ಬೆಂಗಳೂರಲ್ಲಿ ಕೌಟುಂಬಿಕ ಹಿಂಸಾಚಾರ: ಪತಿ, ಆತನ ಕುಟುಂಬಸ್ಥರ ವಿರುದ್ಧ ಲೈಂಗಿಕ-ಮಾನಸಿಕ ದೌರ್ಜನ್ಯದ ದೂರು ದಾಖಲು

ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ 29 ವರ್ಷದ ಮಹಿಳೆಯೊಬ್ಬರು ಲೈಂಗಿಕ-ಮಾನಸಿಕ ದೌರ್ಜನ್ಯದ ದೂರು ದಾಖಲು ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ 29 ವರ್ಷದ ಮಹಿಳೆಯೊಬ್ಬರು ಲೈಂಗಿಕ-ಮಾನಸಿಕ ದೌರ್ಜನ್ಯದ ದೂರು ದಾಖಲು ಮಾಡಿದ್ದಾರೆ.

ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಆರೋಪದ ಮೇಲೆ 29 ವರ್ಷದ ಮಹಿಳೆ ತನ್ನ ಪತಿ, ಅತ್ತೆಯ ಅವರ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. ಹನುಮಂತನಗರ ಪೊಲೀಸರಿಗೆ ಮಹಿಳೆ ನೀಡಿದ ದೂರಿನಲ್ಲಿ, ಮದುವೆಯಾದ ತಕ್ಷಣ ತನ್ನ ಪತಿ ಮತ್ತು ಆತನ ತಂದೆಯ ಚಿಕ್ಕಮ್ಮ ಹೇಮಾ ವಿಜಯಕುಮಾರ್ ತನ್ನ ಇಚ್ಛೆಗೆ ವಿರುದ್ಧವಾಗಿ ಕನ್ಯತ್ವ ಪರೀಕ್ಷೆಗೆ ಒಳಪಡಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಬೆಂಗಳೂರಿನ ನಿವಾಸಿಯಾಗಿದ್ದ ಮಹಿಳೆ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಜ್ಞಾನಭಾರತಿಯ ನಿವಾಸಿಯಾದ ದೀಪಕ್ ಜೊತೆ ಕಳೆದ ವರ್ಷ ಆಗಸ್ಟ್ ನಲ್ಲಿ ವಿವಾಹವಾಗಿದ್ದರು. ಮದುವೆ ಬಳಿಕ ವರದಕ್ಷಿಣೆ ತರಲು ನಿರಂತರ ಬೇಡಿಕೆ ಇಟ್ಟಿದ್ದರು. ಅಲ್ಲದೆ ಪತಿಯ ತಂದೆ ನನ್ನ ಮೇಲೆ ಲೈಂಗಿಕ ಕಿರುಕುಳಕ್ಕೆ ಮುಂದಾದಾಗ ಅದಕ್ಕೆ ನನ್ನ ಪತಿ ದೀಪಕ್ ಕೂಡ ಬೆಂಬಲ ನೀಡಿದ್ದರು ಎಂದು ಆರೋಪಿಸಿದ್ದಾರೆ.

"ನನ್ನ ಮಾವ ಖಾಸಗಿಯಾಗಿ ಅವರೊಂದಿಗೆ ಸಮಯ ಕಳೆಯಲು ನನ್ನನ್ನು ಒತ್ತಾಯಿಸುತ್ತಿದ್ದರು. ನಾನು ಈ ಬಗ್ಗೆ ನನ್ನ ಪತಿಗೆ ದೂರು ನೀಡಿದಾಗ, ಆತ ತನ್ನ ತಂದೆಯಷ್ಟೇ ಅಲ್ಲ, ನಾನು ಆತನ ಸ್ನೇಹಿತ ಸತೀಶ್‌ನೊಂದಿಗೆ ಸಹಕರಿಸಬೇಕು ಎಂದು ಹೇಳಿದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇನ್ನು ಮಹಿಳೆ ದೂರಿನ ಆಧಾರದ ಮೇಲೆ ಪೊಲೀಸರು ದೀಪಕ್, ಆತನ ತಂದೆ ಕೆಂಪನರಸಿಂಹಯ್ಯ, ಸಹೋದರ ರಕ್ಷಕ್, ಸಹೋದರಿ ಅನಿತಾ ಮತ್ತು ತಂದೆ ಚಿಕ್ಕಮ್ಮ ಹೇಮಾ ವಿಜಯಕುಮಾರ್ ವಿರುದ್ಧ ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com