ಡಯೆಟ್, ಸೆಕ್ಸ್, ಕೊಕೇನ್: ಪ್ರಖ್ಯಾತ ಇನ್ನರ್ ವೇರ್ ಸಂಸ್ಥೆಯ ಸೂಪರ್ ಮಾಡೆಲ್ ಬಿಚ್ಚಿಟ್ಟ ರಹಸ್ಯ

ಸಣ್ಣ ಆದರೆ ಫೇಮಸ್ ಆಗಬಹುದು ಎನ್ನುವ ಆಲೋಚನೆಯನ್ನು ಮಾಡೆಲ್ ಗಳ ತಲೆಯೊಳಗೆ ತುಂಬಲಾಗುತ್ತಿತ್ತು. ಇದರಿಂದಾಗಿ ಬ್ರೈನ್ ವಾಶ್ ಗೆ ಒಳಗಾಗುತ್ತಿದ್ದ ಮಾಡೆಲ್ಗಳು ಹಲವು ದಿನಗಳ ವರೆಗೆ ಆಹಾರ ಸೇವಿಸದೇ ಇರುತ್ತಿದ್ದರು.
ಸೂಪರ್ ಮಾಡೆಲ್ ಬ್ರಿಜೆಟ್ ಮಾಲ್ಕಂ
ಸೂಪರ್ ಮಾಡೆಲ್ ಬ್ರಿಜೆಟ್ ಮಾಲ್ಕಂ

ಕ್ಯಾನ್ ಬೆರ್ರಾ: ಜಗದ್ವಿಖ್ಯಾತ ಮಹಿಳೆಯರ ಇನ್ನರ್ ವೇರ್ ತಯಾರಕ ಸಂಸ್ಥೆ ವಿಕ್ಟೋರಿಯ ಸೀಕ್ರೆಟ್ ನಲ್ಲಿ ಮಾಡೆಲ್ ಆಗಿ ಪ್ರಖ್ಯಾತಿ ಗಳಿಸಿದ್ದ ಬ್ರಿಜೆಟ್ ಮಾಲ್ಕಂ ಸಂಸ್ಥೆಯೊಳಗೆ ನಡೆಯುತ್ತಿದ್ದ ಅನಾಚಾರಗಳ ಪಟ್ಟಿಯನ್ನು ಹೊರಜಗತ್ತಿಗೆ ಬಿಚ್ಚಿಟ್ಟಿದ್ದಾರೆ. 

ಫ್ಯಾಷನ್ ಶೋ ಕಮಾಲ್

ವಿಕ್ಟೋರಿಯ ಸೀಕ್ರೆಟ್ ಸಂಸ್ಥೆ ವರ್ಷಕ್ಕೊಮ್ಮೆ ತನ್ನ ಸಂಸ್ಥೆಯ ಒಳ ಉಡುಪುಗಳ ಫ್ಯಾಷನ್ ಶೋ ಕಾರ್ಯಕ್ರಮ ಆಯೋಜಿಸುತ್ತದೆ. ಅದರಲ್ಲಿ ವೀಕ್ಷಕರಾಗಿ ಪಾಲ್ಗೊಳ್ಲಲೆಂದೇ ಜಗತ್ತಿನ ಆಗರ್ಭ ಶ್ರೀಮಂತರು ದುಡ್ಡು ತೆತ್ತು ಬರುತ್ತಾರೆ. ಜಗತ್ತಿನ ಫ್ಯಾಷನ್ ಉದ್ಯಮದ ಕಣ್ಣೇ ಈ ಫ್ಯಾಷನ್ ಶೋ ಮೇಲಿರುತ್ತದೆ. ಹೀಗಾಗಿ ಅದರಲ್ಲಿ ಭಾಗವಹಿಸಬೇಕೆನ್ನುವುದು ಪ್ರತಿ ಮಾಡೆಲ್ ಗಳ ಕನಸು. 

