ಮಳೆಗಾಲದಲ್ಲಿ 'ಕಚಾಂಪುಲಿ'ಗೆ ಹೆಸರುವಾಸಿ ಕೊಡಗು ಜಿಲ್ಲೆ!

ಕೊಡಗು ಜಿಲ್ಲೆಯು ವಿಶೇಷವಾದ ಸಾಂಪ್ರದಾಯಿಕ ಪಾಕಶಾಲೆ ಹಾಗೂ ಹಂದಿ ಮಾಂಸಕ್ಕೆ ಹೆಸರುವಾಸಿಯಾಗಿದೆ. ಈ ಸಾಂಪ್ರದಾಯಿಕ ಮಾಂಸಾಹಾರಿ ಭಕ್ಷ್ಯಗಳಿಗೆ ‘ಕಚಾಂಪುಲಿ’ ಅಥವಾ ‘ಪುಲಿನೀರ್’ (ಕೊಡವ ಭಾಷೆಯಲ್ಲಿ ಪುಲಿ ಎಂದರೆ ಹುಳಿ ಎಂದರ್ಥ) ಸೇರಿಸಲಾಗುತ್ತದೆ.
ಕಚಾಂಪುಲಿ ತಯಾರಿಸುತ್ತಿರುವ 90 ವರ್ಷದ ಸುಬ್ಬಯ್ಯ
ಕಚಾಂಪುಲಿ ತಯಾರಿಸುತ್ತಿರುವ 90 ವರ್ಷದ ಸುಬ್ಬಯ್ಯ

ಮಡಿಕೇರಿ: ಕೊಡಗು ಜಿಲ್ಲೆ ಮಡಿಕೇರಿಯ ಕೆ. ನಿಡುಗಾಣೆ ಗ್ರಾಮದ 90 ವರ್ಷದ  ಉದಿಯಾಂಡ ಸುಬ್ಬಯ್ಯ ಮಳೆಗಾಲದಲ್ಲೂ ಸದಾ ಬ್ಯುಸಿಯಾಗಿರುತ್ತಾರೆ.  ಚಳಿ ಹಾಗೂ ಮಳೆಯ ಕಾರಣ ಬಹುತೇಕ ಜನರು ಮನೆ ಒಳಗಡೆ ಇದ್ದರೆ ಸುಬ್ಬಯ್ಯ, ಮುಂಜಾನೆಯೇ ಎದ್ದು ಮಲಬಾರ್ ಹುಣಸೆ ಹಣ್ಣನ್ನು ಹುಡುಕಲು ಪ್ರಾರಂಭಿಸುತ್ತಾರೆ. ಕೆಸರು ಮೆತ್ತಿಕೊಂಡ ಕಾಲುಗಳೊಂದಿಗೆ ಮೈಲುಗಟ್ಟಲು ದೂರ ಸಾಗಿ ಹಣ್ಣನ್ನು ಸಂಗ್ರಹಿಸುತ್ತಾರೆ. ಒಂದು ಬಾಸ್ಕೆಟ್ ತುಂಬ ಹಣ್ಣು ತೆಗೆದುಕೊಂಡು ಮನೆಗೆ ಬರುತ್ತಾರೆ. ನಂತರ ಟೆಂಟ್ ಗೆ ಸಾಗಿ ಕೊಡಗು 'ಕಚಾಂಪುಲಿ’ ಎಂದು ಜನಪ್ರಿಯವಾಗಿರುವ ವಿನೆಗರ್ ನ್ನು ಹಣ್ಣುಗಳಿಂದ ತಯಾರಿಸುತ್ತಾರೆ.

