69ನೇ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದ 40 ವರ್ಷದ ಮಹಿಳೆ!

ಗರ್ಭ ನಿರೋಧಕ ಹಾಗೂ ಕುಟುಂಬ ಯೋಜನೆಗಳ ಬಗ್ಗೆ ಅರಿವಿಲ್ಲದ ಮಹಿಳೆಯೊಬ್ಬರು 69 ಮಕ್ಕಳಿಗೆ ಜನ್ಮ ನೀಡಿ ತನ್ನ 40ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗಾಝಾ: ಮಹಿಳೆಯೊಬ್ಬಳಿಗೆ ತಾಯಿಯಾಗುವುದೇ ಜೀವನದ ಒಂದು ಅದ್ಭುತ ಅನುಭವ.  ಸಾಮಾಜಿಕ ಒತ್ತಡಕ್ಕೊಳಗಾಗಿ ಹೆಚ್ಚು ಮಕ್ಕಳನ್ನು ಹೆರುವ ಮಹಿಳೆಗೆ ಆರೋಗ್ಯದ ಬಗ್ಗೆ ಜಾಗರೂಕತೆಯು ಅವಶ್ಯಕ, ಕೆಲವು ಮಹಿಳೆಯರು ಹೆಚ್ಚಿನ ಮಕ್ಕಳಿಗೆ ಜನ್ಮ ನೀಡಿ, ಕೊನೆಗೆ ತಾವೇ ಸಾವನ್ನಪ್ಪುತ್ತಾರೆ.

ಇಂಥಹುದೇ ಸುದ್ದಿ ಪ್ಯಾಲಸ್ತೀನ್ ನ ಗಾಝಾದಿಂದ ವರದಿಯಾಗಿರುವ ಬಗ್ಗೆ ವೈರಲ್ ಆಗಿದೆ. ಗರ್ಭ ನಿರೋಧಕ ಹಾಗೂ ಕುಟುಂಬ ಯೋಜನೆಗಳ ಬಗ್ಗೆ ಅರಿವಿಲ್ಲದ ಮಹಿಳೆಯೊಬ್ಬರು 69 ಮಕ್ಕಳಿಗೆ ಜನ್ಮ ನೀಡಿ ತನ್ನ 40ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.

ಈ ನತದೃಷ್ಟೆ ಅತ್ಯಂತ ಫರ್ಟಿಲೈ ವುಮೆನ್ ಎಂಬ ಖ್ಯಾತಿಗೂ ಒಳಗಾಗಿದ್ದಾಳೆ. ಈಕೆ ಇಷ್ಟು ಸಣ್ಣ ವಯಸ್ಸಿಗೆ ಅಷ್ಟೊಂದು ಮಕ್ಕಳಿಗೆ ಹೇಗೆ ಜನ್ಮವಿತ್ತಳು ಎಂಬುದರ ಬಗ್ಗೆ ವಿವರವಾದ ಮಾಹಿತಿ ಲಭ್ಯವಾಗಿಲ್ಲ.

ಈ ಹಿಂದೆ ವಸಿಲೇವಾ ಎಂಬ ರಷ್ಯಾ ಮಹಿಳೆ 69 ಮಕ್ಕಳಿಗೆ ಜನ್ಮ ನೀಡಿ ದಾಖಲೆ ಮಾಡಿದ್ದಳು. ಆಕೆ 16 ಅವಳಿ -ಜವಳಿ, 7 ಬಾರಿ ತ್ರಿವಳಿ ಮಕ್ಕಳು ಹಾಗೂ ನಾಲ್ಕು ಬಾರಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿ ದಾಖಲೆ ಬರೆದಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com