ಅಡ್ರಸ್ ಪ್ರೋಫ್ ಇಲ್ಲದೆಯೇ, ಈಗ ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಕೊಳ್ಳಬಹುದು: ಅದು ಹೇಗೆ? ಇಲ್ಲಿದೆ ಮಾಹಿತಿ...
ಬೆಂಗಳೂರು: ನೀವು ಮನೆ ಬದಲಾಯಿಸಿದ್ದೀರಾ? ಆಧಾರ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸಬೇಕೇ? ಅಡ್ರಸ್ ಬದಲಾವಣೆಗೆ ನಿಮ್ಮ ಬಳಿ ಯಾವುದೇ ಪುರಾವೆಗಳಿಲ್ಲವೆ?
ಆದರೂ, ಹೊಸ ಅಪ್ ಡೇಟ್ ಗಾಗಿ ಆ ವಿಳಾಸದ ಪ್ರೋಪ್ ಒದಗಿಸಬೇಕಾದ ಸಂಕಷ್ಟಗಳು ನಿವಾರಣೆಯಾಗಿವೆ. ಈಗ ನಿಮ್ಮ ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಸಂಪರ್ಕ ಸಂಖ್ಯೆಯೊಂದಿಗೆ ಆಧಾರ್ ವಿಳಾಸವನ್ನು ಬದಲಾಯಿಸಲು ನಿಮಗೆ ಯು ಐ ಡಿ ಎಐ ಅವಕಾಶ ಕಲ್ಪಿಸಿದೆ.
ವಾಸ್ತವವಾಗಿ, ಆಧಾರ್ ಕಾರ್ಡ್‌ನಲ್ಲಿ ವಿಳಾಸದ ವಿವರ ಬದಲಾಯಿಸಲು, ಕಡ್ಡಾಯವಾಗಿ ಯು ಐ ಡಿ ಎ ಐ (ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ) ವೆಬ್‌ಸೈಟ್‌ನಲ್ಲಿ ಪಾಸ್‌ಪೋರ್ಟ್, ಬ್ಯಾಂಕ್ ಪಾಸ್‌ಬುಕ್, ಪಡಿತರ ಚೀಟಿ, ಮತದಾರರ ID, ಚಾಲನಾ ಪರವಾನಗಿಯಂತಹ ನಿರ್ದಿಷ್ಟಪಡಿಸಿದ ದಾಖಲೆಗಳ ಪ್ರತಿಯನ್ನು ಅಪ್‌ಲೋಡ್ ಮಾಡುವುದು ಅಗತ್ಯವಾಗಿತ್ತು. ಆದರೆ ಈಗ ಇವುಗಳ ಅಗತ್ಯವಿಲ್ಲದೆ ಕುಟುಂಬದ ಸದಸ್ಯರು, ಸ್ನೇಹಿತರು, ಸಂಬಂಧಿಕರ ಆಧಾರ್ ವಿಳಾಸವನ್ನು ಬದಲಾಯಿಸಬಹುದು.
ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸವನ್ನು ಈ ರೀತಿ ಬದಲಾಯಿಸಿಕೊಳ್ಳಿ:
- ಮೊದಲು https://uidai.gov.in/ ಲಿಂಕ್ ಅನ್ನು ತೆರೆಯಬೇಕು.
- ನೀವು ಲಿಂಕ್ ತೆರೆದು, ನಿಮ್ಮ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಮೂಲಕ ಲಾಗಿನ್ ಆಗಬೇಕು.
- ಲಾಗಿನ್ ಆದ ನಂತರ, ಆಧಾರ್ ಕಾರ್ಡ್, ಸಂಪರ್ಕ ಸಂಖ್ಯೆಯನ್ನು ಪರಿಶೀಲಿಸಿಕೊಳ್ಳಬೇಕು.
- ವೆರಿಫೈನಲ್ಲಿ ನಿಮ್ಮ ಆಧಾರ್ ಕಾರ್ಡ್ ವಿಳಾಸವನ್ನು ಬದಲಾಯಿಸಲು ಅಪ್ರೋವಲ್ ಲಿಂಕ್ ಬರುತ್ತದೆ.
- ಈಗ ಆ ಲಿಂಕ್ ತೆರೆದು ನೀವು ಬದಲಾಯಿಸಲು ಬಯಸುವ ವಿಳಾಸದ ವಿವರಗಳನ್ನು ನಮೂದಿಸಿ.
- ರಿಕ್ವೆಸ್ಟ್ ಸಮಯದಲ್ಲಿ ನಿಮ್ಮ ಸಂಪರ್ಕ ಸಂಖ್ಯೆಯನ್ನು ಪರಿಶೀಲಿಸಬೇಕು.
- ನಂತರ ನಿಮ್ಮ ಆಧಾರ್ ವಿಳಾಸ ಬದಲಾಯಿಸಲು 28 ಅಂಕಿಗಳ ಸರ್ವೀಸ್ ರಿಕ್ವೆಸ್ಟ್ ಸಂಖ್ಯೆ (SRN) ನಮೂದಿಸಬೇಕು.
- SRN ಸಂಖ್ಯೆಯನ್ನು ನಮೂದಿಸಿದ ನಂತರ, ನಿಮ್ಮ ವಿಳಾಸವನ್ನು ಬದಲಾಯಿಸಲು ರಿಕ್ವೆಸ್ಟ್ ಪೂರ್ಣಗೊಳಿಸಬೇಕು.
- ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಬದಲಾದ ವಿಳಾಸಕ್ಕೆ ಪಿನ್ ಸಂಖ್ಯೆಯನ್ನು ಮೇಲ್ ಮಾಡಲಾಗುತ್ತದೆ.
- ಆ ರಹಸ್ಯ ಕೋಡ್ ನಮೂದಿಸಿ, ಅಂತಿಮವಾಗಿ ನಿಮ್ಮ ಆಧಾರ್ ಹೊಸ ಮನೆ ವಿಳಾಸ ರಿವ್ಯೂ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ಗಡುವು ಪೂರ್ಣಗೊಂಡ ನಂತರ ನೀವು ಬಯಸಿದ ವಿಳಾಸದ ಹೆಸರಿನಲ್ಲಿ ನಿಮ್ಮ ಆಧಾರ್ ಅಪ್ ಡೇಟ್ ಆಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