜೀವನದ ಕೆಲ ಪ್ರಮುಖ  ಅಂಶಗಳು ಇಲ್ಲಿವೆ.

ಪಿವಿ ಸಿಂಧೂ ಮೂಲತಃ ಆಂಧ್ರ ಪ್ರದೇಶ ಮೂಲದವರಾಗಿದ್ದು, 1995 ಜುಲೈ 5ರಂದು ಜನಿಸಿದರು. ಪಿವಿ ಸಿಂಧೂ ಅವರ ಪೂರ್ಣ ಹೆಸರು ಪೂಸರ್ಲ ವೆಂಕಟ ಸಿಂಧು. ಅವರ ತಂದೆ ರಮಣ ವಾಲಿ  ಬಾಲ್ ಆಟಗಾರರಾಗಿದ್ದು, ಅವರು ಕೂಡ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ. ಸಿಂಧೂ ಅವರ ತಾಯಿ ವಿಜಯಾ ಕೂಡ ವಾಲಿಬಾಲ್ ಆಟಗಾರರಾಗಿದ್ದರು ಎಂಬುದು ವಿಶೇಷ. ಪ್ರಸ್ತುತ ಹೈದರಾಬಾದ್  ನ ಭಾಗ್ಯನಗರದಲ್ಲಿ ವಾಸಿಸುತ್ತಿರುವ ಪಿವಿ ಸಿಂಧೂ ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಹೈದರಾಬಾದ್ ನ ಮಹಿಂದ್ರ ಹಿಲ್ಸ್ ನಲ್ಲಿರುವ ಆಕ್ಸಿಲಿಯಂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರು.

ಬಳಿಕ ಮೆಹದಿಪಟ್ನನಲ್ಲಿರುವ ಸೆಂಟ್ ಆನ್ಸ್ ಕಾಲೇಜಿನಲ್ಲಿ ಸಿಂಧೂ ಪದವಿ ಶಿಕ್ಷಣವನ್ನು ಪಡೆದರು. ಪ್ರಸ್ತುತ ವೃತ್ತಿಪರ ಬ್ಯಾಡ್ಮಿಂಟನ್ ನೊಂದಿಗೆ ಎಂಬಿಎ ಸ್ನಾತಕೋತ್ತರ ಪದವಿ ವ್ಯಾಸಂಗ  ಮಾಡುತ್ತಿದ್ದಾರೆ.

ಸಿಂಧೂಗೆ ಓರ್ವ ಸಹೋದರಿ ಇದ್ದು, ಅವರ ಹೆಸರು ದಿವ್ಯ. ಆವರು ಪ್ರಸ್ತುತ ನೆಲ್ಲೂರು ಜಿಲ್ಲೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಇನ್ನು ತಮ್ಮ ಚಿಕ್ಕವಯಸ್ಸಿನಲ್ಲೇ ಬ್ಯಾಡ್ಮಿಂಟನ್ ನಲ್ಲಿ  ಹೆಚ್ಚು ಆಸಕ್ತಿ ಹೊಂದಿದ್ದ ಸಿಂಧೂ ಸಿಕಿಂದ್ರಾಬಾದ್ ನಲ್ಲಿರುವ ಇಂಡಿಯನ್ ರೈಲ್ವೇ ಇನ್ ಸ್ಟಿಟ್ಯೂಟ್ ಆಫ್ ಸಿಗ್ನಲ್ ಇಂಜಿನಿಯರಿಂಗ್ ಕೋರ್ಟ್ ನಲ್ಲಿ ಮೆಹಬೂಬ್ ಅಲಿ ಎಂಬ ಕೋಚ್  ನೆರವಿನೊಂದಿಗೆ ಬ್ಯಾಡ್ಮಿಂಟನ್ ತರಬೇತಿ ಪಡೆದಿದ್ದರು. ಬಳಿಕ ಸೈನಾ ನೆಹ್ವಾಲ್ ಅವರ ಕೋಚ್ ಗೋಪಿಚಂದ್ ನಡೆಸುತ್ತಿರುವ ಗಚ್ಚಿಬೌಲಿಯಲ್ಲಿರುವ ಗೋಪಿಚಂದ್ ಅಕಾಡೆಮಿಗೆ ಸಿಂಧೂ  ಸೇರಿದರು. ಬಳಿಕ ಸುಮಾರು 10 ವರ್ಷಗಳ ಕಾಲ ಸಿಂಧೂ ಅಲ್ಲಿಯೇ ತರಬೇತಿ ಪಡೆದರು.

ಕೋಚ್ ಡಯಟ್ ಪಾಲಿಸುವ ಸಿಂಧೂ, ಸಿಂಧೂ ಡಯಟ್ ಪಾಲಿಸುವ ಪೋಷಕರು
ಇನ್ನು ಸಿಂಧೂ ಕುರಿತ ಒಂದು ಅಂಶ ಇದೀಗ ಬೆಳಕಿಗೆ ಬಂದಿದ್ದು, ಡಯಟ್ ವಿಚಾರದಲ್ಲಿ ಮಾತ್ರ ಸಿಂಧೂ ಕೋಚ್ ಹೇಳುವುದನ್ನು ಚಾಚೂ ತಪ್ಪದೇ ಪಾಲಿಸುತ್ತಾರಂತೆ. ಇನ್ನು ಇದಕ್ಕಿಂತಲೂ  ಪ್ರಮುಖವಾಗಿ ಗಮನ ಸೆಳೆಯುವ ಮತ್ತೊಂದು ಅಂಶ ಎಂದರೆ ಪಿವಿ ಸಿಂಧೂ ಮೇಲೆ ಅಘಾಧ ಪ್ರೀತಿ ಇಟ್ಟಿರುವ ಅವರ ಪೋಷಕರು ಆಕೆಯ ಡಯಟ್ ಅನ್ನೇ ತಾವೂ ಪಾಲಿಸುತ್ತಾರಂತೆ. ಸಿಂಧು  ಏನು ತಿನ್ನುತ್ತಾರೆ ಅದೇ ಆಹಾರವನ್ನೇ ಅವರ ತಂದೆ ರಮಣ ಹಾಗೂ ತಾಯಿ ವಿಜಯ ಸೇವಿಸುತ್ತಾರಂತೆ.