ಟಾಪ್ ಮಾಡೆಲ್ ಬ್ರಿಜೆಟ್

ಆಸ್ಟ್ರೇಲಿಯಾದ ಮಾಡೆಲ್ ಬ್ರಿಜೆಟ್ ಮಾಲ್ಕಂ 2015ರಲ್ಲಿ ವಿಕ್ಟೋರಿಯ ಸೀಕ್ರೆಟ್ ಸಂಸ್ಥೆ ಸೇರಿದ್ದರು. ಸಂಸ್ಥೆ ಸೇರುವಾಗ ಅವರಿಗಿನ್ನೂ18 ತುಂಬಿರಲಿಲ್ಲ. ಅವರಂತೆ ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಬೇಕೆನ್ನುವ ಹಲವು ಹುಡುಗಿಯರು ಅಲ್ಲಿದ್ದರು.

ಸಂಸ್ಥೆ ಸೇರಿದ ಹುಡುಗಿಯರಿಗೆ ಕಠಿಣ ತರಬೇತಿ ನೀಡಲಾಗುತ್ತಿತ್ತು. ಮೊದಲೇ ಸಣ್ಣಕ್ಕಿದ್ದ ಅವರಿಗೆ ಇನ್ನಷ್ಟು ಸಣ್ನ ಆಗುವಂತೆ ಒತ್ತಡ ಹೇರಲಾಗುತ್ತಿತ್ತು. ಕಟ್ಟುನಿಟ್ಟಿನ ಆಹಾರ ಪದ್ಧತಿ ವಿಧಿಸಲಾಗುತ್ತಿತ್ತು. ಅಲ್ಲದೆ ಸಣ್ಣ ಆಗಲು ಸೆಕ್ಸ್ ಮಾಡುವಂತೆ ಪ್ರಚೋದನೆ ನೀಡಲಾಗುತ್ತಿತ್ತು. 

ಅಪ್ರಾಪ್ತ ವಯಸ್ಸಿನಲ್ಲೇ ಸೆಕ್ಸ್

ಆಗಿನ್ನೂ ಅಪ್ರಾಪ್ತ ವಯಸ್ಕಳಾಗಿದ್ದ ಬ್ರಿಜೆಟ್ ಳಿಗೂ ಸೆಕ್ಸ್ ಮಾಡುವಂತೆ ಒತ್ತಡ ಹೇರಲಾಗಿತ್ತು. ಕೊಕೇನ್ ಸೇವನೆ ಮಾಡುವಂತೆ ಸೂಚಿಸಲಾಗುತ್ತಿತ್ತು. ಕಾನೂನುಬಾಹಿರ ಎಂದು ಗೊತ್ತಿದ್ದರೂ ವೃತ್ತಿ ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸಬೇಕು ಎನ್ನುವ ಛಲದಿಂದ ಬ್ರಿಜೆಟ್ ಸಂಸ್ಥೆಯ ಎಲ್ಲಾ ಷರತ್ತುಗಳಿಗೂ ಸಹಿಸಿಕೊಂಡು ಒಪ್ಪಿಕೊಂಡಿದ್ದರು.

ಹೆಚ್ಚು ದಿನಗಳ ಉಪವಾಸ

ಸಣ್ಣ ಆದರೆ ಜಗತ್ತಿನಲ್ಲೇ ಫೇಮಸ್ ಆಗಬಹುದು ಎನ್ನುವ ಆಲೋಚನೆಯನ್ನು ಮಾಡೆಲ್ ಗಳ ತಲೆಯೊಳಗೆ ತುಂಬಲಾಗುತ್ತಿತ್ತು. ಇದರಿಂದಾಗಿ ಬ್ರೈನ್ ವಾಶ್ ಗೆ ಒಳಗಾಗುತ್ತಿದ್ದ ಮಾಡೆಲ್ಗಳು ಹಲವು ದಿನಗಳ ವರೆಗೆ ಆಹಾರ ಸೇವಿಸದೇ ಇರುತ್ತಿದ್ದರು. ಬ್ರಿಜೆಟ್ ಮೂರು ದಿನಗಳ ತನಕ ಉಪವಾಸ ಇರುತ್ತಿದ್ದುದಾಗಿ ತಿಳಿಸಿದ್ದಾರೆ. 

