ಕರ್ನಾಟಕದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಮೇಲೆ ಜನರಿಗೆ ಹುಚ್ಚು ಪ್ರೀತಿ: ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ

ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಉತ್ತರ ಕಾಂಡ ಕೃತಿಯನ್ನು ಇತ್ತೀಚೆಗೆ ಇಂಗ್ಲಿಷ್ ಗೆ ಭಾಷಾಂತರಿಸಲಾಗಿತ್ತು. ಉತ್ತರ ಕಾಂಡ ಕೃತಿಯನ್ನು ವೆಸ್ಟ್ಸ್ಯಾಂಡ್ ಪ್ರಕಟಿಸಿದೆ.
ಡಾ ಎಸ್ ಎಲ್ ಭೈರಪ್ಪ
ಡಾ ಎಸ್ ಎಲ್ ಭೈರಪ್ಪ

ಬೆಂಗಳೂರು: ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಉತ್ತರ ಕಾಂಡ ಕೃತಿಯನ್ನು ಇತ್ತೀಚೆಗೆ ಇಂಗ್ಲಿಷ್ ಗೆ ಭಾಷಾಂತರಿಸಲಾಗಿತ್ತು. ಉತ್ತರ ಕಾಂಡ ಕೃತಿಯನ್ನು ವೆಸ್ಟ್ಸ್ಯಾಂಡ್ ಪ್ರಕಟಿಸಿದೆ.

1979ರಲ್ಲಿ ಪರ್ವ ಕಾದಂಬರಿ ಬರೆದ ನಂತರ ಸಾಹಿತಿ, ಕಾದಂಬರಿಕಾರ ಎಸ್ ಎಲ್ ಭೈರಪ್ಪನವರನ್ನು ರಾಮಾಯಣ ಬರೆಯುವಂತೆ ಹಲವರು ಒತ್ತಾಯಿಸಿದ್ದರು.  ಪರ್ವ ಕಾದಂಬರಿ ಮಹಾಭಾರತವನ್ನು ಆಧರಿಸಿದ್ದು. ಆದರೆ ನನಗೆ ಇಷ್ಟವಿರಲಿಲ್ಲ. ರಾಮಾಯಣ ಸಮಸ್ಯೆಗಳ ಸಂಕೀರ್ಣತೆ ಮತ್ತು ಮಾನವ ಸ್ವಭಾವಗಳಿಗೆ  ಅಷ್ಟೊಂದು ಬೆಲೆ ಕೊಟ್ಟಿಲ್ಲ ಎಂಬುದು ನನ್ನ ಭಾವನೆ. ಮಹಾಭಾರತದಂತೆ ಸಾಮಾಜಿಕ ಮತ್ತು ನೈತಿಕ ಸಮಸ್ಯೆಗಳನ್ನು ಕಟ್ಟಿಕೊಟ್ಟಂತೆ ರಾಮಾಯಣದಲ್ಲಿ ಇಲ್ಲ ಎಂದು ಭೈರಪ್ಪನವರು ಹೇಳುತ್ತಾರೆ.

