ಗ್ರಾಮದಲ್ಲಿ 'ಆಸ್ಟ್ರೋ ಫಾರ್ಮ್' ನಿರ್ಮಾಣ: ಆಗಸದಾಚೆಗಿನ ಪ್ರಪಂಚ ತೋರಿಸಿ ಗಮನ ಸಳೆಯುತ್ತಿರುವ ಹಾವೇರಿ ಯುವಕ!

ಆಗಸದಾಚೆಗೊಂಡು ಪ್ರಪಂಚವಿದ್ದು, ಅಲ್ಲಿ ಸಾಕಷ್ಟು ಅದ್ಭುತಗಳಿವೆ. ನಕ್ಷತ್ರ ವೀಕ್ಷಣೆಯು ಒಂದು ಅದ್ಭುತ ಮತ್ತು ವಿಸ್ಮಯಕಾರಿ ಚಟುವಟಿಕೆಯಾಗಿದ್ದು, ಅದು ರಾತ್ರಿಯ ಆಕಾಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅನುವು ಮಾಡಿಕೊಡುತ್ತದೆ. ಬ್ರಹ್ಮಾಂಡದ ವಿಶಾಲತೆ ಮತ್ತು ರಾತ್ರಿಯ ಆಕಾಶದ ಸೌಂದರ್ಯವು ಯಾವಾಗಲೂ ಮಾನವನ ಕಲ್ಪನೆಯಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ.
ಹಾವೇರಿ ಜಿಲ್ಲೆಯ ಕಣ್ಣೂರಿನ ನಿರಂಜನ ಖಾನಗೌಡ್ರ.
ಹಾವೇರಿ ಜಿಲ್ಲೆಯ ಕಣ್ಣೂರಿನ ನಿರಂಜನ ಖಾನಗೌಡ್ರ.

ಹುಬ್ಬಳ್ಳಿ: ಆಗಸದಾಚೆಗೊಂಡು ಪ್ರಪಂಚವಿದ್ದು, ಅಲ್ಲಿ ಸಾಕಷ್ಟು ಅದ್ಭುತಗಳಿವೆ. ನಕ್ಷತ್ರ ವೀಕ್ಷಣೆಯು ಒಂದು ಅದ್ಭುತ ಮತ್ತು ವಿಸ್ಮಯಕಾರಿ ಚಟುವಟಿಕೆಯಾಗಿದ್ದು, ಅದು ರಾತ್ರಿಯ ಆಕಾಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಅನುವು ಮಾಡಿಕೊಡುತ್ತದೆ. ಬ್ರಹ್ಮಾಂಡದ ವಿಶಾಲತೆ ಮತ್ತು ರಾತ್ರಿಯ ಆಕಾಶದ ಸೌಂದರ್ಯವು ಯಾವಾಗಲೂ ಮಾನವನ ಕಲ್ಪನೆಯಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಆಕಾಶಕಾಯಗಳ ವೀಕ್ಷಣೆಯು ಮನುಷ್ಯನ ಮನಸ್ಸನ್ನು ಶಾಂತಗೊಳಿಸುತ್ತದೆ. ಆದರೆ, ನಗರ ಪ್ರದೇಶಗಳಲ್ಲಿ ಇವುಗಳನ್ನು ಕಾಣುವುದು ಕಷ್ಟಕರ.

ಇಂತಹವರಿಗಾಗಿಯೇ ಹಾವೇರಿಯ ಕನ್ನೂರಿನ ಯುವಕನೊಬ್ಬ ಅವರ ಗ್ರಾಮದ 60 ಎಕರೆ ಜಮೀನಿನಲ್ಲಿ ಇಂಟರ್‌ಸ್ಟೆಲ್ಲರ್ ಆಸ್ಟ್ರೋ ಫಾರ್ಮ್‌ ನಿರ್ಮಿಸಿದ್ದು, ಈ ಆಸ್ಟ್ರೋ ಫಾರ್ಮ್'ಗೆ ಭೇಟಿ ನೀಡಿ, ಗ್ರಹ, ಆಕಾಶಕಾಯ, ಗ್ರಹಣದ ಕುರಿತು ಮಾಹಿತಿ ಪಡೆದುಕೊಂಡು, ಆಕಾಶಕಾಯಗಳನ್ನು ನೋಡುವ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ನಿರಂಜನ ಖಾನಗೌಡ್ರ (27) ಅವರು ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಖಗೋಳ ಭೌತಶಾಸ್ತ್ರದಲ್ಲಿ ಎಂಎಸ್ಸಿ ಪೂರ್ಣಗೊಳಿಸಿದ್ದು, ಪೂರ್ವಜರಿಂದ ಬಂದ 60 ಎಕರೆ ಜಮೀನಿನಲ್ಲಿ ಅಸ್ಟ್ರೋ ಫಾರ್ಮ್ ನಿರ್ಮಿಸಿದ್ದಾರೆ.

