ಕನ್ನಡ ಭಾಷೆ-ಸಾಹಿತ್ಯ ಸೇವೆಯಲ್ಲಿ ಶಿವಮೊಗ್ಗದ ಕರ್ನಾಟಕ ಸಂಘ ಸಕ್ರಿಯ

ಮನುಷ್ಯ ಆಡುವ ಮಾತು ಆತನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂಬ ಮಾತಿದೆ. ಭಾಷೆಯ ಬೆಳವಣಿಗೆ ಮತ್ತು ಅದರ ಬಳಕೆ ನಾಗರಿಕತೆಯ ಬೆಳವಣಿಗೆಯ ಸಂಕೇತ. ಇದನ್ನು ಧ್ಯೇಯವಾಗಿಟ್ಟುಕೊಂಡು ಶಿವಮೊಗ್ಗದ ಕರ್ನಾಟಕ ಸಂಘ ಸಕ್ರಿಯವಾಗಿ ಕಳೆದ 91 ವರ್ಷಗಳಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಸಾಕಷ್ಟು ಕೆಲಸ ಮಾಡಿಕೊಂಡು ಬಂದಿದೆ.

Published: 14th November 2021 01:49 PM  |   Last Updated: 15th November 2021 01:52 PM   |  A+A-


Karnataka Sangha of Shivamogga

ಶಿವಮೊಗ್ಗದ ಕರ್ನಾಟಕ ಸಂಘ

The New Indian Express

ಶಿವಮೊಗ್ಗ: ಮನುಷ್ಯ ಆಡುವ ಮಾತು ಆತನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಎಂಬ ಮಾತಿದೆ. ಭಾಷೆಯ ಬೆಳವಣಿಗೆ ಮತ್ತು ಅದರ ಬಳಕೆ ನಾಗರಿಕತೆಯ ಬೆಳವಣಿಗೆಯ ಸಂಕೇತ. ಇದನ್ನು ಧ್ಯೇಯವಾಗಿಟ್ಟುಕೊಂಡು ಶಿವಮೊಗ್ಗದ ಕರ್ನಾಟಕ ಸಂಘ ಸಕ್ರಿಯವಾಗಿ ಕಳೆದ 91 ವರ್ಷಗಳಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಸಾಕಷ್ಟು ಕೆಲಸ ಮಾಡಿಕೊಂಡು ಬಂದಿದೆ.

ಇಲ್ಲಿನ ಖ್ಯಾತ ಅಡಿಕೆ ವ್ಯಾಪಾರಿ ಹಸೂಡಿ ವೆಂಕಟಶಾಸ್ತ್ರಿ ಅವರ ಹೆಸರಿನಲ್ಲಿ ಕರ್ನಾಟಕ ಸಂಘವಿದ್ದು, ರಾಜ್ಯದಾದ್ಯಂತ ವಿಶೇಷವಾಗಿ ಅವಿಭಜಿತ ಶಿವಮೊಗ್ಗ ಜಿಲ್ಲೆ ಮತ್ತು ಮಲೆನಾಡು ಪ್ರದೇಶಗಳ ಸಾಹಿತ್ಯಾಸಕ್ತರಿಗೆ ಪ್ರಮುಖ ತಾಣಗಳಲ್ಲಿ ಒಂದಾಗಿದೆ. ನವೆಂಬರ್ 8, 1930 ರಂದು ರಾಷ್ಟ್ರಕವಿ ಮತ್ತು ಜ್ಞಾನಪೀಠ ಪುರಸ್ಕೃತ ಕುವೆಂಪು ಅವರಿಂದ ಉದ್ಘಾಟನೆಗೊಂಡ ಸಂಘವು ವರ್ಷವಿಡೀ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ, ಸಂವಾದ ಮತ್ತು ಉಪನ್ಯಾಸಗಳನ್ನು ಇಲ್ಲಿ ನಡೆಯುತ್ತಿರುತ್ತವೆ. ಪುಸ್ತಕಗಳನ್ನು ಪ್ರಕಟಿಸುತ್ತದೆ, ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

