ಬೆಳಗಾವಿಯ 'ಹಾಫ್ ಐರನ್ ಮ್ಯಾನ್' ಶ್ರೀಶೈಲ್ ಬ್ಯಾಕೋಡ್ ಯುವ ಸಮುದಾಯಕ್ಕೆ ಮಾದರಿ!

ತೂಕ ಇಳಿಸುವುದು ಹಲವು ಜನರ ತಲೆದೋರಿರುವ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಗಳಲ್ಲಿ ಮೋಸ್ಟ್ ಸರ್ಚ್ಡ್ ಟಾಪಿಕ್ ಗಳಲ್ಲಿ ಇದೂ ಒಂದು ವಿಷಯವಾಗಿದೆ...
ಶ್ರೀಶೈಲ್ ಬ್ಯಾಕೋಡ್
ಶ್ರೀಶೈಲ್ ಬ್ಯಾಕೋಡ್

ಬೆಳಗಾವಿ: ತೂಕ ಇಳಿಸುವುದು ಹಲವು ಜನರ ತಲೆದೋರಿರುವ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಗಳಲ್ಲಿ ಮೋಸ್ಟ್ ಸರ್ಚ್ಡ್ ಟಾಪಿಕ್ ಗಳಲ್ಲಿ ಇದೂ ಒಂದು ವಿಷಯವಾಗಿದೆ. ಆದರೆ, ತೂಕ ಇಳಿಕೆಗೆ ಶಿಸ್ತುಬದ್ಧತೆ ಅತ್ಯಂತ ಮುಖ್ಯವಾಗಿದ್ದು, ಈ ಸಾಧನೆ ಮಾಡಲು ನಾವು ಅತ್ಯಂತ ಇಷ್ಟಪಡುವ ಆಹಾರ ಪದಾರ್ಥಗಳನ್ನು ಬಿಡಬೇಕು. ಶಿಸ್ತುನ್ನು ಸರಿಯಾಗಿ ಪಾಲನೆ ಮಾಡಿದರೆ ಮಾತ್ರ ನಾವು ನಮ್ಮ ಗುರಿಯನ್ನು ತಲುಪಲು ಸಾಧ್ಯ. ಶಿಸ್ತು ಸರಿಯಾಗಿ ಪಾಲನೆ ಮಾಡದೇ ಹೋದರೆ ನಮ್ಮ ಗುರಿ ತಿಂಗಳುಗಳ ಬದಲಾಗಿ ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳಬಹುದು. 

ಪೊಲೀಸ್ ಪಡೆಯಲ್ಲಿರುವವರಿಗೆ ಫಿಟ್ ಆಗಿರುವುದು ಅತ್ಯಂತ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಹಾಫ್ ಐರನ್ ಮ್ಯಾನ್ ಆಗಿ ಹೊರಹೊಮ್ಮಿರುವ ಶ್ರೀಶೈಲ್ ಬ್ಯಾರಿಕೋಡ್ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. 

<strong>ಶ್ರೀಶೈಲ್ ಬ್ಯಾಕೋಡ್</strong>
ಶ್ರೀಶೈಲ್ ಬ್ಯಾಕೋಡ್

ಕೊಲ್ಲಾಪುರದಲ್ಲಿ ನಡೆದ ವಿಶಿಷ್ಟ ಕ್ರೀಡೆ-ಐರನ್‌ಮ್ಯಾನ್ ಟ್ರಯಥ್ಲಾನ್‌ನಲ್ಲಿ (ಈಜು, ಸೈಕಲ್, ಓಟ) ಶ್ರೀಶೈಲ್ ಅವರು ಹಾಫ್ ಐರನ್ ಮ್ಯಾನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಹಾಫ್ ಐರನ್‌ಮ್ಯಾನ್ ಟ್ರಯಥ್ಲಾನ್ ಗೆದ್ದ ಮೊದಲ ಪೊಲೀಸ್ ಸಿಬ್ಬಂದಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 1.9 ಕಿ.ಮೀ ದೂರದ ಈಜು, 90 ಕಿ ಮೀ ಸೈಕಲ್ ಹಾಗೂ 21.1 ಕಿ.ಮೀ ಓಟವನ್ನು ನಿಗದಿತ ಅವಧಿಯಲ್ಲಿ ಕ್ರಮಿಸಿ ಪೊಲೀಸ್ ಇಲಾಖೆಗೆ ಕೀರ್ತಿ ತಂದಿದ್ದಾರೆ. 

