ಕೊಡಗು ಸಮಸ್ಯೆಗಳಿಗಾಗಿ ಹೋರಾಡುತ್ತಿರುವ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ!

ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಪಣತೊಟ್ಟಿರುವ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯು ಕೊಡಗಿನ ಸಮಸ್ಯೆಗಳಿಗೆ ಹೋರಾಟಗಳನ್ನು ನಡೆಸುತ್ತಿದೆ.
ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಆಯೋಜಿಸಿದ್ದ ಪ್ರಕೃತಿ ಜಾಗೃತಿ ಚಾರಣದಲ್ಲಿ ಭಾಗವಹಿಸಿದ್ದ ಜನರು.
ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಆಯೋಜಿಸಿದ್ದ ಪ್ರಕೃತಿ ಜಾಗೃತಿ ಚಾರಣದಲ್ಲಿ ಭಾಗವಹಿಸಿದ್ದ ಜನರು.

ಮಡಿಕೇರಿ: ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಪಣತೊಟ್ಟಿರುವ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯು ಕೊಡಗಿನ ಸಮಸ್ಯೆಗಳಿಗೆ ಹೋರಾಟಗಳನ್ನು ನಡೆಸುತ್ತಿದೆ.

ಎನ್'ಜಿಒ ಸಂಸ್ಥೆಯಾಗಿರುವ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯು ಸ್ಟಿಕರ್ ವೊಂದನ್ನು ಹೊಂದಿದ್ದು, ಸಾಂಬಾರ್ ಜಿಂಕೆಯ ಚಿತ್ರ, ತ್ರಿಕೋನಾಕಾರದ ಹಸಿರು-ಹಸಿರು ಬಣ್ಣವುಳ್ಳ ಸ್ಟಿಕರ್ ಇದಾಗಿದೆ. ಈ ಸ್ಟಿಕರ್ ಗಳು ಸ್ಥಳೀಯ ನಿವಾಸಿಗಳನ್ನು ಮನ ಮುಟ್ಟಿತ್ತಿದ್ದು, ಪರಿಸರ ಸಂರಕ್ಷಣೆಯ ಸಂದೇಶವನ್ನು ರವಾನಿಸುತ್ತಿದೆ. 

1980ರಲ್ಲಿ ಸ್ಥಾಪನೆಯಾದ ಕೂರ್ಗ್ ವೈಲ್ಡ್‌ಲೈಫ್ ಸೊಸೈಟಿ (ಸಿಡಬ್ಲ್ಯೂಎಸ್)ಯು ಕೊಡಗಿನ ವನ್ಯಜೀವಿ ಸಂರಕ್ಷಣೆ ಹಾಗೂ ಇತರೆ ಸಮಸ್ಯೆಗಳ ಪರಿಹರಿಸುವ ಕಾರ್ಯಗಳನ್ನು ಮಾಡುತ್ತಿದೆ. ಸೊಸೈಟಿಯು ವನ್ಯಜೀವಿಗಳನ್ನು ರಕ್ಷಿಸುವುದಷ್ಟೇ ಅಲ್ಲದೆ, ವನ್ಯಜೀವಿಗಳು, ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಮಕ್ಕಳಿಗೆ ಮತ್ತು ಸ್ಥಳೀಯ ಜನರಿಗೆ ಶಿಕ್ಷಣ ನೀಡುವ ಕೆಲಸವನ್ನು ಮಾಡುತ್ತಿದೆ ಎಂದು ಕೂರ್ಗ್ ವೈಲ್ಡ್‌ಲೈಫ್ ಸೊಸೈಟಿ (ಸಿಡಬ್ಲ್ಯುಎಸ್) ಅಧ್ಯಕ್ಷ ಕೆ.ಎ.ಚೆಂಗಪ್ಪ ಅವರು ಹೇಳಿದ್ದಾರೆ. 