1930 ರ ದಶಕದಲ್ಲಿ, ಕನ್ನಡ ಸಾಹಿತ್ಯ ಮತ್ತು ಪ್ರಪಂಚದಾದ್ಯಂತದ ಬೆಳವಣಿಗೆಗಳು ಮಲೆನಾಡು ಪ್ರದೇಶದ ಯುವಕರ ಆಸಕ್ತಿಯನ್ನು ಹೆಚ್ಚಿಸಿದ್ದರಿಂದ, ಕನ್ನಡ ಸಾಹಿತ್ಯದ ದಂತಕಥೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಈ ಸಾಹಿತ್ಯಾಭಿಮಾನಿಗಳೊಂದಿಗೆ ಸಂವಹನ ನಡೆಸಲು ಕವಿ ದಾರಾ ಬೇಂದ್ರೆ ಅವರನ್ನು ಶಿವಮೊಗ್ಗಕ್ಕೆ ಆಗಾಗ್ಗೆ ಕರೆತರುತ್ತಿದ್ದರು. ಅಂತಹ ಒಂದು ಸಂವಾದದ ಸಮಯದಲ್ಲಿ, ಶಿವಮೊಗ್ಗದಲ್ಲಿ ಕರ್ನಾಟಕ ಸಂಘದ ಕಲ್ಪನೆ ಮೂಡಿತು.

ಸಾಹಿತ್ಯಾಭಿಮಾನಿಗಳು ಹಾಗೂ ಯುವ ವಕೀಲರಾದ ಆನಂದ್, ಎಸ್.ವಿ.ಕೃಷ್ಣಮೂರ್ತಿ ರಾವ್, ಗುರುರಾವ್ ದೇಶಪಾಂಡೆ, ಭೂಪಾಳಂ ಚಂದ್ರಶೇಖರಯ್ಯ, ಭೂಪಾಳಂ ಪುಟ್ಟನಂಜಪ್ಪ ಮತ್ತು ದೇವಂಗಿ ಮಾನಪ್ಪ ಮೊದಲಾದವರು ಈ ಕರ್ನಾಟಕ ಸಂಘವನ್ನು ಸ್ಥಾಪಿಸಿದರು. ಕುವೆಂಪು ಅವರು ಉದ್ಘಾಟಿಸಿದ ನಂತರ 1936ರಲ್ಲಿ ಸಂಘ ನೋಂದಣಿಯಾಯಿತು ಎಂದು ಸಂಘದ ಮಾಜಿ ಅಧ್ಯಕ್ಷ ಮಂಜುನಾಥ್ ಹೇಳುತ್ತಾರೆ.

1890ರಲ್ಲಿ ಸ್ಥಾಪಿತವಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, 1915ರಲ್ಲಿ ಸ್ಥಾಪನೆಯಾದ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ವರ್ಷವಿಡೀ ಕಾರ್ಯಕ್ರಮಗಳನ್ನು ನಡೆಸಿ ಸಾಧಕರಿಗೆ ನಗದು ಪುರಸ್ಕಾರ ನೀಡಿದರೂ ರಾಜ್ಯದ ಪ್ರತಿಷ್ಠಿತ ಸಾಹಿತ್ಯ ಸಂಸ್ಥೆಗಳಲ್ಲಿ ಇದು ತಲೆ ಎತ್ತಿ ನಿಂತಿದೆ. ವಿದ್ಯಾರ್ಥಿಗಳು, ಸಂಘವು ಸರ್ಕಾರದಿಂದ ಯಾವುದೇ ಅನುದಾನವನ್ನು ಸ್ವೀಕರಿಸುವುದಿಲ್ಲ. ವಾಣಿಜ್ಯ ಸಂಕೀರ್ಣದಿಂದ ಬಾಡಿಗೆ ನೀಡುವ ಮೂಲಕ ಸಂಸ್ಥೆಯು ತನ್ನದೇ ಆದ ಆದಾಯವನ್ನು ಗಳಿಸುತ್ತದೆ.

ನಾವು ಅವಿಭಜಿತ ಶಿವಮೊಗ್ಗ ಜಿಲ್ಲೆಯಿಂದ ಬಂದಿರುವ ಪ್ರಮುಖ ಸಾಹಿತಿಗಳಿಗೆ ಗೌರವ ಸದಸ್ಯತ್ವವನ್ನು ನೀಡುತ್ತೇವೆ. ಕನ್ನಡ ಸಾಹಿತ್ಯದಲ್ಲಿ ಅವರು ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಏನಾದರೂ ಮಹತ್ವದ ಸಾಧನೆ ಮಾಡಿರಬೇಕು ಎಂಬುದಷ್ಟೇ ಮಾನದಂಡ. ಮೊದಲ ಗೌರವ ಸದಸ್ಯತ್ವ ಪಡೆದವರು ಕುವೆಂಪು ಎಂದು ಸಂಘದ ಅಧ್ಯಕ್ಷ ಎಚ್.ಡಿ.ಉದಯಶಂಕರ ಶಾಸ್ತ್ರಿ ಹೇಳುತ್ತಾರೆ.

