ಸ್ಫೂರ್ತಿದಾಯಕ ಪ್ರಯಾಣ: ಗಡ್ಚಿರೋಲಿಯ ಬುಡಕಟ್ಟು ಜನಾಂಗದ ಬಾಲಕ ಈಗ ಅಮೆರಿಕದಲ್ಲಿ ವಿಜ್ಞಾನಿ

ಮಹಾರಾಷ್ಟ್ರದ ಗಡ್ಚಿರೋಲಿಯ ದೂರದ ಹಳ್ಳಿಯೊಂದರಲ್ಲಿ ಬಾಲ್ಯದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರಡಾಡುತ್ತಿದ್ದ ಬಾಲಕನೊಬ್ಬ ಈಗ ಅಮೆರಿಕದಲ್ಲಿ ಹಿರಿಯ ವಿಜ್ಞಾನಿ. ಹೌದು, ಭಾಸ್ಕರ್ ಹಲಾಮಿ ಅವರು ಸಂಪೂರ್ಣ ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.
ಭಾಸ್ಕರ್ ಹಲಾಮಿ
ಭಾಸ್ಕರ್ ಹಲಾಮಿ
Updated on

ನಾಗ್ಪುರ: ಮಹಾರಾಷ್ಟ್ರದ ಗಡ್ಚಿರೋಲಿಯ ದೂರದ ಹಳ್ಳಿಯೊಂದರಲ್ಲಿ ಬಾಲ್ಯದಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಪರಡಾಡುತ್ತಿದ್ದ ಬಾಲಕನೊಬ್ಬ ಈಗ ಅಮೆರಿಕದಲ್ಲಿ ಹಿರಿಯ ವಿಜ್ಞಾನಿ. ಹೌದು, ಭಾಸ್ಕರ್ ಹಲಾಮಿ ಅವರು ಸಂಪೂರ್ಣ ಕಠಿಣ ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ.

ಕುರ್ಖೇಡಾ ತಹಸಿಲ್‌ನ ಚಿರ್ಚಾಡಿ ಗ್ರಾಮದ ಬುಡಕಟ್ಟು ಸಮುದಾಯದಲ್ಲಿ ಬೆಳೆದ ಹಲಾಮಿ ಈಗ ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ಬಯೋಫಾರ್ಮಾಸ್ಯುಟಿಕಲ್ ಕಂಪನಿಯಾದ ಸಿರ್ನಾಮಿಕ್ಸ್ ಇಂಕ್‌ನ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿದ್ದಾರೆ.

ಕಂಪನಿಯು ಜೆನೆಟಿಕ್ ಔಷಧಿಗಳಲ್ಲಿ ಸಂಶೋಧನೆ ನಡೆಸುತ್ತದೆ ಮತ್ತು ಹಲಾಮಿ ಆರ್‌ಎನ್ಎ ತಯಾರಿಕೆ ಮತ್ತು ಸಂಶ್ಲೇಷಣೆಯನ್ನು ನೋಡಿಕೊಳ್ಳುತ್ತದೆ.

ಈಗ ತಮ್ಮ ಹೆಸರಿಗೆ ಹಲವು ಪ್ರಥಮಗಳನ್ನು ಹೊಂದಿರುವ ಹಲಾಮಿ ಅವರು ಯಶಸ್ವಿ ವಿಜ್ಞಾನಿಯಾಗುವಲ್ಲಿ ಹಲವು ಅಡೆತಡೆಗಳನ್ನು ಎದುರಿಸಿದ್ದಾರೆ. ಅವರು ಚಿರ್ಚಾಡಿ ಗ್ರಾಮದ ಮೊದಲ ವಿಜ್ಞಾನ ಪದವೀಧರರಾಗಿದ್ದಾರೆ ಮತ್ತು ಸ್ನಾತಕೋತ್ತರ ಹಾಗೂ ಪಿಎಚ್‌ಡಿ ಗಳಿಸಿದ ಮೊದಲಿಗರು.

ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿದ ಅವರು,  ಹಲಾಮಿ ತನ್ನ ಬಾಲ್ಯದ ಆರಂಭಿಕ ವರ್ಷಗಳಲ್ಲಿ, ತನ್ನ ಕುಟುಂಬಕ್ಕೆ ಹಣವಿರಲಿಲ್ಲ. ನಾವು ಒಂದು ಹೊತ್ತಿನ ಊಟ ಮಾಡಲು ಸಹ ತುಂಬಾ ಕಷ್ಟಪಡಬೇಕಾಯಿತು. ಆಹಾರ ಅಥವಾ ಕೆಲಸವಿಲ್ಲದ ಕುಟುಂಬ ಹೇಗೆ ಬದುಕುಳಿಯಿತು ಎಂದು ನನ್ನ ಪೋಷಕರು ಇಂದಿಗೂ ಆಶ್ಚರ್ಯ ಪಡುತ್ತಿದ್ದಾರೆ ಎನ್ನುತ್ತಾರೆ 44 ವರ್ಷದ ವಿಜ್ಞಾನಿ.

ವರ್ಷದಲ್ಲಿ ಕೆಲವು ತಿಂಗಳುಗಳು, ವಿಶೇಷವಾಗಿ ಮುಂಗಾರಿನ ವೇಳೆ ನಂಬಲಾಗದಷ್ಟು ಕಠಿಣವಾಗಿತ್ತು. ಏಕೆಂದರೆ, ನಮ್ಮ ಕುಟುಂಬ ಹೊಂದಿದ್ದ ಸಣ್ಣ ಜಮೀನಿನಲ್ಲಿ ಯಾವುದೇ ಬೆಳೆಗಳಿಲ್ಲ ಮತ್ತು ಕೆಲಸವೂ ಇರುತ್ತಿರಲಿಲ್ಲ ಎಂದು ಅವರು ಹೇಳಿದರು.

'ತಿನ್ನಲು ಮತ್ತು ಜೀರ್ಣಿಸಿಕೊಳ್ಳಳು ಕಷ್ಟವಾದ ಮಹುವಾ ಹೂಗಳನ್ನು ಬೇಯಿಸಿ ತಿನ್ನುತ್ತಿದ್ದೆವು. ಕಾಡು ಅಕ್ಕಿಯನ್ನು ಸಂಗ್ರಹಿಸಿ ಹಿಟ್ಟನ್ನು ನೀರಿನಲ್ಲಿ ಸೇರಿಸಿ ಅಂಬಲಿ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು. ಇದು ನಾವು ಮಾತ್ರ ಅಲ್ಲ, ಹಳ್ಳಿಯಲ್ಲಿದ್ದ ಶೇ.90ರಷ್ಟು ಜನರು ಇದೇ ರೀತಿಯಲ್ಲಿ ಬದುಕಬೇಕಾಗಿತ್ತು' ಎಂದು ಹಲಾಮಿ ಹೇಳಿದರು.

ಚಿರ್ಚಾಡಿಯಲ್ಲಿ 400 ರಿಂದ 500 ಕುಟುಂಬಗಳು ವಾಸವಾಗಿವೆ.

ಹಲಾಮಿಯ ತಂದೆತಾಯಿಗಳು ಹಳ್ಳಿಯಲ್ಲಿ ಮನೆಕೆಲಸ ಮಾಡುತ್ತಿದ್ದರು. ಏಕೆಂದರೆ, ಅವರ ಸಣ್ಣ ಜಮೀನಿನಿಂದ ಬರುವ ಬೆಳೆಯಿಂದ ಕುಟುಂಬವನ್ನು ಪೋಷಿಸಲು ಆಗುತ್ತಿರಲಿಲ್ಲ. 7ನೇ ತರಗತಿವರೆಗೆ ಓದಿದ್ದ ಹಲಾಮಿಯ ತಂದೆ 100 ಕಿ.ಮೀ ದೂರದಲ್ಲಿರುವ ಕ್ಯಾಸನಸೂರು ತಾಲೂಕಿನ ಶಾಲೆಯೊಂದರಲ್ಲಿ ಉದ್ಯೋಗಾವಕಾಶದ ಬಗ್ಗೆ ತಿಳಿದು, ಕೆಲಸಕ್ಕೆ ಸೇರಿದಾಗ ಪರಿಸ್ಥಿತಿ ಕೊಂಚಮಟ್ಟಿಗೆ ಸುಧಾರಿಸಿತು ಎನ್ನುತ್ತಾರೆ.

