60 ಗಂಟೆಗಳಲ್ಲಿ 7,777 ಸುತ್ತು ಸೂರ್ಯ ನಮಸ್ಕಾರ: ದಾಖಲೆ ಬರೆದ ಅರ್ಜುನ್ ಯೋಗಿ

ಕೇವಲ 60 ಗಂಟೆ 6 ನಿಮಿಷ, 6 ಸೆಕೆಂಡ್ ಗಳಲ್ಲಿ 7,777 ಸುತ್ತು ಸೂರ್ಯ ನಮಸ್ಕಾರ ಮಾಡುವ ಮೂಲಕ 28 ವರ್ಷದ ಅರ್ಜುನ್ ಯೋಗಿ ಎಂಬುವವರು ವಿಶ್ವ ದಾಖಲೆ ಮಾಡಿದ್ದಾರೆ...
ದಾಖಲೆ ಬರೆದ ಅರ್ಜುನ್ ಯೋಗಿ
ದಾಖಲೆ ಬರೆದ ಅರ್ಜುನ್ ಯೋಗಿ
Updated on

ಬೆಂಗಳೂರು: ಕೇವಲ 60 ಗಂಟೆ 6 ನಿಮಿಷ, 6 ಸೆಕೆಂಡ್ ಗಳಲ್ಲಿ 7,777 ಸುತ್ತು ಸೂರ್ಯ ನಮಸ್ಕಾರ ಮಾಡುವ ಮೂಲಕ 28 ವರ್ಷದ ಅರ್ಜುನ್ ಯೋಗಿ ಎಂಬುವವರು ವಿಶ್ವ ದಾಖಲೆ ಮಾಡಿದ್ದಾರೆ.

ಸೂರ್ಯ ನಮಸ್ಕಾರ ಸ್ಪರ್ಧೆಯಲ್ಲಿ 85 ಸದಸ್ಯರ ಗುಂಪೊಂದು ಸ್ಪರ್ಧಿಸಿತ್ತು. ಇದರಲ್ಲಿ 14 ಮಂದಿ ಮಾತ್ರ ಸವಾಲನ್ನು ಸ್ವೀಕರಿಸಿ, ದಾಖಲೆ ಮೆಟ್ಟಿಲನ್ನು ಹತ್ತಿದ್ದಾರೆ. 14 ಮಂದಿಯಲ್ಲಿ 8 ಜನರ ಗುಂಪು ಕರ್ನಾಟಕದವರೇ ಆಗಿದ್ದು, ಇಬ್ಬರು ತಮಿಳುನಾಡಿನವರು ಹಾಗೂ ನಾಲ್ವುರು ವಿಯೆಟ್ನಾಂ ಮೂಲದವರಾಗಿದ್ದಾರೆ.

ಯೋಗ ಸ್ಪರ್ಧೆಗ ಪ್ರತೀ ವರ್ಷ ಜೂನ್ ತಿಂಗಳಿನಲ್ಲಿ ನಡೆಯುತ್ತದೆ. ಸೂರ್ಯ ನಮಸ್ಕಾರದಲ್ಲಿ 12 ಆಸನಗಳಿದ್ದು, ಪ್ರತೀ ನಿತ್ಯ ಈ ಆಸನಗಳನ್ನು ಮಾಡುತ್ತಾ ಬಂದರೆ, ದೇಹದಲ್ಲಿರುವ ಅನಾವಶ್ಯಕ ಕೊಬ್ಬಿನ ಅಂಶವನ್ನು ಕರಗಿಸುತ್ತದೆ ಎಂದು ಅರ್ಜುನ್ ಅವರು ಹೇಳಿದ್ದಾರೆ.

ಕರ್ನಾಟಕದ ಹುಬ್ಬಳ್ಳಿ ಮೂಲದ ಅರ್ಜುನ್ ಅವರು ವಿಶ್ವ ದಾಖಲೆ ಮಾಡುವುದಕ್ಕಾಗಿಯೇ ಯೋಗಾಭ್ಯಾಸದ ತರಬೇತಿಯನ್ನು ಕಳೆದ 13 ವರ್ಷಗಳಿಂದಲೂ ಮಾಡುತ್ತಾ ಬಂದಿದ್ದು, ಇದೀಗ ದಾಖಲೆ ಮಾಡುವ ಅವರ ಕನಸು ನನಸಾಗಿದೆ.