ಅವರಿಗೆ 5 ದಿನಗಳ ಕಾಲ ಉಪವಾಸ ಇರುವಂತೆ ಗುರಿ ನೀಡಲಾಗಿತ್ತು. ಆದರೆ 3 ದಿನಗಳ ನಂತರ ಬ್ರಿಜೆಟ್ ಮೇಲಿಂದ ಮೇಲೆ ನಿತ್ರಾಣಗೊಂಡು ಮೂರ್ಛ್ಹೆ ಹೋಗುತ್ತಿದ್ದ ಕಾರಣ ಮೂರು ದಿನಗಳಿಗೂ ಮೇಲೆ ಉಪವಾಸ ಮಾಡಲಾಗುತ್ತಿರಲಿಲ್ಲ.

ಫೇಮಸ್ ಆಗುವಾಸೆಗೆ ಯುವತಿಯರು ಬಲಿ

ಒಂದೆಡೆ ಮಾಡೆಲ್ ಗಳು ತಮ್ಮ ಸೌಂದರ್ಯ ಮತ್ತು ಫ್ಯಾಷನ್ ಶೋಗಳಿಂದ ಫೇಮಸ್ ಆಗುತ್ತಿರುವಂತೆಯೇ ಮತ್ತೊಂದೆಡೆ ಅವರು ತಮ್ಮ ದೇಹವನ್ನು, ಮನಸ್ಸನ್ನು ಕಡೆಗಣಿಸಿ ಮೃತ್ಯುಕೂಪದತ್ತ ಸಾಗುತ್ತಿದ್ದರು.

ಇಷ್ಟಲ್ಲದೆ ಪುರುಷ ಸಹೋದ್ಯೋಗಿಗಳಿಂದ ಲೈಂಗಿಕ ಕಿರುಕುಳಕ್ಕೂ ಅಸಂಖ್ಯ ಬಾರಿ ತುತ್ತಾಗಿದ್ದಾಗಿ ಹೇಳಿದ್ದಾರೆ ಬ್ರಿಜೆಟ್. ಸಂಸ್ಥೆಯ ಸಿ ಇ ಒ ಆಗಿದ್ದ ಎಡ್ ರಜೆಕ್ ಬಳಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಅದಕ್ಕೆ ಪರಿಹಾರ ಸುಚಿಸುವುದಕ್ಕೆ ಬದಲಾಗಿ ಬ್ರಿಜೆಟ್ ಳನ್ನೇ ಸುಮ್ಮನಿರುವಂತೆ ಮಾಡಿದ್ದರು ಸಂಸ್ಥೆಯವರು. 

ಲೈಂಗಿಕ ಕಿರುಕುಳ ಕಾಮನ್

ಆಕೆಗೆ ಅವಳಂತೆಯೇ ಈ ಹಿಂದೆ ಹಲವು ಮಂದಿ ಮಾಡೆಲ್ ಗಳು ಸಿ ಇ ಒ ಎಡ್ ರಜೆಕ್ ಗೆ ದೂರು ನೀಡಿದ್ದರು ಎನ್ನುವ ಸಂಗತಿ ತಿಳಿದುಬಂದಿತ್ತು. ಅವರ ವಿಚಾರದಲ್ಲೂ ಸಿ ಇ ಒ ಏನೂ ಕ್ರಮ ಕೈಗೊಂಡಿರಲಿಲ್ಲ. ದೂರು ನೀಡಿದ ಮಾಡೆಲ್ ಗಳ ಬಳಿ ಸಹಿ ಹಾಕಿಸಿಕೊಂಡು, ಈ ವಿಚಾರವನ್ನೂ ಹೊರಗೆಲ್ಲೂ ಬಹಿರಂಗಪಡಿಸಿಕೊಳ್ಳುವುದಿಲ್ಲವೆಂದು ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಮಾಡೆಲಿಂಗ್ ಕನಸನ್ನು ಹೊಂದಿದ್ದ ಹುಡುಗಿಯರು ಅನಿವಾರ್ಯವಾಗಿ ಸುಮ್ಮನಾಗ ಬೇಕಾಯಿತು.