ಬೆಳಗ್ಗೆ ನಾಲ್ಕು ಗಂಟೆಗೆ ತರಬೇತಿ ಆರಂಭ
ರಿಯೊ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಪಿವಿ ಸಿಂಧೂ ತರಬೇತಿ ಅಷ್ಟೇ ಸುಲಭವಾಗಿರಲಿಲ್ಲ. ಅವರ ಕೋಚ್ ಹೇಳಿರುವಂತೆ ಕ್ರೀಡಾಕೂಟಕ್ಕೆ ಇನ್ನೂ 6 ತಿಂಗಳು ಇರುವಂತೆಯೇ ಸಿಂಧೂ ತರಬೇತಿ  ಆರಂಭಿಸಿದ್ದರಂತೆ. ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಸಿಂಧೂ ಬ್ಯಾಡ್ಮಿಂಟನ್ ತರಬೇತಿ ಆರಂಭವಾಗುತ್ತಿತ್ತಂತೆ. ಇದಕ್ಕ ಅವರ ತಂದೆ ರಮಣ ಅವರ ಪ್ರೋತ್ಸಾಹವೂ ಇತ್ತಂತೆ. ಸಿಂಧೂ  ಏಳುವುದು ಕೊಂಚ ತಡವಾದರೂ ತಂದೆ ರಮಣ ಅವರು ಆಕೆಯನ್ನು ಎಬ್ಬಿಸಿ ತರಬೇತಿ ಕಳುಹಿಸುತ್ತಿದ್ದರಂತೆ.

ಇನ್ನು ವಿಶ್ವದ ನಂಬರ್ 1 ಬ್ಯಾಡ್ಮಿಂಟನ್ ಆಟಗಾರ್ತಿಯಾಗಬೇಕು ಎಂಬ ಮಹದಾಸೆ ಹೊಂದಿರುವ ಪಿವಿ ಸಿಂಧು ಚಿಕ್ಕವಯಸ್ಸಿನಿಂದ ಹಿಡಿದು ಇಲ್ಲಿಯವರೆಗೂ ಬ್ಯಾಡ್ಮಿಂಟನ್ ತರಬೇತಿಗೆ ಎಂದೂ   ಚಕ್ಕರ್ ಹೊಡೆದಿರಲಿಲ್ಲವಂತೆ.

ಅತೀ ಚಿಕ್ಕ ವಯಸ್ಸಿನಲ್ಲೇ ಅರ್ಜುನ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು
ಇಂತಹ ಕಠಿ ಪರಿಶ್ರಮದಿಂದಲೇ ಪಿವಿ ಸಿಂಧೂ 2013ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಆ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲಿ ಅರ್ಜುನ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳಾ  ಕ್ರೀಡಾಪಟು ಒಂಬ ಕೀರ್ತಿಗೆ ಸಿಂಧೂ ಭಾಜನರಾಗಿದ್ದರು. ಅರ್ಜುನ ಪ್ರಶಸ್ತಿ ಸ್ವೀಕರಿಸಿದಾಗ ಸಿಂಧೂಗೆ ಕೇವಲ 18 ವರ್ಷಗಳಾಗಿದ್ದವು. ಕೇವಲ ಇದು ಮಾತ್ರವಲ್ಲದೇ ಅತೀ ಚಿಕ್ಕ ವಯಸ್ಸಿನಲ್ಲೇ  ಪದ್ಮಶ್ರೀ ಪುರಸ್ಕಾರ ಪಡೆದ ದೇಶದ ಮೊದಲ ಮಹಿಳಾ ಆಟಗಾರ್ತಿ ಎಂಬ ಕೀರ್ತಿಗೂ ಸಿಂಧೂ ಭಾಜನರಾಗಿದ್ದರು. 2015ರಲ್ಲಿ ಸಿಂಧೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಆಗ ಅವರ ವ.ಸ್ಸು  ಕೇವಲ 20 ವರ್ಷಗಳಾಗಿತ್ತು.

2012ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ನಲ್ಲಿ ಸೈನಾ ನೆಹ್ವಾಲ್ ಗೆದ್ದ ಕಂಚಿನ ಪದಕವೇ ಭಾರತದ ಗರಿಷ್ಠ ಸಾಧನೆಯಾಗಿತ್ತು. ಆದರೆ ಈ ಬಾರಿ ಪಿವಿ ಸಿಂಧೂ ಅದನ್ನೂ ಮೀರಿ ಒಂದು  ಹೆಜ್ಜೆ ಮುಂದಕ್ಕೆ ಹೋಗಿ ಬೆಳ್ಳಿ ಪದಕ ಬಾಚಿಕೊಂಡು ಬಂದಿದ್ದಾರೆ. ಆ ಮೂಲಕ ಸೈನಾ ನೆಹ್ವಾಲ್ ಬಳಿಕ ಸಿಂಧೂ ಭಾರತದ ಬ್ಯಾಡ್ಮಿಂಟನ್ ಸೆನ್ಷೇಷನ್ ಆಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com