ಕೊರೆವ ಚಳಿಯ ಅಂಟಾರ್ಟಿಕಾದಲ್ಲಿ 403 ದಿನಗಳನ್ನು ಕಳೆದ ಇಸ್ರೋ ಮಹಿಳೆ!

ಅಲ್ಲಿ ಹಿಂದೆ ಮುಂದೆಲ್ಲವೂ ಹಿಮದ ರಾಶಿ, ಮೈ ಕೊರೆಯುವಷ್ಟು ಚಳಿ. ಎಷ್ಟು ದೂರಕ್ಕೂ ಹಿಮ ಬಿಟ್ಟರೆ ಬೇರೇನೂ ಕಾಣದು ಕೇವಲ ಹಿಮಪಾತ, ಮಂಜುಗಡ್ಡೆಗಳ ದೊಡ್ಡ ರಾಶಿ ..............
ಮಂಗಳಾ ಮಣಿ
ಮಂಗಳಾ ಮಣಿ
Updated on
ನವದೆಹಲಿ: ಅಲ್ಲಿ ಹಿಂದೆ ಮುಂದೆಲ್ಲವೂ ಹಿಮದ ರಾಶಿ, ಮೈ ಕೊರೆಯುವಷ್ಟು ಚಳಿ. ಎಷ್ಟು ದೂರಕ್ಕೂ ಹಿಮ ಬಿಟ್ಟರೆ ಬೇರೇನೂ ಕಾಣದು  ಕೇವಲ ಹಿಮಪಾತ, ಮಂಜುಗಡ್ಡೆಗಳ ದೊಡ್ಡ ರಾಶಿ ಇಂತಹಾ ಪ್ರದೇಶದಲ್ಲಿ ತನಗೆ ಬೇಕಾದ ಆಹಾರಗಳನ್ನೂ ಇರಿಸಿಕೊಂಡು ಓರ್ವ ಮಹಿಳೆ ತಾನು 403 ದಿನಗಳನ್ನು ಕಳೆದಿದ್ದಾಳೆ!
ಇಸ್ರೋ ವಿಜ್ಞಾನಿ ಮಂಗಳಾ  ಮಣಿ - ವಿಶ್ವರ ಅತ್ಯಂತ ಶೀತ ಪ್ರದೇಶವಾದ ಅಂಟಾರ್ಟಿಕಾದಲ್ಲಿ ಒಟ್ಟು 403 ದಿನಗಳಿದ್ದು ಸಾಹಸ ಮೆರೆದಿದ್ದಾರೆ. ಮೈನಸ್ 90 ಡಿಗ್ರಿಗೆ ಕುಸಿಯುವ ಹವಾಮಾನದಲ್ಲಿ ಬದುಕಿದ ಈ ಮಹಿಳಾ ವಿಜ್ಞಾನಿಯ ಸಾಧನೆ ನಿಜಕ್ಕೂ ಮೆಚ್ಚತಕ್ಕದ್ದಾಗಿದೆ.
2016ರ ನವೆಂಬರ್ ನಲ್ಲಿ ಈಕೆ ಅಂಟಾರ್ಟಿಕಾ ಪ್ರವಾಸ ಕೈಗೊಂಡರು. ಒಟ್ಟು 23 ಮಂದಿಯ ತಂಡದೊಡನೆ ಪ್ರಯಾಣ ಬೆಳೆಸಿದ ಮಂಗಳಾ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ ಸಂಶೋಧಕಿಯಾಗಿದ್ದಾರೆ. ಈಕೆ ಆ ತಂಡದಲ್ಲಿದ್ದ ಏಕೈಕ ಮಹಿಳಾ ಸದಸ್ಯೆ ಎನ್ನುವುದು ವಿಶೇಷ.
ಡಿಸೆಂಬರ್ 2017ಕ್ಕೆ ತಮ್ಮ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮಂಗಳಾಗೆ ಇದೊಂದು ನಿಜವಾದ ಸವಾಲಆಗಿತ್ತು. " ಅಂಟಾರ್ಟಿಕಾದಲ್ಲಿನ ಜೀವನ ನಿಜಕ್ಕೂ ಸವಾಲಿನದಾಗಿತ್ತು. ಕಠಿಣ ಹವಾಮಾನದಿಂದಾಗಿ ನಮ್ಮ ನಿಯಂತ್ರಣಾ ಕೊಠಡಿಯಿಂದ ಹೊರ ಹೋಗಲು ತೀರಾ ಎಚ್ಚರಿಕೆ ವಹಿಸಬೇಕಾಗುತ್ತಿತ್ತು. ಚಳಿಯ ಕಾರಣ ಹೊರಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಎರಡರಿಂದ ಮೂರು ಗಂಟೆಗೊಮ್ಮೆ ನಮ್ಮ ಕೇಂದ್ರಕ್ಕೆ ವಾಪಾಸಗುವುದು ಅನಿವಾರ್ಯವಾಗುತ್ತಿತ್ತು. 
