ಹೆಮ್ಮೆ ಪಡುವ ವಿಷಯ: ಜಿಲ್‌ ಬೈಡನ್‌ ಅವರ ನೀತಿ ನಿರ್ದೇಶಕರಾಗಿ ಕುಂದಾಪುರ ಮೂಲದ ಮಾಲಾ ಅಡಿಗ ನೇಮಕ

ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್‌ ಅವರ ಪತ್ನಿ ಜಿಲ್‌ ಬೈಡನ್‌ ಅವರ ನೀತಿ ನಿರ್ದೇಶಕರಾಗಿ ಭಾರತೀಯ ಮೂಲದ ಮಾಲಾ ಅಡಿಗ ಅವರು ಆಯ್ಕೆಯಾಗಿದ್ದಾ
ಮಾಲಾ ಅಡಿಗ
ಮಾಲಾ ಅಡಿಗ

ಉಡುಪಿ: ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್‌ ಅವರ ಪತ್ನಿ ಜಿಲ್‌ ಬೈಡನ್‌ ಅವರ ನೀತಿ ನಿರ್ದೇಶಕರಾಗಿ ಭಾರತೀಯ ಮೂಲದ ಮಾಲಾ ಅಡಿಗ ಅವರು ಆಯ್ಕೆಯಾಗಿದ್ದಾರೆ. 

ಭಾರತ ಮೂಲದ ಮಾಲಾ ಅಡಿಗ ಅವರು ಬೈಡನ್ ಆಡಳಿತದಲ್ಲಿ ಪ್ರಮುಖ ಹುದ್ದೆ ಪಡೆದುಕೊಂಡಿದ್ದಾರೆ.  ಬೈಡನ್ ಪ್ರತಿಷ್ಠಾನದಲ್ಲಿ ಉನ್ನತ ಶಿಕ್ಷಣ ಮತ್ತು ಸೇನಾ ಕುಟುಂಬಗಳ ವಿಭಾಗದ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮಾಲಾ ಅಡಿಗ ಅವರು, ಒಬಾಮ ಆಡಳಿತದ ಅವಧಿಯಲ್ಲಿ ಒಬಾಮ ಸರ್ಕಾರದ ಅವಧಿಯಲ್ಲಿ ಜೋ ಬೈಡನ್ ಉಪಾಧ್ಯಕ್ಷರಾಗಿದ್ದಾಗ ಅವರ ಪತ್ನಿ ಜಿಲ್ ಬೈಡನ್ ಅವರಿಗೆ ನೀತಿ ಸಲಹೆಗಾರರೂ ಆಗಿದ್ದರು. ಈ ಬಾರಿ ಅವರು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ನೀತಿ ನಿರ್ದೇಶಕರಾಗಿ ಕೆಲಸ ಮಾಡಲಿದ್ದಾರೆ.

ಮಾಲಾ ಅಡಿಗ ಅವರು ಹುಟ್ಟಿಬೆಳೆದದ್ದು, ಅಮೆರಿಕದಲ್ಲಾದರೂ, ಆಕೆ ಉಡುಪಿ ಜಿಲ್ಲೆಯ ಕುಂದಾಪುರದ ಕಕ್ಕುಂಜೆ ಗ್ರಾಮದ ಮಣ್ಣಿನ ಮಗಳು. ಅವರು ಕಕ್ಕುಂಜೆ ಡಾ. ಚಂದ್ರಶೇಖರ ಅಡಿಗ ಮೊಮ್ಮಗಳು, ಡಾ.ರಮೇಶ್‌ ಅಡಿಗರ ಮಗಳು. ಡಾ.ರಮೇಶ್‌ ಅಡಿಗ ಅವರು ವೈದ್ಯಕೀಯ ಪದವಿ ಪಡೆದು ತಮ್ಮ 24ನೇ ವಯಸ್ಸಿನಲ್ಲೇ ಅಮೆರಿಕಕ್ಕೆ ತೆರಳಿದ್ದರು. ಕಳೆದ 50 ವರ್ಷಗಳಿಂದ ಅಲ್ಲಿಯೇ ನೆಲೆ ನಿಂತಿದ್ದಾರೆ.