ಪರ್ವ ಬಂದು 40 ವರ್ಷಗಳು ಕಳೆದ ನಂತರ ಅಯೋಧ್ಯೆ ತೀರ್ಪು ಹೊರಬಂದ ಸಮಯದಲ್ಲಿ ರಾಮಾಯಣ ಅವರ ಮನದಲ್ಲಿ ಹಾದುಹೋಗಿದ್ದು ಸುಳ್ಳಲ್ಲ. ಈ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಎಸ್ ಎಲ್ ಭೈರಪ್ಪ, ಪುರಾತತ್ತ್ವ ಶಾಸ್ತ್ರದ ಸಾಕ್ಷಿಯು ಸಮಸ್ಯೆಗಳನ್ನು ಪರಿಹರಿಸಬೇಕಾಗಿತ್ತು, ಆದರೆ ‘ಇತಿಹಾಸಕಾರರು’ ಅದನ್ನು ಇಷ್ಟು ವರ್ಷಗಳ ಕಾಲ ಎಳೆದರು. ಅಯೋಧ್ಯೆ ಕೇಸು ಎಂದಿಗೂ ಮುಗಿಯುವುದಿಲ್ಲ ಎಂದು ತೋರುತ್ತದೆ. ನನ್ನ ಕಲ್ಪನೆಯಲ್ಲಿ ಅಸ್ಪಷ್ಟ ಹೋಲಿಕೆ ಕಾಣಿಸಿಕೊಂಡಿತು. ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವು ಗುಂಪುಗಳು ಸೀತೆ ಬಗ್ಗೆ ಸುಳ್ಳು ಹೇಳುವಾಗ, ಅಂತವರು ಯಾರು ಎಂದು ಪತ್ತೆ ಹಚ್ಚಿ ಅವರನ್ನು ಕರೆತಂದು ನ್ಯಾಯ ತೀರ್ಮಾನ ಮಾಡಬಹುದಿತ್ತಲ್ಲವೇ, ಅದರ ಬದಲು ರಾಮ ತಾನು ಸ್ವ ಹಿಂಸೆಗೆ ಒಳಗಾದನು, ತನ್ನ ಮುಗ್ಧ ಮಡದಿ ಸೀತೆಯನ್ನು ಕೂಡ ಹಿಂಸಿಸಿದನು ಎಂದು ಭೈರಪ್ಪ ಹೇಳುತ್ತಾರೆ.

ವಾಲ್ಮೀಕಿ ರಾಮಾಯಣ ಓದಿದ ನಂತರ, ನನ್ನ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡಿದವು. ಸೀತಾಮಾತೆ ಮಗುವಾಗಿದ್ದಾಗ ಜನಕ ಮಹಾರಾಜನಿಗೆ ಗದ್ದೆಯಲ್ಲಿ ಉಳುವ ಸಂದರ್ಭದಲ್ಲಿ ಸಿಕ್ಕಿದ್ದು. ಹಾಗಾದರೆ ಹೆಣ್ಣು ಮಗುವನ್ನು ಗದ್ದೆಯಲ್ಲಿ ಬಿಟ್ಟು ಹೋಗಿದ್ದ ತಾಯಿಯ ಸಾಮಾಜಿಕ ಸ್ಥಿತಿಯೇನಾಗಿತ್ತು, ಈ ಬಗ್ಗೆ ನಂತರ ಸೀತಾಮಾತೆಗೆ ಯಾವ ರೀತಿಯ ಭಾವನೆ ಇದ್ದಿರಬಹುದು, ತಂದೆಯ ಪೋಷಣೆಯಲ್ಲಿ ಬೆಳೆದ ಸೀತೆಯ ಸ್ಥಿತಿ ಏನಾಗಿರಬಹುದು, ಆಕೆ ಎದುರಿಸಿದ ಕಷ್ಟಗಳೇನೇನು, ಅಯೋಧ್ಯೆಯಲ್ಲಿ ಸೀತೆಯ ಬಗ್ಗೆ ಕೆಲವು ವದಂತಿಗಳು ಹಬ್ಬುವಾಗ ರಾಮ ಅದರ ಮೂಲಗಳನ್ನು ಹುಡುಕಿ ಹೀಗೆ ಸುಳ್ಳು ಸುದ್ದಿ, ವದಂತಿ ಹಬ್ಬಿಸುವವರು ಯಾರೆಂದು ಪತ್ತೆಹಚ್ಚಿ ಶಿಕ್ಷಿಸಬಹುದಾಗಿತ್ತಲ್ಲವೇ?