ಪರಿಸರ ಸಂರಕ್ಷಣೆಗಾಗಿ ನಮ್ಮ ಸಂಸ್ಥೆ ಸಾಕಷ್ಟು ಹೋರಾಟ ನಡೆಸಿದೆ. ಇದು ಸರ್ಕಾರದ ನೀತಿಗಳು ಮತ್ತು ಕಾನೂನುಗಳು ವನ್ಯಜೀವಿಗಳನ್ನು ರಕ್ಷಿಸಲು ಮತ್ತು ವನ್ಯಜೀವಿ ಸ್ನೇಹಿ ಭೂ ನಿರ್ವಹಣೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಸೊಸೈಟಿ ಮಾಡಿರುವ ಹಲವು ಹೋರಾಟಗಳಲ್ಲಿ ಮಹಶೀರ್ ಮೀನು ಸಂರಕ್ಷಣೆ ಹೋರಾಟ ಪ್ರಮುಖವಾಗಿದೆ. 35 ವರ್ಷಗಳ ಹಿಂದೆ, ಅಳಿವಿನಂಚಿನಲ್ಲಿರುವ ಮಹಶೀರ್ ಮೀನು ಪ್ರಭೇದಗಳ ಸಂರಕ್ಷಣೆಗಾಗಿ ಅಭಿಯಾನ ಆರಂಭಿಸಲಾಗಿತ್ತು. ಇದಕ್ಕಾಗಿ ಸೊಸೈಟಿಯು ಸಿದ್ದಾಪುರದ ಬಳಿ ಕಾವೇರಿ ನದಿಯ 35 ಕಿಮೀ ವ್ಯಾಪ್ತಿಯನ್ನು ಗುತ್ತಿಗೆಗೆ ನೀಡಿತ್ತು. ಇಂದು, ಸಂಸ್ಥೆಯು ಮಹಶೀಲ್ ಮೀನು ಬೇಟೆ ನಿಗ್ರಹಿಸುವಲ್ಲಿ ಯಶಸ್ವಿಯಾಗಿದೆ ಮತ್ತು ಮೀನು ವೈವಿಧ್ಯತೆಯನ್ನು ಪುನರುಜ್ಜೀವನಗೊಳಿಸಲು ದೊಡ್ಡ ಪ್ರಮಾಣದ ಸಂತಾನೋತ್ಪತ್ತಿ ಕಾರ್ಯಕ್ರಮವನ್ನು ಸ್ಥಾಪಿಸಿದೆ.

ಸಿಡಬ್ಲ್ಯುಎಸ್‌ನ ಪ್ರಯತ್ನದಿಂದಾಗಿ 35 ಕಿಮೀ ನದಿಯ ಉದ್ದಕ್ಕೂ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಅಕ್ರಮ ಮೀನುಗಾರಿಕೆಯನ್ನು ತಡೆಯಲು ನದಿಯ ಉದ್ದಕ್ಕೂ ಅನೇಕ ಬ್ಲಾಕ್‌ಗಳನ್ನು ಮಾಡಿದ್ದೇವೆ ಮತ್ತು ಕಾವಲುಗಾರರನ್ನು ನೇಮಿಸಿದ್ದೇವೆ. ಯಶಸ್ವಿ ಸಂತಾನೋತ್ಪತ್ತಿ ಕಾರ್ಯಕ್ರಮಗಳೊಂದಿಗೆ, ಮೀನಿನ ತಳಿ ಕಾವೇರಿ ನದಿಯಲ್ಲಿ ಮರುಸ್ಥಾಪಿಸಲಾಗಿದೆ ಎಂದು ಚೆಂಗಪ್ಪ ವಿವರಿಸಿದ್ದಾರೆ.

ಕಾವೇರಿ ನದಿಯಲ್ಲಿ ಸಿಡಬ್ಲ್ಯುಎಸ್ ಈಗ ಕಿತ್ತಳೆ ಬಣ್ಣದ ರೆಕ್ಕೆಯುಳ್ಳ ಮಹಶೀರ್ ಮೀನುಗಳ ಸಂಖ್ಯೆ ಹೆಚ್ಚಿಸುವತ್ತ ಇದೀಗ ಸೊಸೈಟಿ ಗಮನ ಹರಿಸಿದೆ. 

ಈ ಹಿಂದೆ ಕಿತ್ತಳೆ ಬಣ್ಣದ ರೆಕ್ಕೆಯುಳ್ಳ ಮಹಶೀರ್ ಮೀನುಗಳು ಕಾವೇರಿ ನದಿಯಲ್ಲಿ ಹೇರಳವಾಗಿದ್ದವು. ಆದರೀಗ ಅವುಗಳು ಅಳಿವಿನಂಚಿನಲ್ಲಿವೆ. ಅಕ್ರಮ ಹಾಗೂ ಅತಿಯಾದ ಮೀನುಗಾರಿಕೆಯಿಂದಾಗಿ ಇಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅವುಗಳ ರಕ್ಷಣೆಗೆ ಮುಂದಾಗಿದ್ದೇವೆ. ಇದಕ್ಕೆ ಮೀನುಗಾರಿಕೆ ಇಲಾಖೆಯಿಂದ ಸಾಕಷ್ಟು ಬೆಂಬಲಗಳು ಸಿಗುತ್ತಿದೆ ಎಂದು ಚೆಂಗಪ್ಪ ವಿವರಿಸಿದ್ದಾರೆ. 

