ಪತ್ನಿಯ ಕೊನೆಯಾಸೆ ಈಡೇರಿಸಿದ ಪತಿ: ಉಜ್ಜೈನಿ ದೇಗುಲಕ್ಕೆ 17 ಲಕ್ಷ ರೂ. ಚಿನ್ನಾಭರಣ ದೇಣಿಗೆ

ರಶ್ಮಿ ಪ್ರಭಾ ಎಂಬ ಮಹಿಳೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯದ ಭಕ್ತೆಯಾಗಿದ್ದರು. ಆಕೆ ಕಾಯಿಲೆಗೆ ತುತ್ತಾಗಿ ಹಾಸಿಗೆಯಿಂದ ಮೇಲೇಳಲು ಆಗದ ಸ್ಥಿತಿ ನಿರ್ಮಾಣವಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಂಚಿ: ಜಾರ್ಖಂಡ್ ರಾಜ್ಯದ ವ್ಯಕ್ತಿಯೋರ್ವ ತನ್ನ ಪತ್ನಿಯ ಕಡೆಯಾಸೆಯಂತೆ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಉಜ್ಜೈನಿ ದೇಗುಲಕ್ಕೆ ದೇಣಿಗೆ ನೀಡಿದ ಅಚ್ಚರಿಯ ಘಟನೆ ನಡೆದಿದೆ. 

ರಶ್ಮಿ ಪ್ರಭಾ ಎಂಬ ಮಹಿಳೆ ಮಧ್ಯಪ್ರದೇಶದ ಉಜ್ಜೈನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯದ ಭಕ್ತೆಯಾಗಿದ್ದರು. ಆಕೆ ಆಗಾಗ್ಗೆ ದೇವಾಲಯಕ್ಕೆ ಭೇಟಿ ನೀಡುತ್ತಿದ್ದರು. ಆಕೆ ಕಾಯಿಲೆಗೆ ತುತ್ತಾಗಿ ಹಾಸಿಗೆಯಿಂದ ಮೇಲೇಳಲು ಆಗದ ಸ್ಥಿತಿ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಸಾಯುವ ಮುನ್ನ ದೇಗುಲಕ್ಕೆ ೧೭ ಲಕ್ಷ ರೂ. ಚಿನ್ನಾಭರಣ ದೇಣಿಗೆ ನೀಡಬೇಕು ಎಂಬ ಬಯಕೆಯನ್ನು ಪತಿ ಬಳಿ ಹಂಚಿಕೊಂಡಿದ್ದರು. ಅದರಂತೆಯೇ ಪತ್ನಿಯ ಕಡೆಯಾಸೆಯನ್ನು ಪತಿ ನೆರವೇರಿಸಿದ್ದಾರೆ. 

ಜೂನ್೨೮ರಂದು ದೇವಸ್ಥಾನವನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಗಿತ್ತು. ಅಂದಿನಿಂದ ಅಕ್ಟೋಬರ್ ೧೫ರ ತನಕ ೨೩ ಕೋಟಿಗೂ ಅಧಿಕ ಹಣ ಭಕ್ತಾದಿಗಳಿಂದ ಸಂಗ್ರಹವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com