ದೇಶ ವಿಭಜನೆಯಿಂದ ದೂರ: ಯೂಟ್ಯೂಬ್‌ನಿಂದಾಗಿ 75 ವರ್ಷಗಳ ಬಳಿಕ ಒಂದಾದ ಭಾರತ-ಪಾಕ್ ಸಹೋದರರು!
1947ರಲ್ಲಿ ವಿಭಜನೆಯಿಂದ ಬೇರ್ಪಟ್ಟ ನಂತರ ಭಾರತೀಯ ಸಿಕಾ ಖಾನ್ ತನ್ನ ಪಾಕಿಸ್ತಾನಿ ಸಹೋದರನನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಅವರ ಸಂತೋಷಕ್ಕೆ ಪಾರವೇ ಇಲ್ಲ.
Published: 12th August 2022 03:42 PM | Last Updated: 12th August 2022 04:36 PM | A+A A-

ಸಿಕಾ ಖಾನ್-ಸಾದಿಕ್ ಖಾನ್
ಬಟಿಂಡಾ: 1947ರಲ್ಲಿ ವಿಭಜನೆಯಿಂದ ಬೇರ್ಪಟ್ಟ ನಂತರ ಭಾರತೀಯ ಸಿಕಾ ಖಾನ್ ತನ್ನ ಪಾಕಿಸ್ತಾನಿ ಸಹೋದರನನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಅವರ ಸಂತೋಷಕ್ಕೆ ಪಾರವೇ ಇಲ್ಲ.
ವಸಾಹತುಶಾಹಿ ಆಳ್ವಿಕೆಯ ಕೊನೆಯಲ್ಲಿ ಬ್ರಿಟನ್ ಭಾರತ ಪಾಕ್ ಎಂದು ವಿಭಜಿಸಿದ್ದು ಇದರಿಂದಾಗಿ ಸಿಕಾ ಖಾನ್ ತನ್ನ ಹಿರಿಯ ಸಹೋದರ ಸಾದಿಕ್ ಖಾನ್ ರಿಂದ ಬೇರ್ಪಟ್ಟಿದ್ದರು. ಆಗ ಸಿಕಾಗೆ ಕೇವಲ ಆರು ತಿಂಗಳ ವಯಸ್ಸಾಗಿತ್ತು.
ಈ ವರ್ಷ ವಿಭಜನೆಯ 75ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು ಈ ಸಮಯದಲ್ಲಿ ಎರಡು ಕುಟುಂಬಗಳು ಒಂದಾಗುತ್ತಿವೆ. ವಿಭಜನೆಯಿಂದಾಗಿ ಎರಡು ಸ್ವತಂತ್ರ ರಾಷ್ಟ್ರಗಳು ಪಾಕಿಸ್ತಾನ ಮತ್ತು ಭಾರತ ರಚನೆಯಾಯಿತು.
ಸಿಕಾ ಅವರ ತಂದೆ ಮತ್ತು ಸಹೋದರಿ ಕೋಮು ಹತ್ಯಾಕಾಂಡದಲ್ಲಿ ಹತ್ಯೆಯಾದರು. ಆದರೆ ಕೇವಲ 10 ವರ್ಷ ವಯಸ್ಸಿನ ಸಾದಿಕ್ ಪಾಕಿಸ್ತಾನಕ್ಕೆ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದರು.
'ನನ್ನ ತಾಯಿ ಈ ಆಘಾತವನ್ನು ಸಹಿಸಲಾರದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸಿಕಾ ಪಶ್ಚಿಮ ಭಾರತದ ಪಂಜಾಬ್ ರಾಜ್ಯವಾದ ಭಟಿಂಡಾದಲ್ಲಿ ತನ್ನ ಸರಳ ಇಟ್ಟಿಗೆ ಮನೆಯಲ್ಲಿ ಹೇಳಿದ್ದಾರೆ. ವಿಭಜನೆ ವೇಳೆ ಹಿಂಸಾಚಾರದ ತೀವ್ರತೆ ಜೋರಾಗಿತ್ತು. ನನ್ನನ್ನು ಬೆಳೆಸಿದ ಗ್ರಾಮಸ್ಥರು ಮತ್ತು ಕೆಲವು ಸಂಬಂಧಿಕರ ಕರುಣೆಯಿಂದ ನಾನು ಉಳಿದಿದ್ದೇನೆ. ಬಾಲ್ಯದಿಂದಲೂ, ಸಿಕಾ ತನ್ನ ಕುಟುಂಬದಲ್ಲಿ ಉಳಿದಿರುವ ಏಕೈಕ ಸದಸ್ಯನಾದ ತನ್ನ ಸಹೋದರನ ಬಗ್ಗೆ ತಿಳಿದುಕೊಳ್ಳಲು ಹಂಬಲಿಸುತ್ತಿದ್ದರು.

ಹಲವಾರು ಫೋನ್ ಕರೆಗಳು ಮತ್ತು ಪಾಕಿಸ್ತಾನಿ ಯೂಟ್ಯೂಬರ್ ನಾಸಿರ್ ಧಿಲ್ಲೋನ್ ಅವರ ಸಹಾಯದ ನಂತರ, ಸಿಕಾ-ಸಾದಿಕ್ ಜೊತೆ ಮತ್ತೆ ಒಂದಾಗಲು ಸಾಧ್ಯವಾಯಿತು.
ಸಹೋದರರು ಅಂತಿಮವಾಗಿ ಜನವರಿಯಲ್ಲಿ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಭೇಟಿಯಾದರು. ಇದು ಅಪರೂಪದ, ವೀಸಾ-ಮುಕ್ತ ಕ್ರಾಸಿಂಗ್ ನಲ್ಲಿ ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ಪಾಕಿಸ್ತಾನದ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡುತ್ತದೆ.
2019ರಲ್ಲಿ ಪ್ರಾರಂಭವಾದ ಕಾರಿಡಾರ್, ಎರಡು ರಾಷ್ಟ್ರಗಳ ನಡುವಿನ ದೀರ್ಘಕಾಲದ ಹಗೆತನದ ಹೊರತಾಗಿಯೂ ಬೇರ್ಪಟ್ಟ ಕುಟುಂಬಗಳಿಗೆ ಏಕತೆ ಮತ್ತು ಸಾಮರಸ್ಯದ ಸಂಕೇತವಾಗಿದೆ.