The New Indian Express
ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಆಂಧ್ರಪ್ರದೇಶದ ಕರ್ನೂಲಿಗೆ ಹೊರಡಲಿದ್ದ ವಿಮಾನ 2 ಗಂಟೆ ತಡವಾಗಿತ್ತು. ಏರ್ ಇಂಡಿಗೊ ವಿಮಾನದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ಇಂಡಿಗೋದಿಂದ ರಿಯಾಯಿತಿ ಘೋಷಣೆ
ಕಾಲು ಗಂಟೆ ವಿಮಾನ ಬಸ್ಸು, ರೈಲು ಬರುವುದು ತಡವಾದರೂ ಸಿಡಿಮಿಡಿಗುಟ್ಟುವ ಪ್ರಯಾಣಿಕರು 2 ಗಂಟೆ ವಿಮಾನ ವಿಳಂಬವಾದರೂ ಶಾಂತರಾಗಿದ್ದರು. ಅದಕ್ಕೆ ಕಾರಣವಾಗಿದ್ದು ಇಬ್ಬರು ಗಗನಸಖಿಯರ ವಿನೂತನ ಮಾರ್ಗ
ಕರ್ನೂಲಿನಲ್ಲಿ ವಿಪರೀತ ಮಳೆ ಇದ್ದುದರಿಂದ ಅಲ್ಲಿನ ಎಟಿಸಿ ವಿಮಾನ ಇಳಿಸಲು ಅನುಮತಿ ನೀಡಿರಲಿಲ್ಲ. ಹೀಗಾಗಿ ಬೆಂಗಳೂರಿನಿಂದ ಬೆಳಿಗ್ಗೆ 9 ಗಂಟೆಗೆ ಹೊರಡಬೇಕಿದ್ದ ವಿಮಾನ ಹೊರಟಿರಲಿಲ್ಲ.
ಇದನ್ನೂ ಓದಿ: ಕಣ್ಣೂರು-ಹುಬ್ಬಳ್ಳಿ ಇಂಡಿಗೋ ವಿಮಾನ ಟೈರ್ ಸ್ಫೋಟ; ಪೈಲಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
ಪ್ರಯಾಣಿಕರು ಕೋಪಗೊಳ್ಳುವ ಸೂಚನೆ ಸಿಕ್ಕಾಕ್ಷಣವೇ ಇಬ್ಬರು ಗಗನಸಖಿಯರಾದ ಮೃದುಲ ಮತ್ತು ಮೆರೆಂತುಲಾ ಅವರು ತಾವೇ ಖುದ್ದಾಗಿ ಪ್ರತಿ ಪ್ರಯಾಣಿಕರಿಗೂ ವಿಳಂಬಕ್ಕೆ ಕ್ಷಮೆ ಕೋರಿ ಪತ್ರ ಬರೆದಿದ್ದರು.
ಹವಾಮಾನ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಹೀಗಾಗಿ ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ವಿಮಾನ ಹಾರಾಟ ತಡವಾಗುತ್ತಿದೆ. ಕರ್ನೂಲು ಎಟಿಸಿ ಯಿಂದ ವಿಮಾನ ಲ್ಯಾಂಡಿಂಗ್ ಗೆ ಅನುಮತಿ ಸಿಕ್ಕ ಕೂಡಲೆ ವಿಮಾನ ಹೊರಡಲಿದೆ ಎಂಬುದಾಗಿ ಪತ್ರದಲ್ಲಿ ಬರೆಯಲಾಗಿತ್ತು.
ಇದನ್ನೂ ಓದಿ: ದೆಹಲಿ-ಬೆಂಗಳೂರು ಇಂಡಿಗೊ ವಿಮಾನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