ಪಾಳುಬಿದ್ದ ಬಾವಿಗಳ ಜೀರ್ಣೋದ್ಧಾರ; ಗದಗ ಗ್ರಾಮಸ್ಥರ ಸ್ವಚ್ಛತಾ ಅಭಿಯಾನ; ಯುವಕರ ಕಾರ್ಯಕ್ಕೆ ಶ್ಲಾಘನೆ

ಪಾಳು ಬಿದ್ದು ಬಳಕೆ ನಿರುಪಯೋಗವಾಗಿರುವ ಬಾವಿಗಳ ಜೀರ್ಣೋದ್ಧಾರ ಕಾರ್ಯದ ಮೂಲಕ ಗದಗ ಜಿಲ್ಲೆಯ ಗ್ರಾಮವೊಂದರ ಗ್ರಾಮಸ್ಥರು ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಬಾವಿ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮಸ್ಥರು
ಬಾವಿ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮಸ್ಥರು

ಗದಗ: ಪಾಳು ಬಿದ್ದು ಬಳಕೆ ನಿರುಪಯೋಗವಾಗಿರುವ ಬಾವಿಗಳ ಜೀರ್ಣೋದ್ಧಾರ ಕಾರ್ಯದ ಮೂಲಕ ಗದಗ ಜಿಲ್ಲೆಯ ಗ್ರಾಮವೊಂದರ ಗ್ರಾಮಸ್ಥರು ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವೈಜ್ಞಾನಿಕ ಆವಿಷ್ಕಾರಗಳೊಂದಿಗೆ ನೀರಿನ ಮೂಲವು ವರ್ಷಗಳಿಂದ ರೂಪಾಂತರಗೊಂಡಿದೆಯಾದರೂ ಹಳೆಯ ಬಾವಿಗಳನ್ನು ಬಳಸುವ ಅಭ್ಯಾಸವು ಕೆಲವು ಸ್ಥಳಗಳಲ್ಲಿ ಇತಿಹಾಸದ ಕೊನೆಯ ಕುರುಹುಗಳಾಗಿ ಈಗಲೂ ಉಳಿದಿದೆ. ಗದಗ ಜಿಲ್ಲೆಯ ಫುಟಗಾವೊ ಬದ್ನಿ ಗ್ರಾಮ ಪಂಚಾಯತ್ ಇತ್ತೀಚೆಗೆ ಹಳೆಯ ಬಾವಿಗಳನ್ನು ಜೀರ್ಣೋದ್ಧಾರ ಮಾಡಿ ಪುನರ್ ಬಳಕೆಗೆ ಗ್ರಾಮಸ್ಥರನ್ನು ಪ್ರೇರೇಪಿಸಲು ಅಭಿಯಾನವನ್ನು ಪ್ರಾರಂಭಿಸಿದೆ. 

ಈಗ್ಗೆ ಕೆಲ ವರ್ಷಗಳ ಹಿಂದೆ ಲಕ್ಷ್ಮೇಶ್ವರ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗಗಳಲ್ಲಿನ ಯುವಕರು ನಿಷ್ಕ್ರಿಯಗೊಂಡ ಬಾವಿಗಳನ್ನು ಸ್ವಚ್ಛಗೊಳಿಸಲು ಮತ್ತು ಮಳೆಗಾಲಕ್ಕಾಗಿ ಅವುಗಳನ್ನು ಪುನರುಜ್ಜೀವನಗೊಳಿಸಲು ಪ್ರಾರಂಭಿಸಿದರು. ಇದೀಗ ಇದೇ ಅಭಿಯಾನ ಹೊಸ ಟ್ರೆಂಡ್ ಆಗಿದ್ದು, ಸುತ್ತಮುತ್ತಲ ಗ್ರಾಮಗಳಿಗೂ ಪಸರಿಸಿದೆ. ಲಕ್ಷ್ಮೇಶ್ವರ ಒಂದು ಕಾಲದಲ್ಲಿ ಬಾವಿಗಳಿಂದ ತುಂಬಿತ್ತು ಮತ್ತು ಇಡೀ ಪಟ್ಟಣವು ನೀರಿಗಾಗಿ ಇವುಗಳನ್ನೇ ಅವಲಂಬಿತವಾಗಿತ್ತು. ಆದರೆ ಇತರ ಮೂಲಗಳಿಂದ ಅವರ ಮನೆಗಳಿಗೆ ನೀರು ಬರಲು ಪ್ರಾರಂಭಿಸಿದಾಗ, ನಿವಾಸಿಗಳು ಬಾವಿಗಳನ್ನು ಬಳಸುವುದನ್ನು ನಿಲ್ಲಿಸಿದರು ಮತ್ತು ಅವುಗಳನ್ನು ಕಸದ ತೊಟ್ಟಿಗಳಾಗಿ ಪರಿವರ್ತಿಸಿದರು. 

