ಕನ್ನಡ ಮಾಧ್ಯಮ ಶಾಲೆಯಿಂದ ನಾಸಾ'ವರೆಗೆ; ರಾಜ್ಯದ ದಿನೇಶ್ ವಸಂತ್ ಹೆಗಡೆ ಸಾಧನೆ!

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆರ್ಥಿಕ ನೆರವು ನೀಡುವ ಭೂಮಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಪ್ಯೂಚರ್ ಇನ್ವೆಷ್ಟಿಗೇಟರ್ಸ್ ಕಠಿಣ ಸ್ಪರ್ಧೆಯಲ್ಲಿ ತಮ್ಮ ಹಳ್ಳಿಯ ಹುಡುಗ ದಿನೇಶ್ ವಸಂತ್ ಹೆಗಡೆ ವಿಜೇತರಾದ ನಂತರ ಸಿದ್ಧಾಪುರ ತಾಲೂಕಿನ ಸಸಿಗುಳಿ ಗ್ರಾಮದಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. 
ದಿನೇಶ್ ವಂಸತ್ ಹೆಗಡೆ
ದಿನೇಶ್ ವಂಸತ್ ಹೆಗಡೆ

ಕಾರವಾರ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಆರ್ಥಿಕ ನೆರವು ನೀಡುವ ಭೂಮಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮೂರು ವರ್ಷಗಳ ಪ್ಯೂಚರ್ ಇನ್ವೆಷ್ಟಿಗೇಟರ್ಸ್ ಕಠಿಣ ಸ್ಪರ್ಧೆಯಲ್ಲಿ ತಮ್ಮ ಹಳ್ಳಿಯ ಹುಡುಗ ದಿನೇಶ್ ವಸಂತ್ ಹೆಗಡೆ ವಿಜೇತರಾದ ನಂತರ ಸಿದ್ಧಾಪುರ ತಾಲೂಕಿನ ಸಸಿಗುಳಿ ಗ್ರಾಮದಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. 

ಉತ್ತರ ಕನ್ನಡದ ಸಿದ್ಧಾಪುರ ತಾಲೂಕಿನ ಸಣ್ಣ ಹಳ್ಳಿಯ ಯುವಕ ದಿನೇಶ್, ಹಂಟ್ಸ್‌ವಿಲ್ಲೆಯಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಬಾಹ್ಯಾಕಾಶ ವಿಜ್ಞಾನದ ಸಹಾಯಕ ಸಂಶೋಧಕರಾಗಿದ್ದು, ನಾಸಾದಿಂದ ತನ್ನ ಅಧ್ಯಯನವನ್ನು ಮುಂದುವರಿಸಲು 1.35 ಲಕ್ಷ ಡಾಲರ್‌ಗಳ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.

ಈ ಸಾಧನೆಯಿಂದ ಆತನ ಹುಟ್ಟೂರಿನ ಜನರು ಸಂತಸದಲ್ಲಿದ್ದಾರೆ. ನಾವೆಲ್ಲರೂ ಆತನ ಬಗ್ಗೆ ತುಂಬಾ ಹೆಮ್ಮೆ ಪಡುತ್ತೇವೆ. ಸಣ್ಣ ಹಳ್ಳಿಯಿಂದ ಬಂದು ಅಧ್ಯಯನಕ್ಕಾಗಿ ಅಮೆರಿಕಕ್ಕೆ ಹೋದವರು ಇದೀಗ ನಾಸಾದಿಂದ ಸ್ಕಾಲರ್ ಶಿಪ್ ಪಡೆದಿದ್ದಾರೆ ಎಂದು ಅವರ ಸಂಬಂಧಿ ಗಿರೀಶ್ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಿಂದ ಬಂದ ದಿನೇಶ್ ಸಾಧನೆ ಊಹಿಸಲಿಕ್ಕೂ ಅಸಾಧ್ಯವಾಗಿದೆ. ಈ ಸ್ಕಾಲರ್ ಶಿಪ್ ಪಡೆದ ಮೊದಲ ಭಾರತೀಯನಾಗಿರಬಹುದು ಎಂದು ಗಿರೀಶ್ ಹೇಳಿದರು.