ಕೊಡಗು ಜಿಲ್ಲೆಯು ವಿಶೇಷವಾದ ಸಾಂಪ್ರದಾಯಿಕ ಪಾಕಶಾಲೆ ಹಾಗೂ ಹಂದಿ ಮಾಂಸಕ್ಕೆ ಹೆಸರುವಾಸಿಯಾಗಿದೆ. ಈ ಸಾಂಪ್ರದಾಯಿಕ ಮಾಂಸಾಹಾರಿ ಭಕ್ಷ್ಯಗಳಿಗೆ ‘ಕಚಾಂಪುಲಿ’ ಅಥವಾ ‘ಪುಲಿನೀರ್’ (ಕೊಡವ ಭಾಷೆಯಲ್ಲಿ ಪುಲಿ ಎಂದರೆ ಹುಳಿ ಎಂದರ್ಥ) ಸೇರಿಸಲಾಗುತ್ತದೆ.  ಸಾಮಾನ್ಯವಾಗಿ ಕಪ್ಪು ವಿನೆಗರ್ ಎಂದು ಕರೆಯಲ್ಪಡುವ ‘ಕಾಚಂಪುಲಿ’ಯನ್ನು ಇಲ್ಲಿನ ಸ್ಥಳೀಯ ಜನರು ಮಳೆಗಾಲದಲ್ಲಿ ತಯಾರಿಸುತ್ತಾರೆ.

ಪ್ರತಿದಿನ ಹಣ್ಣಾದ ಹುಣಸೆ ಹಣ್ಣುಗಳನ್ನು ಸಂಗ್ರಹಿಸಿ, ಮನೆಗೆ ತೆಗೆದುಕೊಂಡು ಬೀಜಗಳನ್ನು ಪ್ರತ್ಯೇಕಿಸಲಾಗುವುದು, ನಂತರ  ಕೈಯಿಂದ ಮಾಡಿದ ಮರದ ಗ್ರೀಲ್ ನಲ್ಲಿ ಇಡಲಾಗುವುದು, ಅದರ ಕೆಳಗಡೆ ಬೆಂಕಯ ಹಬೆ  ಹಾಕಿ ನಿರಂತರವಾಗಿ ಎರಡು ದಿನಗಳ ಕಾಲ ಹೆಚ್ಚಿನ ತಾಪಮಾನದಲ್ಲಿ ಒಣಗಿಸಲಾಗುವುದು, ನಂತರ ಒಣಗಿದ ಹಣ್ಣುಗಳನ್ನು ಕುದಿಯುವ ನೀರಿನಲ್ಲಿ ಹಾಕಲಾಗುತ್ತದೆ ಮತ್ತು ಒಂದು ದಿನ ಪಾತ್ರೆಯಲ್ಲಿ ಇಡಲಾಗುತ್ತದೆ.

ತಿರುಳನ್ನು ಕುದಿಯುವ ನೀರಿನಲ್ಲಿರುವ ಹಣ್ಣಿನಿಂದ ಬೇರ್ಪಡಿಸಲಾಗುತ್ತದೆ ಮತ್ತು ನೀರನ್ನು ತಗ್ಗಿಸಲಾಗುತ್ತದೆ, ನಂತರ ಅದನ್ನು ಮರದ ಬೆಂಕಿಯಲ್ಲಿ ಸುಮಾರು ಎರಡು ದಿನಗಳವರೆಗೆ ನಿರಂತರವಾಗಿ ಬಿಸಿಮಾಡಲಾಗುವುದು, ಸಣ್ಣ ಸಣ್ಣ ಗುಳ್ಳೆಗಳು ಏಳುವವರೆಗೂ ಬಿಸಿ ಮಾಡಲಾಗುವುದು, ಇದಕ್ಕೆ ಎರಡು ದಿನ ತೆಗೆದುಕೊಳ್ಳುತ್ತದೆ ಎಂದು ಗಾಲಿಬೀಡು ನಿವಾಸಿ ಕೆ.ಎ.ವೇದಾವತಿ ವಿವರಿಸುತ್ತಾರೆ.ಇವರು ಸುಮಾರು 25 ವರ್ಷಗಳಿಂದ ಕಾಚಂಪುಲಿ ತಯಾರಿಸುತ್ತಿದ್ದಾರೆ.  

