ಜೈವಿಕ ತಾಯಿಯ ಮಡಿಲು ಸೇರಿದ ಮಗು
ಜೈವಿಕ ತಾಯಿಯ ಮಡಿಲು ಸೇರಿದ ಮಗು

ಒಂದೇ ಹೆಸರಿನ ಗೊಂದಲ: ಹುಟ್ಟಿದ ಕೂಡಲೇ ದೂರವಾಗಿದ್ದ ಶಿಶುವನ್ನು 3 ವರ್ಷದ ನಂತರ ಜೈವಿಕ ತಾಯಿಯ ಮಡಿಲು ಸೇರುವಂತೆ ಮಾಡಿದ ಕೋರ್ಟ್!

ಒಂದೇ ಹೆಸರಿನ ತಾಯಂದಿರಿಂದಾಗಿ ಬರೋಬ್ಬರಿ ಮೂರು ವರ್ಷಗಳ ಕಾಲ ಬೇರೆ ತಾಯಿಯ ಬಳಿ ಬೆಳೆದಿದ್ದ ಮಗು ಇದೀಗ ಜೈವಿಕ ತಾಯಿಯ ಮಡಿಲು ಸೇರಿದೆ. 
Published on

ಗುವಾಹಟಿ: ಒಂದೇ ಹೆಸರಿನ ತಾಯಂದಿರಿಂದಾಗಿ ಬರೋಬ್ಬರಿ ಮೂರು ವರ್ಷಗಳ ಕಾಲ ಬೇರೆ ತಾಯಿಯ ಬಳಿ ಬೆಳೆದಿದ್ದ ಮಗು ಇದೀಗ ಜೈವಿಕ ತಾಯಿಯ ಮಡಿಲು ಸೇರಿದೆ. 

ಅಂತಿಮವಾಗಿ ಡಿಎನ್ಎ ಪರೀಕ್ಷೆಯ ಮೂಲಕ ಅಸ್ಸಾಂನ ನ್ಯಾಯಾಲಯವು ನೈಜ್ಯ ತಾಯಿಯ ಜೊತೆಗೆ ಮಗುವನ್ನು ಒಂದುಗೂಡಿಸಿದೆ. 

2019ರ ಮೇ 3 ರಂದು, ನಜ್ಮಾ ಖಾನಮ್ ಎಂಬುವರು ಬಾರ್ಪೇಟಾದ ಫಕ್ರುದ್ದೀನ್ ಅಲಿ ಅಹ್ಮದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಐಸಿಯುಗೆ ಸೇರಿಸಲಾಯಿತು. ಹೀಗಾಗಿ ನವಜಾತ ಶಿಶುವನ್ನು ಮಕ್ಕಳ ಆರೈಕೆ ಕೋಣೆಗೆ ಸ್ಥಳಾಂತರಿಸಲಾಗಿತ್ತು. 

ಆಸ್ಪತ್ರೆಯ ಆಡಳಿತವು ಮರುದಿನ ಖಾನಮ್ ಅವರ ಪತಿಗೆ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ತಿಳಿಸಿತು. ಹುಟ್ಟಿದ ಸಮಯದಲ್ಲಿ ಮಗ ಆರೋಗ್ಯವಾಗಿದ್ದ ಕಾರಣ ದಂಪತಿಗಳು ಇದನ್ನು ಒಪ್ಪಲಿಲ್ಲ. ಆಸ್ಪತ್ರೆ ವಿರುದ್ಧ ಬಾರ್ಪೇಟಾ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆಯ ವೇಳೆ, ಗೋಸಾಯಿಗಾಂವ್‌ನ ನಜ್ಮಾ ಖಾತೂನ್ ತನ್ನ ನವಜಾತ ಶಿಶುಗೆ ಅದೇ ದಿನ ಅದೇ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದು ಅದು ಅಂದೇ ಸಾವನ್ನಪ್ಪಿದ್ದು ಎಂದು ಪೊಲೀಸರು ಪತ್ತೆ ಹಚ್ಚಿದರು.

ಕರ್ತವ್ಯದಲ್ಲಿದ್ದ ನರ್ಸ್ ಎರಡೂ ಶಿಶುಗಳ ಬಗ್ಗೆ ಗೊಂದಲಕ್ಕೊಳಗಾದರು ಮತ್ತು ಸತ್ತ ಮಗುವನ್ನು ನಜ್ಮಾ ಖಾನಮ್ ಅವರ ಪತಿಗೆ ಒಪ್ಪಿಸಿದರು. ಡಿಎನ್‌ಎ ಪರೀಕ್ಷೆಯ ಮೂಲಕ ಬಾಲಕನ ಜೈವಿಕ ಪೋಷಕರನ್ನು ಪತ್ತೆಹಚ್ಚಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ, ಇದು ಅವನ ಮೂಲ ಕುಟುಂಬದೊಂದಿಗೆ ಪುನರೇಕಿಸಲು ಕಾರಣವಾಯಿತು. 

2018ರಲ್ಲಿ ರಾಜ್ಯದ ಮಂಗಳದಾಯಿ ನ್ಯಾಯಾಲಯವು ಇದೇ ರೀತಿಯ ಸಮಸ್ಯೆಯನ್ನು ಪರಿಹರಿಸಿತ್ತು. ಎರಡು ಶಿಶುಗಳು ಒಂದು ಬುಡಕಟ್ಟು ದಂಪತಿಗೆ ಮತ್ತು ಇನ್ನೊಂದು ಮುಸ್ಲಿಂ ದಂಪತಿಗೆ ಜನಿಸಿತ್ತು. 2015ರಲ್ಲಿ ತಪ್ಪಾಗಿ ಆಸ್ಪತ್ರೆಯಲ್ಲಿ ಬದಲಾಯಿಸಲಾಯಿತು.

ಅವರು ಬೆಳೆಯಲು ಪ್ರಾರಂಭಿಸಿದಾಗ, ಅವರ ಪೋಷಕರು ಅವರು ವಿಭಿನ್ನವಾಗಿ ಕಾಣುವುದನ್ನು ಗಮನಿಸಿದರು. ಡಿಎನ್‌ಎ ಪರೀಕ್ಷೆಗಳು ಸರಿಯಾದ ಸಮಯದಲ್ಲಿ ಎಲ್ಲವನ್ನೂ ಬಹಿರಂಗಪಡಿಸಿತ್ತು. ನ್ಯಾಯಾಲಯದಲ್ಲಿ ಸಲ್ಲಿಸಿದ ಜಂಟಿ ಅರ್ಜಿಯಲ್ಲಿ ಕುಟುಂಬಗಳು ಬಾಲಕರನ್ನು ವಿನಿಮಯ ಮಾಡಿಕೊಳ್ಳಲು ಒಪ್ಪಿಕೊಂಡಿತ್ತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com