ಕಾಲುವೆಯಲ್ಲಿ ಮುಳುಗಿಹೋಗುತ್ತಿದ್ದ 8 ತಿಂಗಳ ಮರಿಯಾನೆ ಕಣ್ಣನ್ ಈಗ ಪ್ರವಾಸಿಗರ ಕಣ್ಮಣಿ
ಪಟ್ಟಣಂತಿಟ್ಟ: ಕೊನ್ನಿ ಆನೆ ಕ್ಯಾಂಪಿಗೆ ಇತ್ತೀಚಿಗೆ ಸೇರ್ಪಡೆಯಾಗಿದ್ದ ಹೊಸ ಸದಸ್ಯ ಕಡಿಮೆ ಅವಧಿಯಲ್ಲಿ ಪ್ರವಾಸಿಗರ ಕಣ್ಮಣಿಯಾಗಿದ್ದಾನೆ. ಕೆಲ ಸಮಯದ ಹಿಂದಷ್ಟೆ ಕೊಚಂಡಿ ಚೆಕ್ ಪೋಸ್ಟ್ ಬಳಿ ಕಾಲುವೆಯಲ್ಲಿ ಮುಳುಗುತ್ತಿದ್ದ ಮರಿಯಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದರು.
ಆ ಮರಿಯಾನೆ ಈಗ ಕೊನ್ನಿ ಆನೆ ಕ್ಯಾಂಪಿನ ನಿವಾಸಿ. ಅದಕ್ಕೆ ಕಣ್ಣನ್ ಎಂದು ನಾಮಕರಣ ಮಾಡಲಾಗಿದೆ. 8 ತಿಂಗಳ ಈ ಮರಿಯಾನೆ ತನ್ನ ಚಟುವಟಿಕೆಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪ್ರವಾಸಿಗರ ಪ್ರೀತಿಗೆ ಪಾತ್ರನಾಗಿದ್ದಾನೆ.
ಕಾಲುವೆಯಿಂದ ರಕ್ಷಿಸಲ್ಪಟ್ಟ ಮರಿಯಾನೆ ಗುಂಪಿನಿಂದ ಬೇರೆಯಾಗಿದೆ ಎಂದು ತಿಳಿದು ಅದರ ಗುಂಪಿನೊಡನೆ ಸೇರಿಸಲು ಅರಣ್ಯ ಇಲಾಖೆ ಪ್ರಯತ್ನ ಪಟ್ಟಿತ್ತು. ಕಣ್ಣನ್ ನನ್ನು ಕಾಡಿನಲ್ಲಿ ಬಿಟ್ಟು ಯಾವುದಾದರೂ ಆನೆಯ ಹಿಂಡು ಅದನ್ನು ಸ್ವೀಕರಿಸುವುದೋ ಏನೋ ಎಂದು ಪರಿಶೀಲನೆ ನಡೆಸಲಾಗಿತ್ತು. ಆದರೆ ಮರಿಯಾನೆಯನ್ನು ಹಾದು ಹೋದ ಎರಡು ಆನೆಗಳ ಹಿಂದು ಕಣ್ಣನ್ ನನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಇನ್ನುಮುಂದೆ ಕಣ್ಣನ್ ಕೊನ್ನಿ ಕ್ಯಾಂಪಿನಲ್ಲಿ ಬಿಡಾರ ಹೂದಲಿದ್ದಾನೆ.
ಇದನ್ನೂ ಓದಿ: ರಾಮನಗರ: ವಿದ್ಯುತ್ ಸ್ಪರ್ಶಿಸಿ ಒಂಟಿ ಸಲಗ ಸಾವು
Related Article
ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆಗಳಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ!
ಚಿಕ್ಕಮಗಳೂರು: ವಿದ್ಯುತ್ ತಂತಿ ಬೇಲಿ ತಗುಲಿ ಆನೆ ಸಾವು, ಪೊಲೀಸರಿಂದ ತನಿಖೆ
ಪ್ರತ್ಯೇಕ ಘಟನೆ: ಕೊಡಗಿನಲ್ಲಿ ಒಂದು ಮರಿ ಸೇರಿ ಮೂರು ಆನೆಗಳ ಸಾವು
ಸಿಎಂ ಹುದ್ದೆ ಅಂಬಾರಿ ಹೊರುವ ಆನೆ ಇದ್ದಂತೆ, ಅದೇನು ಶಾಶ್ವತವಲ್ಲ: ಯೋಗೇಶ್ವರ್
'ದಚ್ಚು' ಮನವಿಗೆ ಸ್ಪಂದಿಸಿದ ರಿಯಲ್ ಸ್ಟಾರ್; ಆಫ್ರಿಕನ್ ಆನೆ ದತ್ತು ಪಡೆದ ಉಪೇಂದ್ರ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