ಅಸಲಿಗೆ ವಿಕ್ಟೋರಿಯ ಸೀಕ್ರೆಟ್ ಸಂಸ್ಥೆಯಲ್ಲಿದ್ದ ಸೂಪರ್ ಮಾಡೆಲ್ ಗಳು ಅಲ್ಲಿನ ವಾತಾವರಣದಿಂದಾಗಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಕೆಲವರು ಈಟಿಂಗ್ ಡಿಸಾರ್ಡರ್ ನಿಂದ ಬಳಲಿದರೆ, ಇನ್ನು ಕೆಲವರು ಮಾನಸಿಕ ಖಿನ್ನತೆ ಸೇರಿದಂತೆ ಹಲವು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದರು. 

ಮಾನಸಿಕ ಸ್ಥೈರ್ಯ ಕುಗ್ಗಿಸುತ್ತಿದ್ದರು

ಸಿ ಇ ಒ ಎಡ್ ರಜೆಕ್
ಸಿ ಇ ಒ ಎಡ್ ರಜೆಕ್

ದಿನ ಬೆಳಗಾದರೆ ಮಾಡೆಲ್ ಗಳನ್ನು ದಪ್ಪ ಇದೀಯ, ಇನ್ನೂ ಸಣ್ಣ ಆಗಬೇಕು ಎಂದು ಹಂಗಿಸಲಾಗುತ್ತಿತ್ತು. ಆ ಮೂಲಕ ಅವರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸಲಾಗುತ್ತಿತ್ತು. ಇದರಿಂದಾಗಿ ಮಾಡೆಲ್ ಗಳು ಆತ್ಮಹತ್ಯೆಗೆ ಯತ್ನ ಮಾಡಿದ್ದೂ ಇದೆ. ಆ ಪ್ರಕರಣಗಳನ್ನು ಸಂಸ್ಥೆಯ ಕಾನೂನು ತಜ್ನರ ತಂಡ ಮುಚ್ಚಿ ಹಾಕುವಲ್ಲಿ ಯಶಸ್ವಿಯಾಗುತ್ತಿತ್ತು.

ಹಾಗಿದ್ದೂ ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ಮಾಡೆಲ್ ಗಳು ಸಂಸ್ಥೆ ತೊರೆದು ಹೋಗುತ್ತಿರಲಿಲ್ಲ. ತಮ್ಮೆಲಾ ಕಷ್ಟಗಳ ನಡುವೆಯೇ ಬ್ರಿಜೆಟ್ ಟಿಕ್ ಟಾಕ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯೊಳಗೆ ನಡೆಯುತ್ತಿರುವ ಅನಾಚಾರಗಳ ಸುಳಿವನ್ನು ನೀಡುವ ಕೆಲಸವನ್ನೂ ಮಾಡಿಕೊಂಡು ಬರುತ್ತಿದ್ದರು. ಅದಕ್ಕಾಗಿ ಸಂಸ್ಥೆಯ ಹಿರಿಯ ಅಧಿಕಾರಿಗಳ ವಿರೋಧವನ್ನು ಕಟ್ಟಿಕೊಳ್ಲಬೇಕಾಗಿ ಬಂದಿತ್ತು.