ಶ್ರೀಶೈಲ್ ಅವರಿಗೆ ಈ ಸಾಧನೆ ಸುಲಭವಾಗಿ ಸಿಕ್ಕಿಲ್ಲ. ಸಾಕಷ್ಟು ಪರಿಶ್ರಮದಿಂದ ಅವರು ಸಾಧನೆ ಮಾಡಿದ್ದಾರೆ. 2014 ರಲ್ಲಿ 102 ಕೆ.ಜಿ ತೂಕ ಇದ್ದ ಶ್ರೀಶೈಲ್ ಅವರಿಗೆ ಈ ವೇಳೆ ಆರೋಗ್ಯದ ಪ್ರಾಮುಖ್ಯತೆ ತಿಳಿದಿದೆ. ಬಳಿಕ ಫಿಟ್'ನೆಟ್ ಜರ್ನಿ ಪ್ರಾರಂಭಿಸಿದ್ದರು. ಅದೇ ಸಮಯದಲ್ಲಿ ಶ್ರೀಶೈಲ್ ಅವರ ಪತ್ನಿ ಸ್ಮಿತಾ ಸೇರಿದಂತೆ ಕೆಲ ಹಿತೈಷಿಗಳು ಆರೋಗ್ಯಕರ ಜೀವನವನ್ನು ಅಭ್ಯಾಸ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆರಂಭದಲ್ಲಿ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಲು ಆರಂಭಿಸಿದ ಶ್ರೀಶೈಲ್ ಅವರು, ನಂತರ ಜಿಮ್'ಗೆ ಹೋಗಲು ಶುರು ಮಾಡಿದರು. ನಂತರ ಓಟ, ಈಜು, ಸೈಕ್ಲಿಂಗ್ ಹಾಗೂ ಟೆನ್ನಿಸ್ ಆಡಲು ಆರಂಭಿಸಿದ್ದರು. 

ತಮ್ಮ ಪರಿಶ್ರಮ ಹಾಗೂ ಶಿಸ್ತು ಬದ್ಧ ಜೀವನದ ಮೂಲಕ ಇದೀಗ ಹಾಫ್ ಐರನ್ ಮ್ಯಾನ್ ಎಂಬ ಸಾಧನೆ ಮಾಡಿದ್ದಾರೆ. 

ಅಕ್ಟೋಬರ್ 1 ರಂದು ಕೊಲ್ಲಾಪುರದಲ್ಲಿ ನಡೆದ ಹಾಫ್ ಐರನ್‌ಮ್ಯಾನ್ ಟ್ರಯಥ್ಲಾನ್ ಸ್ಪರ್ಧೆಯಲ್ಲಿ, ಶ್ರೀಶೈಲ್ ಈಜು, ಸೈಕ್ಲಿಂಗ್ ಮತ್ತು ಓಟವನ್ನು ನಿಗಡಿಪಡಿಸಿದ್ದ ಸಮಯಕ್ಕೂ ಮೊದಲೇ ಪೂರ್ಣಗೊಳಿಸಿದ್ದರು. ಈ ಸ್ಪರ್ಧೆಗೆ 10 ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಶ್ರೀಶೈಲ್ ಅವರು, ಕೇವಲ 6 ಗಂಟೆ 39 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದು,  52 ನಿಮಿಷ 48 ಸೆಕೆಂಡ್‌ಗಳಲ್ಲಿ 1.9 ಕಿಮೀ ಈಜು, 2 ಗಂಟೆ 57 ನಿಮಿಷಗಳಲ್ಲಿ 90 ಕಿಮೀ ಸೈಕ್ಲಿಂಗ್‌ ಮತ್ತು 2 ಗಂಟೆ 28 ನಿಮಿಷಗಳಲ್ಲಿ  21 ಕಿಮೀ ಓಡಿದ್ದರು. ಈ ಮೂಲಕ ಫಾರೆವರ್ ಸ್ಟಾರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಪ್ರವೇಶ ಪಡೆಕೊಂಡರು.