ನಾಡಿನ ಪ್ರಮುಖ ಸಾಹಿತಿಗಳಾದ ಎಂ.ಕೆ.ಇಂದಿರಾ, ಪಿ.ಲಂಕೇಶ್, ಜಿ.ಎಸ್.ಶಿವರುದ್ರಪ್ಪ, ಹಾ.ಮಾ.ನಾಯಕ್, ಯು.ಆರ್.ಅನಂತಮೂರ್ತಿ, ಕೆ.ವಿ.ಸುಬ್ಬಣ್ಣ, ಶಿವಮೊಗ್ಗ ಸುಬ್ಬಣ್ಣ, ನಾ.ಡಿ.ಸೋಜಾ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ ಸೇರಿದಂತೆ ಕನ್ನಡದ 13 ಪ್ರಮುಖರಿಗೆ ಇಲ್ಲಿ ಸದಸ್ಯತ್ವ ನೀಡಲಾಗಿದೆ.

ಸಂಘದ ಚಟುವಟಿಕೆಗಳು: ಸಂಘದ ಕ್ಯಾಲೆಂಡರ್‌ನ ಪ್ರಮುಖ ಚಟುವಟಿಕೆಗಳಲ್ಲಿ ಒಂದಾದ ಗೌರವ ಸದಸ್ಯರ ಹೆಸರಿನಲ್ಲಿ ಪ್ರತಿ ವರ್ಷ 10 ಸಾವಿರ ರೂಪಾಯಿ ನಗದು ಬಹುಮಾನದೊಂದಿಗೆ ಸಾಹಿತ್ಯ ಪ್ರಶಸ್ತಿಗಳನ್ನು ನೀಡುವುದು. ಅತ್ಯುತ್ತಮ ಕಾದಂಬರಿಗಾಗಿ ಕುವೆಂಪು ಪ್ರಶಸ್ತಿ, ಉತ್ತಮ ಸಣ್ಣ ಕಥೆಗಾಗಿ ಯು.ಆರ್.ಅನಂತಮೂರ್ತಿ ಪ್ರಶಸ್ತಿ, ಅತ್ಯುತ್ತಮ ನಾಟಕಕ್ಕಾಗಿ ಕೆ.ವಿ.ಸುಬ್ಬಣ್ಣ ಪ್ರಶಸ್ತಿ, ಮುಸ್ಲಿಂ ಲೇಖಕರಿಗೆ ಪಿ.ಲಂಕೇಶ್ ಪ್ರಶಸ್ತಿ ಮತ್ತು ಅತ್ಯುತ್ತಮ ವಿಜ್ಞಾನ ಸಾಹಿತ್ಯಕ್ಕಾಗಿ ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿಯನ್ನು ನೀಡಲಾಗುತ್ತದೆ. 25 ಸಾವಿರ ರೂಪಾಯಿ ನಗದು ಬಹುಮಾನವನ್ನು ಹೊಂದಿರುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಹ ನೀಡಲಾಗುತ್ತದೆ.

ಸಂಘವು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಚಿನ್ನದ ಪದಕಗಳ ಮೂಲಕ ಪ್ರೋತ್ಸಾಹಿಸುತ್ತದೆ. ಶಂಭ ಜೋಶಿ, ಶಿವರಾಮ ಕಾರಂತ, ಬೇಂದ್ರೆ ಮತ್ತು ತೀ.ನಂ. ಶ್ರೀಕಂಠಯ್ಯ ಅವರ ಹೆಸರಿನಲ್ಲಿಯೂ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅದರ 'ತಿಂಗಳ ಅತಿಥಿ' ಕಾರ್ಯಕ್ರಮ, ಅಲ್ಲಿ ಪ್ರತಿ ತಿಂಗಳು ಸಂವಾದಕ್ಕಾಗಿ ಬರಹಗಾರರನ್ನು ಆಹ್ವಾನಿಸಲಾಗುತ್ತದೆ, ಇದು ಸ್ಥಳೀಯ ಮಟ್ಟದಲ್ಲಿ ಜನಪ್ರಿಯವಾಗಿದೆ. 

30 ಪುಸ್ತಕಗಳು ಪ್ರಕಟ: ಕುವೆಂಪು, ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ, ಜೆ.ಪಿ.ರಾಜರತ್ನಂ, ದಾರಾ ಬೇಂದ್ರೆ, ಎ.ಎನ್.ಮೂರ್ತಿ ರಾವ್, ಟಿ.ಪಿ.ಕೈಲಾಸಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಇತರ ಪ್ರಮುಖ ಸಾಹಿತಿಗಳ ಬಗ್ಗೆ 30 ಪುಸ್ತಕಗಳನ್ನು ಸಂಘ ಪ್ರಕಟಿಸಿದೆ.

