ಲಂಡನ್ ಮಸೀದಿಯಲ್ಲಿ ತಯಾರಾಯ್ತು ಗಿನ್ನಿಸ್ ದಾಖಲೆಯ ಸಮೋಸ!

ಲಂಡನ್ ನ ಮಸೀದಿಯಲ್ಲಿ ತಯಾರಿಸಲಾದ ಜನಪ್ರಿಯ ಭಾರತೀಯ ಚಹಾ ಸಮಯದ ಲಘು ಉಪಹಾರ ಸಮೋಸಾ ತನ್ನ ಗಾತ್ರದ ಕಾರಣದಿಂದ ಗಿನ್ನಿಸ್ ದಾಖಲೆ ಸೇರಿದೆ.
ಸಮೋಸ ಮತು ಚಟ್ನಿ
ಸಮೋಸ ಮತು ಚಟ್ನಿ
ಲಂದನ್:  ಲಂಡನ್ ನ ಮಸೀದಿಯಲ್ಲಿ ತಯಾರಿಸಲಾದ ಜನಪ್ರಿಯ ಭಾರತೀಯ ಚಹಾ ಸಮಯದ ಲಘು ಉಪಹಾರ ಸಮೋಸಾ ತನ್ನ ಗಾತ್ರದ ಕಾರಣದಿಂದ ಗಿನ್ನಿಸ್ ದಾಖಲೆ ಸೇರಿದೆ. ಇಷ್ಟಕ್ಕೂ ಈ ಸಮೋಸ ಅದೆಷ್ಟು ಕೆಜಿ ಇದೆ ಅಂದಿರಿ? 153 ಕೆಜಿ! ಹೌದು,  ಈಸ್ಟ್ ಲಂಡನ್ ಮಸೀದಿಯಲ್ಲಿ 12 ಸದಸ್ಯರ ಮುಸ್ಲಿಂ ಏಡ್ ಸ್ವಯಂಸೇವಕರ ತಂಡವು ಈ ಅಗಾಧ ಗಾತ್ರದ ಸಮೋಸವನ್ನು ಮಾಡಿದೆ. 
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ತಂದದ ಸಾಧನೆಯನ್ನು ಅಂಗೀಕರಿಸಿದ ನಂತರ ದೈತ್ಯಾಕಾರದ ಸಮೋಸವನ್ನು ವೈಟ್ ಚಾಪೆಲ್ ಪ್ರದೇಶದ  ಸುತ್ತಲಿನ ನಿರಾಶ್ರಿತರ ಜನರಿಗೆ ವಿತರಿಸಲಾಯಿತು.
ವಿಶ್ವದ ಅತಿದೊಡ್ಡ ಸಮೋಸದ ಈ ಹಿಂದಿನ ದಾಖಲೆಯು ಉತ್ತರ ಇಂಗ್ಲೆಂಡಿನ ಬ್ರಾಡ್ ಫೋರ್ಡ್ ಕಾಲೇಜಿನ ಹೆಸರಲ್ಲಿತ್ತು. ಜೂನ್ 2012 ರಲ್ಲಿ 110.8 ಕೆ.ಜಿ.ತೂಕದ ಸಮೋಸವನ್ನು ಅಲ್ಲಿ ತಯಾರಿಸಲಾಗಿತ್ತು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ವಕ್ತಾರ ಈವ್ನಿಂಗ್ ಸ್ಟ್ಯಾಂಡರ್ಡ್ ಹೇಳುವಂತೆ, "ಇದು ಮುಸ್ಲಿಂ ಏಡ್ ನ ಬಹಳಷ್ಟು ಕಟಿಣ ಕೆಲಸ ಆಗಿದೆ ನಮ್ಮ ನಿರ್ಣಯವು ಅದರ ಯಶಸ್ಸನ್ನು ಖಚಿತಪಡಿಸಿದೆ "
"ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಫ್ಯಾಮಿಲಿಗೆ ಅವರನ್ನು ಸ್ವಾಗತಿಸಲು ನಾವು ಸಂತಸ ಪಡುತ್ತೇವೆ" ಎಂದು ವಕ್ತಾರರು ಹೇಳಿದರು. ಮಸೀದಿಯ ಸದಸ್ಯರು "ಈದ್ ನಂತಹ ಧಾರ್ಮಿಕ ಹಬ್ಬಗಳಲ್ಲಿ ಮುಸ್ಲಿಮ್ ಜನರ ಔದಾರ್ಯವನ್ನು" ಎತ್ತಿ ತೋರಿಸಬೇಕೆಂದು ಈ ಸಮೋಸ ತಯಾರಿಸುವ ನಿರ್ಧಾರಕ್ಕೆ ಬಂದಿದ್ದೆವು" ಎಂದಿದ್ದಾರೆ.
"ಮುಸ್ಲಿಮರು ವರ್ಷದುದ್ದಕ್ಕೂ ದಣಿವರಿಯಿಲ್ಲದೆ ಕೆಲಸ ಮಾಡುತ್ತಾರೆ ಅದರಲ್ಲೂ ವಿಶೇಷವಾಗಿ ಈದ್ ಸಮಯದಲ್ಲಿ, ಅವರ ಸುತ್ತಲಿರುವ ಸಮುದಾಯದಲ್ಲಿ ೈರುವ ದುಃಖಿತರನ್ನು ಬೆಂಬಲಿಸಲು ಧಾರ್ಮಿಕ ಚಟುವಟಿಕೆಗಳನ್ನು ನಡೆಸುವುದು ಹೇಗೆ ಎಂಬುದನ್ನು ಈ ಜನಪ್ರಿಯ ಆಹಾರ ಸಮೋಸಾದ ದೊಡ್ಡದಾದ ಗಾತ್ರದಿಂದ ನಾವು ತೋರಲು ಬಯಸಿದ್ದೇವೆ"ಎಂದು ಮುಸ್ಲಿಂ ಏಡ್ ನ ಝಾಕ್ ಹುಸೇನ್ ಹೇಳಿದ್ದಾರೆ.
ಬೃಹತ್ ಸಮೋಸವನ್ನು ದೊಡ್ಡ ಗಾತ್ರದ ವೈರ್ ರ್ಯಾಕ್ ನಲ್ಲಿ ಇಡಲಾಯಿತು ಮತ್ತು ಅಂತಿಮವಾಗಿ ಕಸ್ಟಮ್ ನಿರ್ಮಿತ ಡೀಪ್-ಫೈಯರ್ ಗೆ ಇಳಿಸಲಾಯಿತು ಆಗ ಇದು ಗರಿಗರಿಯಾದ ಮತ್ತು ಗೋಲ್ಡನ್ ಕಲರ್ ಪಡೆಯಿತು ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com