'ನನ್ನ ತಂದೆ ಎಲ್ಲಿಗೆ ಹೋಗಿದ್ದರು ಎನ್ನುವ ಬಗ್ಗೆ ನನ್ನ ತಾಯಿಗೆ ಸಹ ತಿಳಿದಿರಲಿಲ್ಲ. ಅವರು ಮೂರ್ನಾಲ್ಕು ತಿಂಗಳ ನಂತರ ನಮ್ಮ ಗ್ರಾಮಕ್ಕೆ ಹಿಂತಿರುಗಿದಾಗ ಅವರ ಬಗ್ಗೆ ನಮಗೆ ತಿಳಿಯಿತು. ಅವರು, ಕ್ಯಾಸನೂರಿನ ಶಾಲೆಯಲ್ಲಿ ಅಡುಗೆ ಮಾಡುವ ಕೆಲಸಕ್ಕೆ ಬಂದಿದ್ದರು. ನಂತರ ನಮ್ಮ ಕುಟುಂಬ ಸ್ಥಳಾಂತರಗೊಂಡಿತು' ಎಂದು ಹಲಾಮಿ ಹೇಳಿದರು.

ಹಲಾಮಿ ಅವರು ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು 1 ರಿಂದ 4 ನೇ ತರಗತಿಯವರೆಗೆ ಕ್ಯಾಸನೂರಿನ ಆಶ್ರಮ ಶಾಲೆಯಲ್ಲಿ ಮಾಡಿದರು ಮತ್ತು ವಿದ್ಯಾರ್ಥಿವೇತನ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅವರು 10 ನೇ ತರಗತಿಯವರೆಗೆ ಯಾವತ್ಮಾಲ್‌ನ ಸರ್ಕಾರಿ ವಿದ್ಯಾನಿಕೇತನ ಕೆಲಾಪುರದಲ್ಲಿ ಅಧ್ಯಯನ ಮಾಡಿದರು.

'ನನ್ನ ತಂದೆ ಶಿಕ್ಷಣದ ಮೌಲ್ಯವನ್ನು ಅರ್ಥಮಾಡಿಕೊಂಡಿದ್ದರು ಮತ್ತು ನನ್ನ ಒಡಹುಟ್ಟಿದವರು ಮತ್ತು ನಾನು ನಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ್ದೇವೆ' ಎಂದು ಅವರು ಹೇಳಿದರು.

ಗಡ್ಚಿರೋಲಿಯ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಗಳಿಸಿದ ನಂತರ, ಹಲಾಮಿ ನಾಗ್ಪುರದ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನಿಂದ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 2003 ರಲ್ಲಿ, ನಾಗಪುರದ ಪ್ರತಿಷ್ಠಿತ ಲಕ್ಷ್ಮೀನಾರಾಯಣ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (LIT) ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಲಾಮಿ ನೇಮಕಗೊಂಡರು.

ಅವರು ಮಹಾರಾಷ್ಟ್ರ ಪಬ್ಲಿಕ್ ಸರ್ವಿಸ್ ಕಮಿಷನ್ (MPSC) ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಹಲಾಮಿ ಅವರ ಗಮನವು ಸಂಶೋಧನೆಯ ಮೇಲೆ ಉಳಿಯಿತು. ಬಳಿಕ ಅವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪಿಎಚ್‌ಡಿ ಮಾಡಲು ಹೋದರು ಮತ್ತು ತಮ್ಮ ಸಂಶೋಧನೆಗಾಗಿ ಡಿಎನ್‌ಎ ಮತ್ತು ಆರ್‌ಎನ್‌ಎಗಳನ್ನು ಆಯ್ಕೆ ಮಾಡಿದರು. ಮಿಚಿಗನ್ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com