“2014 ರಲ್ಲಿ 102 ಕೆಜಿ ಇದ್ದ ನಾನು 2019 ರಲ್ಲಿ 96 ಕೆಜಿಗೆ ಇಳಿದಿದ್ದೆ, ಇದೀಗ ನಾನು 75 ಕೆಜಿ ಆಗಿದ್ದೇನೆ. ಇದರಲ್ಲಿ ಯಾವುದೇ ಮ್ಯಾಜಿಕ್ ಇಲ್ಲ. ನಾನು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಿದ್ದೆ. ನಾನು 35 ವರ್ಷದವನಾಗಿದ್ದಾಗ ಆರೋಗ್ಯಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ ಎಂದು ನಾನು ಅರಿತುಕೊಂಡಿದೆ. ಅದರಿಂದ ಎಲ್ಲವೂ ಸಾಧ್ಯವಾಯಿತು ಎಂದು ಶ್ರೀಶೈಲ್ ಹೇಳಿದ್ದಾರೆ. 

ಪ್ರತಿ ದಿನ 3-4 ಗಂಟೆ ಫಿಟ್‌ನೆಸ್‌ಗಾಗಿ ಮೀಸಲಿಡುತ್ತೇನೆ. ವಾರಕ್ಕೆ ಎರಡು ಬಾರಿ ಅವರು ಈಜುವುದರ ಮೇಲೆ ಗಮನಹರಿಸುತ್ತೇನೆ, ಎರಡು ದಿನಗಳು ಸೈಕ್ಲಿಂಗ್ ಮತ್ತು ಓಟಕ್ಕಾಗಿ ಮೀಸಲಿಡುತ್ತೇನೆ. ಪತ್ನಿ ಮಾರ್ಗದರ್ಶನದಲ್ಲಿ ಆಹಾರ ಕ್ರಮ ಅನುಸರಿಸುತ್ತಿದ್ದೇನೆ. ಆಹಾರ ಕ್ರಮದಲ್ಲಿ ಎಣ್ಣೆ ಕಡಿಮೆ, ಹಸಿರು ತರಕಾರಿ, ಹಣ್ಣುಗಳು ಹೆಚ್ಚಾಗಿ ಇರುತ್ತವೆ. 

ಪ್ರತಿಯೊಬ್ಬರೂ ಹಣಕ್ಕಿಂತ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ನೀವು ಫಿಟ್ ಆಗಿದ್ದರೆ, ನಿಮ್ಮ ಬಳಿ ಎಲ್ಲವೂ ಇರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ದೈಹಿಕ ಸಾಮರ್ಥ್ಯಕ್ಕೆ ಹೆಚ್ಚಿನ ಸಮಯವನ್ನು ನೀಡಬೇಕು ಎಂದು ಶ್ರೀಶೈಲ್ ಹೇಳಿದ್ದಾರೆ. 

