ಎವರೆಸ್ಟ್ ಬೇಸ್ ಕ್ಯಾಂಪ್ ತಲುಪಿದ ಭಾರತೀಯ ಮೂಲದ 6 ವರ್ಷದ ಬಾಲಕ, ಸಿಂಗಾಪುರದ ಅತ್ಯಂತ ಕಿರಿಯ ವ್ಯಕ್ತಿ
ಭಾರತೀಯ ಮೂಲದ ಆರು ವರ್ಷದ ಬಾಲಕ ಓಂ ಮದನ್ ಗಾರ್ಗ್ ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣ ಪೂರ್ಣಗೊಳಿಸಿದ ಸಿಂಗಾಪುರದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ. ಬಾಲಕನ...
Published: 06th December 2022 08:34 PM | Last Updated: 07th December 2022 04:16 PM | A+A A-

ಪೋಷಕರೊಂದಿಗೆ ಓಂ ಮದನ್ ಗಾರ್ಗ್
ಸಿಂಗಾಪುರ: ಭಾರತೀಯ ಮೂಲದ ಆರು ವರ್ಷದ ಬಾಲಕ ಓಂ ಮದನ್ ಗಾರ್ಗ್ ನೇಪಾಳದ ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣ ಪೂರ್ಣಗೊಳಿಸಿದ ಸಿಂಗಾಪುರದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರನಾಗಿದ್ದಾನೆ. ಬಾಲಕನ ಈ ಸಾಧನೆಯು ಸಿಂಗಾಪುರ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.
ಓಂ ಮದನ್ ಗಾರ್ಗ್ ಕಳೆದ ಅಕ್ಟೋಬರ್‌ನಲ್ಲಿ ತಮ್ಮ ಪೋಷಕರೊಂದಿಗೆ ಪರ್ವತಾರೋಹಣ ಆರಂಭಿಸಿದ್ದರು. 10 ದಿನಗಳಲ್ಲಿ 65 ಕಿಮೀ ಚಾರಣ ಮಾಡಿ 5,364 ಮೀಟರ್ ಎತ್ತರದಲ್ಲಿರುವ ನೇಪಾಳದ ದಕ್ಷಿಣ ಬೇಸ್ ಕ್ಯಾಂಪ್ ಅನ್ನು ತಲುಪಿದ್ದರು.
ಓಂ ಮದನ್ ಗಾರ್ಗ್ ನ ಈ ಸಾಹಸ ಹೊಸದೇನಲ್ಲ. ಆತನಿಗೆ ಕೇವಲ ಎರಡೂವರೆ ವರ್ಷ ಇದ್ದಾಗಲೇ ಆತನ ಪೋಷಕರು ವಿಯೆಟ್ನಾಂ, ಥೈಲ್ಯಾಂಡ್ ಮತ್ತು ಲಾವೋಸ್‌ಗೆ ಬ್ಯಾಕ್‌ಪ್ಯಾಕಿಂಗ್ ಪ್ರವಾಸಗಳಿಗೆ ಕರೆದೊಯ್ದಿದ್ದಾರೆ.
ಇದನ್ನು ಓದಿ: ವಿಶೇಷಚೇತನ ಮಕ್ಕಳಿಗೆ ಕೌಶಲ್ಯ ತರಬೇತಿ: ಸ್ವಚ್ಛ ಭಾರತ, ಆತ್ಮನಿರ್ಭರ ಕನಸಿಗೆ 'ಚೆಶರ್ ಹೋಮ್ಸ್ ಇಂಡಿಯಾ ಕೂರ್ಗ್' ಸಂಸ್ಥೆ ಪ್ರೇರಣೆ
ಓಂ, ಅವರ ತಂದೆ ಮಯೂರ್ ಗರ್ಗ್(38) ಮತ್ತು ತಾಯಿ ಗಾಯತ್ರಿ ಮಹೇಂದ್ರಮ್(39) ಅವರು ಮಾರ್ಗದರ್ಶಕ ಮತ್ತು ಇಬ್ಬರು ಪೋರ್ಟರ್‌ಗಳ ಸಹಾಯದೊಂದಿಗೆ ಸೆಪ್ಟೆಂಬರ್ 28 ರಂದು ತಮ್ಮ 10 ದಿನಗಳ ಪರ್ವತಾರೋಹಣ ಪೂರ್ಣಗೊಳಿಸಿದ್ದಾರೆ ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ಪತ್ರಿಕೆ ಸೋಮವಾರ ವರದಿ ಮಾಡಿದೆ.