ಪ್ರಾಣ ರಕ್ಷಿಸಿದಾತನಿಗೆ ಥ್ಯಾಂಕ್ಸ್ ಹೇಳಲು ಬರುವ ಪೆಂಗ್ವಿನ್ ಗೆಳೆಯ

ಬ್ರೆಜಿಲ್‌ನ ರಿಯೋ ಡಿ ಜೆನಿರೋದ ಪುಟ್ಟ ದ್ವೀಪದಲ್ಲಿರುವ ಜೋಯೋ ಪರೇರಾ ಅವರ ಮನೆಗೆ ಪ್ರತೀ ವರ್ಷ 8000 ಕಿಲೋ ಮೀಟರ್ ಸಂಚರಿಸಿ ಒಂದು ಪೆಂಗ್ವಿನ್ ಬರುತ್ತಿದೆ...
ಡಿನ್ಡಿಂ ಜತೆ ಪರೇರಾ
ಡಿನ್ಡಿಂ ಜತೆ ಪರೇರಾ
Updated on
ಮನುಷ್ಯ ಮತ್ತು ಪೆಂಗ್ವಿನ್ ನಡುವಿನ ಅಪೂರ್ವ ಸ್ನೇಹದ ಕತೆ ಇಲ್ಲಿದೆ. ಬ್ರೆಜಿಲ್‌ನ  ಜಾವೋ ಪರೇರಾ ಡಿಸೋಜಾ (71) ಮತ್ತು ಡಿನ್ಡಿಂ ಪೆಂಗ್ವಿನ್ ನಡುವಿನ ಗೆಳೆತನದ ಕತೆ ಇದು. ಬ್ರೆಜಿಲ್‌ನ ರಿಯೋ ಡಿ ಜೆನಿರೋದ ಪುಟ್ಟ ದ್ವೀಪದಲ್ಲಿರುವ ಜೋವೋ ಪರೇರಾ  ಅವರ ಮನೆಗೆ ಪ್ರತೀ ವರ್ಷ 8000 ಕಿಲೋ ಮೀಟರ್ ಸಂಚರಿಸಿ ಒಂದು ಪೆಂಗ್ವಿನ್ ಬರುತ್ತಿದೆ. ದಕ್ಷಿಣ ಆಫ್ರಿಕಾದ ಮಗಲ್ಲನಿಕ್ ಪ್ರಭೇದಕ್ಕೆ ಸೇರಿದ ಡಿನ್ಡಿಂ ಎಂಬ ಪೆಂಗ್ವಿನ್ ಪರೇರಾ ಅವರನ್ನು ಭೇಟಿ ಮಾಡುವುದಕ್ಕಾಗಿಯೇ ಇಷ್ಟು ದೂರ ಸಂಚರಿಸುತ್ತದೆ ಎಂದರೆ ನೀವು ನಂಬಲೇಬೇಕು.
2011ರಲ್ಲಿ ತನ್ನ ಮನೆಯ ಮುಂದಿರುವ ಕಡಲ ಕಿನಾರೆಯಲ್ಲಿ ಮರಣ ಶಯ್ಯೆಯಲ್ಲಿದ್ದ ಪುಟ್ಟ ಪೆಂಗ್ವಿನ್ ಜಾವೋ ಪರೇರಾ ಕಣ್ಣಿಗೆ ಬಿದ್ದಿತ್ತು. ರೆಕ್ಕೆಗಳಲ್ಲಿ ಎಣ್ಣೆ ಮತ್ತು ಟಾರ್ ಅಂಟಿಕೊಂಡಿದ್ದರಿಂದ ಈಜಲು ಅಸಾಧ್ಯವಾಗಿದ್ದ ಪೆಂಗ್ವಿನ್ ನ್ನು ಪರೇರಾ ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಆರೈಕೆ ಮಾಡಿದ್ದರು. ಒಂದು ವಾರದಲ್ಲಿ ಪೆಂಗ್ವಿನ್ ರೆಕ್ಕೆಗಂಟಿದ್ದ ಟಾರು , ಎಣ್ಣೆಯನ್ನೆಲ್ಲ ತೆಗೆದು ಪರೇರಾ ಅದಕ್ಕೆ ಡಿನ್ಡಿಂ ಎಂದು ಹೆಸರಿಟ್ಟು ಅದರ ಪ್ರಾಣ ರಕ್ಷಿಸಿದ್ದರು.
