ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸಸಿಗಳಿಗೆ ನೀರುಣಿಸುವ ಯಂತ್ರ: ಮಂಗಳೂರು ದಂಪತಿಯಿಂದ ಆವಿಷ್ಕಾರ!

ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸಸಿಗಳಿಗೆ ನೀರು ಹಾಕೋರು ಯಾರು? ಇಂತಹದೊಂದು ಸಮಸ್ಯೆಗೆ ಮಂಗಳೂರಿನ ದಂಪತಿ ಪರಿಹಾರ ಕಂಡುಹಿಡಿದಿದ್ದಾರೆ.
ಸಂತೋಷ್ ಶೇಟ್ ಮತ್ತು ದೀಪಿಕಾ
ಸಂತೋಷ್ ಶೇಟ್ ಮತ್ತು ದೀಪಿಕಾ

ಮಂಗಳೂರು: ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸಸಿಗಳಿಗೆ ನೀರು ಹಾಕೋರು ಯಾರು? ಇಂತಹದೊಂದು ಸಮಸ್ಯೆಗೆ ಮಂಗಳೂರಿನ ದಂಪತಿ ಪರಿಹಾರ ಕಂಡುಹಿಡಿದಿದ್ದಾರೆ. ಐಟಿ ಉದ್ಯೋಗ ತೊರೆದಿರುವ ದೀಪಿಕಾ ಮತ್ತು ಸಂತೋಷ್ ಶೇಟ್, ಮನೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಮನೆಯ ಗಾರ್ಡನ್ ನಲ್ಲಿರುವ ಗಿಡಗಳಿಗೆ ನೀರು ಹಾಕುವುದಕ್ಕಾಗಿಯೇ ಸ್ಟಾರ್ಟ್ ಅಪ್ ಒಂದನ್ನು ತೆರೆದಿದ್ದಾರೆ.

ಇದರಿಂದ ಮುಂದಿನ ವರ್ಷ ಅಮೆರಿಕಾದಲ್ಲಿರುವ ತನ್ನ ಮಗನೊಂದಿಗೆ ಕಾಲ ಕಳೆಯಲು ಬಯಸಿದ್ದ ನಿವೃತ್ತ ಬ್ಯಾಂಕ್ ಉದ್ಯೋಗಿ ಕೆ. ಚಂದ್ರಹಾಸ ಮತ್ತು ಅವರ ಪತ್ನಿ ಶೋಭಾ ಇದೀಗ ನಿರಾಳರಾಗಿದ್ದಾರೆ. ಸಸಿಗಳಿಗೆ ನೀರು ಹಾಕುವುದು ಮಾತ್ರವಲ್ಲದೇ, ಅದನ್ನು ಮೊಬೈಲ್ ಮೂಲಕ ನೋಡಬಹುದಾಗಿದೆ. 

ಶೇಟ್ ದಂಪತಿ ಅಭಿವೃದ್ದಿಪಡಿಸಿರುವ ಈ ನೀರಿನ ಸ್ವಯಂಚಾಲಿತ ಉಪಕರಣ, ಐಒಟಿ (ಇಂಟರ್ ನೆಟ್ ಆಫ್ ಥಿಂಗ್ಸ್) ಪ್ಲಾಟ್ ಫಾರಂ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ ಮತ್ತು ಅದನ್ನು ವಿಶ್ವದ ಯಾವುದೇ ಮೂಲೆಯಲ್ಲಾದರೂ ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ನಿಂದ ನಿಯಂತ್ರಿಸಬಹುದಾಗಿದೆ. ದೀಪಿಕಾ ಮತ್ತು ಸಂತೋಷ್ ದಂಪತಿಯ ಒಂದು ವರ್ಷಗಳ ಶ್ರಮದಿಂದಾಗಿ ಇದನ್ನು ಅನ್ವೇಷಿಸಲಾಗಿದೆ. ಬಾಲ್ಯದಿಂದಲೂ ಸಸಿಗಳ ಮೇಲೆ ತುಂಬಾ ಪ್ರೀತಿ ಇರುವ ಈ ದಂಪತಿ, ನಗರ ಪ್ರದೇಶದಲ್ಲಿರುವ ದಂಪತಿಗಳು ತಮ್ಮ ಒತ್ತಡದ ಬದುಕಿನಲ್ಲಿ ಅಥವಾ ಬೇರೆ ಕಡೆಗೆ ಹೋದಾಗ ಗಾರ್ಡನ್ ಗೆ ನೀರಿನ ಕೊರತೆಯನ್ನು ತಪ್ಪಿಸುವ ನಿಟ್ಟನಿಲ್ಲಿ ಇದನ್ನು ಕಂಡುಹಿಡಿದ್ದಾರೆ. 

<strong>ಸಂತೋಷ್ ಶೇಟ್, ದೀಪಿಕಾ</strong>
ಸಂತೋಷ್ ಶೇಟ್, ದೀಪಿಕಾ

ಐಟಿ ಉದ್ಯೋಗ ನನಗೆ ಎಲ್ಲಾ ನೀಡಿತ್ತು. ಸುಮಾರು 15 ವರ್ಷಗಳ ವೃತ್ತಿ ಅವಧಿಯಲ್ಲಿ ಸಾಪ್ಟ್ ವೇರ್ ಡವಲರ್ಪರ್ ಆಗಿ ವಿಶ್ವದಾದ್ಯಂತ ಸುತ್ತಾಡಿದ್ದೇನೆ. ಆದರೆ, ಕಳೆದ ಎರಡು ವರ್ಷಗಳ ಹಿಂದೆ ಉದ್ಯೋಗ ತೊರೆದು, ಇದರಲ್ಲಿ ತೊಡಗಿಸಿಕೊಂಡಿದ್ದಾಗಿ ಸಂತೋಷ್ ತಿಳಿಸಿದರು. ಸಸಿಗಳ ಬಗ್ಗೆ ನನಗೂ ತುಂಬಾ ಪ್ರೀತಿ ಇದ್ದಿದ್ದರಿಂದ ಇದನ್ನು ಮಾಡಲು ಸಾಧ್ಯವಾಯಿತು. ಈ ಉಪಕರಣ ಅಭಿವೃದ್ಧಿ ಸಾಕಷ್ಟು ಸಮಯ, ಶ್ರಮವನ್ನು ವ್ಯಯಿಸಬೇಕಾಯಿತು ಎಂದು ಉಡುಪಿ ಮೂಲದ ದೀಪಿಕಾ ಹೇಳಿದರು. 

ಇಲ್ಲಿಯವರೆಗೂ ಮಂಗಳೂರಿನ ಐದು ಕಡೆಗಳಲ್ಲಿ ಈ ಉಪಕರಣವನ್ನು ಅಳವಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ http://www.ukshati.com or dial +918861567365 ಸಂಪರ್ಕಿಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com