ಮಂಡ್ಯ ಜಿಲ್ಲೆಯ ಭೀಮೇಶ್ವರಿಯಲ್ಲಿಯೂ ಮಹಶೀರ್ ಮೀನು ಸಂರಕ್ಷಣೆ ಮಾಡುವ ಕುರಿತು ಸಿಡಬ್ಲ್ಯೂಎಸ್ ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದೆ. ಕಾವೇರಿ ವನ್ಯಜೀವಿ ಅಭಯಾರಣ್ಯದ ಮೇಲೆ ಪರಿಣಾಮ ಬೀರುವ ಹಿನ್ನೆಲೆಯಲ್ಲಿ ಮೇಕೆದಾಟು ಅಣೆಕಟ್ಟು ನಿರ್ಮಾಣವನ್ನು ನಿಲ್ಲಿಸುವಂತೆ ನಾವು ಅಧಿಕಾರಿಗಳಿಗೆ ಹಲವಾರು ಪತ್ರಗಳನ್ನು ಬರೆದಿದ್ದೇವೆ, ಮಹಶೀರ್ ಮೀನು ಸಂರಕ್ಷಣೆಯ ಹೊರತಾಗಿಯೂ ನಮ್ಮ ಸೊಸೈಟಿಯು ಸಸಿ ನೆಡುವ ಅಭಿಯಾನ, ಸ್ವಚ್ಛತಾ ಕಾರ್ಯಕ್ರಮಗಳು, ಪಕ್ಷಿಗಳ ಸಂರಕ್ಷಣೆ, ಕೊಡಗಿನಾದ್ಯಂತ ಪರಿಸರ ಚಾರಣಗಳನ್ನು ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ಅರಣ್ಯ ಇಲಾಖೆಯ ಬೆಂಬಲದೊಂದಿಗೆ ದುಬಾರೆ ಹಾಗೂ ಮತ್ತಿಗೋಡು ನದಿ ತೀರದ ಪ್ರದೇಶಗಳಲ್ಲಿ ನೇಪಿಯರ್ ಗ್ರಾಸ್ ಅನ್ನು ನೆಡುವ ಅಭಿಯಾನವನ್ನೂ ಶೀಘ್ರದಲ್ಲಿಯೇ ಆರಂಭಿಸುತ್ತೇವೆ. ಕಾಡುಗಳನ್ನು ಮರುಪೂರಣಗೊಳಿಸಲು ಬಿದಿರು ಮರು ನೆಡುವ ಅಭಿಯಾನವನ್ನೂ ಆರಂಭಿಸುತ್ತೇವೆ. ಕೊಡಗು ಮೀಸಲು ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಚಾರಣಗಳನ್ನು ಆಯೋಜಿಸಲಾಗುತ್ತದೆ. ಇದು ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿಯನ್ನೂ ಮೂಡಿಸಲಿಗೆ. ದಾರಿಯುದ್ದಕ್ಕೂ ಸ್ವಚ್ಛತಾ ಅಭಿಯಾನವನ್ನೂ ಆಯೋಜಿಸಲಾಗುತ್ತದೆ ಎಂದು ವಿವರಿಸಿದ್ದಾರೆ. 

ತಿತಿಮತಿ ಅರಣ್ಯದ ಅಂಚಿನಲ್ಲಿ ಸಿಡ್ಲ್ಯೂಎಶ್ ತಂಡವು ಬೃಹತ್ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿತ್ತು. ಬೆಂಗಳೂರು ಮತ್ತು ಮೈಸೂರಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಎರಡು ಟ್ರಕ್‌ಗಳಷ್ಟು ಕಸವನ್ನು ತೆರವುಗೊಳಿಸಲಾಯಿತು. ಸಂಸ್ಥೆಯು ಪಕ್ಷಿಗಳ ಸಂರಕ್ಷಣೆಗೆ ಕೈಗೊಂಡ ಕಾರ್ಯಕ್ರಮವು ಹಲವು ಪಕ್ಷಿಪ್ರಿಯರ ಗಮನ ಸೆಳೆದಿತ್ತು. ಈ ವೇಳೆ ಜಿಲ್ಲೆಗಳಲ್ಲಿ ವಿವಿಧ ಪ್ರಭೇದದ ಪಕ್ಷಿಗಳನ್ನು ಪತ್ತೆ ಮಾಡಲಾಯಿತು. ಈ ವರ್ಷದ ಪಕ್ಷಿ ಹಬ್ಬದಲ್ಲಿ, ತಂಡವು ಬ್ರಹ್ಮಗಿರಿಯಾದ್ಯಂತ ಆಗಸದಲ್ಲಿ ಎತ್ತರಕ್ಕೆ ಹಾರುವ ಅಳಿವಿನಂಚಿನಲ್ಲಿರುವ ರಣಹದ್ದುಗಳನ್ನು ಗುರುತಿಸಿತ್ತು. 

ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಅಭಿಯಾನಗಳಿಂದಾಗಿ ಹುಲಿ ಮತ್ತು ಆನೆಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಮರಗಳ ಕಡಿತದಿಂದಾಗಿ ಅರಣ್ಯ ಪ್ರದೇಶಗಳ ವ್ಯಾಪ್ತಿ ಕಡಿಮೆಯಾಗುತ್ತಿದೆ. ಈ ಬೆಳವಣಿಗೆ ಹೀಗೆಯೇ ಮುಂದುವರೆದರೆ ಮಾನವ-ವನ್ಯಜೀವಿ ಸಂಘರ್ಷಗಳು ಹೆಚ್ಚಾಗುತ್ತದೆ ಎಂದು ಕೂರ್ಗ್ ವೈಲ್ಡ್‌ಲೈಫ್ ಸೊಸೈಟಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com