ಬೆಳ್ಳುಳ್ಳಿ ಬಿಡಿಸುವ ವಿಡಿಯೋ ಕೂಡ ವೈರಲ್, ವೀಕ್ಷಕರ ಸಂಖ್ಯೆ ಎಷ್ಟು ಗೊತ್ತಾ?

ಇಂಟರ್ ನೆಟ್ ಲೋಕದಲ್ಲಿ ನಿತ್ಯ ಹತ್ತಾರು ವಿಚಾರಗಳು ವೈರಲ್ ಆಗುತ್ತಿರುತ್ತವೆ. ಇದೀಗ ಈ ಪಟ್ಟಿಗೆ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವ ವಿಡಿಯೋ ಕೂಡ ಭಾರಿ ವೈರಲ್ ಆಗಿದೆ.

Published: 20th June 2019 12:00 PM  |   Last Updated: 20th June 2019 12:45 PM   |  A+A-


4.41 Lakh Views For Garlic Peeling Hack That's Blowing People's Minds

ವೈರಲ್ ಆದ ಬೆಳ್ಳುಳ್ಳಿ ಬಿಡಿಸುವ ವಿಡಿಯೋ

Posted By : SVN SVN
Source : Online Desk
ನವದೆಹಲಿ: ಇಂಟರ್ ನೆಟ್ ಲೋಕದಲ್ಲಿ ನಿತ್ಯ ಹತ್ತಾರು ವಿಚಾರಗಳು ವೈರಲ್ ಆಗುತ್ತಿರುತ್ತವೆ. ಇದೀಗ ಈ ಪಟ್ಟಿಗೆ ಬೆಳ್ಳುಳ್ಳಿ ಸಿಪ್ಪೆ ಬಿಡಿಸುವ ವಿಡಿಯೋ ಕೂಡ ಭಾರಿ ವೈರಲ್ ಆಗಿದೆ.

ಅರೆ ಬೆಳ್ಳುಳ್ಳಿ ಬಿಡಿಸುವ ವಿಡಿಯೋ ಎಂದು ಮೂಗು ಮುರಿಯಬೇಡಿ.. ಬೆಳ್ಳುಳ್ಳಿಯನ್ನು ಕೈಗೆ ತೆಗೆದುಕೊಳ್ಳದೇ ಅದನ್ನು ಬೇರ್ಪಡಿಸದೇ ಒಂದು ಚಾಕುವಿನಿಂದ ಬೆಳ್ಳುಳ್ಳಿಯನ್ನು ಮತ್ತು ಅದರ ಸಿಪ್ಪೆಯನ್ನು ಬೇರ್ಪಡಿಸುವ ವ್ಯಕ್ತಿಯ ಚಾಕಚಕ್ಯತೆಗೆ ಇಂಟರ್ ನೆಟ್ ಲೋಕ ಫುಲ್ ಫಿದಾ ಆಗಿದೆ. 

ಚಿಕ್ಕ ಚಾಕುವಿನ ತುದಿಯಿಂದ ಬೆಳ್ಳುಳ್ಳಿ ಮಧ್ಯಭಾಗಕ್ಕೆ ಚುಚ್ಚಿ ಅದನ್ನು ಸಿಪ್ಪೆಯಿಂದ ಬೇರ್ಪಡಿಸಲಾಗುತ್ತದೆ. ಇದರಿಂದ ಕೈಗೆ ಬೆಳ್ಳುಳ್ಳಿಯ ಅಂಟು ಅಂಟದೇ ಕೆಲವೇ ಸೆಕೆಂಡುಗಳಲ್ಲಿ ಇಡೀ ಬೆಳ್ಳುಳ್ಳಿಯನ್ನು ಬಿಡಿಸಲಾಗುತ್ತದೆ. ಟ್ವಿಟರ್ ಖಾತೆದಾರ @VPestilenZ ಎಂಬುವವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಬೆಳ್ಳುಳ್ಳಿ ಬಿಡಿಸುವ ವ್ಯಕ್ತಿಯ ಚಾಕಚಾಕ್ಯತೆಯನ್ನು ಕೊಂಡಾಡಿದ್ದಾರೆ.

ವಿಡಿಯೋ ಶೇರ್ ಆದ ದಿನದಿಂದ ಇಲ್ಲಿಯವರೆಗೂ ಸುಮಾರು 4.41 ಲಕ್ಷ ಮಂದಿ ಈ ವಿಡಿಯೋ ವೀಕ್ಷಣೆ ಮಾಡಿದ್ದು, ಸಾವಿರಾರು ಮಂದಿ ಕಮೆಂಟ್ ಮಾಡಿದ್ದಾರೆ. ಕೆಲವರು ಮೂಲ ಪೋಸ್ಟ್ ಗಳಿಗೆ ಲೈಕ್ ಒತ್ತಿದ್ದರೆ ಮತ್ತೆ  ಕೆಲವರು ಈ ವಿಡಿಯೋ ಡೌನ್ಲೋಡ್ ಮಾಡಿಕೊಂಡು ಪೋಸ್ಟ್ ಮಾಡಿರುವ ವಿಡಿಯೋ ಲೈಕ್ ಮತ್ತು ಶೇರ್ ಮಾಡುತ್ತಿದ್ದಾರೆ.
Stay up to date on all the latest ವಿಶೇಷ news with The Kannadaprabha App. Download now
facebook twitter whatsapp