ಆದರೆ ಈ ಯುವಕರು ಅಭಿಯಾನದ ಭಾಗವಾಗುವಂತೆ ಪ್ರೇರೇಪಿಸಲು ಇದು ಕಾರಣವಾಯಿತು. ಗ್ರಾಮ ಪಂಚಾಯಿತಿ ಸದಸ್ಯರು ಬಾವಿ ಸ್ವಚ್ಛಗೊಳಿಸಲು ನಿರ್ಧರಿಸಿ ಅಭಿಯಾನದ ಅಂಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕಿದ್ದು, ಪರಿಣಾಮ ಪಟ್ಟಣದಲ್ಲಿ ಬಾವಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಯುವಕರು ಮುಂದಾದರು. ಅಭಿಯಾನ ಆರಂಭಿಸಿದಾಗ ಯಾರೂ ಕೂಡ ಇದು ಇಷ್ಟರ ಮಟ್ಟಿಗೆ ಖ್ಯಾತಿ ಪಡೆಯುತ್ತದೆ ಎಂದು ಎಣಿಸಿರಲಿಲ್ಲ. ಆದರೆ ಈ ಒಂದು ಉತ್ತಮ ಕಾರ್ಯ ಇದೀಗ ಇತರರನ್ನು ಪ್ರೇರಿಪಿಸಿದ್ದು, ಅಭಿಯಾನವು ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲು ಪ್ರಾರಂಭಿಸಿದೆ.

ಈ ಅಮೂಲ್ಯವಾದ ನೀರಿನ ಮೂಲಗಳನ್ನು ಉಳಿಸುವ ಸಾಮಾಜಿಕ ಉಪಕ್ರಮದ ಭಾಗವಾಗಲು ಅನೇಕ ಸಂಘ ಸಂಸ್ಥೆಗಳು ಮುಂದೆ ಬಂದಿವೆ. ಕೆಲವು ಪರಿಸರವಾದಿಗಳು ಸಹ ಈ ಚಿತ್ರಗಳನ್ನು ಹಂಚಿಕೊಂಡಿದ್ದು, ಯುವಕರ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ನೀರಿನ ಮುಖ್ಯ ಮೂಲವಾಗಿರುವ ಹಳೆಯ ಬಾವಿಗಳ ಪ್ರಾಮುಖ್ಯತೆಯನ್ನು ಯುವಕರು ತಮ್ಮ ಅಮೂಲ್ಯ ಕಾರ್ಯದ ಮೂಲಕ ವಿವರಿಸುತ್ತಿದ್ದಾರೆ. ಅನೇಕ ಜಿಲ್ಲೆಗಳು, ಅಲ್ಲಿ ಹಳ್ಳಿಗರು ನೀರು ಪಡೆಯಲು ದೂರದವರೆಗೆ ಚಾರಣ ಮಾಡುತ್ತಾರೆ. ಆದರೆ ತಮ್ಮದೇ ಊರುಗಳಲ್ಲಿರುವ ಪಾಳುಬಿದ್ದ ಬಾವಿಗಳ ಕಡೆ ತಿರುಗಿಯೂ ನೋಡುವುದಿಲ್ಲ. ಆದರೆ ಯುವಕ ಈ ಅಭಿಯಾನ ಇದೀಗ ಇದಕ್ಕೆ ಉತ್ತರವಾಗಿ ನಿಂತಿದೆ.