ಪ್ರತಿ ದಿನ ನಾನು 3 ಗಂಟೆಗಳ ಕಾಲ ಹೃದಯ ರಕ್ತನಾಳದ ವ್ಯಾಯಾಮ ಜೊತೆಗೆ ಯೋಗಾಭ್ಯಾಸವನ್ನು ಮಾಡುತ್ತಿದ್ದೇವೆ. ಸಸ್ಯಾಹಾರಿಗಳಾಗಿರುವ ನಾವು ಪ್ರತಿ ದಿನ ಹಸಿ ತರಕಾರಿಗಳು, ಹಣ್ಣು ಹಾಗೂ ದ್ರವ ಪದಾರ್ಥಗಳಾದ ನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸುತ್ತೇವೆಂದು ಅರ್ಜುನ್ ಹೇಳಿದ್ದಾರೆ.

3 ಗಂಟೆಗಳವರೆಗೂ ಸುಧೀರ್ಘವಾಗಿ ನಾವು ಸೂರ್ಯ ನಮಸ್ಕಾರ ಮಾಡುತ್ತಿದ್ದೆವು. ನಂತರ 15 ನಿಮಿಷ ಕಾಲ ವಿಶ್ರಾಂತಿ ಪಡೆದುಕೊಂಡು, ಮತ್ತೆ ಮೂರು ಗಂಟೆಗಳ ಕಾಲ ಸೂರ್ಯ ನಮಸ್ಕಾರ ಮಾಡಿದೆವು. ಸ್ಪರ್ಧೆ ವೇಳೆ ದ್ರವ ಪದಾರ್ಥಗಳಾಗ ಎಳನೀರು, ನಿಂಬೆಹಣ್ಣಿನ ರಸ ಮತ್ತು ಹಾಲನ್ನಷ್ಟೇ ತೆಗೆದುಕೊಳ್ಳುತ್ತಿದ್ದೆವು. ಮೂರು ದಿನಗಳಿಂದ ನಾನು ನಿದ್ರೆಯನ್ನು ಮಾಡಿಲ್ಲ. ಬಿಸಿ ನೀರಿನ ಸ್ನಾನ ನಮಗೆ ಸಹಾಯ ಮಾಡಿತು. ಸ್ಪರ್ಧೆ ಬಳಿಕ ನನಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಆದರೆ, ಆ ನೋವು ಕೇವಲ ಒಂದು ದಿನ ಮಾತ್ರ ಇತ್ತು. ಸ್ಪರ್ಥೆ ಬಳಿಕ ಮತ್ತಷ್ಟು ಶಕ್ತಿಶಾಲಿ ಹಾಗೂ ಚುರುಕುಗೊಂಡಿದ್ದೇನೆಂದು ಅನಿಸುತ್ತಿದೆ ಎಂದಿದ್ದಾರೆ.

ಇನ್ನು ಸೂರ್ಯ ನಮಸ್ಕಾರ ಕುರಿತಂತೆ ಮಾತನಾಡಿರುವ ಯೋಗ ಗುರುಗಳು, ಸೂರ್ಯ ನಮಸ್ಕಾರವನ್ನು ಹೆಚ್ಚಾಗಿ ಮಾಡಲು ಬಯಸುವವರು ಪ್ರತೀ ನಿತ್ಯ ಸೂರ್ಯ ನಮಸ್ಕಾರ ಮಾಡಬೇಕು. ಇದರಂತೆ ದಿನದಿಂದ ದಿನಕ್ಕೆ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ತರಭೇತಿ ಪಡೆಯುವ ಮೂಲಕ ಉಸಿರಿನ ನಿಯಂತ್ರಣವನ್ನು ಕಲಿಯಬೇಕಾಗುತ್ತದೆ. ಉಸಿರಿನ ನಿಯಂತ್ರಣ ಸೂರ್ಯ ನಮಸ್ಕಾರ ಮಾಡುವ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ರಹಸ್ಯವಾಗಿತ್ತು. ಪ್ರಾಣಯಾಮ ಮಾಡುವಾಗ ಕೆಲ ಸಮಯ ವಿಶ್ರಾಂತಿ ಪಡೆದು ನಂತರ ಮಾಡಬೇಕು. ಇನ್ನು ಉಸಿರಾಟದ ಸಮಸ್ಯೆ ಹಾಗೂ ಅಸ್ತಮಾ ಸಮಸ್ಯೆಯಿರುವವರು ತಜ್ಞರ ಸಮಸ್ಯೆ ಪಡೆದು ಯೋಗಾಭ್ಯಾಸ ಮಾಡಬೇಕೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com