ಚೆನ್ನೈ: ವೀಲ್ ಚೇರ್ ಆಸರೆಯಲ್ಲಿದ್ದವರು ಸಮುದ್ರ ತೀರದ ಸೊಬಗನ್ನು ಸವಿಯಲು ಅನುಕೂಲ ಮಾಡಿಕೊಡುವ ಸಲುವಾಗಿ ಚೆನ್ನೈ ನಗರದ ಮರೀನಾ ಬೀಚಿನಲ್ಲಿ ತಾತ್ಕಾಲಿಕ ಮಾರ್ಗವನ್ನು ನಿರ್ಮಿಸಲಾಗಿದೆ.
ಈ ತಾತ್ಕಾಲಿಕ ಮಾರ್ಗವನ್ನು ಮರದ ಹಲಗೆ ಬಳಸಿ ನಿರ್ಮಾಣ ಮಾಡಲಾಗಿದೆ. ಅದರ ಮೇಲೆ ವೀಲ್ ಚೇರ್ ಸಲೀಸಾಗಿ ಚಾಲನೆ ಮಾಡಬಹುದಾಗಿದೆ. ಈ ಮಾರ್ಗ ಮಂಗಳವಾರ ಉದ್ಘಾಟನೆಯಾಗಲಿದೆ.
ವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ ಕುರಿತಾಗಿ ನಗರದ ವಿಕಲಾಂಗ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ. ಅಲ್ಲದೆ ನಗರಪಾಲಿಕೆಯ ಕೆಲಸಕ್ಕೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Advertisement