"ತಂಡದ ಸದಸ್ಯರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದರು. ನಾವು ಪರಸ್ಪರರು ಸಹಕಾರದಿಂಡ ಕಾರ್ಯ ನಿರ್ವಹಿಸುತ್ತಿದ್ದೆವು. ವಿಶೇಷವೆಂದರೆ ನನ್ನ ಜನ್ಮ ದಿನವನ್ನು ಸಹ ಅಲ್ಲಿನ ಭೂ ನಿಯಂತ್ರಣಾ ಕೇಂದ್ರದಲ್ಲಿಯೇ ಆಚರಿಸಿದ್ದೆವು. ಇಡೀ ಕಾರ್ಯಾಚರಣೆಯಲ್ಲಿ ಯಾವ ತೊಂದರೆಯೂ ಆಗಲಿಲ್ಲ" ಆಂಗ್ಲ ಪತ್ರಿಕೆಯೊಂದಕ್ಕೆ ಸಂದರ್ಶನ  ನೀಡಿದ್ದ ಮಂಗಳಾ  ತಮ್ಮ ವಿಶಿಷ್ಟ ಕಾರ್ಯಾಚರಣೆ ಕುರಿತಂತೆ ಸಂತಸ ಹಂಚಿಕೊಂಡಿದ್ದಾರೆ.
ಇನ್ನು ಈ ಕಾರ್ಯಾಚರಣೆಗೆ ತೆರಳುವುದಕ್ಕೆ ಮುನ್ನ ಹಲವು ವಾರಗಳ ಕಾಲ ತರಬೇತಿ ನೀಡಲಾಗುತ್ತದೆ. ಏಮ್ಸ್ ನಲ್ಲಿ ದೈಹಿಕ ಪರೀಕ್ಷೆ ಮುಗಿಸಿದ ನಾವುಗಳು ಉತ್ತರಾಖಂಡದ ಬದರೀನಾಥ್ ನ ಹತ್ತು ಸಾವಿರ ಅಡಿ ಎತ್ತರದಲ್ಲಿ ಹಿಮದಲ್ಲಿ ಸಾಗುವ ತರಬೇತಿಯನ್ನು ಪಡೆದಿದ್ದೆವು. ದೈಹಿಕ ಕ್ಷಮತೆಗಾಗಿ ಭಾರ ಹೊತ್ತು ಚಾರಣ ಮಾಡುವ ತರಬೇತಿ ನಮಗೆ ಒದಗಿಸಲಾಗಿತ್ತು. ಎರಡು ವರ್ಷಗಳ ಕಾಲ ಈ ಬಗೆಯ ಕಠಿಣ ತರಬೇತಿಯ ಬಳಿಕ ನಾವು ಅಂಟಾರ್ಟಿಕಾದ ನೈಜ ಕಾರ್ಯಾಚರಣೆಗೆ ಆಯ್ಕೆಯಾಗಿದ್ದೆವು ಎಂದು ಮಗಳಾ ಹೇಳಿದ್ದಾರೆ.
ಬೇಸಿಗೆಯಲ್ಲಿ ಹಡಗುಗಳು ಆಗಮಿಸುವ ದಿನಗಳಂದು ನಾವು ಮುಂದಿನ ಒಂದು ವರ್ಷಕ್ಕೆ ಸಾಕಾಗುವಷ್ಟು ಆಹಾರ ಸಾಮಗ್ರಿಗಳನ್ನು, ಅಗತ್ಯ ವಸ್ತುಗಳನ್ನು ತೆಗೆದಿರಿಸಿಕೊಳ್ಳಬೇಕಾಗುವುದು. ಹಾಗೆಯೇ ಕಳೆದ ಬಾರಿ ಉಪಯೋಗಿಸಿದ ಆಹಾರ, ಅಗತ್ಯ ವಸ್ತುಗಳಿಂದ ಉತ್ಪನ್ನವಾದ ತ್ಯಾಜ್ಯವನ್ನು ಸರಿಯಾಗಿ ಪ್ಯಾಕ್ ಮಾಡಿ ಅದೇ ಹಡಗಿನಲ್ಲಿ ವಾಪಾಸ್ ಕಳಿಸಲಾಗುತ್ತದೆ. ಈ ಮೂಲಕ ನಮ್ಮ ಭೂ ಕೇಂದ್ರವನ್ನು ಅತ್ಯಂತ ಸ್ವಚ್ಚವಾಗಿ ಇಡಲಾಗುತ್ತದೆ  ಎಂದು ಮಂಗಳಾ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com