ಬೆಂಗಳೂರು: ಈತ ಸದ್ದಾಂ ಹುಸೇನ್, ರಾಮಮಂದಿರದ ಸ್ವಚ್ಚತಾ ಕರ್ಮಚಾರಿ!

ರಾಮನವಮಿಗೆ (ಏಪ್ರಿಲ್ 14) ಕೆಲವೇ ದಿನಗಳು ಉಳಿದಿರುವಂತೆ ಬೆಂಗಳೂರಿನ ರಾಜಾಜಿನಗರ ಶ್ರೀರಾಮ ಸೇವಾ ಮಂಡಳಿಯಲ್ಲಿ ಭರದ ಸಿದ್ದತೆಗಳು ನಡೆದಿದೆ.ರಾಮನವಮಿಯ ವಾರ್ಷಿಕ ಜಾತ್ರೆಯ ....
ಸದ್ದಾಂ ಹುಸೇನ್ ಸೋಮವಾರ ರಾಜಾಜಿನಗರದಲ್ಲಿರುವ ರಾಮ ಮಂದಿರದಲ್ಲಿ ವಿಗ್ರಹಗಳನ್ನು ಸ್ವಚ್ಛಗೊಳಿಸುತ್ತಿರುವುದು
ಸದ್ದಾಂ ಹುಸೇನ್ ಸೋಮವಾರ ರಾಜಾಜಿನಗರದಲ್ಲಿರುವ ರಾಮ ಮಂದಿರದಲ್ಲಿ ವಿಗ್ರಹಗಳನ್ನು ಸ್ವಚ್ಛಗೊಳಿಸುತ್ತಿರುವುದು
Updated on
ಬೆಂಗಳೂರು: ರಾಮನವಮಿಗೆ (ಏಪ್ರಿಲ್ 14) ಕೆಲವೇ ದಿನಗಳು ಉಳಿದಿರುವಂತೆ ಬೆಂಗಳೂರಿನ ರಾಜಾಜಿನಗರ ಶ್ರೀರಾಮ ಸೇವಾ ಮಂಡಳಿಯಲ್ಲಿ ಭರದ ಸಿದ್ದತೆಗಳು ನಡೆದಿದೆ.ರಾಮನವಮಿಯ ವಾರ್ಷಿಕ ಜಾತ್ರೆಯ ದಿನ ರಾಜಾಜಿನಗರದ ಬೀದಿಗಳಲ್ಲಿ ಶ್ರೀರಾಮನ ರಥಯತ್ರೆ ನೆರವೇರಲಿದ್ದು ಈ ರಥೋತ್ಸವ ಶಾಂತ ನಿರ್ವಿಘ್ನವಾಗಿ ನೆರವೇರಿಸುವ ಹೊಣೆ ಓರ್ವ ಇಪ್ಪತ್ತೇಳು ವರ್ಷ ವಯಸ್ಸಿನ ವ್ಯಕ್ತಿಯ ಜವಾಬ್ದಾರಿಯಾಗಿದೆ. ಈ ದೇವಾಲಯದ ಆವರಣವನ್ನುಶುಚಿಯಾಗಿರಿಸುವುದು ಸೇರಿದಂತೆ ಎಲ್ಲಾ ಬಗೆಯ ಕೆಲಸ ಮಾಡುವ ಈ ವ್ಯಕ್ತಿಯ ಹೆಸರನ್ನೊಮ್ಮೆ ಕೇಳಿದರೆ ನಿಮಗೆ ಅಚ್ಚರಿಯಾಗುತ್ತದೆ. ಆತನ ಹೆಸರು "ಸದ್ದಾಂ ಹುಸೇನ್"
ಕೇವಲ ಎರಡನೇ ತರಗತಿಯವರೆಗೆ ಓದಿರುವ ಹುಸೇನ್ ಈ ಪ್ರದೇಶದ ಜನರಿಗೆ ಅವರ ಕೆಲಸಗಳಲಿ ನೆರವಾಗುತ್ತಾರೆ. ಮನೆಗಳ ಸ್ಥಲಾಂತರವಿರಬಹುದು, ಅಂಗಡಿ ಕೆಲಸವಿರಬಹುದು ಆತ ಇಲ್ಲವೆನ್ನದೆ ಮಾಡುತ್ತಾರೆ, ಅಷ್ಟೇ ಅಲ್ಲದೆ ಆತ ಕ್ಯಾಬ್ ಚಾಲನೆ ಸಹ ಮಾಡಬಲ್ಲರು.
ಪತ್ರಿಕಾ ಪ್ರತಿನಿಧಿ ರಾಜಾಜಿನಗರ ನಾಲ್ಕನೇ ಬ್ಲಾಕ್ ನಲ್ಲಿರುವ ರಾಮಮಂದಿರಕ್ಕೆ ಭೇಟಿ ಕೊಟ್ಟ ವೇಳೆ ಸದ್ದಾಂ ಹುಸೇನ್ ದೇವಾಲಯದ ಆವರಣವನ್ನು ಶುಚಿಗೊಳಿಸುತ್ತಿದ್ದರು. 1950 ರ ದಶಕದ ಉತ್ತರಾರ್ಧದಲ್ಲಿ ರಾಜಾಜಿನಗರ ಲೇಔಟ್ ರಚನೆಯಾದಾಗ ಈ ದೇವಾಲಯವನ್ನು ನಿರ್ಮಿಸಲಾಯಿತು.