ಕರ್ನಾಟಕ ಸಂಘದಿಂದ ಪ್ರಕಟವಾದ ಕುವೆಂಪು ಅವರ ಕೃತಿಗಳು ಸಾಹಿತ್ಯ ಪ್ರಚಾರ, ರಕ್ತಾಕ್ಷಿ ಮತ್ತು ನವಿಲು ಭಾಗ 1 ಮತ್ತು 2, ಬೇಂದ್ರೆಯವರ ನಾಡಲೀಲೆ ಕೂಡ ಸಂಘದಿಂದ ಪ್ರಕಟವಾಗಿದೆ. ಗಿರೀಶ್ ಕಾರ್ನಾಡ್, ಶಾಂತಿನಾಥ ದೇಸಾಯಿ, ಸುಧಾ ಮೂರ್ತಿ, ವಸುಮತಿ ಉಡುಪ, ಟಿ.ಪಿ.ಅಶೋಕ ಸೇರಿದಂತೆ ಹಲವು ಸಾಹಿತಿಗಳ ಪುಸ್ತಕಗಳನ್ನು ಸಂಘದಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ಖಜಾಂಚಿ ಎಚ್‌ಡಿ ಮೋಹನ ಶಾಸ್ತ್ರಿ ಹೇಳುತ್ತಾರೆ.

ಕನ್ನಡ ಭಾಷೆಗೆ ನೀಡಿದ ಕೊಡುಗೆಗಾಗಿ ಸಂಘಕ್ಕೆ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಪ್ರಶಸ್ತಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತಿತರ ಗೌರವಗಳು ಸಂದಿವೆ. ಸಂಘವು 1942 ರಲ್ಲಿ ಬೇಂದ್ರೆಯವರ ಅಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮತ್ತು 1976 ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿತು ಎಂದು ಸಂಘದ ಕಾರ್ಯದರ್ಶಿ ಆಶಾಲತಾ ಹೇಳುತ್ತಾರೆ.

ದೂರದೃಷ್ಟಿತ್ವ: ಕರ್ನಾಟಕ ಸಂಘಕ್ಕೆ ಖಾಯಂ ಕಟ್ಟಡವಿಲ್ಲದಿದ್ದಾಗ ಅಂದಿನ ನಗರಸಭೆ ನಗರಸಭೆ ನಿವೇಶನ ಮಂಜೂರು ಮಾಡಿತ್ತು. ಅಡಿಕೆ ವ್ಯಾಪಾರಿ ಹಸೂಡಿ ವೆಂಕಟಶಾಸ್ತ್ರಿ ಅವರು ಕಟ್ಟಡ ನಿರ್ಮಿಸಲು 30 ಸಾವಿರ ರೂಪಾಯಿ ನೀಡುವುದರೊಂದಿಗೆ ಸಾಹಿತಿ ಬಿ.ಎಂ.ಶ್ರೀಕಂಠಯ್ಯ ಅವರು 1942ರಲ್ಲಿ ಕಟ್ಟಡಕ್ಕೆ ಅಡಿಗಲ್ಲು ಹಾಕಿದರು. ಹಿಂದಿನ ಮೈಸೂರು ರಾಜ ಜಯಚಾಮರಾಜ ಒಡೆಯರ್ ಅವರು ಡಿಸೆಂಬರ್ 11, 1943 ರಂದು ಕಟ್ಟಡವನ್ನು ಉದ್ಘಾಟಿಸಿದರು. ವೆಂಕಟಶಾಸ್ತ್ರಿಯವರ ನಿಧನದ ನಂತರ, ಬೇಂದ್ರೆಯವರ ಸಲಹೆಯ ಮೇರೆಗೆ ಕಟ್ಟಡಕ್ಕೆ ಅವರ ಹೆಸರನ್ನು ಇಡಲಾಯಿತು. ನಂತರ ಸಂಘದ ಪದಾಧಿಕಾರಿಗಳು ವಾಣಿಜ್ಯ ಸಂಕೀರ್ಣ ನಿರ್ಮಿಸಿದರು.


Stay up to date on all the latest ವಿಶೇಷ news
Poll
Students greet each other, relieved that their SSLC examinations

SSLC ಪರೀಕ್ಷೆ ಫಲಿತಾಂಶ: 145 ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್; ಧಾರಾಳವಾಗಿ ಅಂಕ ನೀಡಿರುವ ಈ ಮೌಲ್ಯಮಾಪನ ರೀತಿ ಸರಿಯೇ?


Result
ಸರಿ
ಸರಿಯಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp