ಭಾವನೆ, ಬಾಂಧವ್ಯ, ಸಂಬಂಧ ಬರಿ ಮನುಷ್ಯರಲ್ಲಿ ಮಾತ್ರ ಪ್ರಾಣಸಂಕುಲದಲ್ಲಿ ಇಲ್ಲ ಎಂಬ ಮಾತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಘಟನೆಯೊಂದು ಪೆಂಗ್ವಿನ್ ಸಂಕುಲದಲ್ಲಿ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೇಟೆಗಾಗಿ ಹೊರಗಡೆ ಹೋಗಿದ್ದ ಪತಿ ಪೆಂಗ್ವಿನ್ ಮನೆಗೆ ಮರಳಿದಾಗ ಪತ್ನಿ ಪೆಂಗ್ವಿನ್ ಜತೆ ಬೇರೆ ಪೆಂಗ್ವಿನ್ ಇರುವುದನ್ನು ಕಂಡ ಪತಿ ಪೆಂಗ್ವಿನ್ ರೋಷಗೊಂಡಿದೆ. ಕೂಜಲೇ ಆ ಪೆಂಗ್ವಿನ್ ಜತೆ ಭೀಕರ ಕಾಳಗ ನಡೆಸಿದೆ. ಈ ದೃಶ್ಯಾವಳಿಗಳನ್ನು ನ್ಯಾಟ್ ಜಿಯೋ ವೈಲ್ಡ್ ಚಾಲನೆ ಟ್ವೀಟ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಟೀಕೆಗಳು ನಡೆಯುತ್ತಿವೆ.