ಕೇರಳ: ಸಂಗೀತವನ್ನೇ ಉಸಿರನ್ನಾಗಿರಿಸಿಕೂಂಡ ಮುಸ್ಲಿಂ ಕುಟುಂಬ!

ಕೇರಳದ ಕೋಝಿಕೋಡ್ ವಿನ ಮುಸ್ಲಿಂ ಕುಟುಂಬವೊಂದು ಸಂಗೀತವನ್ನೇ ಉಸಿರನ್ನಾಗಿಸಿಕೊಂಡಿದೆ. ಸಂಗೀತ ಹಾಗೂ ಮೃದಂಗ ಕಲಾವಿದರಾಗಿರುವ ಸಲೀಂ ಅವರ ಮೂವರು ಹೆಣ್ಣು ಮಕ್ಕಳು ಕೂಡಾ ಇದೇ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.
ಮೂವರು ಪುತ್ರಿಯರೊಂದಿಗೆ ಮುಕ್ಕಂ ಸಲೀಂ
ಮೂವರು ಪುತ್ರಿಯರೊಂದಿಗೆ ಮುಕ್ಕಂ ಸಲೀಂ
Updated on

ಕೋಝಿಕೋಡ್: ಕೇರಳದ ಕೋಝಿಕೋಡ್ ವಿನ ಮುಸ್ಲಿಂ ಕುಟುಂಬವೊಂದು ಸಂಗೀತವನ್ನೇ ಉಸಿರನ್ನಾಗಿಸಿಕೊಂಡಿದೆ. ಸಂಗೀತ ಹಾಗೂ ಮೃದಂಗ ಕಲಾವಿದರಾಗಿರುವ ಸಲೀಂ ಅವರ ಮೂವರು ಹೆಣ್ಣು ಮಕ್ಕಳು ಕೂಡಾ ಇದೇ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.

ಹೆಣ್ಣುಮಕ್ಕಳಿಗೆ ಅದರಲ್ಲೂ ಕಲಾ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ನೀಡಬೇಕೆ? ಮುಕ್ಕಂ ಸಲೀಂಗೆ ಆಗಾಗ ಕೇಳಲಾಗುವ ಪ್ರಶ್ನೆಯಿದು, ಆದರೆ, ಅವರು ಈ ವಿಚಾರದಲ್ಲಿ ಅಚಲ ನಿರ್ಧಾರ ಹೊಂದಿದ್ದಾರೆ. ಸಲೀಂ, ಇದೀಗ ಲಯನಂ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಕಲಾ ಕೇಂದ್ರದ ನಿರ್ವಹಣೆ ಮಾಡುತ್ತಿದ್ದಾರೆ.

ಇದನ್ನು ಅವರ ತಂದೆಯವರು ತಮ್ಮ ಊರಿನಲ್ಲಿ ಸ್ಥಾಪಿಸಿದ್ದರು. ಇದು 60 ವರ್ಷಗಳಿಂದ ಸಂಗೀತ, ನೃತ್ಯ ಮತ್ತು ವಾದ್ಯಗಳಲ್ಲಿ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಅವರ ಮೂವರು ಹೆಣ್ಣುಮಕ್ಕಳು ಈಗಾಗಲೇ ಕಲಾ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ತಿರುವನಂತಪುರಂನ ಸ್ವಾತಿ ತಿರುನಾಳ್ ಕಾಲೇಜ್ ನಲ್ಲಿ ಒಂದು ವರ್ಷದ ಹಿಂದೆ ಗಾನ ಪ್ರವೀಣ (ಡಿಪ್ಲೋಮಾ ಕೋರ್ಸ್) ಪದವಿ ಪಡೆದಾಗ, ನನ್ನ ಸಮುದಾಯದಿಂದ ಮೃದಂಗದಲ್ಲಿ ತರಬೇತಿ ಪಡೆದ ಏಕೈಕ ಕಲಾವಿದೆ ನಾನು 'ಎಂದು ನೆನಪಿಸಿಕೊಳ್ಳುತ್ತಾರೆ ಸಲೀಂ. ಇವರು ಕಳೆದ 28 ವರ್ಷಗಳಿಂದ ಸಂಗೀತದ ತರಬೇತಿ ನೀಡುತ್ತಿದ್ದಾರೆ.

ಈಗಲೂ, ನಾವು ಇತರರಿಗೆ ಹೋಲಿಸಿದರೆ ಕಡಿಮೆ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ನಡೆಸುತ್ತೇವೆ. ನನ್ನನ್ನು ಸಂಗೀತ ಕಚೇರಿಗೆ ಕರೆದರೆ ಯಾರಾದರೂ ತೊಂದರೆ ನೀಡುತ್ತಾರೆ ಎಂದು ಅನೇಕ ಆಯೋಜಕರು ಹೆದರುತ್ತಾರೆ. ಈ ಕ್ಷೇತ್ರದಲ್ಲಿ ಹುಡುಗಿಯರು  ಸಕ್ರಿಯರಾಗಿದ್ದಾರೆಯೇ, ಹಾಗಿದ್ದಲ್ಲಿ ಸಮುದಾಯದಿಂದ ಉತ್ತಮ ಒಡನಾಟ ಸಿಗುತ್ತದೆಯೇ ಎಂದು ಹಲವರು ಕೇಳುತ್ತಾರೆ ಎಂದು ಸಲೀಂ ಹೇಳುತ್ತಾರೆ.