ಅದರ ಬದಲು ಗರ್ಭಿಣಿ ಪತ್ನಿಯನ್ನು ಕಾಡಿಗೆ ಕಳುಹಿಸಿದ ಶ್ರೀರಾಮ. ಇದು ರಾಜಧರ್ಮವೇ? ತಪಸ್ಸು ಮಾಡಲು ರಾಮ ಹೇಗೆ ಶೂದ್ರನನ್ನು ಕೊಂದನು. ಆಧುನಿಕ ಭಾರತ ಇದನ್ನು ಒಪ್ಪಬಹುದೇ, ಯುವಕನಾಗಿದ್ದಾಗ ಅನುಕಂಪ, ಸಹಾನುಭೂತಿ ಹೊಂದಿದ್ದ ರಾಮ ನಂತರ ಅಯೋಧ್ಯೆ ರಾಜನ ಅಧಿಕಾರ ಸಿಕ್ಕಾಗ ಮಾಡಿದ್ದು ಸರಿಯೇ, ಅಧಿಕಾರ ಅವನನ್ನು ಹಾಗೆ ಮಾಡಿಸಿತೇ, ಲಕ್ಷ್ಮಣ ಮತ್ತು ಊರ್ಮಿಳೆ ರಾಮನಿಗೆ ಕೇವಲ ನೆರಳಾಗಿ ನಿಂತರೇ ಹೀಗೆಲ್ಲ ಪ್ರಶ್ನೆಗಳು ನನಗೆ ವಾಲ್ಮೀಕಿ ರಾಮಾಯಣ ಓದಿದ ಮೇಲೆ ಉದ್ಭವವಾಯಿತು ಎನ್ನುತ್ತಾರೆ.

ನಾನು 2017ರಲ್ಲಿ ಉತ್ತರ ಕಾಂಡ ಬರೆದೆ. ಇದೀಗ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು ಮತ್ತು ಪುಸ್ತಕ ಇಂಗ್ಲಿಷ್ ನಲ್ಲಿ ಅನುವಾದವಾಗಿ ಪ್ರಕಟವಾಗಿದ್ದು ಕಾಕತಾಳೀಯವಷ್ಟೆ ಎಂದು ಭೈರಪ್ಪ ಹೇಳುತ್ತಾರೆ.

ಸೃಜನಶೀಲ ಸಾಹಿತಿಗಳು ಯಾವುದಕ್ಕೂ ಮತ್ತು ಎಲ್ಲದಕ್ಕೂ ಪ್ರತಿಕ್ರಿಯಿಸಲು  ಹೋಗಬಾರದು ಎಂಬುದು ನನ್ನ ಅಭಿಪ್ರಾಯ. ಆತ ಓಬ್ಬ ಕಾರ್ಯಕರ್ತನಾಗಬಾರದು. ಕ್ರಿಯಾಶೀಲತೆಯು ಒಂದು ಬರಹಗಾರನನ್ನು ಸೃಜನಶೀಲ ಸಿದ್ಧಾಂತಕ್ಕೆ ಹಾನಿಕಾರಕವಾದ ನಿರ್ದಿಷ್ಟ ಸಿದ್ಧಾಂತಕ್ಕೆ ಒಪ್ಪಿಸುತ್ತದೆ, ನಾನು ಬರವಣಿಗೆ ಆರಂಭಿಸಿದ ದಿನದಿಂದ ಒಂದು ಗುಂಪು ನನ್ನನ್ನು ಗುರಿಯಾಗಿಟ್ಟುಕೊಂಡು ಟೀಕೆ, ದಾಳಿ ಮಾಡುತ್ತಲೇ ಬಂದಿದೆ.

