ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಇದು ರಿಯಲ್ 'ಹಮ್ ದಿಲ್ ದೇ ಚುಕೆ ಸನಮ್': 8 ವರ್ಷದ ನಂತರ ಪತ್ನಿಯನ್ನು ಆಕೆಯ ಪ್ರೇಮಿಯೊಡನೆ ಮದುವೆ ಮಾಡಿಸಿದ ಪತಿ!

ಇದು ನಿಜಜೀವನದಲ್ಲಿ ನಡೆದ "ಹಮ್ ದಿಲ್ ದೇ ಚುಕೇ ಸನಮ್" ಸಿನಿಮಾ ಕಥೆ! ಬಿಹಾರದ ಭಗಲ್ಪುರ್ ಜಿಲ್ಲೆಯ ಸುಲ್ತಾನ್ ಗಂಜ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮಡದಿಯನ್ನು ಆಕೆಯ ಪ್ರೇಮಿಯೊಂದಿಗೆ ವಿವಾಹ ಮಾಡಿಸಿದ್ದಾನೆ.
Published on

ಭಗಲ್ಪುರ್(ಬಿಹಾರ): ಇದು ನಿಜಜೀವನದಲ್ಲಿ ನಡೆದ "ಹಮ್ ದಿಲ್ ದೇ ಚುಕೇ ಸನಮ್" ಸಿನಿಮಾ ಕಥೆ! ಬಿಹಾರದ ಭಗಲ್ಪುರ್ ಜಿಲ್ಲೆಯ ಸುಲ್ತಾನ್ ಗಂಜ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಮಡದಿಯನ್ನು ಆಕೆಯ ಪ್ರೇಮಿಯೊಂದಿಗೆ ವಿವಾಹ ಮಾಡಿಸಿದ್ದಾನೆ. ಇದು ಪ್ರಸಿದ್ಧ ಹಿಂದಿ ಸಿನಿಮಾ ಹಮ್ ದಿಲ್ ದೇ ಚುಕೆ ಸನಮ್‌ನಂತೆಯೇ ನಡೆದಿದೆ. ಇದರ ಬಗ್ಗೆ ಅಲ್ಲಿನ ಜನ ನಾನಾ ಪ್ರಕಾರವಾಗಿ ಮಾತನಾಡುತ್ತಿದ್ದಾರೆ.

<strong>'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದ ದೃಶ್ಯ</strong>
'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದ ದೃಶ್ಯ

ತಾನು ಮದುವೆಯಾಗಿದ್ದ ಯುವತಿ ಕಳೆದ ಎಂಟು ವರ್ಷಗಳಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಾಳೆ. ಆ ಯುವಕನ ಪ್ರೀತಿಯಲ್ಲಿ ಹುಚ್ಚಳಾಗಿದ್ದಾಳೆ ಎಂದು ಅರಿತ ನಂತರ ಆ ವ್ಯಕ್ತಿ ತನ್ನ ಪತ್ನಿಯನ್ನು ಆಕೆ ಪ್ರೀತಿಸುತ್ತಿದ್ದ ವ್ಯಕ್ತಿಯೊಂದಿಗೆ ವಿವಾಹ ಮಾಡಿಸಿದ್ದಾನೆ.

ಪ್ರಕರಣದ ವಿವರ

ಸುಲ್ತಾನ್ ಗಂಜ್ ನ ಐದನೇ ಬೀದಿ ನಿವಾಸಿ ಉತ್ತಮ್ ಮಂಡಲ್ ಸುಮಾರು ಎಂಟು ವರ್ಷಗಳ ಹಿಂದೆ ಖಗೇರಿಯಾ ಜಿಲ್ಲೆಯ ನಿವಾಸಿ ಸಪ್ನಾ ಕುಮಾರಿಯನ್ನು ಮದುವೆಯಾಗಿದ್ದ.  . ಮದುವೆಯ ನಂತರ, ಇಬ್ಬರ ನಡುವೆ ಎಲ್ಲವೂ ಸರಿಯಿತ್ತು. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಪತ್ನಿಯ ನಡವಳಿಕೆ ಬದಲಾಗಿತ್ತು.ಸಪ್ನಾ ತನ್ನ ನೆರೆಮನೆಯ ರಾಜುನನ್ನು ಪ್ರೀತಿಸುತ್ತಿದ್ದಳು. ಕ್ರಮೇಣ ಇಬ್ಬರ ನಡುವಿನ ನಿಕಟ ಸಂಬಂಧ ಗಾಢವಾಗಿತ್ತು. ಇದರಿಂದಾಗಿ ಸಪ್ನಾ ಹಾಗೂ ಉತ್ತಮ್ ನಡುವಿನ ದಾಂಪತ್ಯದಲ್ಲಿ ಸಂತೋಷ ಮಾಯವಾಗತೊಡಗಿತ್ತು. ಸಪ್ನಾ ಮತ್ತು ರಾಜು ನಡುವಿನ ಪ್ರೀತಿ ಬಹಳ ಆಳವಾದದ್ದಾಗಿತ್ತು ಮತ್ತು ಅವರಿಬ್ಬರೂ ವಿವಾಹವಾಗುವುದು ನಿಶ್ವಯವಾಗಿತ್ತು.