ಫುಟಗಾವೊ ಬದ್ನಿ ಯೋಜನೆಯು ಜೂನ್ ಎರಡನೇ ವಾರದಲ್ಲಿ ಪ್ರಾರಂಭವಾಯಿತು. ಮುಂದಿನ 15 ದಿನಗಳಲ್ಲಿ 10 ಕ್ಕೂ ಹೆಚ್ಚು ಬಾವಿಗಳನ್ನು ಸ್ವಚ್ಛಗೊಳಿಸುವ ಕೆಲಸಗಳನ್ನು ಯುವಕರು ಮಾಡಿದರು. ಯುವಕರ ಈ ಕಾರ್ಯ ಸುದ್ದಿಗೆ ಗ್ರಾಸವಾಗುತ್ತಿದ್ದತೆಯೇ ಇದು ಕ್ರಮೇಣ ಅಭಿಯಾನವಾಗಿ ಮಾರ್ಪಟ್ಟಿತು. ಗದಗದಲ್ಲಿ ಇತಿಹಾಸಕಾರರು ಮತ್ತು ಪ್ರಾಧ್ಯಾಪಕರು ಜಿಲ್ಲೆಯ ಪ್ರಮುಖ ಕಲ್ಯಾಣಿಗಳನ್ನು ಪಟ್ಟಿ ಮಾಡಲು ನಿರ್ಧರಿಸಿದರು ಮತ್ತು ಮುಂದಿನ ಪೀಳಿಗೆಗೆ ಅವುಗಳನ್ನು ಸ್ವಚ್ಛಗೊಳಿಸುವ ಮತ್ತು ಸಂರಕ್ಷಿಸುವ ಮೂಲಕ ಚಳವಳಿಯು ಎಳೆತವನ್ನು ಪಡೆಯಿತು. ಸತತ ಬರಗಾಲದಿಂದ ತತ್ತರಿಸಿರುವ ನಗರ ಮತ್ತು ಗ್ರಾಮೀಣ ಜನರು ತಮ್ಮ ತಮ್ಮ ಪ್ರದೇಶಗಳಲ್ಲಿನ ಬಾವಿಗಳನ್ನು ಉಳಿಸಲು ಉತ್ಸುಕರಾಗುತ್ತಿದ್ದಾರೆ.

ಈ ಕುರಿತು ಲಕ್ಷ್ಮೇಶ್ವರದ ಹಿರಿಯ ನಾಗರಿಕರೊಬ್ಬರು ಮಾತನಾಡಿ, ಈ ಹಿಂದೆ ಬಾವಿಗಳು ಹಗಲು-ರಾತ್ರಿ ನೀರಿನ ಮೂಲವಾಗಿದ್ದವು. ಆದರೆ ಈಗ ಜನರು ನಲ್ಲಿಯ ನೀರಿಗೆ ಮೊರೆ ಹೋಗಿರುವುದರಿಂದ ಅವು ಶಿಥಿಲಾವಸ್ಥೆಯಲ್ಲಿವೆ. ಹಲವು ಬಾವಿಗಳನ್ನು ಮುಚ್ಚಲಾಗಿದೆ. ಬಾವಿಗಳನ್ನು ಸರಿಯಾಗಿ ನಿರ್ವಹಿಸಿದರೆ, ಬಿಕ್ಕಟ್ಟಿನ ಸಂದರ್ಭದಲ್ಲಿ ನೀರು ಪಡೆಯಲು ಮೈಲಿಗಟ್ಟಲೆ ನಡೆಯಬೇಕಾದ ಅಗತ್ಯವಿಲ್ಲ. ನಮ್ಮ ಪೂರ್ವಜರು ನೀರಿನ ಸುಲಭ ಲಭ್ಯತೆಗಾಗಿ ಬಾವಿಗಳನ್ನು ನಿರ್ಮಿಸಿದ್ದರು, ಆದರೆ ಈಗ ಜನರಿಗೆ ಬಾವಿಗಳಿಂದ ನೀರು ತುಂಬುವ ತಾಳ್ಮೆ ಇಲ್ಲ. ಅವು ಕಸದ ಬುಟ್ಟಿಗಳಾಗಿ ಪರಿವರ್ತನೆಯಾಗಿವೆ ಎಂದು ಹೇಳಿದರು.

