ಇದರಿಂದ ನಿಕ್ಲಾಸ್ ಗೆ ಭಿನ್ನ ಸಾಮರ್ಥ್ಯದ ಜನರೊಂದಿಗೆ ಸಂಪರ್ಕ ಹೊಂದುವ ಅವಕಾಶ ಸಿಕ್ಕಿತು, ಅವರು ಸಾಮಾಜಿಕ ಕಾರ್ಯಗಳಲ್ಲಿ ಉತ್ತಮ ಆಸಕ್ತಿ ತಾಳಿದರು. ಮೆಕ್ಯಾನಿಕ್ ಶಿಷ್ಯ ವೃತ್ತಿಯೊಂದಿಗೆ ಶಿಕ್ಷಣ, ಕೊಲಂಬಿಯಾದಲ್ಲಿ ಸಾಮಾಜಿಕ ಇಂಟರ್ನ್‌ಶಿಪ್ ಪೂರೈಸಿದ ನಿಕ್ಲಾಸ್ ಜನರೊಂದಿಗಿನ ಒಡನಾಟ ಮುಂದುವರಿಸಿದರಲ್ಲದೆ ಸಾಮಾಜಿಕ ಕಾರ್ಯಕರ್ತರ ಪರ ಕೆಲಸ ಮಾಡಿದರು. 1994ರಲ್ಲಿ ವಿವಾಹವಾದ ಇವರು ಇದೀಗ , ಮೂವರು ಮಕ್ಕಳನ್ನು ಹೊಂದಿದ್ದಾರೆ.