ರೈತ ಕುಟುಂಬದಲ್ಲಿ ಹುಟ್ಟಿದ ಇವರು ಕೃಷಿ ಚಟುವಟಿಕೆಗಳ ಜೊತೆಗೆ ಆಕಾಶಕಾಯಗಳ ಅಧ್ಯಯನವನ್ನು ಮುಂದುವರೆಸುವ ಕುರಿತು ಚಿಂತನೆಗಳನ್ನು ನಡೆಸಿದ್ದರು. ಈ ವೇಳೆ ಆಸ್ಟ್ರೋ ಫಾರ್ಮ್ ಕಲ್ಪನೆ ಹುಟ್ಟಿತ್ತು. ನಿರಂಜನ್ ಅವರ ಈ ಪ್ರಯತ್ನ ಕರ್ನಾಟಕದ ಮಟ್ಟಿಗೆ ಮೊದಲ ಪ್ರಯತ್ನವೇ ಆಗಿದೆ.

ಲಡಾಕ್ನಲ್ಲಿನ ಆಗಸವು ಬಾಟಲ್-1 ವಿಭಾಗಕ್ಕೆ ಬಂದರೆ, ಹಾವೇರಿಯ ಕನ್ನೂರು ಬಾಟಲ್ 2 ಸ್ಕೈ-ಲೆವೆಲ್ ವಿಭಾಗಕ್ಕೆ ಬರುತ್ತದೆ. ಇದು ರಾತ್ರಿ ವೀಕ್ಷಣೆಗೆ ಸೂಕ್ತ ಪ್ರದೇಶವಾಗಿರುತ್ತದೆ. ಬೆಂಗಳೂರಿನಂತಹ ಮಹಾನಗರಗಳು ಬಾಟಲ್ 8-9 ವಿಭಾಗಕ್ಕೆ ಬರುತ್ತವೆ.

ಇದನ್ನು ಗಮನದಲ್ಲಿಟ್ಟುಕೊಂಡ ನಿರಂಜನ್ ಅವರು, ತಮ್ಮ ಜಮೀನಿನಲ್ಲಿಯೇ ಆಸ್ಟ್ರೋ ಫಾರ್ಮ್ ನಿರ್ಮಿಸಿದರು. ಈ ಆಸ್ಟ್ರೋ ಫಾರ್ಮ್ ಇದೀಗ ಹಲವರ ಗಮನ ಸೆಳೆಯುತ್ತಿದೆ.

ಪ್ರತಿನಿತ್ಯ ಸಂಜೆ 5 ರಿಂದ 7 ಗಂಟೆವರೆಗೂ ಟೆಲಿಸ್ಕೋಪ್ ಬಳಕೆ ಹೇಗೆ ಎಂದು ಜನರಿಗೆ ವಿವರಿಸಲಾಗುತ್ತದೆ. ನಂತರ ಸಿದ್ದನಬೆಟ್ಟದ ತುದಿಗೆ ಸೆಟಪ್ ಮಾಡಿರುವ 8 ಟೆಲಿಸ್ಕೋಪ್​ಗಳನ್ನು ಜನರೇ ನಿಯಂತ್ರಿಸಿ ಆಕಾಶಕಾಯಗಳನ್ನು ಗುರುತಿಸುವ ಮೂಲಕ ಎಂಜಾಯ್ ಮಾಡಬಹುದು, ಇಲ್ಲಿಯ ಫೈರ್ ಕ್ಯಾಂಪ್, ಸೂರ್ಯೋದಯ, ಸೂರ್ಯಾಸ್ತದ ದೃಶ್ಯಗಳು ಮನಸ್ಸಿಗೆ ಮುದ ನೀಡುತ್ತವೆ.