ಆದರೆ ನನ್ನಲ್ಲಿ ಯಾವುದೇ ಬದ್ಧ ದೃಷ್ಟಿಕೋನಗಳಿಲ್ಲ. ಅದು ಹೊಂದಿದ್ದರೆ ಪರ್ವ ಮತ್ತು ಉತ್ತರ ಕಾಂಡಾವನ್ನು ಹೇಗೆ ಬರೆಯುತ್ತಿದ್ದೆ? ನನಗೆ ಭಾರತೀಯ ಮತ್ತು ಪಾಶ್ಚಿಮಾತ್ಯ ತತ್ತ್ವಶಾಸ್ತ್ರದ ಬಲವಾದ ಅಡಿಪಾಯವಿದೆ. ಬರೆಯುವ ಮೊದಲು ವ್ಯಾಪಕ ಸಂಶೋಧನೆ ಮಾಡುತ್ತೇನೆ. ಎಲ್ಲಾ ವಿಷಯಗಳಿಗೆ ಸಂಶೋಧನೆ ಅಗತ್ಯವಿಲ್ಲ. ನನ್ನನ್ನು ಗುರಿಯಾಗಿಸುವವರಲ್ಲಿ ಹೆಚ್ಚಿನವರು ತತ್ತ್ವಶಾಸ್ತ್ರದಲ್ಲಿ ಆಧಾರವನ್ನು ಹೊಂದಿಲ್ಲ ಅಥವಾ ಗಂಭೀರವಾದ ಓದುವ ಅಭ್ಯಾಸವನ್ನು ಹೊಂದಿಲ್ಲ. ಅವರ ಮೂಲ ವದಂತಿ, ಸುಳ್ಳು ಹಬ್ಬಿಸುವುದೇ ಹೊರತು ಜ್ಞಾನವಲ್ಲ ಎಂದು 90 ವರ್ಷದ ಸಾಹಿತಿ ಭೈರಪ್ಪ ಅಸಹನೆ ವ್ಯಕ್ತಪಡಿಸುತ್ತಾರೆ.

ಇಂಗ್ಲಿಷ್ ವ್ಯಾಮೋಹ: ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಹ ಆಂಗ್ಲಮಾಧ್ಯಮ ಶಾಲೆಗಳ ಮೇಲೆ ಜನರಿಗೆ ತೀವ್ರ ವ್ಯಾಮೋಹವಿರುತ್ತದೆ. ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಇಂಗ್ಲಿಷ್ ಬಂದರೆ ಉತ್ತಮ ಉದ್ಯೋಗ ಸಿಗುತ್ತದೆ ಎಂಬ ತಪ್ಪುಭಾವನೆ ಜನರಲ್ಲಿರುವುದೇ ಇದಕ್ಕೆ ಕಾರಣ. ಗುಜರಾತ್ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯಿಲ್ಲ. ಅವರು ಇಂಗ್ಲಿಷ್ ನಲ್ಲಿ ಅಷ್ಟೇನು ಪರಿಣಿತರಲ್ಲ, ಅಲ್ಲಿಗೆ ಹೋಲಿಸಿದರೆ ಕರ್ನಾಟಕ ಮಂದಿ ಇಂಗ್ಲಿಷ್ ನಲ್ಲಿ ತಾವು ಉತ್ತಮವಾಗಿದ್ದೇವೆ ಎಂದು ಹೆಮ್ಮೆ ಪಡಬೇಕು. ಆದರೆ ಇಲ್ಲಿ ನಿರುದ್ಯೋಗ ಸಮಸ್ಯೆಯಿದೆ. ಗುಜರಾತೀಯರು ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸುತ್ತಾರೆ.

ಕರ್ನಾಟಕ ಮಂದಿ ಇಂಗ್ಲಿಷ್ ಮಾತನಾಡಬಲ್ಲರು, ಕಂಪ್ಯೂಟರ್ ಆಪರೇಟ್ ಮಾಡಬಲ್ಲರು, ಕನ್ನಡ ಬಿಟ್ಟು ಉಳಿದ ಭಾಷೆಗಳನ್ನು ಮಾತನಾಡಬಲ್ಲರು, ತಮಿಳು ನಾಡಿನಲ್ಲಿ ದೊಡ್ಡ ಮತ್ತು ಸಣ್ಣ ಕಾರ್ಖಾನೆಗಳು ಸಾಕಷ್ಟಿವೆ. ಉದ್ಯೋಗ ಕೂಡ ಸಿಗುತ್ತದೆ. ಆದರೆ ಅವರು ತಮಿಳಿನಲ್ಲಿ ಮಾತ್ರ ಮಾತನಾಡುತ್ತಾರೆ. ಮುಂದಿನ ಎರಡು ತಲೆಮಾರುಗಳಲ್ಲಿ ಕನ್ನಡ ಸಾಹಿತ್ಯ ಕ್ಷೀಣಿಸಿಹೋಗಬಹುದು ಎಂಬ ಭಯ ನನಗಾಗುತ್ತಿದೆ ಎಂದು ಭೈರಪ್ಪ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com