ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಿಂದ ರಾಜ್ಯದ ಮೊದಲ ಅವಳಿ ಶ್ವಾಸಕೋಶ ಕಸಿ

ಕರ್ನಾಟಕದ ಮೊದಲ ಅವಳಿ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರು ನಾರಾಯಣ ಹೆಲ್ತ್ ಸಿಟಿ ವೈದ್ಯ ತಂಡ ಯಶಸ್ವಿಯಾಗಿ ನಡೆಸಿದೆ.
ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಿಂದ ರಾಜ್ಯದ ಮೊದಲ ಅವಳಿ ಶ್ವಾಸಕೋಶ ಕಸಿ
ಬೆಂಗಳೂರು: ನಾರಾಯಣ ಹೆಲ್ತ್ ಸಿಟಿಯಿಂದ ರಾಜ್ಯದ ಮೊದಲ ಅವಳಿ ಶ್ವಾಸಕೋಶ ಕಸಿ
ಬೆಂಗಳೂರು: ಕರ್ನಾಟಕದ ಮೊದಲ ಅವಳಿ ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯನ್ನು ಬೆಂಗಳೂರು ನಾರಾಯಣ ಹೆಲ್ತ್ ಸಿಟಿ ವೈದ್ಯ ತಂಡ ಯಶಸ್ವಿಯಾಗಿ ನಡೆಸಿದೆ.
28 ವರ್ಷದ ಯುವಕನಿಗೆ ಈ ಅಪೂರ್ವ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಕೇರಳದ ತ್ರಿಶೂರ್ ನವರಾದ ಸುದೀಶ್ ಎಂವಿ ತಮ್ಮ ಎರಡೂ ಶ್ವಾಸಕೋಶಗಳ ವೈಫಲ್ಯಕ್ಕೀಡಾಗಿದ್ದು ಕಳೆದೊಂದು ವರ್ಷದಿಂದಲೂ ಅವರು ಸದಾ ಕಾಲ ಆಮ್ಲಜನಕದ ಸಿಲೆಂಡರ್ ಬಳಕೆ ಮಾಡುವ ಸ್ಥಿತಿಯಲ್ಲಿದ್ದರು. ಹಾಗಾಗಿ ಅವರು ನಡೆದಾಡಲೂ ಕಶ್ಟವಾಗುತ್ತಿತ್ತು. ಅವರು ತಮ್ಮ ಆರೋಗ್ಯ ಸಮಸ್ಯೆಗೆ ನಾನಾ ವೈದ್ಯರಲ್ಲಿ ಪರಿಹಾರ ಹುಡುಕಿ ಕಡೆಗೊಮ್ಮೆ ಕುಟುಂಬದವರ ಸೂಚನೆಯಂತೆ ನಾರಾಯಣ ಹೆಲ್ತ್ ಸಿಟಿಗೆ ಸೇರಿದ್ದಾರೆ. ಕಳೆದ ಫೆಬ್ರವರಿಯಲ್ಲಿ ನಾರಾಯಣ ಹೆಲ್ತ್ ಸಿಟಿಯಲ್ಲಿ ದಾಖಲಾದ ಸುದೀಶ್ ದೇಹಾರೋಗ್ಯವನ್ನು ಸಂಪೂರ್ಣ ಪರಿಶೀಲಿಸಿದ ಇಲ್ಲಿನ ವೈದ್ಯ ತಂಡ ಅವರಿಗೆ ಶ್ವಾಸಕೋಶಗಳ ಕಸಿಗೆ ಒಳಗಾಗುವಂತೆ ಸೂಚಿಸಿದೆ.
ಸುಮಾರು ಮೂರು ತಿಂಗಳ ಬಳಿಕ ರೋಗಿಗೆ ಸರಿಹೊಂದುವ ಶ್ವಾಸಕೋಶಗಳನ್ನು ಪತ್ತೆ ಹಚ್ಚಿದ ವೈದ್ಯರ ತಂಡ ಯಶವಂತಪುರ ಸ್ಪರ್ಶ್ ಆಸ್ಪತ್ರೆಯಲ್ಲಿ ಸಿಕ್ಕ ದಾನಿಯೊಬ್ಬರ ಶ್ವಾಸಕೋಶಗಳನ್ನು ಸುದೀಶ್ ಗೆ ಕಸಿ ಮಾಡಿದೆ. ಈ ವಿಶೇಷ ಶಸ್ತ್ರಚಿಕಿತ್ಸೆಯು ಜೂನ್ 20ರಂದು ನಡೆದಿದ್ದು ಇದೀಗ ರೋಗಿ ಸುದೀಡ್ ಚೇತರಿಸಿಕೊಂಡಿದ್ದಾರೆ.
"ಶ್ವಾಸಕೋಶದ ಕಸಿ ತುಂಬಾ ಸಂಕೀರ್ಣ ಶಸ್ತ್ರಚಿಕಿತ್ಸೆಯಾಗಿದೆ. ಇದು ಶ್ವಾಸಕೋಶದ ವೈಫಲ್ಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ.ವಾಸ್ತವವಾಗಿ, ಇತರ ಅಂಗಗಳಂತಲ್ಲದ ಶ್ವಾಸಕೋಶದ ಕಾರ್ಯನಿರ್ವಹಣೆಯು ಹೆಚ್ಚು ಮುತುವರ್ಜಿಯನ್ನು ಬಯಸುತ್ತದೆ. ನಾವು ನಮ್ಮ ತಂಡದ ಇತರೆ ವೈದ್ಯರ ನೆರವಿನಿಂದ ರೋಗಿಗೆ ಎರಡೂ ಶ್ವಾಸಕೋಶಗಳನ್ನು ಯಶಸ್ವಿಯಾಗಿ ಕಸಿ ಮಾಡಿದ್ದೇವೆ" ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸಕ  ಡಾ. ಜೂಲಿಯಸ್ ಪುನ್ನೆನ್ಹೇಳಿದ್ದಾರೆ.
ಡಾ. ಜೂಲಿಯಸ್ ಪುನ್ನೆನ್, ಡಾ. ಬಾಶಾ ಖಾನ್,  ಡಾ. ಸೈಯದ್ ತೌಶೀದ್, ಡಾ. ಸಂಜೀವ್ ಒಪಿ, ಡಾ. ವರುಣ್ ಶೆಟ್ಟಿ ಅವರನ್ನೊಳಗೊಂಡ ತಂಡ ಈ ಅಪರೂಪದ ಆಪರೇಷನ್ ನಡೆಸಿದೆ.
"ಸೋಂಕು ರೋಗದಿಂದ ಬಳಲುತ್ತಿದ್ದ ನಾನು ಇದುವರೆಗೆ ಹಲವು ವರ್ಷಗಳ ಕಾಲ ಹಲವು ಆಸ್ಪತ್ರೆ ಅಲೆದಿದ್ದೆ. ದೀರ್ಘಕಾಲದ ಹೋರಾಟದ ನಂತರ, ನಾರಾಯಣ ಹೆಲ್ತ್ ಸಿಟಿ  ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ನಾನು ಅವರಿಗೆ ವಿಶೇಷ ಆಭಾರಿಯಾಗಿದ್ದೇನೆ.ಇನ್ನು ನಾನು ಸಾಮಾನ್ಯ ಜೀವನವನ್ನುನಡೆಸಬಹುದು ಮತ್ತು ನನ್ನ ಕೆಲಸಕ್ಕೆ ಮರಳಬಹುದು. "ಸುದೀಶ್  ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com