ಅಯೋಧ್ಯೆಗೆ ಕರ್ನಾಟಕದ ಬೃಹತ್ ಶಿಲೆ; ಶ್ರೀರಾಮ ಮೂರ್ತಿ ಕೆತ್ತನೆಗೆ ಕಾರ್ಕಳದ ಕಲ್ಲು ಆಯ್ಕೆ!

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಚಂದ್ರ ದೇಗುಲದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಮೂರ್ತಿಗೆ ಕರ್ನಾಟಕದ ಕಲ್ಲು ಆಯ್ಕೆಯಾಗಿದ್ದು, ಶಿಲ್ಪಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಕಾರ್ಕಳದಿಂದ 2 ಬೃಹತ್ ಶಿಲೆಗಳನ್ನು ಆಯೋಧ್ಯೆಗೆ ರವಾನಿಸಲಾಗಿದೆ.
ರಾಮಮೂರ್ತಿಗೆ ಕರ್ನಾಟಕದ ಕಲ್ಲು
ರಾಮಮೂರ್ತಿಗೆ ಕರ್ನಾಟಕದ ಕಲ್ಲು
Updated on

ಮೈಸೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಚಂದ್ರ ದೇಗುಲದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಮೂರ್ತಿಗೆ ಕರ್ನಾಟಕದ ಕಲ್ಲು ಆಯ್ಕೆಯಾಗಿದ್ದು, ಶಿಲ್ಪಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಕಾರ್ಕಳದಿಂದ 2 ಬೃಹತ್ ಶಿಲೆಗಳನ್ನು ಆಯೋಧ್ಯೆಗೆ ರವಾನಿಸಲಾಗಿದೆ.

ಹೌದು.. ಶ್ರೀರಾಮ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಶಿಲೆ ಕಲ್ಲು ಆಯ್ಕೆಯಾಗಿದ್ದು, ಈ ಮೂಲಕ ಶಿಲ್ಪಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಕಾರ್ಕಳದ ಹಿರಿಮೆ ಮತ್ತಷ್ಟು ಹೆಚ್ಚಿದೆ. ಕಾರ್ಕಳದ ಈದು ಗ್ರಾಮದ ತುಂಗಾ ಪೂಜಾರಿಯವರ ಮನೆಯಿಂದ ನೆಲ್ಲಿಕಾರು ಶಿಲಾಕಲ್ಲನ್ನು ಬೃಹತ್ ಲಾರಿ ಮೂಲಕ ಅಯೋಧ್ಯೆಗೆ ಸಾಗಿಸಲಾಯಿತು. ಕಾರ್ಕಳದ ನೆಲ್ಲಿಕಾರು ಶಿಲೆಯು ಅಯೋಧ್ಯೆಯಲ್ಲಿ ಮೂರ್ತಿ ನಿರ್ಮಾಣದ ಮೂಲಕ ಮತ್ತೆ ಪಾವಿತ್ರ್ಯತೆ ಪಡೆಯಲಿದೆ.

ಗುರುವಾರ ರಾತ್ರಿ ವಿಶೇಷ ಪೂಜೆ ನಡೆಸುವ ಮೂಲಕ, ದೊಡ್ಡ ಲಾರಿಯಲ್ಲಿ ಭಾರಿ ತೂಕದ ಕಲ್ಲನ್ನು ತೆಗೆದುಕೊಂಡು ಹೋಗಲಾಗಿದೆ. ಕಾರ್ಕಳದ ಈದು ಗ್ರಾಮದ ತುಂಗ ಪುಜಾರಿಯವರ ಭೂಮಿಯಲ್ಲಿದ್ದ ಕಲ್ಲನ್ನು ಆಯ್ಕೆ ಮಾಡಲಾಗಿತ್ತು. ಈ ಬೆನ್ನಲ್ಲೆ ರಾಜ್ಯ ಬಿಜೆಪಿ ನಾಯಕರು ಟ್ವೀಟ್‌ ಮಾಡಿದ್ದಾರೆ.

