ಖಾಕಿಗೆ 165 ವರ್ಷಗಳ ಇತಿಹಾಸ, ಹುಟ್ಟಿದ್ದು ಮಂಗಳೂರಿನಲ್ಲಿ!

ಈಗ ಪ್ರಪಂಚಕ್ಕೆ ಚಿರಪರಿಚಿತವಾಗಿರುವ ಖಾಕಿ, ಮೊದಲ ಬಾರಿಗೆ ತಯಾರಾಗಿದ್ದು 165 ವರ್ಷಗಳ ಹಿಂದೆ ಅದೂ ಕರ್ನಾಟಕದ ಮಂಗಳೂರಿನಲ್ಲಿ.
ಬಲ್ಮಠದ ನೇಯ್ಗೆ ಕಾರ್ಖಾನೆ
ಬಲ್ಮಠದ ನೇಯ್ಗೆ ಕಾರ್ಖಾನೆ
Updated on

ಮಂಗಳೂರು: ಈಗ ಪ್ರಪಂಚಕ್ಕೆ ಚಿರಪರಿಚಿತವಾಗಿರುವ ಖಾಕಿ, ಮೊದಲ ಬಾರಿಗೆ ತಯಾರಾಗಿದ್ದು 165 ವರ್ಷಗಳ ಹಿಂದೆ ಅದೂ ಕರ್ನಾಟಕದ ಮಂಗಳೂರಿನಲ್ಲಿ.
ಅದು ಬಾಸೆಲ್‌ ಮಿಷನ್‌ ಸಂಸ್ಥೆಯು ಕೈಗಾರಿಕಾ ಚಟುವಟಿಕೆಗಳಲ್ಲಿ ತೊಡಗಿದ್ದ ಕಾಲಘಟ್ಟ, ಇತ್ತ ಮಂಗಳೂರಿನಲ್ಲಿ ತಿಯಾ- ಬಿಲ್ಲವ ಸಮುದಾಯದವರು ಕ್ರೈಸ್ತ ಮತಕ್ಕೆ ಮತಾಂತರಗೊಂಡರೆಂಬ ಕಾರಣಕ್ಕೆ ಅವರನ್ನು ಬಹಿಷ್ಕರಿಸಲಾಗಿತ್ತು.  ಕ್ರೈಸ್ತಮತಕ್ಕೆ ಮತಾಂತರಗೊಂಡವರು ಹಾಗೂ ಅವರ ಮಕ್ಕಳಿಗೆ ಉದ್ಯೋಗ ನೀಡಲು 1844 ರಲ್ಲಿ ಬಾಸಲ್ ಮಿಷನ್ ಮಂಗಳೂರಿನ ಬಲ್ಮಠದಲ್ಲಿ ನೇಯ್ಗೆ ಕಾರ್ಖಾನೆಯೊಂದನ್ನು ಸ್ಥಾಪಿಸಿತ್ತು. ಈ ಕಾರ್ಖಾನೆಗೆ ಆಗಮಿಸಿದ್ದ  ಯುರೋಪಿನ ನುರಿತ ನೇಕಾರ ಜೋಹಾನ್ಸ್ ಹಾಲ್ಲರ್ ಸೆಮಿಕಾರ್ಪಸ್ ಮರಗಳ ತೊಗಟೆಯನ್ನು ಬಳಸಿ ಖಾಕಿ ರಂಗಿನ ಬಟ್ಟೆ ತಯಾರು ಮಾಡುವುದನ್ನು ಕಂಡು ಹಿಡಿದ. ಆಗ ಹುಟ್ಟಿದ ಖಾಕಿ ಬಟ್ಟೆಗೆ ಈಗ ಬರೋಬ್ಬರಿ 165 ವರ್ಷ! 

ಖಾಕಿಗೆ ಜನ್ಮ ನೀಡಿದ ಬಲ್ಮಠದಲ್ಲಿ ನೇಗ್ಗೆ ಕಾರ್ಖಾನೆಗೆ ಭೂಮಿ ಮಂಜೂರು ಮಾಡಿದ್ದು ಕಲೆಕ್ಟರ್ ಎಚ್ ಎಂ ಬ್ಲೇರ್. ಮೊದಮೊದಲು ಈ ಕಾರ್ಖಾನೆಯಿಂದ ತಯಾರಾದ ಬಟ್ಟೆಗಳು ಉತ್ಕೃಷ್ಟವಾಗೇನು ಇರಲಿಲ್ಲ. ಆದರೆ ಖಾಕಿ ಬಣ್ಣವನ್ನು ಕಂಡುಹಿಡಿದ ನಂತರ ನೇಯ್ಗೆ ಉದ್ಯಮ ಯಶಸ್ಸು ಕಂಡು 1853 ರಲ್ಲಿ ಮುಲ್ಕಿಯಲ್ಲಿ ಶಾಖೆಯನ್ನು ಪ್ರಾರಂಭವಾಯಿತು.  
ಇಷ್ಟೆಲ್ಲಾ ಕೇಳಿದ ಮೇಲೆ ಖಾಕಿ ಪೊಲೀಸರಿಗೆ, ಸೇನಾ ಸಿಬ್ಬಂದಿಗಳಿಗೆ ಸಮವಸ್ತ್ರ ಹೇಗಾಯಿತು ಎಂಬ ಪ್ರಶ್ನೆ ಮೂಡಿರಬೇಕಲ್ಲಾ? ಹೌದು ಒಮ್ಮೆ ಬಲ್ಮಠದ ನೇಗ್ಗೆ ಕಾರ್ಖಾನೆಗೆ ಭೇಟಿ ನೀಡಿದ್ದ ಬ್ರಿಟೀಷ್- ಭಾರತೀಯ ಸೇನಾ ಮುಖ್ಯಸ್ಥ ಲಾರ್ಡ್ ರಾಬರ್ಟ್ಸ್ ಖಾಕಿ ಬಣ್ಣದ ಬಟ್ಟೆಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಆಕರ್ಷಕವಾದ ಸಮವಸ್ತ್ರ ಎಂದು ಹೇಳುತ್ತಾರೆ ಹಾಗೂ ಪ್ರಪಂಚದಾದ್ಯಂತ ಇದ್ದ ಬ್ರಿಟಿಷ್ ಸೇನೆಗೆ ಅದನ್ನೇ ದಿನನಿತ್ಯದ ಸಮವಸ್ತ್ರವನ್ನಾಗಿ ಪರಿಚಯಿಸುತ್ತಾರೆ.  
ಮೊದಲನೇ ಮಹಾಯುದ್ಧದ ನಂತರ ಈ ಕಾರ್ಖಾನೆಯನ್ನು ಕಾಮನ್ವೆಲ್ತ್ ಟ್ರಸ್ಟ್ ಲಿಮಿಟೆಡ್ ತನ್ನ ಒಡೆತನಕ್ಕೆ ಸ್ವೀಕರಿಸುತ್ತದೆ. ಕೈಮಗ್ಗ ಬಟ್ಟೆಗೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ 1960 ಈ ಕಾರ್ಖಾನೆಯನ್ನು ಮುಚ್ಚಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com