ಅಂತಹ ಎಲ್ಲಾ ಪ್ರಶ್ನೆಗಳನ್ನು ಸ್ವತಃ ಎದುರಿಸಿದ ಸಲೀಂ ಅವರ ಹಿರಿಯ ಮಗಳು ಸುಹಾನಾ ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯ ಸ್ನಾತಕೋತ್ತರ ಕೋರ್ಸ್‌ನಲ್ಲಿ ಮೊದಲ ರ‍್ಯಾಂಕ್ ಗಳಿಸಿದ್ದಾರೆ. ಅವರು ಇತ್ತೀಚೆಗೆ ಸಂಸ್ಕೃತಿ ಸಚಿವಾಲಯದಿಂದ ಸ್ಥಾಪಿಸಲಾದ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಅಂಡ್ ಟ್ರೈನಿಂಗ್ (CCRT) ಯುವ ಕಲಾವಿದರ ವಿದ್ಯಾರ್ಥಿವೇತನವನ್ನು ಪಡೆದಿದ್ದಾರೆ.

ಸಲೀಂ ಅವರ ಎರಡನೆಯ ಮಗಳು, ನಾಶಿಧಾ ಕೂಡ ಕೇರಳ ವಿಶ್ವವಿದ್ಯಾಲಯದ ಅಡಿಯಲ್ಲಿ ಸ್ವಾತಿ ತಿರುನಾಳ್ ಕಾಲೇಜಿನಿಂದ ವೀಣಾದಲ್ಲಿ ಸ್ನಾತಕೋತ್ತರ ಕೋರ್ಸ್‌ನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಕಿರಿಯ ಮಗಳು ಲಿಯಾನಾ, ತ್ರಿಪುಣಿತುರಾದ ಆರ್‌ಎಲ್‌ವಿ ಕಾಲೇಜಿನಲ್ಲಿ ಮೂರನೇ ವರ್ಷದ ಬಿಎ (ಪಿಟೀಲು) ವಿದ್ಯಾರ್ಥಿನಿಯಾಗಿದ್ದಾರೆ. 

"ನನ್ನ ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ಅವರ ಸಾಮರ್ಥ್ಯ ಗುರುತಿಸಲು ಮತ್ತು ಅವರಿಂದಲೇ ವೃತ್ತಿಯನ್ನು ಮಾಡಲು ನಾನು ಯಾವಾಗಲೂ ಪ್ರೋತ್ಸಾಹಿಸುತ್ತೇನೆ ಎಂದು ಸಲೀಮ್ ಹೇಳುತ್ತಾರೆ. ಪಾಲಕ್ಕಾಡ್‌ನ ಚೆಂಬೈ ಸ್ಮಾರಕ ಸರ್ಕಾರಿ ಸಂಗೀತ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಸಲೀಂ ಅವರು ಗಾನಭೂಷಣಂ ಶೀರ್ಷಿಕೆಯೊಂದಿಗೆ ತಮ್ಮ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ ಮತ್ತು ಪಿ ಲೀಲಾ ಮತ್ತು ಕಲಾಮಂಡಲಂ ಹೈದರಾಲಿ ಅವರಂತಹ ಸಂಗೀತಗಾರರೊಂದಿಗೆ ಕೆಲಸ ಮಾಡಿದ್ದಾರೆ.

ಆಲ್ ಇಂಡಿಯನ್ ರೇಡಿಯೊದಲ್ಲಿ ಗ್ರೇಡ್ 'ಬಿ' ಕಲಾವಿದ ಆಗಿರುವ ಸಲೀಂ ಅವರು ಮಲಪ್ಪುರಂನ ಕ್ರೆಸೆಂಟ್ ಎಚ್‌ಎಸ್‌ಎಸ್‌ನಲ್ಲಿ ಸಂಗೀತ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಲಾಕ್‌ಡೌನ್‌ನ ನಂತರ ಕಲಾ ಪ್ರದರ್ಶನ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿವೆ. ನಮಗೆ ಶಾಸ್ತ್ರೀಯ ನೃತ್ಯ ಕಾರ್ಯಕ್ರಮಗಳಿಗೆ ಆಫರ್‌ಗಳು ಬರುತ್ತಿವೆ ಎಂದು ಹೇಳುವ ಸಲೀಂ,  ಹೆಚ್ಚಿನ ಮಹಿಳೆಯರು ಕಲಾ ಕ್ಷೇತ್ರಕ್ಕೆ ಕಾಲಿಡುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com