ಇದಪ್ಪಾ ನಿಜವಾದ ಲಾಟರಿ ಅಂದ್ರೆ!... ಕಳೆದು ಹೋಗಿದ್ದ ಲಾಟರಿ ಟಿಕೆಟ್ ವಾಪಸ್ ಸಿಕ್ತು, ಅದರಲ್ಲೇ ಹಣವೂ ಬಂತು!

ನಸೀಬಿನಲ್ಲಿ ಬರೆದಿದ್ದರೆ ಆ ಅದೃಷ್ಟವನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಾಗುವುದಿಲ್ಲ ಎನ್ನುವ ಮಾತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೊಂದು ಅಮೆರಿಕದ ಟ್ರೆಂಟನ್ ನಲ್ಲಿ ನಡೆದಿದೆ.
ಇದಪ್ಪಾ ನಿಜವಾದ ಲಾಟರಿ ಅಂದ್ರೆ!... ಕಳೆದ ಹೋಗಿದ್ದ ಲಾಟರಿ ಟಿಕೆಟ್ ವಾಪಸ್ ಸಿಕ್ತು, ಅದರಲ್ಲೇ ಹಣವೂ ಬಂತು!
ಇದಪ್ಪಾ ನಿಜವಾದ ಲಾಟರಿ ಅಂದ್ರೆ!... ಕಳೆದ ಹೋಗಿದ್ದ ಲಾಟರಿ ಟಿಕೆಟ್ ವಾಪಸ್ ಸಿಕ್ತು, ಅದರಲ್ಲೇ ಹಣವೂ ಬಂತು!
ಟ್ರೆಂಟನ್: ನಸೀಬಿನಲ್ಲಿ ಬರೆದಿದ್ದರೆ ಆ ಅದೃಷ್ಟವನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಾಗುವುದಿಲ್ಲ ಎನ್ನುವ ಮಾತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆಯೊಂದು ಅಮೆರಿಕದ ಟ್ರೆಂಟನ್ ನಲ್ಲಿ ನಡೆದಿದೆ. 
ಸುಮಾರು 4 ವರ್ಷಗಳಿಂದ ಲಾಟರಿ ಟಿಕೆಟ್ ಗಳಿಗೆ ಹಣ ಸುರಿಯುತ್ತಿದ್ದ ನ್ಯೂ ಜೆರ್ಸಿಯ ನಿರುದ್ಯೋಗಿ ಮೈಕ್ ವೀರ್ಸ್ಕಿ ಕೊನೆಗೂ ಲಾಟರಿಯಲ್ಲಿ 273 ಮಿಲಿಯನ್ ಡಾಲರ್ ಜಾಕ್ ಪಾಟ್ ಹೊಡೆದಿದ್ದು ನಿಜಕ್ಕೂ ಅದೃಷ್ಟವಂತನೇ ಆಗಿರಬೇಕು. ಆದರೆ ಸ್ವಲ್ಪ ಯಾಮಾರಿದ್ದರೂ ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿರಲಿಲ್ಲ. 
ಪೆನ್ಸಲ್ವೇನಿಯಾದ ಗಡಿ ಹತ್ತಿರ ಫಿಲಿಪ್ಸ್ ಬರ್ಗ್ ನ ಕ್ವಿಕ್ ಚೆಕ್ ಸ್ಟೋರ್ ನಲ್ಲಿ ಲಾಟರಿ ಟಿಕೆಟ್ ಗಳನ್ನು ಖರೀದಿಸಿದ್ದ ಮೈಕ್ ವೀರ್ಸ್ಕಿ ಮೊಬೈಲ್ ಫೋನ್ ಗುಂಗಿನಲ್ಲಿ ಟಿಕೆಟ್ ಗಳನ್ನು ಖರೀದಿಸಿದ್ದ ಸ್ಥಳದಲ್ಲೇ ಮರೆತುಹೋಗಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಓರ್ವ ಪುಣ್ಯಾತ್ಮ ಅದನ್ನು ಸ್ಟೋರ್ ಗೇ ವಾಪಸ್ ನೀಡಿ ತೆರಳಿದ್ದಾನೆ. ಟಿಕೆಟ್ ಮರೆತು ಹೋಗಿದ್ದ ಮೈಕ್ ವೀರ್ಸ್ಕಿ ಮರುದಿನ ವಿಚಾರಿಸಲು ಹೋದರೆ ಆತನಿಗೆ ಅಚ್ಚರಿಯ ರೀತಿಯಲ್ಲಿ ತನ್ನ ಟಿಕೆಟ್ ಗಳು ವಾಪಸ್ ದೊರೆತಿವೆ. 
ಒಂದು ವೇಳೆ ಆ ಟಿಕೆಟ್ ಗಳನ್ನು ಸಿಕ್ಕಿದ್ದೇ ಚಾನ್ಸ್ ಎಂದು ಆಗಂತುಕ ತೆಗೆದುಕೊಂಡಿದ್ದರೆ ಆ ಲಾಟರಿ ಹಣ ಅವನಿಗೇ ಸಿಕ್ಕಿರುತ್ತಿತ್ತು ಎಂದು ಲಾಟರಿ ಅಧಿಕಾರಿಗಳು ಹೇಳಿದ್ದಾರೆ. 
"ಟಿಕೆಟ್ ಗಳನ್ನು ವಾಪಸ್ ನೀಡಿದ ಆ ಆಗಂತುಕ ವ್ಯಕ್ತಿಯನ್ನು ಹುಡುಕುತ್ತಿದ್ದೇನೆ, ಆತನಿಗೆ ನಾನು ಧನ್ಯವಾದ ತಿಳಿಸಬೇಕಿದೆ ಹಾಗೂ ಏನನ್ನಾದರೂ ಉಡುಗೊರೆ ನೀಡಬೇಕಿದೆ" ಎಂದು ಮೈಕ್ ವೀರ್ಸ್ಕಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 
ಅಂದಹಾಗೆ ಲಾಟರಿ ಗೆದ್ದಿರುವ  ಮೈಕ್ ವೀರ್ಸ್ಕಿ ಹಲವು ವರ್ಷದಿಂದ ನಿರುದ್ಯೋಗಿಯಾಗಿದ್ದು, ಉದ್ಯೋಗಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ನಡುವೆ ತಮ್ಮ ಪತ್ನಿಗೆ ವಿಚ್ಛೆದನ ನೀಡಿದ್ದಾರೆ.
ಲಾಟರಿ ಹಣದಿಂದ ಹೊಸ ಪಿಕ್ ಅಪ್ ಟ್ರಕ್ ಖರೀದಿಸುವುದು, ತಾಯಿಗೆ ಹೊಸ ಕಾರನ್ನು ಕೊಡಿಸುವುದು ಹಾಗೂ ಮನೆ ನವೀಕರಣಗಳು ಇವಿಷ್ಟೂ ಮೈಕ್ ವೀರ್ಸ್ಕಿ ಅಜೆಂಡಾದಲ್ಲಿರುವ ಅಂಶಗಳು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com