ಕೆಲಸದಿಂದ ಗೇಟ್ ಪಾಸ್

ಅಂಥಾ ಸಮಯದಲ್ಲಿ ಬ್ರಿಜೆಟ್ ದೇಹ ದಪ್ಪಗಾಗುತ್ತಿದೆ ಎಂದು ಅಲ್ಲಿನ ತರಬೇತುದಾರರು ಎಚ್ಚರಿಕೆ ನೀಡಿದ್ದರು. ಆದರೆ ಬ್ರಿಜೆಟ್ ಅದಕ್ಕೇನೂ ಮಾಡುವಂತಿರಲಿಲ್ಲ. ಬ್ರಿಜೆಟ್ ಸೊಂಟ ಸಂಸ್ಥೆಯ ನಿಯಮಾವಳಿಯಲ್ಲಿ ಇದ್ದುದಕ್ಕಿಂತ ಅರ್ಧ ಇಂಚು ದಪ್ಪಗಿತ್ತು. ಒಡನೆಯೇ ಅದೇ ಕಾರಣಕ್ಕೆ ಬ್ರಿಜೆಟ್ ಅವರನ್ನು ಕೆಲಸದಿಂದ ಕಿತ್ತು ಹಾಕಿತ್ತು. 

ಅಲ್ಲಿಂದ ಹೊರಬಂದಿರುವ ಬ್ರಿಜೆಟ್ ತಾವು ಜೀವಂತವಾಗಿ ಆ ಸಂಸ್ಥೆಯಿಂದ ಹೊರಬರುತ್ತೇನೆ ಎಂದುಕೊಂಡಿರಲಿಲ್ಲ ಎನ್ನುತ್ತಾರೆ. ಅಲ್ಲಿಂದ ಹೊರಬಂದ ಮೇಲೆ ತಾವು ಮನುಷ್ಯರಾಗಿದ್ದಾಗಿ ಅವರು ಹೇಳಿದ್ದಾರೆ. ಅವರು ತಮ್ಮದೇ ಫ್ಯಾಷನ್ ಶೋ ವಿಡಿಯೋಗಳನ್ನು ನೋಡುವಾಗ ಅದರಲ್ಲಿ ಕಂಡು ಬರುವ ಹುಡುಗಿ ತಾನಲ್ಲ ಬೇರೆ ಯಾರೋ ಎಂದು ಹೇಳುತ್ತಾರೆ. ಇತ್ತೀಚಿಗಷ್ಟೆ ಅವರು ವಿಕ್ಟೋರಿಯ ಸೀಕ್ರೆಟ್ ಸಂಸ್ಥೆಯೊಳಗಿನ ಅನಾಚಾರ, ಅಕ್ರಮಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 

ವಿಕ್ಟೋರಿಯ ಸೀಕ್ರೆಟ್ ರೀಬ್ರ್ಯಾಂಡಿಂಗ್

ವಿಕ್ಟೋರಿಯ ಸೀಕ್ರೆಟ್ ಸಂಸ್ಥೆ ಸಿ ಇ ಒ ಎಡ್ ರಜೆಕ್ ಅವರನ್ನು ಕೆಲಸದಿಂದ ತೆಗೆದು ಹಾಕಿದೆ. ಸಂಸ್ಥೆ ಈಗ ರೀಬ್ರ್ಯಾಂಡಿಂಗ್ ಮಾಡಿಕೊಳ್ಳುತ್ತಿದೆ. ಸಣ್ನಕ್ಕಿರುವ ಮಾಡೆಲ್ ಮಾತ್ರವಲ್ಲದೆ ಎಲ್ಲಾ ಗಾತ್ರದ ಮಾಡೆಲ್ ಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದೆ. ಆ ಮೂಲಕ ತಾನು ಬದಲಾಗುತ್ತಿರುವುದಾಗಿ ಸಾರುತ್ತಿದೆ. ಆದರೆ ಅದು ತೋರಿಕೆಗೂ ನಿಜಕ್ಕೋ ಎಂದು ಹೇಳ ಬಲ್ಲವರಾರು?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com