ಜನರ ಪರವಾಗಿ ಪ್ರತಿಭಟಿಸಲು ಹೆಚ್.ಎಸ್.ದೊರೆಸ್ವಾಮಿ ಎಂದಿಗೂ ಹಿಂಜರಿಯುತ್ತಿರಲಿಲ್ಲ: ನ್ಯಾ. ಸಂತೋಷ್ ಹೆಗಡೆ

ಜನರ ಪರ ಪ್ರತಿಭಟಿಸಲು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಎಂದಿಗೂ ಹಿಂಜರಿಯುತ್ತಿರಲಿಲ್ಲ ಎಂದು ಸುಪ್ರೀಂಕೋರ್ಟ್ ಮಾಜಿ ನ್ಯಾಯಾಮೂರ್ತಿ ಹಾಗೂ ಕರ್ನಾಟಕದ ಮಾಜಿ ಲೋಕಾಯಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಹೇಳಿದ್ದಾರೆ. 
ಹೆಚ್.ಎಸ್.ದೊರೆಸ್ವಾಮಿ
ಹೆಚ್.ಎಸ್.ದೊರೆಸ್ವಾಮಿ

ಬೆಂಗಳೂರು: ಜನರ ಪರ ಪ್ರತಿಭಟಿಸಲು ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಎಂದಿಗೂ ಹಿಂಜರಿಯುತ್ತಿರಲಿಲ್ಲ ಎಂದು ಸುಪ್ರೀಂಕೋರ್ಟ್ ಮಾಜಿ ನ್ಯಾಯಾಮೂರ್ತಿ ಹಾಗೂ ಕರ್ನಾಟಕದ ಮಾಜಿ ಲೋಕಾಯಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಹೇಳಿದ್ದಾರೆ.
 
ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಎಚ್ಎಸ್ ದೊರೆಸ್ವಾಮಿ ಅವರು ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದು ಅವರ ಅಂತ್ಯಕ್ರಿಯೆ ಚಾಮರಾಜಪೇಟೆಯ ಚಿತಾಗಾರದಲ್ಲಿ ನಡೆಸಲಾಯಿತು. 

ಯಾವುದೋ ವ್ಯವಸ್ಥೆಯಿಂದ ಜನರಿಗೆ ಅಥವಾ ರಾಜ್ಯಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿದರೆ ಸಾಕು ಅವರ ಪರವಾಗಿ ನಿಂತು ಚಳವಳಿಯಲ್ಲಿ ತೊಡಗುತ್ತಿದ್ದ ಹಿರಿಜೀವ ಇಂದು ನಮ್ಮನ್ನು ಅಗಲಿದ್ದಾರೆ. 

ದೊರೆಸ್ವಾಮಿಯವರೊಂದಿನ ಒಡನಾಟವನ್ನು ನ್ಯಾಯಮೂರ್ತಿ ಸಂತೋಷ್ ಹೆಗಡೆಯವರು ಹಂಚಿಕೊಂಡಿದ್ದು, ಭ್ರಷ್ಟಾಚಾರದ ವಿರುದ್ಧ ಭಾರತದ ಹೋರಾಟ ಆರಂಭ ಮಾಡಿದಾಗಿನಿಂದಲೂ ದೊರೆಸ್ವಾಮಿಯವರು ನನಗೆ ತಿಳಿದ ವ್ಯಕ್ತಿಯಾಗಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ಹಲವು ದಿನಗಳ ಕಾಲ ಕುಳಿತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇವೆ. 10ಕ್ಕೂ ಹೆಚ್ಚು ವಿಚಾರಗಳ ಕುರಿತು ಪ್ರತಿಭಟನೆ ನಡೆಸಿದ್ದೇವೆ. ಪ್ರತೀ ಪ್ರತಿಭಟನೆಯೂ 10 ದಿನಗಳ ಕಾಲ ನಡೆಸಿದ್ದೇವೆಂದು ಎಂದು ಹೇಳಿದ್ದಾರೆ. 