ಮೂರ್ತಿ ನಿರ್ಮಾಣಕ್ಕೆ ಯೋಗ್ಯ ಕಲ್ಲನ್ನು ಹುಡುವ ಕಾರ್ಯ ಹಲವು ತಿಂಗಳಿಂದ ನಡೆಯುತ್ತಿತ್ತು. ಈ ಹಿನ್ನಲೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಖ್ಯಾತ ಶಿಲಾ ತಜ್ಞ ಕುಶೀಪ್ ಬನ್ಸಾಲ್, ಸೇರಿದಂತೆ ಇತರ ತಜ್ಞರ ಜೊತೆಗೂಡಿ ಸ್ಥಳಿಯ ಭಜರಂಗದಳ ಕಾರ್ಯಕರ್ತರು ಕಾರ್ಕಳದ ನೆಲ್ಲಿಕಾರು ಶಿಲೆಯನ್ನು ಪರಿಶೀಲಿಸಿದ್ದರು. ಈ ಶಿಲೆಯು 10 ಟನ್ ತೂಕ, 7 ಅಡಿ ಉದ್ದ, 6 ಅಡಿ ಅಗಲ ಮತ್ತು 4 ಅಡಿ ದಪ್ಪವಿದೆ.

ದೆಹಲಿಯ ಗುರುಗಾವ್ ರಸ್ತೆಯಲ್ಲಿರುವ 15 ಅಡಿ ಎತ್ತರದ ಮಹಾವೀರ ವಿಗ್ರಹ, ಅದಲ್ಲದೆ ದೆಹಲಿಯ ಮಹಾವೀರನ ಪ್ರತಿಮೆ, ಗುರುವಾಯೂರಿನ ಶ್ರೀಕೃಷ್ಣ, ಕೆನಡಾ ಟೊರಂಟೊದಲ್ಲಿ ದೇವೇಂದ್ರ ದೇವರ ವಿಗ್ರಹ, ಜಪಾನ್ ಅವಲೋಹಿತೇಶ್ವರ ಪ್ರತಿಮೆ, ಇಂಗ್ಲೆಂಡ್ ಮ್ಯೂಸಿಯಂನಲ್ಲಿರುವ ಕೃಷ್ಣನ ವಿಗ್ರಹ, ಇತ್ತೀಚೆಗೆ ಮಲೇಷಿಯಾದಲ್ಲಿ ದುರ್ಗ ಗುರುವಾರ ಕ್ರೇನ್ ಮೂಲಕ ಮೇಲಕ್ಕೆತ್ತಿ ಬಜಗೋಳಿ ಅಯ್ಯಪ್ಪ ಮಂದಿರಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಗೆ ಕಳುಹಿಸುವ ಕೆಲಸ ಮಾಡಲಾಗಿದೆ. ಗಣ್ಯರ ಸಮ್ಮುಖದಲ್ಲಿ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀರಾಮನ ವಿಗ್ರಹಕ್ಕೆ ಯಾವ ಕಲ್ಲು ಆಯ್ಕೆ?
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾತನಾಡಿ, ಭಾರತದಲ್ಲಿ ಅಂತಹ ಕಲ್ಲುಗಳು ಎಲ್ಲೆಲ್ಲಿ ಲಭ್ಯವಿದ್ದರೂ ಅವುಗಳನ್ನು ಖರೀದಿಸಲಾಗುತ್ತಿದೆ. ಚಂಪತ್ ರಾಯ್ ಅವರ ಪ್ರಕಾರ, ಆಮದು ಮಾಡಿದ ಕಲ್ಲುಗಳಿಂದಲೇ ವಿಗ್ರಹಗಳನ್ನು ತಯಾರಿಸುವ ಅಗತ್ಯವಿಲ್ಲ. ಮೂರ್ತಿ ಮಾಡಲು ಯಾವ ಕಲ್ಲನ್ನು ಬಳಸಬಹುದೆಂಬುದನ್ನು ಶಿಲ್ಪಕಲೆ ತಜ್ಞರು ಮಾತ್ರ ನಿರ್ಧರಿಸುತ್ತಾರೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.

