ಕೇರಳ: ತೈಲ ಟ್ಯಾಂಕರ್ ಡ್ರೈವರ್ ಪರವಾನಗಿ ಪಡೆದ ರಾಜ್ಯದ ಎರಡನೇ ಮಹಿಳೆ 25 ವರ್ಷದ ಬರ್ಕತ್ ನಿಶಾ

ಹಗಲೂ ಇರುಳು ವಾಹನ ಚಾಲನೆ ಮಾಡಿ ರಾಜ್ಯದಿಂದ ರಾಜ್ಯಕ್ಕೆ ತೈಲ ಸಾಗಾಟ ಮಾಡುವ ಟ್ಯಾಂಕರ್ ಡ್ರೈವರ್ ವೃತ್ತಿ ಅತೀವ ಶ್ರಮ ಹಾಗೂ ಸಾಮರ್ಥ್ಯವನ್ನು ಬೇಡುತ್ತದೆ. ಇದೀಗ ಆ ವೃತ್ತಿಗೂ ಮಹಿಳೆಯರು ಲಗ್ಗೆಯಿಟ್ಟಿದ್ದಾರೆ. 
ಬರ್ಕತ್ ನಿಶಾ
ಬರ್ಕತ್ ನಿಶಾ

ಪಾಲಕ್ಕಾಡ್: ಮಹಿಳೆಯರು ಕಾರು, ಬೈಕು ಮುಂತಾದ ವಾಹನ ಚಾಲನೆ ಮಾಡುವುದು ಕಾಮನ್. ಎಲ್ಲಾ ರಂಗಗಳಲ್ಲೂ ಪುರುಷರಿಗೆ ಸೆಡ್ಡು ಹೊಡೆಯುತ್ತಿರುವ ಹೆಣ್ಣುಮಕ್ಕಳು ಬಸ್ಸು, ರೈಲು ವಿಮಾನ ಚಾಲನೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. 

ಅಂಥದ್ದರಲ್ಲಿ ಹಗಲೂ ಇರುಳು ರಸ್ತೆ ಪ್ರಯಾಣ ಮಾಡಿ ರಾಜ್ಯದಿಂದ ರಾಜ್ಯಕ್ಕೆ ತೈಲ ಸಾಗಾಟ ಮಾಡುವ ಟ್ಯಾಂಕರ್ ಡ್ರೈವರ್ ವೃತ್ತಿ ಅತೀವ ಶ್ರಮ ಹಾಗೂ ಸಾಮರ್ಥ್ಯವನ್ನು ಬೇಡುತ್ತದೆ. ಇದೀಗ ಆ ವೃತ್ತಿಗೂ ಮಹಿಳೆಯರು ಲಗ್ಗೆಯಿಟ್ಟಿದ್ದಾರೆ. 

ಕೇರಳ ರಾಜ್ಯದಲ್ಲಿ ಬರ್ಕತ್ ನಿಶಾ ಎಂಬ 25 ವರ್ಷದ ಯುವತಿ ತೈಲ ಟ್ಯಾಂಕರ್ ಡ್ರೈವರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದು, ಆ ಮೂಲಕ ಅದಕ್ಕೆ ಸಂಬಂಧಿಸಿದ ಪರವಾನಗಿ ಪಡೆದ ಎರಡನೇ ಮಹಿಳೆ ಎನ್ನುವ ಹೆಸರಿಗೆ ಪಾತ್ರರಾಗಿದ್ದಾರೆ. 

ಈಗಾಗಲೇ ನಿಶಾ ಅವರು ಹಜಾರ್ಡಸ್ ಪರವಾನಗಿಯನ್ನು ಪಡೆದಿದ್ದಾರೆ. 14ನೇ ವಯಸ್ಸಿನಿಂದಲೇ ಮೋಟಾರ್ ಬೈಕು ಚಾಲನೆ ಮಾಡುತ್ತಿದ್ದುದಾಗಿ ಅವರು ಹೇಳಿದ್ದಾರೆ. ಚಿಕ್ಕಂದಿನಿಂದಲೂ ಮೋಟಾರು ವಾಹನ ಎಂದರೆ ಅವರಿಗೆ ಅಚ್ಚುಮೆಚ್ಚು. 

ಮುಂದಿನ ದಿನಗಳಲ್ಲಿ ಹೆದ್ದಾರಿಗಳಲ್ಲಿ ತೈಲ ಟ್ಯಾಂಕರ್ ಚಲಾಯಿಸುವುದು ಅವರ ಕನಸು. ಇದೀಗ ಪರವಾನಗಿಯನ್ನು ಹೊಂದಿದ್ದರೂ ಸ್ಥಳೀಯ ಪೊಲೀಸ್ ಠಾಣೆಯಿಂದ ಕ್ಲಿಯರೆನ್ಸ್ ಪ್ರಮಾಣಪತ್ರ ಸಿಗಬೇಕಿದೆ. ಅದಕ್ಕಾಗಿ ಅವರು ಕಾಯುತ್ತಿದ್ದಾರೆ. ನಂತರ ಆ ಪ್ರಮಾಣಪತ್ರವನ್ನು ತೈಲ ಸಂಸ್ಥೆಗಳಿಗೆ ನೀಡಿದ ನಂತರವೇ ಅಧಿಕೃತವಾಗಿ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಲಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com