ಹಂಟ್ಸ್ ವಿಲ್ಲೆಯ ಅಲಬಾಮಾ ವಿವಿಯ ಬಾಹ್ಯಾಕಾಶ ಇಲಾಖೆಯಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡುತ್ತಿರುವ ಹೆಗಡೆ ಅವರಿಗೆ ದೊರೆತಿರುವ ನಾಸಾ ಅನುದಾನದಿಂದ ಬಾಹ್ಯಾಕಾಶ  ಅವರು ಬಾಹ್ಯಾಕಾಶ ಹವಾಮಾನದಲ್ಲಿ ಸಂಶೋಧನೆ ಮುಂದುವರೆಯಲು ನೆರವಾಗಿದೆ. ಹೆಗಡೆ ಅವರು ಬಾಹ್ಯಾಕಾಶ ಹವಾಗುಣ ವಿಜ್ಞಾನಿ ಡಾ. ನಿಕೊಲಾಯ್ ಪೊಗೊರೆಲೋವ್ ಅವರ ಮಾರ್ಗದರ್ಶನದಲ್ಲಿ ''ಪರಿಮಾಣಾತ್ಮಕ ಅನಿಶ್ಚಿತತೆಗಳೊಂದಿಗೆ ಬಾಹ್ಯಾಕಾಶ ಹವಾಮಾನವನ್ನು ರೂಪಿಸುವಿಕೆ'' ಸಂಶೋಧನಾ ಶೀರ್ಷಿಕೆಯನ್ನು ಹೆಗಡೆ ಪ್ರಸ್ತಾಪಿಸಿದ್ದಾರೆ.

ನಾಸಾದದಿಂದ ಸ್ಕಾಲರ್ ಶಿಪ್ ಬಗ್ಗೆ ಹೆಗಡೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಪ್ರಯತ್ನಕ್ಕೆ ಈ ಆಫರ್ ಲೇಟರ್ ದೊಡ್ಡ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಅಧಿಸೂಚನೆಯ ಗಡುವು ಈಗಾಗಲೇ ಮುಗಿದಿರುವುದರಿಂದ ನನ್ನ ಪ್ರಾಜೆಕ್ಟ್ ಆಯ್ಕೆಯಾಗಿಲ್ಲ ಅಂದುಕೊಂಡಿದ್ದೆ. ಆಫರ್ ಲೇಟರ್ ಬಗ್ಗೆ ಎರಡೆರಡು ಬಾರಿ ಪರಿಶೀಲಿಸಿ ಆಯ್ಕೆಯನ್ನು ಖಚಿತಪಡಿಸಿಕೊಂಡ ನಂತರ ನನ್ನ ತಂಗಿಯೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾಗಿ ಹೆಗಡೆ ಹೇಳಿದರು.

ನನ್ನ ಸಹೋದರನ ಬಗ್ಗೆ ತುಂಬಾ ಸಂತೋಷವಾಗುತ್ತಿದೆ. ಈಗ ಆತ ಪಿಹೆಚ್ ಡಿ ಮಾಡುತ್ತಿದ್ದಾನೆ. ಈ ಸ್ಕಾಲರ್ ಶಿಪ್ ಇದೀಗ ದೊಡ್ಡ ಸುದ್ದಿಯಾಗಿದೆ. ಆತನ ಶಿಕ್ಷಕರು, ಶಾಲೆಯವರು ಎಲ್ಲರೂ ಕೂಡಾ ಸಂಭ್ರಮಿಸುತ್ತಿದ್ದಾರೆ ಎಂದು ಮೈಸೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ದಿನೇಶ್ ತಂಗಿ  ದಿವ್ಯಾ ವಸಂತ್ ಹೆಗಡೆ ಹೇಳಿದರು. 

ದಿನೇಶ್ ಹೆಗಡೆ ಅವರು ವಿನಮ್ರ ಹಿನ್ನೆಲೆಯವರು, ಇವರ ಇಡೀ ಶಾಲಾವಧಿ ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮದಲ್ಲಿ ನಡೆದಿದೆ. ವಾಜಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಹರ್ಷಿಕಟ್ಟಾದಲ್ಲಿನ ಅಶೋಕ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದಿದ್ದಾರೆ. ಮೈಸೂರು ವಿವಿಯಿಂದ ಎಂಎಸ್ ಸಿ ಪದವಿ ಪೂರೈಸಿದ್ದಾರೆ. ಅವರ ತಂದೆ ವಸಂತ ಹೆಗಡೆ ಮೂರು ತಿಂಗಳ ಹಿಂದಷ್ಟೇ ಕೋವಿಡ್ -19 ನಿಂದ ಮೃತಪಟ್ಟಿದ್ದು, ತಾಯಿ ಗಂಗಾ ಹೆಗಡೆ ಗೃಹಿಣಿಯಾಗಿದ್ದು, ಸಸಿಗುಳಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com