ಆಸ್ಟ್ರೋ ಫಾರ್ಮ್'ಗೆ ಬರುವವರಿಗೆ ತಿಂಡಿ ಹಾಗೂ ಭೋಜನವನ್ನು ನೀಡಲಾಗುತ್ತದೆ. ಇಲ್ಲಿ ಆರ್ಚೆರಿ, ಏರ್ ಗನ್ ಶೂಟಿಂಗ್'ಗೂ ಅವಕಾಶ ನೀಡಲಾಗಿದೆ. ರಾತ್ರಿ ಆಕಾಶಕಾಯಗಳ ವೀಕ್ಷಣೆ ಮಾಡಿದವರು, ಟೆಂಟ್ ಗಳಲ್ಲಿ ಉಳಿದುಕೊಂಡು ಮರು ದಿನ ಉಪಾಹಾರ ಸೇವಿಸಿ ತೆರಳಲು ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಮಾನ್ಸೂನ್ ಸಮಯದಲ್ಲಿ ಕೆಲವು ವಾರಗಳನ್ನು ಹೊರತುಪಡಿಸಿದರೆ, ಉಳಿದೆಲ್ಲಾ ದಿನಗಳಲ್ಲೂ ಆಕಾಶಕಾಯಗಳನ್ನು ವೀಕ್ಷಣೆ ಮಾಡಬಹುದು. ತಜ್ಞರು ಹಾಗೂ ಛಾಯಾಗ್ರಾಹಕರು ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆಂದು ನಿರಂಜನ್ ಅವರು ಹೇಳಿದ್ದಾರೆ.

ವಿದೇಶಗಳಲ್ಲಿ ಆಕಾಶಕಾಯಗಳ ನೋಡುವುದು ಸಾಮಾನ್ಯ ಆದರೆ, ಭಾರತದಲ್ಲಿ ಪ್ರಮುಖವಾಗಿ ಕರ್ನಾಟಕದಲ್ಲಿ ನೋಡುವುದು ಕಷ್ಟಸಾಧ್ಯ. ಮಾಲೀನ್ಯ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಕಾಶಕಾಯಗಳ ನೋಡುವುದು ಕಷ್ಟಕರವಾಗಿರುತ್ತದೆ ಎಂದು ತಿಳಿಸಿದ್ದಾರೆ.

ಇದು ಮರೆಯಲಾದ ಅನುಭವ ಎಂದೇ ಹೇಳಬಹುದು. ಹೈ-ಡೆಫಿನಿಷನ್ ಟೆಲಿಸ್ಕೋಪ್‌ಗಳ ಮೂಲಕ ಗೆಲಕ್ಸಿಗಳನ್ನು ವೀಕ್ಷಿಸುವುದು ಮರೆಯಲಾಗದ ಕ್ಷಣ. ಆಕಾಶಕಾಯಗಳು ನಮ್ಮ ಕಲ್ಪನೆಗೂ ಮೀರಿದ್ದಾಗಿದೆ. ಕೇವಲ ನಕ್ಷತ್ರ, ಗ್ರಹಗಳ ಬಗ್ಗೆಯಷ್ಟೇ ಅಲ್ಲದೆ, ವಿಭಿನ್ನ ರೀತಿ ಕೃಷಿ ತಂತ್ರಗಳು, ಸಲಕರಣೆಗಳ ಬಗ್ಗೆಯೂ ಇಲ್ಲಿ ತಿಳಿದುಕೊಳ್ಳಬಹುದು ಎಂದು ಆಸ್ಟ್ರೋ ಫಾರ್ಮ್ ಭೇಟಿ ನೀಡಿದ್ದ ಪ್ರವಾಸಿಗರೊಬ್ಬರು ಹೇಳಿದ್ದಾರೆ.

ಹುಬ್ಬಳ್ಳಿಯ ಪ್ರವಾಸೋದ್ಯಮ ಬರಹಗಾರ ಅಮೃತ್ ಜೋಶಿ ಮಾತನಾಡಿ, ಸ್ಥಳೀಯ ಉದ್ಯೋಗ ಸೃಷ್ಟಿಸುವ ಚಿಂತನೆಯನ್ನು ಜನಪ್ರಿಯಗೊಳಿಸಬೇಕು. “ಅನೇಕ ಸ್ಥಳೀಯ ಪ್ರತಿಭೆಗಳು ಬೇರೆಡೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುತ್ತಾರೆ. ಆದರೆ ನಿರಂಜನ್ ಈ ಹಳ್ಳಿಯಲ್ಲಿಯೇ ನೆಲೆಯೂರಲು ನಿರ್ಧರಿಸಿದ್ದಾರೆ. ಹಳ್ಳಿಯ ಜನರಿಗೆ ಉದ್ಯೋಗ ಸೃಷ್ಟಿಸಲು ನಿರ್ಧರಿಸಿದ್ದಾರೆ. ಇದೊಂದು ವಿಶಿಷ್ಟವಾದ ಪ್ರವಾಸೋದ್ಯಮ ಸ್ಟಾರ್ಟ್‌ಅಪ್ ಆಗಿದ್ದು, ಸರ್ಕಾರವು ಇಂತಹ ಆಲೋಚನೆಗಳನ್ನು ಬೆಂಬಲಿಸಬೇಕು’ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com