ಸದ್ದಾಂ ಹುಸೇನ್ ಯಾರೊಬ್ಬರ ಸಹಾಯಕ್ಕಾಗಿ ಕಾಯುವುದಿಲ್ಲ, ತಾವು ದೇವಾಲಯ ಹೊಕ್ಕು ಅಲ್ಲಿರುವ ಏಣಿಯೊಂದನ್ನೇರಿ ಛಾವಣಿಯಲ್ಲಿರಬಹುದಾದ ಧೂಳು, ಜೇಡರ ಬಲೆಗಳಂತಹಾ ಕಸವನ್ನು ಶುಚಿಗೊಳಿಸುತ್ತಾರೆ. ಕಸ ಹೊಡೆಯುವುದು, ಬಟ್ಟೆಯಿಂದ ನೆಲ, ಗೋಡೆಗಳ ಒರೆಸುವುದನ್ನು ಅವರೊಬ್ಬರೇ ಮಾಡಬಲ್ಲರು. ಕಂಬದ ಮೇಲಿರುವ ರಾಮ, ಲಕ್ಷ್ಮಣ, ಸೀತಾ ಹಾಗೂ ಹನುಮನ ಮೂರ್ತಿಗಳ ಮೇಲಿನ ಧೂಳನ್ನು ಸಹ ಅವರು ನಿರ್ವಿಕಾರ ಭಾವದಿಂದ ಒರೆಸುತ್ತಾರೆ, ಹಾಗೆಯೇ ಆ ಮೂರ್ತಿಗಳು ಹೊಚ್ಚ ಹೊಸದಾಗಿ ಕಾಣುವವರೆಗೆ ಅವರು ಶುಚಿಗೊಳಿಸುತ್ತಾರೆ.
"ನಾನು ದೇವಾಲಯದ ಶುಚಿಮಾಡುವುದನ್ನು ಕೆಲ ಜನರು ಪ್ರಶಂಸಿಸುತ್ತಾರೆ. ಇನ್ನೂ ಕೆಲವರು ಬೇಅರ ವ್ಯಕ್ತಪಡಿಸಬಹುದು, ಅಂತಹವರಿಗೆ ನಾನು ನನ್ನ ಕಿರುನಗೆಯ ಮೂಲಕ ಉತ್ತರಿಸುತ್ತೇನೆ" ಸದ್ದಾಂ ಹೇಳಿದರು.
ಗಾಂಧಿನಗರದಲ್ಲಿನ ಗ್ರಂಥಿಗೆ ಅಂಗಡಿ ಮಾಲೀಕ ವೆಂಕಟೇಶ್ ಬಾಬು ಅವರ ಬಳಿ ಸದ್ದಾಂ ಕೆಲಸ ಮಾಡುತ್ತಿದ್ದರು. ವೆಂಕಟೇಶ್ ತಮ್ಮ ಅಂಗಡಿಗಳಲ್ಲಿ ಗಣೇಶನ ವಿಗ್ರಹ ಮಾರಾಟ ನಡೆಸುತ್ತಿದ್ದರು. ಅವರು ಹೇಳಿದಂತೆ "ಸದ್ದಾಂ ನನ್ನೊಂದಿಗೆ ಕೆಲಸ ಮಾಡುತ್ತಾನೆ. ದೇವಾಲಯವನ್ನು ವಾರ್ಷಿಕವಾಗಿ ಶುಚಿಗೊಳಿಸುವ ಕೆಲಸವೂ ಅವರ ಪಾಲಿಗಿದೆ.ಅವರು ಸಂಪೂರ್ಣ ಪ್ರಾಮಾಣಿಕತೆಯಿಂದ ಆ ಕಾರ್ಯ ನೆರವೇರಿಸುತ್ತಾರೆ. ಇದಕ್ಕಾಗಿ ಪ್ರತಿಯೊಬ್ಬರೂಅವರನ್ನು ಮೆಚ್ಚುತ್ತಾರೆ.ಇನ್ನು ಅವರ ತಾಯಿ ಮೆಹಬೊಬಿ  ಸಹ ದೇಆಲಯದ ಆವರಣ ಸ್ವಚ್ಛಗೊಳಿಸುವ ಮತ್ತು ಇಅತ್ರೆ ಕೆ;ಲಸ ಮಾಡುವರು. ಆಕೆ ಹಲವು ಮನೆಗೆಲಸಗಳನ್ನು ಮಾಡುತ್ತಾರೆ.
ಸೇವಾ ಮಂಡಳಿ ಸದಸ್ಯರು, ಕಾರ್ಯದರ್ಶಿಗಳಾಗಿರುವ  ನಾಗರಾಜಯ್ಯ ಮತ್ತು ಟಿ.ಎಸ್. ಪದ್ಮನಾಭ ಹೇಳಿದಂತೆ ""ವಿಶೇಷ ಸಂದರ್ಭಗಳಲ್ಲಿ, ನಾವು 15 ಮಂದಿ ಮಹಿಳೆಯರನ್ನುದೇವಾಲಯ ಶುಚಿಗೊಳಿಸಲು ಹೇಳುತ್ತೇವೆ. ಅವರು ಸರಿಯಾದ ಸಮಯಕ್ಕೆ ಆಗಮಿಸಿ ದೇವಾಲಯ ಆವರಣ ಸ್ವಚ್ಚಗೊಳಿಸಿ ಹೊರಟು ಹೋಗುತ್ತಾರೆ. ಅವರೆಲ್ಲರೂ ಮುಸ್ಲಿಂ ಮಹಿಳೆಯರು. ನಾವು ಅವರ ಧರ್ಮ ಕುರಿತು ಕೇಳುವುದಿಲ್ಲ, ಅವರ ಕೆಲಸದ ಬಳಿಕ ದೇವಾಲಯ ಸ್ವಚ್ಚ, ಸುಂದರವಾಗಿ ಹೊಸತನವನ್ನು ಪಡೆಯುತ್ತದೆ."

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com