The New Indian Express
ಕೋಲ್ಕತ: ಇಷ್ಟು ದಿನ ಲಾಠಿ ಹಿಡಿದು ದುಷ್ಟರನ್ನು ಶಿಕ್ಷಿಸಿ ಸರಿಯಾದ ದಾರಿಗೆ ತರುತ್ತಿದ್ದ ಕೈಗಳು ಬಳಪ ಹಿಡಿದು ಸ್ಲಮ್ ನಲ್ಲಿ ವಾಸಿಸುವ ಮಕ್ಕಳಿಗೆ ಶಿಕ್ಷಣ ನೀಡುವ ಗುರುಗಳಾಗಿ ಮಾರ್ಪಾಡಾಗಿರುವ ಘಟನೆ ಕೋಲ್ಕತಾ ಪೊಲೀಸ್ ಇಲಾಖೆಯಲ್ಲಿ ನಡೆದಿದೆ.
ಸಂಚಾರ ವಿಭಾಗದ ಮುಖ್ಯಸ್ಥರಾದ ಪ್ರಸೇನ್ ಜಿತ್ ಚಟರ್ಜೀ ಲಾಕ್ ಡೌನ್ ಸಮಯದಲ್ಲಿ ಸ್ಮಾರ್ಟ್ ಫೋನ್ ಇಲ್ಲದ ಮಕ್ಕಳು ಶಿಕ್ಷಣವಂಚಿತರಾಗುತ್ತಿರುವುದನ್ನು ಗಮನಿಸಿದ್ದರು. ಆ ಸಮಯದಲ್ಲಿ ಪೊಲೀಸರೇ ಏಕೆ ಮಕ್ಕಳಿಗೆ ಪಾಠ ಮಾಡಬಾರದು ಎನ್ನುವ ಆಲೋಚನೆ ಅವರಿಗೆ ಬಂದಿತ್ತು.
ಇದನ್ನೂ ಓದಿ: ಎಸ್ಎಂಎಸ್ ಹುಡುಗಿ 'ಮೀನಾ' ಆಮಿಷ ಒಡ್ಡಿ ಪುರುಷರನ್ನು ವಂಚಿಸುವ ಜಾಲ ಪತ್ತೆ!
ತಮ್ಮ ಆಲೋಚನೆಯನ್ನು ವ್ಯರ್ಥವಾಗಲು ಬಿಡದೇ ಅದನ್ನು ಕಾರ್ಯಗತಗೊಳಿಸಿಯೇ ಬಿಟ್ಟರು ಪ್ರಸೇನ್ ಜಿತ್. ಪಾಠ ಮಾಡಲು ಬೇಕಾದ ಅಗತ್ಯ ವಸ್ತುಗಳನ್ನು ಇಲಾಖೆ ವತಿಯಿಂದ ದೊರಕಿಸಿಕೊಟ್ಟರು.
ಇದನ್ನೂ ಓದಿ: ಮಂಗಳೂರು: ಹಾಡಹಗಲೇ ದರೋಡೆಗೆ ಯತ್ನ: ಮಹಿಳೆಯಿಂದ ದಿಟ್ಟ ಪ್ರತಿರೋಧ, ವಿಡಿಯೋ ವೈರಲ್
ಪೊಲೀಸರು ತಮಗೆ ಯಾವ ವಿಷಯಗಳ ಮೇಲೆ ಹಿಡಿತವಿದೆಯೋ ಅದಕ್ಕೆ ಸಂಬಂಧಿಸಿದ ಪಠ್ಯವನ್ನೇ ಆರಿಸಿಕೊಂಡು ಮಕ್ಕಳಿಗೆ ಪಾಠ ಶುರು ಮಾಡಿದ್ದರು. 1ರಿಂದ 4ನೇ ತರಗತಿಯವರೆಗಿನ ಒಟ್ಟು 30 ಮಂದಿ ಮಕ್ಕಳು ಈ ಕೋಚಿಂಗ್ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.