ಕೊಡಗು: ಕೊರೋನಾ ಪೀಡಿತ ಕುಟುಂಬದ ಅಸಹಾಯಕತೆ; ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡಿದ ಪತ್ರಕರ್ತರು!

ಕೊಡಗಿನಲ್ಲಿ ಇತ್ತೀಚಿನವರೆಗೂ ಕೊರೋನಾ ಸೋಂಕಿನಿಂದ ಮೃತಪಟ್ಟವರನ್ನು ಸ್ವಯಂ ಸೇವಕರು ಮಾತ್ರ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಆದರೆ, ಭಾನುವಾರ ಸ್ವಯಂ ಸೇವಕರು ದೊರೆಯದೆ, ಪತ್ರಕರ್ತರ ಗುಂಪೊಂದು ಕೋವಿಡ್ ಗೆ ಬಲಿಯಾದ ವ್ಯಕ್ತಿಯೊಬ್ಬರ ಅಂತಿಮ ಸಂಸ್ಕಾರ ನೆರವೇರಿಸಿದರು.
ಮಾಧ್ಯಮ ಸ್ಪಂದನ ಟೀಮ್
ಮಾಧ್ಯಮ ಸ್ಪಂದನ ಟೀಮ್

ಮಡಿಕೇರಿ: ಕೊಡಗಿನಲ್ಲಿ ಇತ್ತೀಚಿನವರೆಗೂ ಕೊರೋನಾ ಸೋಂಕಿನಿಂದ ಮೃತಪಟ್ಟವರನ್ನು ಸ್ವಯಂ ಸೇವಕರು ಮಾತ್ರ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಆದರೆ, ಭಾನುವಾರ ಸ್ವಯಂ ಸೇವಕರು ದೊರೆಯದೆ, ಪತ್ರಕರ್ತರ ಗುಂಪೊಂದು ಕೋವಿಡ್ ಗೆ ಬಲಿಯಾದ ವ್ಯಕ್ತಿಯೊಬ್ಬರ ಅಂತಿಮ ಸಂಸ್ಕಾರ ನೆರವೇರಿಸಿದರು.

ಕೊಡಗಿನ ಬಲಮುರಿ ಹಳ್ಳಿಯಲ್ಲಿನ ಮನೆಯಲ್ಲಿ 85 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟ ನಂತರ ಭಾನುವಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.ಆಸ್ಪತ್ರೆಗೆ ದಾಖಲಾಗಿದ್ದ ಅವರು ಹಿಂದಷ್ಟೇ ಡಿಸ್ಚಾರ್ಜ್ ಆಗಿದ್ದರು.ಮೃತರ ಕುಟುಂಬ ಸದಸ್ಯರಿಗೂ ಕೊರೋನಾ ಸೋಂಕು ತಗುಲಿತ್ತು. ತಮ್ಮ ನಿವಾಸದಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿ ಅಂತಿಮ ಸಂಸ್ಕಾರ ಮಾಡಲು ಅವರು ಬಯಸಿದ್ದರೂ ಯಾವ ಸ್ಥಳೀಯರು ಕೂಡಾ ನೆರವಿಗೆ ಬರಲಿಲ್ಲ.

ಮೃತನ ಪುತ್ರ ನಾಪೊಕ್ಲುವಿನಲ್ಲಿದ್ದ ಸ್ವಯಂ ಸೇವಕರ ಗುಂಪೊಂದನ್ನು ಸಂಪರ್ಕಿಸಿದ್ದಾರೆ.10 ಕಿಲೋ ಮೀಟರ್ ದೂರದಲ್ಲಿರುವ
ಹಳ್ಳಿಯಿಂದ ಶವವನ್ನು ನಾಪೋಕ್ಲುವಿನ ಸ್ಮಶಾನಕ್ಕೆ ಸ್ಥಳಾಂತರ ಮಾಡುವಂತೆ ಸ್ವಯಂ ಸೇವಕರು ಮನವಿ ಮಾಡಿದ್ದಾರೆ.
ಅಸಹಾಯಕತೆಯಿಂದ ಅಲ್ಲಿಂದ ಹಿಂತಿರುಗಿದ್ದ ಕುಟುಂಬ ಸದಸ್ಯರು,ಮಾಧ್ಯಮ ಸ್ಪಂದನ ಗುಂಪನ್ನು ಸಂಪರ್ಕಿಸಿದ್ದಾರೆ.ಸಾಂಕ್ರಾಮಿಕ 
ಸಂದರ್ಭದಲ್ಲಿ ಜಿಲ್ಲೆಯಲ್ಲಿ ಅಗತ್ಯವಿರುವವರಿಗೆ ನೆರವಾಗಲು ಸಮಾಜ ಸೇವಾ ಗುಂಪೊಂದನ್ನು ಕೆಲ ಪತ್ರಕರ್ತರು ಆರಂಭಿಸಿದ್ದಾರೆ.

ಮಾಧ್ಯಮ ಸ್ಪಂದನ ಗುಂಪಿನ ಮೂಲಕ ಕರೆ ಸ್ವೀಕರಿಸಿ,ಕೂಡಲೇ ಕಾರ್ಯಪ್ರವೃತ್ತರಾಗಿ ಕುಟುಂಬಕ್ಕೆ ನೆರವಾಗಿದ್ದಾಗಿ 
ಫೋಟೋ ಜನರ್ಲಿಸ್ಟ್ ಪಾಪು ತಿಮ್ಮಯ್ಯ ಹೇಳಿದರು.  ಅವರೊಂದಿಗೆ ರೆಜಿತ್ ಕುಮಾರ್, ಪ್ರವೀಣ್, ಅನೀಸ್ ಮತ್ತು ಶೆರಿನ್
ಎಂಬ ಪತ್ರಕರ್ತರು ಕೂಡಾ ಪಿಪಿಟಿ ಕಿಟ್ ಧರಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಪಿಪಿಇ ಕಿಟ್‌ಗಳನ್ನು ಧರಿಸಿ, ಸಿದ್ದಾಪುರದಿಂದ ಕೋವಿಡ್ ನಿಂದ ಮೃತಪಟ್ಟ ವ್ಯಕ್ತಿಯ ನಿವಾಸ ತಲುಪಿದ್ದೇವು. ಮೃತದೇಹವನ್ನು ಪಿಪಿಇ ಕಿಟ್ ನಲ್ಲಿ ಪ್ಯಾಕ್ ಮಾಡಿ ಸುಮಾರು ಅರ್ಧ ಕಿಲೋ ಮೀಟರ್ ದೂರ ಎತ್ತಿಕೊಂಡು ಹೋಗಿ, ಅಂತ್ಯಂಸ್ಕಾರ ನೆರವೇರಿಸಲಾಯಿತು ಎಂದು ಪಾಪು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com