ಅದಕ್ಕೆ ಹೊಟ್ಟೆ ತುಂಬುವಷ್ಟು ಮೀನು ನೀಡಿ ಮನೆಯ ಪಕ್ಕದಲ್ಲೇ ಪೆಂಗ್ವಿನ್ ಗೆ ವಾಸಸ್ಥಳವನ್ನೂ ನೀಡಲಾಯಿತು. ಆರೋಗ್ಯ ಸುಧಾರಿಸಿಕೊಂಡಾಗ ಡಿನ್ಡಿಂನ್ನು ಮತ್ತೆ ಸಮುದ್ರಕ್ಕೆ ಬಿಡಲಾಯಿತು. ತನ್ನ ಪ್ರಾಣವನ್ನು ರಕ್ಷಿಸಿದ ಪರೇರಾರನ್ನು ಬಿಟ್ಟು ಹೋಗಲು  ಡಿನ್ಡಿಂಗೆ ಮನಸ್ಸು ಬಂದಿಲ್ಲ. 11 ತಿಂಗಳುಗಳ ಕಾಲ ಪರೇರಾ ಜತೆಯಲ್ಲಿ ಕಳೆದ  ಡಿನ್ಡಿಂ ಹೇಗೋ ಒಲ್ಲದ ಮನಸ್ಸಿನಿಂದ ಕಡಲಿಗೆ ಹಾರಿತು.
ಇದಾದನಂತರ ಮರುವರ್ಷ ಎಲ್ಲರನ್ನೂ ಚಕಿತಗೊಳಿಸಿ  ಡಿನ್ಡಿಂ ಪೆಂಗ್ವಿನ್ ಪರೇರಾ ಬಳಿಗೆ ಬಂದೇ ಬಿಟ್ಟಿತು. ಜೂನ್ ತಿಂಗಳಲ್ಲಿ ದ್ವೀಪಕ್ಕೆ ಬರುವ  ಡಿನ್ಡಿಂ ಫೆಬ್ರವರಿಯಲ್ಲಿ ವಾಪಸ್ ಹೋಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ  ಡಿನ್ಡಿಂ ಈ ರೀತಿ ಬರುತ್ತದೆ. ವಿಶೇಷವೇನೆಂದರೆ ಪರೇರಾ ಬಿಟ್ಟರೆ ಬೇರ್ಯಾರ ಬಳಿಗೂ ಈ ಪೆಂಗ್ವಿನ್ ಹೋಗುವುದಿಲ್ಲ.
ಈ ಭೂಮಿಯಲ್ಲಿ ನಾನು ತುಂಬಾ ಇಷ್ಟಪಡುವ ಜೀವಿ  ಡಿನ್ಡಿಂ ಎಂದು ಪರೇರಾ ಹೇಳುತ್ತಾರೆ. ತಮ್ಮ ಗೆಳೆತನಕ್ಕಾಗಿ 8000 ಕಿಮೀ ದೂರ ಈಜಿ ಬರುವ ಪೆಂಗ್ವಿನ್ ನ್ನು ಪರೇರಾ ಮಗುವಿನಂತೆ ಮುದ್ದಿಸುತ್ತಾರೆ.  ಡಿನ್ಡಿಂ ಕೂಡಾ ಅಷ್ಟೇ, ಪರೇರಾ ನೀಡಿದ ಮೀನುಗಳನ್ನು ತಿಂದು ಪರೇರಾನ ಪ್ರೀತಿಯನ್ನು ಅನುಭವಿಸುತ್ತದೆ. ಗೆಳೆತನಕ್ಕೆ ಭಾಷೆಗಳ ಹಂಗಿಲ್ಲ, ಗಡಿರೇಖೆಗಳಿಲ್ಲ ಎಂಬುದಕ್ಕೆ ಉತ್ತಮ ನಿದರ್ಶನ ಡಿನ್ಡಿಂ ಮತ್ತು ಪರೇರಾರ ಈ ಗೆಳೆತನ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com