ಸಿಸಿಬಿ ಭರ್ಜರಿ ಕಾರ್ಯಾಚರಣೆ: ಕುಖ್ಯಾತ ಡ್ರಗ್ ಪೆಡ್ಲರ್‌ಗಳ ಬಂಧನ; 2 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ
ಕೇಂದ್ರ ಅಪರಾಧ ವಿಭಾಗ ಮಾದಕ ವಸ್ತು ನಿಗ್ರಹ ದಳ ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜಾರ್ಖಂಡ್‌ನ ಕುಖ್ಯಾತ ಡ್ರಗ್ ಫೆಡ್ಲರ್‌ಗಳನ್ನು ಬಂಧಿಸಿ ಅವರಿಂದ ಸುಮಾರು 2 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದೆ.
Published: 03rd September 2021 01:40 PM | Last Updated: 03rd September 2021 02:03 PM | A+A A-

ಅಪಾರ ಪ್ರಮಾಣದ ಮಾದಕ ವಸ್ತು ವಶಕ್ಕೆ
ಬೆಂಗಳೂರು: ಕೇಂದ್ರ ಅಪರಾಧ ವಿಭಾಗ ಮಾದಕ ವಸ್ತು ನಿಗ್ರಹ ದಳ ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜಾರ್ಖಂಡ್‌ನ ಕುಖ್ಯಾತ ಡ್ರಗ್ ಫೆಡ್ಲರ್‌ಗಳನ್ನು ಬಂಧಿಸಿ ಅವರಿಂದ ಸುಮಾರು 2 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದೆ.
ಬಂಧಿತ ಜಾರ್ಖಂಡ್ ಮೂಲದ ಇಬ್ಬರು ಡ್ರಗ್ ಫೆಡ್ಲರ್‌ಗಳಿಂದ 150 ಎಂಡಿಎಂಎ ಮತ್ತು ಎಕ್ಸಟೆಂಟ್ ಮಾತ್ರೆಗಳು, 400 ಗ್ರಾಂ ಚೆರಸ್ ಉಂಡೆಗಳು, 180 ಎಸ್‌ಎಲ್‌ಡಿ ಸ್ಟ್ರಿಪ್‌ಗಳು 3,520 ಗ್ರಾಂ ಆಶಿಶ್ ಆಯಿಲ್, 50 ಗ್ರಾಂ ಐಡ್ರೋ ಗಾಂಜಾ, 30 ಕೆಜಿ ಗಾಂಜಾ, 2 ಮೊಬೈಲ್, 2 ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಂಡಿರುವ ಮಾದಕ ವಸ್ತುಗಳು ಹಾಗೂ ಇನ್ನಿತರ ವಸ್ತುಗಳ ಮೌಲ್ಯ 2 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
CCB Anti Narcotics Wing seize Rs 2 cr worth of drugs including Ecstacy, LSD, Hash, Cannabis..procured through darknet using Bitcoins..2 accused arrested..@CPBlr @BlrCityPolice pic.twitter.com/Vq5pDbBiM0
— Sandeep Patil IPS (@ips_patil) September 3, 2021
ದೆಹಲಿ ಮೂಲದ ಖದೀಮನೊಬ್ಬ ಡಾರ್ಕ್‌ವೆಬ್‌ಸೈಟ್‌ನ ಟಾರ್ ಬ್ರೌಸರ್ ಬಳಸಿಕೊಂಡು ವಿಕ್ಕರ್ ಮೀ ವೆಬ್‌ಸೈಟ್‌ನಿಂದ ವಿದೇಶಿ ಎಜೆಂಟ್ ಗೆ ಬಿಟ್ ಕಾಯಿನ್ ಮೂಲಕ ಹಣ ಪಾವತಿಸಿ ವಿದೇಶದಿಂದ ಕಡಿಮೆ ಬೆಲೆಗೆ ಮಾತ್ರೆಗಳು, ಚೆರಸ್ ಉಂಡೆಗಳು, ಎಸ್‌ಎಲ್‌ಡಿ ಸ್ಟ್ರಿಪ್‌ಗಳು. ಆಶಿಶ್ ಆಯಿಲ್, ಐಡ್ರೋ ಗಾಂಜಾ, ಗಾಂಜಾ ಇನ್ನತರ ಮಾದಕ ವಸ್ತುಗಳನ್ನು ಖರೀದಿಸುತ್ತಿದ್ದನು. ಅವುಗಳನ್ನು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಜಾರ್ಖಂಡ್ ಮೂಲದ ಇಬ್ಬರು ಬಂಧಿತ ಆರೋಪಿಗಳಿಗೆ ತಿಂಗಳ ಸಂಬಳ ನೀಡಿ ವೈಟ್‌ಫೀಲ್ಡ್‌ನಲ್ಲಿ ಬಾಡಿಗೆ ಮನೆ ಮಾಡಿಕೊಟ್ಟು ಇರಿಸಿದ್ದ. ಅಲ್ಲಿಂದ ಮಾದಕವಸ್ತುಗಳನ್ನು ಇನ್ನಿಬ್ಬರು ಸ್ಥಳೀಯ ವ್ಯಕ್ತಿಗಳ ಜತೆ ಸೇರಿ ಐಟಿ-ಬಿಟಿ ಕಂಪನಿಯ ಉದ್ಯೋಗಿಗಳಿಗೆ ಸರಬರಾಜು ಮಾಡಿ ಹೆಚ್ಚಿನ ಹಣ ಗಳಿಸುವ ದಂಧೆ ನಡೆಸುತ್ತಿದ್ದ ಎಂದು ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.
Karnataka | Anti Narcotics Wing of Central Crime Branch (CCB) has seized Rs 2 cr worth of drugs including Ecstacy, LSD, Hash, Cannabis..procured through Darknet using Bitcoins, two persons arrested: Sandeep Patil, Joint CP, Crime
— ANI (@ANI) September 3, 2021
ಅಲ್ಲದೆ ಡ್ರಗ್ಸ್ ಖರೀದಿಸುತ್ತಿದ್ದ ಗ್ರಾಹಕನೊಬ್ಬ ನೀಡಿದ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರ ವಿಶೇಷ ತಂಡದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ನಗರದಲ್ಲಿ ಇತ್ತೀಚೆಗೆ ನಡೆದ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದ್ದು, ಬಂಧಿತ ಆರೋಪಿಗಳಿಗೆ ಸಂಬಳ ನೀಡಿ ಮಾದಕ ವಸ್ತುಗಳನ್ನು ಮಾರಾಟ ಮಾಡಿಸುತ್ತಿದ್ದ. ದೆಹಲಿ ಮೂಲದ ನಟೋರಿಯಸ್ ಟ್ರಗ್ ಫೆಡ್ಲರ್‌ಗಳಿಗಾಗಿ ಶೋಧ ನಡೆಸಲಾಗಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.