<strong>ಪತ್ನಿ ಸ್ಮಿತಾ ಅವರೊಂದಿಗೆ ಶ್ರೀಶೈಲ್ ಬ್ಯಾಕೋಡ್</strong>
ಪತ್ನಿ ಸ್ಮಿತಾ ಅವರೊಂದಿಗೆ ಶ್ರೀಶೈಲ್ ಬ್ಯಾಕೋಡ್

ಕೊಲ್ಹಾಪುರದಲ್ಲಿ ನಡೆದ ಹಾಫ್ ಐರನ್ ಟ್ರಯಥ್ಲಾನ್ ನಾನು ಭಾಗವಹಿಸಿದ ಮೊದಲ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿರುವುದು ಸಂತಸ ತಂದಿದೆ. ಸ್ಪರ್ಧೆಗೆ ತನಗೆ ಸಾಕಷ್ಟು ಶಕ್ತಿ ಬೇಕೆಂಬುದು ನನಗೆ ಗೊತ್ತಿತ್ತು. ಆ ಶಕ್ತಿ ಪಡೆಯಲು ನಾನು ಟೆನಿಸ್ ಮೇಲೆ ಹೆಚ್ಚಿನ ಗಮನ ಹರಿಸಿದ್ದೆ ಎಂದು ತಿಳಿಸಿದ್ದಾರೆ.

ಕಟ್ಟು ಮಸ್ತಾದ ದೇಹ. ದೇಹಕ್ಕೆ ತಕ್ಕಂತೆ ಹೈಟು. ಸರ್ಕಾರಿ ಕೆಲಸವೇ ದೇವರ ಕೆಲಸ ಅಂತಾ ಮೈಗೂಡಿಸಿಕೊಂಡಿರುವ ಶ್ರೀಶೈಲ್ ಬ್ಯಾಕೋಡ್ ಅವರು. ಘಟಪ್ರಭಾ ಪೊಲೀಸ್ ಠಾಣೆಯ ಸಿಪಿಐಯಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಶೈಲ್ ಬ್ಯಾಕೋಡ ಮೂಲತಃ ಬಾಗಲಕೋಟೆ ಜಿಲ್ಲೆಯ ಈಗಿನ ರಬಕವಿ-ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದವರು. ಸದಾ ಉತ್ಸಾಹಿಯಾಗಿರುವ ಶ್ರೀಶೈಲ್ ಬ್ಯಾಕೋಡ ಕಳೆದ ಹದಿನೈದು ವರ್ಷಗಳಿಂದ 2007ರಿಂದ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆಗಿರುವ ಛಾಪನ್ನು ಮೂಡಿಸಿದ್ದಾರೆ. 

ಕಳ್ಳರಿಗೆ ಸಿಂಹಸ್ವಪ್ನವಾಗಿ ತಾನು ಮಾಡಿದ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡಿಕೊಂಡಿದ್ದರು. ಕಳೆದ ಹಲವಾರು ವರ್ಷಗಳಿಂದ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆಲಸ ಮಾಡಿ ಇದೀಗ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಸಿಪಿಐ ಆಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಶೈಲ್ ಅವರು ಆಗಸ್ಟ್ 2023 ರಲ್ಲಿ ಕಜಕಿಸ್ತಾನ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಐರನ್ ಮ್ಯಾನ್‌ನಲ್ಲಿ ಭಾಗವಹಿಸಲು ಮುಂದಾಗಿದ್ದಾರೆ. 

2019 ರಲ್ಲಿ ತಮ್ಮ ಸೇವೆಗಾಗಿ ಮುಖ್ಯಮಂತ್ರಿಗಳ ಪದಕವನ್ನು ಪಡೆದ ಶ್ರೀಶೈಲ್ ಅವರು ಇದೀಗ ಆರೋಗ್ಯ ಮತ್ತು ಫಿಟ್‌ನೆಸ್‌ನ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಈ ಪ್ರಯತ್ನದಿಂದಾಗಿ ಘಟಪ್ರಭಾ ಪೊಲೀಸ್ ಠಾಣೆಯ ಇತರ ಪೊಲೀಸ್ ಸಿಬ್ಬಂದಿ ಕೂಡ ಫಿಟ್ನೆಸ್ ಬಗ್ಗೆ ಗಮನಹರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com