ಮಾಲಾ ಅಮೆರಿಕಾದಲ್ಲೇ ಜನಿಸಿದರು ತಮ್ಮ ಊರನ್ನು ಮರೆತಿಲ್ಲ,  ತಮ್ಮ ಪತಿ ಚಾರ್ಲ್ ಬೈರೋ ಜೊತೆ ಹಲವು ವಿವಾಹ ಸಮಾರಂಭಗಳಿಗೆ ಕುಂದಾಪುರಕ್ಕೆ ಆಗಮಿಸುತ್ತಿರುತ್ತಾರೆ.  ಕುಂದಾಪುರದ ಚೈತನ್ಯ ವಿಶೇಷ ಶಾಲೆಯ ಪೋಷಕಿಯೂ ಆಗಿರುವ ಮಾಲಾ ಮತ್ತು ಚಾರ್ಲ್ಸ್‌ಗೆ ಆಶಾ ಎಂಬ 15 ವರ್ಷದ ಮಗಳು ಇದ್ದಾಳೆ.

ಮಾಲಾ ತುಂಬಾ ಪರಿಶ್ರಮ ಪಡುವ ಮಹಿಳೆ, ಹೀಗಾಗಿ ಆಕೆ ಅತ್ಯುನ್ನತ ಸ್ಥಾನಕ್ಕೇರಿದ್ದಾರೆ. ವಾರ್ಷಿಕವಾಗಿ ಭಾರತಕ್ಕೆ ಪ್ರವಾಸ ಬರುವ ಆಕೆ ಎಲ್ಲಾ ಕುಟುಂಬ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ ಎಂದು ಮಾಲಾ ಸಂಬಂಧಿ ಸುಜಾತಾ ನಕ್ಕತ್ತಾಯ ಎಂಬುವರು ಹೇಳಿದ್ದಾರೆ.

ಕುಂದಾಪುರದಲ್ಲಿ ಕಕ್ಕುಂಜೆ ಅಡಿಗರ ಮನೆತನ ಬಹಳ ಪ್ರಸಿದ್ಧ. ಈ ಮನೆತನದ ಸೂರ್ಯನಾರಾಯಣ ಅಡಿಗರು ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷರಾಗಿದ್ದರು. ಇದೇ ಮನೆತನದ ಮಗಳು ಮಾಲಾ ಅಡಿಗ, ಈಗ ಅಮೆರಿಕಾದ ಪ್ರಥಮ ಮಹಿಳೆಯ ನೀತಿ ನಿರ್ದೇಶಕಿಯಾಗಿದ್ದಾರೆ. ಇದು ಕುಂದಾಪುರಕ್ಕೆ ಮಾತ್ರವಲ್ಲ ಕನ್ನಡ ನಾಡಿಗೆ ಹೆಮ್ಮೆಯ ವಿಷಯ. ಊರಿನವರಿಗೆಲ್ಲ ಬಹಳ ಸಂತೋಷವಾಗಿದೆ. ಮಾಲಾ ಅಡಿಗ ಅವರು ತಮ್ಮ ಹುದ್ದೆಯಲ್ಲಿ ಯಶಸ್ವಿಯಾಗಲಿ, ಇನ್ನೂ ದೊಡ್ಡ ಹುದ್ದೆಗೇರಲಿ ಎಂಬುದೇ ನಮ್ಮೆಲ್ಲರ ಹಾರೈಕೆ ಎಂದು ಹೇಳಿದ್ದಾರೆ.

ಮಾಲಾ ಅಡಿಗ ಅಮೆರಿಕಾಗ ಗ್ರಿನೆಲ್ ಕಾಲೇಜು, ಮಿನ್ನೆಸೋಟಾ ಸ್ಕೂಲ್ ಆಪ್ ಹೆಲ್ತ್ ವಿವಿ, ಶಿಕಾಗೋ ಲಾ ಸ್ಕೂಲ್ ವಿವಿಗಳಿಂದ ಪದವಿ ಗಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com