ಅಭಿಯಾನದ ನೇತೃತ್ವ ವಹಿಸಿರುವ ಫುಟಗಾವೋ ಬದ್ನಿ ಗ್ರಾಮದ ನಿವಾಸಿ ಸತೀಶ ಪಾಟೀಲ ಮಾತನಾಡಿ, ನಮಗೆ ಉತ್ತಮ ಸ್ಪಂದನೆ ದೊರೆತಿದ್ದು, ಹಲವು ಯುವಕರು ಮುಂದೆ ಬಂದು ಹಳೆಯ ಬಾವಿಗಳನ್ನು ಸ್ವಚ್ಛಗೊಳಿಸಲು ಆಸಕ್ತಿ ತೋರುತ್ತಿರುವುದು ಸಂತಸ ತಂದಿದೆ. ಈಗ ಕಸದ ತೊಟ್ಟಿಗಳಾಗಿರುವ ಬಾವಿಗಳನ್ನು ಜನರು ನಿತ್ಯ ಉಪಯೋಗಿಸಿ ಸ್ವಚ್ಛಗೊಳಿಸಬೇಕು. ಜನರು ಸ್ವತಃ ಬಾವಿಗಳನ್ನು ಸ್ವಚ್ಛಗೊಳಿಸಲು ಸಾಧ್ಯವಾಗದಿದ್ದರೆ, ಅವರು ಅದನ್ನು ಮಾಡಲು ಯಾರನ್ನಾದರೂ ನೇಮಿಸಿಕೊಳ್ಳಬೇಕು. ನಾವು ಪ್ರತಿನಿತ್ಯ ಬಾವಿಗಳನ್ನು ಬಳಸಲು ಪ್ರಾರಂಭಿಸಿದರೆ, ಯುವ ಪೀಳಿಗೆ ಕೂಡ ಅವುಗಳನ್ನು ಬಳಸಲು ಕಲಿಯುತ್ತಾರೆ. ಯುವಕರಿಗೆ ಬಾವಿಯಿಂದ ಒಂದು ಮಡಕೆ ನೀರನ್ನು ಹೇಗೆ ಪಡೆಯುವುದು ಎಂದು ತಿಳಿದಿಲ್ಲ. ನಾವು ಅದನ್ನು ಅವರಿಗೆ ಕಲಿಸಬೇಕು. ನಾವು ಜಾಗೃತಿ ಮೂಡಿಸಲು ಬಯಸುತ್ತೇವೆ ಮತ್ತು ಅಭಿಯಾನದ ನಂತರ ನಾವು ಆ ಅಂಶದಲ್ಲಿಯೇ ಮುಂದುವರಿಯುತ್ತೇವೆ ಎಂದು ಹೇಳಿದರು.

ಫುಟಗಾವ್ ಬದ್ನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಲಮಾಣಿ ಮಾತನಾಡಿ, ‘ಬೇಸಿಗೆಯಲ್ಲಿ ನೀರಿಗಾಗಿ ನಿವಾಸಿಗಳು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರೆಲ್ಲರೂ ಸೇರಿ ಗ್ರಾಮದಲ್ಲಿನ ಬಳಕೆಯಾಗದ ಬಾವಿಯನ್ನು ಸ್ವಚ್ಛಗೊಳಿಸಲು ನಿರ್ಧರಿಸಿದರು. ಲಕ್ಷ್ಮೇಶ್ವರದ ಯುವಕರು ಬೇಸಿಗೆಯಲ್ಲಿ ನೀರಿನ ಬಿಕ್ಕಟ್ಟನ್ನು ತಗ್ಗಿಸಲು ಪ್ರೇರೇಪಿಸಿದರು. ಈಗ ನಾವು ಹಿರೇಬಾನ ಪ್ರದೇಶದ ಬಳಿ ಹಳೆಯ ಬಾವಿಯನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.

ಗದಗದಲ್ಲಿರುವ ಐತಿಹಾಸಿಕ ಬಾವಿಗಳು
ಗದಗದಲ್ಲಿ ಕಲ್ಯಾಣಿಗಳು ಅಥವಾ ಪುಷ್ಕರಣಿಗಳು ಎಂದು ಕರೆಯಲ್ಪಡುವ ಅನೇಕ ಐತಿಹಾಸಿಕ ಬಾವಿಗಳಿವೆ. ಲಕ್ಕುಂಡಿಯಲ್ಲಿ 101 ಬಾವಿಗಳಿದ್ದವು. ಮುಸುಕಿನ ಭಾವಿ, ಕಣ್ಣೇರ್ ಭಾವಿ, ಚಟೀರ ಭಾವಿ, ಸೂಡಿ ಗ್ರಾಮದ ನಾಗಕುಂದ, ಡಂಬಳದ ಜಪದ ಭಾವಿ, ತ್ರಿಕೂಟೇಶ್ವರ ದೇವಸ್ಥಾನದ ಬಾವಿ, ವೀರನಾರಾಯಣ ದೇವಸ್ಥಾನದ ಹಿಂಭಾಗದ ನರಸಿಂಹ ಹೊಂಡ, ವೀರನಾರಾಯಣ ದೇವಸ್ಥಾನದ ಬಳಿಯ ಕೋನೇರಿ ಹೊಂಡ ಮತ್ತು ಇತರ ಕೆಲವು ಮಾತ್ರ ಈಗ ಉಳಿದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com