ಮಕ್ಕಳಿಗೆ ಬ್ಯಾಂಕಿಂಗ್ ಬಗ್ಗೆ ಕಲಿಸಲು ತನ್ನದೇ ಬ್ಯಾಂಕ್ ಆರಂಭಿಸಿದ ಕೊಡಗಿನ ಸರ್ಕಾರಿ ಶಾಲೆ!

ಬಾಲ್ಯದಲ್ಲಿ ಕಲಿತ ಪ್ರಾಯೋಗಿಕ ಜ್ಞಾನ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಆದ್ದರಿಂದ, ಸಾಂಪ್ರದಾಯಿಕ ಶಿಕ್ಷಣದ ಬದಲ ಪ್ರಾಯೋಗಿಕ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ...
ಸ್ಕೂಲ್ ಬ್ಯಾಂಕ್ ಆಫ್ ಮುಳ್ಳೂರ್
ಸ್ಕೂಲ್ ಬ್ಯಾಂಕ್ ಆಫ್ ಮುಳ್ಳೂರ್

ಮಡಿಕೇರಿ: ಬಾಲ್ಯದಲ್ಲಿ ಕಲಿತ ಪ್ರಾಯೋಗಿಕ ಜ್ಞಾನ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಆದ್ದರಿಂದ, ಸಾಂಪ್ರದಾಯಿಕ ಶಿಕ್ಷಣದ ಬದಲ ಪ್ರಾಯೋಗಿಕ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು, ತನ್ನ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಲಭ ರೀತಿಯಲ್ಲಿ ಪರಿಚಯಿಸಲು ತನ್ನದೇ ಬ್ಯಾಂಕ್ ವೊಂದನ್ನು ಆರಂಭಿಸಿದೆ.

ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ SBM - ಸ್ಕೂಲ್ ಬ್ಯಾಂಕ್ ಆಫ್ ಮುಳ್ಳೂರ್ ಅನ್ನು ಆರಂಭಿಸಲಾಗಿದೆ ಮತ್ತು ಬ್ಯಾಂಕ್ ನಲ್ಲಿ ಪ್ರತಿ ವಿದ್ಯಾರ್ಥಿಗೆ ಪ್ರತ್ಯೇಕ ಲಾಕರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪಾಲಕರು ತಮಗೆ ಕೊಡುವ ಪಾಕೆಟ್ ಮನಿಯಿಂದ ಜಂಕ್‌ ಫುಡ್‌ಗಳನ್ನು ಖರೀದಿಸುವ ಬದಲು ಆ ನಗದನ್ನು ಈ ಶಾಲಾ ಬ್ಯಾಂಕ್‌ಗೆ ಜಮೆ ಮಾಡುತ್ತಿದ್ದಾರೆ. ಇದು ಉಳಿತಾಯವನ್ನು ಸಕ್ರಿಯಗೊಳಿಸಲು ಮತ್ತು ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತಿದೆ.  ಶಾಲೆಯ ಎಲ್ಲಾ 37 ವಿದ್ಯಾರ್ಥಿಗಳು ಈಗ ತಮ್ಮ ಉಳಿತಾಯದ ಹಣವನ್ನು ಹೆಚ್ಚಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಬ್ಯಾಂಕಿಂಗ್ ಪ್ರಕ್ರಿಯೆಯನ್ನು ಸಲೀಸಾಗಿ ಕಲಿಯುತ್ತಿದ್ದಾರೆ.

ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸುವ ಉದ್ದೇಶದಿಂದ, ನಾವು ನಮ್ಮ ಶಾಲೆಯಲ್ಲಿ ಈ ಬ್ಯಾಂಕ್ ಅನ್ನು ಪ್ರಾರಂಭಿಸಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಲಾಕರ್ ಇದೆ ಮತ್ತು ಕೈಯಿಂದ ಮಾಡಿದ ಪಾಸ್‌ಬುಕ್‌ಗಳು ಮತ್ತು ಚೆಕ್‌ಗಳನ್ನು ಹಸ್ತಾಂತರಿಸಲಾಗಿದೆ. ನಾವು ಮಕ್ಕಳಲ್ಲೇ ಕೆಲವರನ್ನು ಬ್ಯಾಂಕ್ ಸಿಬ್ಬಂದಿಯಾಗಿ ನೇಮಿಸಿದ್ದೇವೆ ಮತ್ತು ಅವರು ಪಾಸ್‌ಬುಕ್ ಗಳಲ್ಲಿ ನಮೂದಿಸುತ್ತಾರೆ ಎಂದು ಶಾಲೆಯ ಶಿಕ್ಷಕ ಸತೀಶ್ ಅವರು ವಿವರಿಸಿದ್ದಾರೆ.

ವಿದ್ಯಾರ್ಥಿಗಳ ಉಳಿತಾಯ 100 ರೂ. ದಾಟುತ್ತಿದ್ದಂತೆ ಅವರಿಗೆ ಬೋನಸ್ ಆಗಿ ಪೆನ್ಸಿಲ್ ನೀಡಲಾಗುತ್ತದೆ. ಅದೇ ರೀತಿ, ಉಳಿತಾಯವು 200 ರೂ.ಗೆ ತಲುಪಿದಾಗ ಪೆನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಮತ್ತು 300 ರೂ.ಗಳನ್ನು ದಾಟಿದಾಗ ನೋಟ್ಬುಕ್ ಅನ್ನು ಹಸ್ತಾಂತರಿಸಲಾಗುತ್ತದೆ. ಉಳಿತಾಯವು ರೂ. 500 ಅನ್ನು ತಲುಪಿದರೆ ವಿದ್ಯಾರ್ಥಿಗಳಿಗೆ ಬಡ್ಡಿದರಗಳ ಬಗ್ಗೆ ಅರ್ಥಮಾಡಿಕೊಡಲಾಗುತ್ತದೆ ಮತ್ತು ಶಿಕ್ಷಕರಿಂದ ಶೇ 5 ಬಡ್ಡಿಯನ್ನು ವಿದ್ಯಾರ್ಥಿಗೆ ಪಾವತಿಸಲಾಗುತ್ತದೆ.  ಈ ಉಳಿತಾಯವು ರೂ 1000 ತಲುಪಿದಾಗ, ಮೊತ್ತವನ್ನು ಮಗುವಿನ ನಿಜವಾದ ಬ್ಯಾಂಕ್ ಖಾತೆಗೆ ಆನ್‌ಲೈನ್‌ನಲ್ಲಿ ವರ್ಗಾಯಿಸಲಾಗುತ್ತದೆ ಎಂದು ಸತೀಶ್ ಹೇಳಿದ್ದಾರೆ.

ವಿದ್ಯಾರ್ಥಿಗಳು ಚಲನ್ ಅನ್ನು ತುಂಬಬೇಕು ಮತ್ತು ಚೆಕ್ ಮೂಲಕ ಹಣವನ್ನು ಹಿಂಪಡೆಯಬೇಕು - ಇವೆಲ್ಲವೂ ವಿದ್ಯಾರ್ಥಿಗಳ ಕೈಯಿಂದಲೇ ಮಾಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ನಾನು ಆಗಾಗ್ಗೆ ಜಂಕ್ ಫುಡ್‌ಗಾಗಿ ಹಣವನ್ನು ಖರ್ಚು ಮಾಡುತ್ತಿದ್ದೆ. ಆದರೆ ಈಗ ಆ ಹಣವನ್ನು ಸಂಗ್ರಹಿಸಿ ಶಾಲೆಯ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದೇನೆ’ ಎಂದು ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ನವ್ಯಾ ಎಂವೈ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com