ಮಗಳಿಗೆ ಒಂದು ವರ್ಷ ತುಂಬಿದ ಸಂಭ್ರಮ: 1.01 ಲಕ್ಷ ಪಾನಿಪುರಿ ಉಚಿತವಾಗಿ ವಿತರಿಸಿದ ವ್ಯಕ್ತಿ!
ತನ್ನ ಮಗಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಕೋಲಾರದಲ್ಲಿರುವ ವ್ಯಕ್ತಿಯೊಬ್ಬರು 1.01 ಲಕ್ಷ ಪಾನಿಪುರಿಗಳನ್ನು ಉಚಿತವಾಗಿ ವಿತರಿಸಿದ್ದಾರೆ.
Published: 19th August 2022 09:32 AM | Last Updated: 19th August 2022 02:38 PM | A+A A-

ಸಾಂದರ್ಭಿಕ ಚಿತ್ರ
ಭೋಪಾಲ್: ತನ್ನ ಮಗಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಕೋಲಾರದಲ್ಲಿರುವ ವ್ಯಕ್ತಿಯೊಬ್ಬರು 1.01 ಲಕ್ಷ ಪಾನಿಪುರಿಗಳನ್ನು ಉಚಿತವಾಗಿ ವಿತರಿಸಿದ್ದಾರೆ.
ಬೀದಿಬದಿಯ ಪ್ರಸಿದ್ಧ ತಿಂಡಿಯಾದ ಪಾನಿಪುರಿಯನ್ನು ಉಚಿತವಾಗಿ ನೀಡುವ ಮೂಲಕ 'ಬೇಟಿ ಬಚಾವೋ, ಬೇಟಿ ಪಢಾವೋ' ಎಂಬ ಸರ್ಕಾರದ ಯೋಜನೆಗೆ ಬೆಂಬಲ ನೀಡಿದ್ದಾರೆ.
ಆಂಚಲ್ ಗುಪ್ತಾ ಪಾನಿಪುರಿ ವ್ಯಾಪಾರಿಯಾಗಿದ್ದು, ತಮ್ಮ ಮಗಳು ಅನೋಖಿಯ 1ನೇ ವರ್ಷದ ಹುಟ್ಟುಹಬ್ಬ ಸಂಭ್ರಮಾಚರಣೆಯ ಅಂಗವಾಗಿ ಬುಧವಾರ ಬಂಜಾರಿ ಮೈದಾನದಲ್ಲಿ ದೊಡ್ಡ ಟೆಂಟ್‌ನ ಅಡಿಯಲ್ಲಿ 21 ಸ್ಟಾಲ್‌ಗಳನ್ನು ಸ್ಥಾಪಿಸಿ ಅಲ್ಲಿ ಪಾನಿಪುರಿ ವಿತರಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಶಿಕ್ಷಣದ ಅಗತ್ಯತೆಯ ಬಗ್ಗೆ ಸಂದೇಶವನ್ನು ಕಳುಹಿಸುವ ಉದ್ದೇಶದಿಂದ ಆಚರಣೆಯ ವೆಚ್ಚದ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಗುಪ್ತಾ ಹೇಳಿದ್ದಾರೆ, ಅಂಚಲ್ ಗುಪ್ತಾ ಅವರ ಈ ಕಾರ್ಯಕ್ಕೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಪ್ರಶಂಸಿಸಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದ ಸ್ಥಳೀಯ ಶಾಸಕ ರಾಮೇಶ್ವರ್ ಶರ್ಮಾರಿಂದ ಶ್ಲಾಘಿಸಿದ್ದಾರೆ.