ಶಿಲ್ಪ ತಜ್ಞರಿಂದ ಒಪ್ಪಿಗೆ ದೊರೆತ ನಂತರವೇ ರಾಮಲಲ್ಲ ಮೂರ್ತಿ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ಗಮನಾರ್ಹವಾಗಿ, ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮನ ನಗರದಲ್ಲಿ ಭಗವಾನ್ ರಾಮನ ಭವ್ಯವಾದ ದೇವಾಲಯವನ್ನು ನಿರ್ಮಿಸಲಾಗುತ್ತಿದೆ. ಮಂದಿರದ ನಿರ್ಮಾಣ ಕಾರ್ಯ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ದೇವಸ್ಥಾನದಲ್ಲಿನ ಗರ್ಭ ಗುಡಿ ಕೆಲಸವು ಡಿಸೆಂಬರ್ 2023 ರಲ್ಲಿ ಪೂರ್ಣಗೊಳ್ಳುತ್ತದೆ ಮತ್ತು ಜನವರಿ 2024 ರಲ್ಲಿ ಅಂದರೆ ಮಕರ ಸಂಕ್ರಾಂತಿಯ ದಿನದಂದು, ಭಗವಾನ್ ರಾಮನು ತನ್ನ ಗರ್ಭ ಗುಡಿಯಲ್ಲಿ ವಿರಾಜಮಾನನಾಗುತ್ತಾನೆ. ಇನ್ನೊಂದೆಡೆ ಶ್ರೀರಾಮನ ಪ್ರತಿಮೆಗೆ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಅಯೋಧ್ಯೆಗೆ ಕಲ್ಲು ತರಲಾಗುತ್ತಿದೆ.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸಂತಸ
ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಟ್ವೀಟ್‌ ಮಾಡಿ, ಅಯೋಧ್ಯೆಯ ಶ್ರೀ ರಾಮ ಮೂರ್ತಿಗೆ ಆಯ್ಕೆಯಾದ ಕಾರ್ಕಳದ ಕೃಷ್ಣಶಿಲೆ ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎನ್ನುವಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭ್ಯವ ಪ್ರಭು ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆ ಆಯ್ಕೆಯಾಗಿದೆ ಎಂದಿದ್ದಾರೆ.

ಕಾರ್ಕಳ ಶಿಲ್ಪಿಗಳ ತವರೂರು
ಕಾರ್ಕಳದ ನೆಲ್ಲಿಕಾರಿನ ಶಿಲೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದು ದೇಶದ ರಾಷ್ಟ್ರಪತಿ ಭವನದಲ್ಲಿರುವ ಕಾರ್ಕಳ ಬಾಹುಬಲಿ, ಮಾನಸ್ತಂಭ ಪ್ರತಿಕೃತಿ, ಕವಿ ಮುದ್ದಣ, ಮಿಥುನ ನಾಗ ,ಸೋಮನಾಥ ಪುರದ ದ್ವಾರ, ಗಜಸಿಂಹ,ಗೇಟ್ ವೇ, ಕಲ್ಲಿನ ಕಾರಂಜಿ, ಚೆನ್ನಿಗರಾಯ ದೇವರು ಸೇರಿದಂತೆ ಒಟ್ಟು ಹತ್ತು ವಿಗ್ರಹಗಳನ್ನು ಇಡಲಾಗಿದೆ. ಶಿಲ್ಪಿಗಳ ತವರೂರು ಎಂದೇ ಖ್ಯಾತವಾಗಿರುವ ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆ ಆಯ್ಕೆಯಾಗಿದ್ದು, ಪೂರ್ತಿ ವಿಶ್ವವೇ ಈ ಶಿಲೆಯಿಂದ ರೂಪುಗೊಳ್ಳಲಿರುವ ಭಗವಾನ್ ಶ್ರೀ ರಾಮನ ದರ್ಶನ ಪಡೆಯಲಿದೆ ಎಂಬುದು ನಮ್ಮನ್ನು ಪುಳಕಿತರನ್ನಾಗಿ ಹಾಗೂ ಪುನೀತರನ್ನಾಗಿಸುವಂತಹದಾಗಿದೆ. ಈ ಸೇವೆ ಮಾಡುವ ಅವಕಾಶವನ್ನು ರಾಜ್ಯಕ್ಕೆ ನೀಡಿದ ಪ್ರಭು ಶ್ರೀ ರಾಮನಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ಜೈ ಶ್ರೀರಾಮ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಟ್ವೀಟ್‌ ಮಾಡಿ ಸಂತಸ ಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com