ಕಚಾಂಪುಲಿ ತಯಾರಿಸಲು ವಿವಿಧ ವಿಧಾನಗಳಿದ್ದು, ಸುಬ್ಬಯ್ಯ ಅವರದು ಸರಳ ವಿಧಾನ. ಮಾಗಿದ ಹಣ್ಣುಗಳನ್ನು ಸಂಗ್ರಹಿಸಿ, ತಿರುಳನ್ನು ಹಿಸುಕಿ ಮತ್ತು ದ್ರವವನ್ನು ನಿರಂತರವಾಗಿ ಎರಡು ದಿನಗಳ ಕಾಲ  ಬಿಸಿ ಮಾಡುವ ಮೂಲಕ ಪರಿಪೂರ್ಣ ಮಿಶ್ರಣ ಮಾಡುತ್ತಾರೆ. ಸಂಗ್ರಹಿಸಿದ ದ್ರವವನ್ನು ನಂತರ ಮರದ ಬೆಂಕಿಯಲ್ಲಿ ಬಿಸಿಮಾಡಲಾಗುತ್ತದೆ ಎಂದು ಅಂಜು ತಿಮ್ಮಯ್ಯ ಹೇಳುತ್ತಾರೆ.

ಜಿಲ್ಲೆಯಾದ್ಯಂತ ತೆರೆದಿರುವ ಹಲವಾರು ಮಸಾಲೆ ಅಂಗಡಿಗಳು  ಕಚಾಂಪುಲಿ ಉತ್ಪನ್ನಕ್ಕೆ ಉತ್ತಮ ಮಾರಾಟಗಾರರಾಗಿ ಮಾರ್ಪಟ್ಟಿವೆ ಮತ್ತು ದೇಶಾದ್ಯಂತ ವಿನೆಗರ್  ತಲುಪುತ್ತಿದೆ.   750 ಮಿಲಿ ವಿನಿಗರ್  ಬಾಟಲನ್ನು 700 ರಿಂದ 800 ರೂಗಳಿಗೆ ಮಾರಾಟ ಮಾಡುತ್ತೇವೆ. ಚಿಲ್ಲರೆ ಅಂಗಡಿಗಳಲ್ಲಿ ಇದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಅದರಲ್ಲಿ ಕಲಬೆರೆಕೆ ಮಾಡಲಾಗಿರುತ್ತದೆ. ಸಾಮಾನ್ಯವಾಗಿ ನೀರಿರುತ್ತದೆ ಎಂದು  ವೇದಾವತಿಯ ಪುತ್ರಿ ರಮ್ಯಾಶ್ರೀ ವಿವರಿಸುತ್ತಾರೆ.

ಪೊನ್ನಂಪೇಟೆಯ  ಅರಣ್ಯ ಕಾಲೇಜು ಈಗ ಗಾರ್ಸಿನಿಯಾ ಗುಮ್ಮಿ-ಗುಟ್ಟಾ ಮರಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನವನ್ನು ಪ್ರಾರಂಭಿಸಿದೆ. ಅವರು ನರ್ಸರಿಯನ್ನು ಪ್ರಾರಂಭಿಸಿದ್ದಾರೆ, ಅಲ್ಲಿ ಸಸ್ಯದ ನಾಟಿಗಳನ್ನು ರೈತರಿಗೆ ಮಾರಾಟ ಮಾಡಲಾಗುತ್ತದೆ. ಗಾರ್ಸಿನಿಯಾ ಗುಮ್ಮಿ-ಗುಟ್ಟಾ ಹಣ್ಣುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರಿಂದ ಸಂಗ್ರಹಿಸಲಾಗುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳು ಸಾಂಪ್ರದಾಯಿಕ ವಿನೆಗರ್ ತಯಾರಿಕೆಯಲ್ಲಿ ತೊಡಗಿರುವ ಕಾರಣ ಕಾಲೇಜು ಆಡಳಿತವು ‘ಕಚಾಂಪುಲಿ’ ತಯಾರಿಸುವ ಸಾಂಪ್ರದಾಯಿಕ ಕಲೆಯನ್ನು ಉತ್ತೇಜಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com