ಸಪ್ನಾ ತನ್ನ ಪ್ರೇಮಿ ರಾಜು ಜೊತೆ ದೇವಾಲಯದಲ್ಲಿ ಎರಡನೇ ಮದುವೆಯಾಗಿದ್ದಾಳೆ.ಈ ಸಮಯದಲ್ಲಿ, ರಾಜು ಅವರ ಕುಟುಂಬದೊಂದಿಗೆ, ಸಪ್ನಾ ಮತ್ತು ಉತ್ತಮ್ ಅವರ ಕುಟುಂಬದ ಸದಸ್ಯರು ಸಹ ಉಪಸ್ಥಿತರಿದ್ದರು. ಇದಕ್ಕೆ ಹೊರತು ನನಗೆ ಬೇರೆ ದಾರಿಗಳಿರಲಿಲ್ಲ ಎಂದು ಉತ್ತಮ್ ಹೇಳಿದ್ದಾನೆ. ಮದುವೆಯಾಗಿ ಸಪ್ನಾಗೆ ಎರಡು ಮಕ್ಕಳಿದ್ದರೂ ಆಕೆಗೆ ಪ್ರೀತಿಯ ಹುಚ್ಚು ತಲೆಗೇರಿದೆ. ಇದೀಗ ಆಕೆ ಮಕ್ಕಳನ್ನು ಸಾಕಲು ನಿರಾಕರಿಸಿದ್ದಾಳೆ.

<strong>ನೂತನವಾಗಿ ವಿವಾಹವಾದ ಸಪ್ನಾ ಹಾಗೂ ಆಕೆಯ ಪ್ರೇಮಿ ರಾಜು</strong>
ನೂತನವಾಗಿ ವಿವಾಹವಾದ ಸಪ್ನಾ ಹಾಗೂ ಆಕೆಯ ಪ್ರೇಮಿ ರಾಜು

ಒಂದೊಮ್ಮೆ ಆಕೆ ರಾಜುವಿನೊಂದಿಗೆ ಮದುವೆಯಾಗದೆ ಹೋದಲ್ಲಿ ರಾಜು ಅವರನ್ನು ಕೊಲೆ ಮಾಡುವುದಕ್ಕೂ ಹೇಸುತ್ತಿರಲಿಲ್ಲ ಎಂದು ಉತ್ತಮ್ ಹೇಳಿದ್ದಾನೆ.ಸಪ್ನಾಳ ಪ್ರೇಮಿ ಇತ್ತೀಚೆಗೆ ಮಾರಕಾಸ್ತ್ರದಿಂದ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಉತ್ತಮ್ ಆರೋಪ್ಸಿದ್ದಾನೆ. ತನ್ನ ಹಾಗೂ ಮಕ್ಕಳ ಜೀವ ಉಳಿಸಿಕೊಳ್ಳುವ ಸಲುವಾಗಿ ಅವನು ತನ್ನ ಹೆಂಡತಿಗೆ ಮದುವೆಗೆ ಅವಕಾಶ ಕೊಟ್ಟನು ಮತ್ತು ಅವಳನ್ನು ಬಂಧನದಿಂದ ಮುಕ್ತಗೊಳಿಸಿದನು. ಮದುವೆಯ ನಂತರ ಸಪ್ನಾ ಮಕ್ಕಳನ್ನು ಸಾಕಲು ನಿರಾಕರಿಸಿದ್ದಾಳೆ. ಇದೀಗ ಮಕ್ಕಳಿಬ್ಬರೂ ಇನ್ನೂ ಉತ್ತಮ್ ಜೊತೆಗಿದ್ದಾರೆ. ಇಬ್ಬರೂ ಮಕ್ಕಳು ತಮ್ಮ ತಾಯಿಯನ್ನು ಹುಡುಕುತ್ತಿದ್ದಾರೆ. ಆದರೆ ಅವರ ತಾಯಿ ಇವರನ್ನೆಲ್ಲಾ ಬಿಟ್ಟು ಬಹುದೂರ ಸಾಗಿದ್ದಾಳೆಂದು ಮಕ್ಕಳಿಗೆ ಇನ್ನೂ ಅರಿವಾಗಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com