ಅತ್ಯಂತ ಸಣ್ಣ ವಯಸ್ಸಿನಲ್ಲೇ ಬ್ರಿಟೀಷರ ವಿರುದ್ಧ ದೊರೆಸ್ವಾಮಿಯವರು ಹೋರಾಟ ಮಾಡಿದ್ದರು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಜೈಲಿಗೂ ಹೋಗಿ ಬಂದಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕವೂ ಯಾವುದೇ ರಾಜಕೀಯ ಪಕ್ಷಗಳೊಂದಿಗೂ ವಿಲೀನಗೊಂಡಿರಲಿಲ್ಲ. ತುರ್ತುಪರಿಸ್ಥಿತಿ ಸಂದರ್ಭದಲ್ಲಿಯೂ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದರು. ಆಗಲೂ ಜೈಲಿಗೆ ಹೋಗಿದ್ದರು. ಜನ ಪರ ಹೋರಾಟ ಮಾಡಿದ್ದಕ್ಕಾಗಿ ಮತ್ತು ದೀನ ದಲಿತರ ಉನ್ನತಿಗಾಗಿ ಹೋರಾಡಿದ ಕಾರಣಕ್ಕಾಗಿ ಅವರನ್ನು ಮತ್ತೆ ಜೈಲಿಗೆ ಕಳುಹಿಸಲಾಗಿತು. ಆದರೂ ಅವರು ಸಾಕಷ್ಟು ರಾಜಕೀಯ ನಾಯಕರ ನೆಚ್ಚಿನ ವ್ಯಕ್ತಿಯಾಗಿದ್ದರು. ಸರ್ಕಾರ ಯಾವುದೇ ಹುದ್ದೆಗಳ ಮೇಲೂ ಆಸೆ ಪಟ್ಟಿರಲಿಲ್ಲ. ಯಾವುದೇ ಹುದ್ದೆಯನ್ನೂ ಪಡೆದಿರಲಿಲ್ಲ. 2011ರಲ್ಲಿ ನಾನು ನಿವೃತ್ತಿ ಹೊಂದಿದ ಬಳಿಕ ಭೂಕಬಳಿಕ ವಿರುದ್ದ ನಾನು ಹೋರಾಟ ಮಾಡಿದ್ದೆವು. ಬಳಿಕ ಲೋಕಾಯುಕ್ತ ಗಣಿಗಾರಿಕೆ ವರದಿಯನ್ನು ಅನುಷ್ಠಾನಗೊಳಿಸದಿರುವುದರ ವಿರುದ್ಧವೂ ಪ್ರತಿಭಟಿಸಿದ್ದೆವು. ಈ ಸುದೀರ್ಘ ಪ್ರತಿಭಟನೆಗಳ ವೇಳೆ ದೊರೆಸ್ವಾಮಿ ತತ್ವಗಳನ್ನು ಒಳಗೊಂಡಿರುವ ವ್ಯಕ್ತಿಯೆಂಬುದನ್ನು ನಾನು ಅರಿತುಕೊಂಡೆ ಎಂದು ತಿಳಿಸಿದ್ದಾರೆ.

ಭೂ ಕಬಳಿಕೆ ಪ್ರತಿಭಟನೆ ವೇಳೆ ದೊರೆಸ್ವಾಮಿಯವರು ವಿಧಾನಸೌಧದ ಒಳಗೆ ಹೋಗಿ ಪ್ರತಿಭಟನೆ ನಡೆಸಿದ್ದರು. ಅವರ ವಯಸ್ಸನ್ನು ಅವರು ಎಂದಿಗೂ ನೆಪವೆಂದು ಬಳಸಿಕೊಳ್ಳಲೇ ಇಲ್ಲ. ಅತ್ಯಂತ ನೇರ ವ್ಯಕ್ತಿಯಾಗಿದ್ದರು. ಅವರಿಗೆ ಬೇಕಾದದ್ದು ಆಗದೇ ಇದ್ದರೆ ಪ್ರತಿಭಟನೆ ಮುಂದುವರೆಸುತ್ತಿದ್ದರು. ಅವರಿಂದ ಸಾಕಷ್ಟು ಕಲಿತುಕೊಂಡಿದ್ದೇನೆ. ಪ್ರತಿಭಟನಾ ವೇದಿಕೆಗೆ ಹೋಗಲು ಅವರು ನನಗೆ ಪ್ರೇರಣೆ ನೀಡುತ್ತಿದ್ದರು. 90 ವಯಸ್ಸಿನಲ್ಲಿಯೂ ಈ ರೀತಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವೇ ಎಂದು ನನಗೆ ಆಶ್ಚರ್ಯವಾಗುತ್ತಿತ್ತು. ಸಚಿವ ಸ್ಥಾನ, ಯಾವುದೇ ಹುದ್ದೆಗಳಿಗೂ ಅವರು ಆಸೆ ಪಟ್ಟಿರಲಿಲ್ಲ. ಅಂತಹವರಿಗೆ ಪ್ರಶಸ್ತಿ ಮೂಲಕ ಗೌರವ ನೀಡಬಹುದಿತ್ತು. ಎಂದಿಗೂ ಅವರಿಗೆ ಪದ್ಮ ಪ್ರಶಸ್ತಿ ಸಿಗಲಿಲ್ಲ. ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com