ಹಜ್ ಯಾತ್ರೆ: ಯುಕೆ ಯಿಂದ 6,500 ಕಿ.ಮೀ ಕಾಲ್ನಡಿಗೆಯಲ್ಲಿ ಮೆಕ್ಕಾ ತಲುಪಿದ ವ್ಯಕ್ತಿ

ಈ ಬಾರಿಯ ಹಜ್ ಯಾತ್ರೆಗಾಗಿ ಇರಾಕಿ- ಕುರ್ದಿಶ್ ಮೂಲದ ಬ್ರಿಟಿಷ್ ವ್ಯಕ್ತಿಯೊಬ್ಬರು ಇಂಗ್ಲೆಂಡ್ ನ ವಾಲ್ಟರ್ ಹ್ಯಾಂಪ್ಟ್ ನಿಂದ 6,500 ಕಿ.ಮೀ ಕಾಲ್ನಡಿಗೆಯಲ್ಲಿ ಮೆಕ್ಕಾ ತಲುಪಿದ್ದಾರೆ.
ಇರಾಕ್ ನ ವ್ಯಕ್ತಿ
ಇರಾಕ್ ನ ವ್ಯಕ್ತಿ

ಲಂಡನ್: ಈ ಬಾರಿಯ ಹಜ್ ಯಾತ್ರೆಗಾಗಿ ಇರಾಕಿ- ಕುರ್ದಿಶ್ ಮೂಲದ ಬ್ರಿಟಿಷ್ ವ್ಯಕ್ತಿಯೊಬ್ಬರು ಇಂಗ್ಲೆಂಡ್ ನ ವಾಲ್ಟರ್ ಹ್ಯಾಂಪ್ಟ್ ನಿಂದ 6,500 ಕಿ.ಮೀ ಕಾಲ್ನಡಿಗೆಯಲ್ಲಿ ಮೆಕ್ಕಾ ತಲುಪಿದ್ದಾರೆ.

52 ವರ್ಷದ ಆಡಮ್ ಮೊಹಮ್ಮದ್ , ನೆದರ್ ಲ್ಯಾಂಡ್ಸ್, ಜರ್ಮನಿ, ಆಸ್ಟ್ರೀಯಾ, ಹಂಗೇರಿ, ಸರ್ಬಿಯಾ, ಬಲ್ಗೇರಿಯಾ, ಟರ್ಕಿ, ಲೆಬನಾನ್ ಮತ್ತು ಜೋರ್ಡಾನ್ ಮೂಲಕ 10 ತಿಂಗಳು ಮತ್ತು 25 ದಿನಗಳಲ್ಲಿ 6,500 ಕಿಲೋ ಮೀಟರ್ ದೂರ ಕ್ರಮಿಸಿ, ಸೌದಿ ಅರಬೀಯಾವನ್ನು ತಲುಪಿದ್ದಾರೆ. 

ಆಗಸ್ಟ್ 1,2021 ರಂದು ಯುಕೆಯಲ್ಲಿ ಕಾಲ್ನಡಿಗೆ ಆರಂಭಿಸಿದ ಆಡಮ್ ಮೊಹಮ್ಮದ್ ಕಳೆದ ತಿಂಗಳು ಸೌದಿ ಅರೇಬಿಯಾಕ್ಕೆ ಆಗಮಿಸಿದ್ದಾರೆ. ಆಡಮ್ ಪ್ರತಿದಿನ ಸರಾಸರಿ 17.8 ಕಿ.ಮೀ ದೂರ ಕ್ರಮಿಸಿದ್ದಾರೆ. ಶಾಂತಿ ಮತ್ತು ಸಮಾನತೆಯ ಸಂದೇಶ ಸಾರುವುದು ಅವರ ಉದ್ದೇಶವಾಗಿತ್ತು ಎಂದು ಅಲ್ ಜಜೀರಾ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com