ಗದಗ ಕ್ರಿಕೆಟ್ ಲೀಗ್ ಕೇವಲ ಒಂದು ಕ್ರೀಡೆಯಲ್ಲ, ಯುವ ಜನತೆಯ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ

ಐಪಿಎಲ್ ಮಾದರಿಯಲ್ಲಿ ಗದಗ ಪ್ರೀಮಿಯರ್ ಲೀಗ್ ಕೂಡಾ ನಡೆಯುತ್ತದೆ.   ಗದಗ ಕ್ರಿಕೆಟ್ ಲೀಗ್ ಸೇರಿದಂತೆ ಸಾಂಪ್ರದಾಯಿಕ ಕ್ರೀಡೆಗಳ ಸ್ಪರ್ಧೆಗಳನ್ನು ಹೊಂದಿರುವ ಗದಗ ಹಬ್ಬ ನಗರ ಮತ್ತು ಗ್ರಾಮೀಣ ಜನರನ್ನು ಆಕರ್ಷಿಸುತ್ತಿದೆ. 
ಗದಗ ಕ್ರಿಕೆಟ್ ಲೀಗ್
ಗದಗ ಕ್ರಿಕೆಟ್ ಲೀಗ್

ಗದಗ: ಧರ್ಮ, ಭಾಷೆ, ಜನಾಂಗ ಮತ್ತು ಯುದ್ಧಗಳಿಂದ ವಿಭಜಿತವಾಗಿರುವ ಜಗತ್ತಿನಲ್ಲಿ, ಜನರನ್ನು ಬೆಸೆಯುವ ಇನ್ನೂ ಕೆಲವು ಅಂಶಗಳಿವೆ. ಇವುಗಳಲ್ಲಿ ಪ್ರಮುಖವಾಗಿ ಕ್ರೀಡೆಗಳಾಗಿವೆ. 8 ನೇ ಶತಮಾನದಲ್ಲಿ ಒಲಂಪಿಕ್ ಕ್ರೀಡಾಕೂಟ ಪ್ರಾರಂಭದ ಏಳು ದಿನಗಳ ಮೊದಲು ದೇಶಗಳು ಎಲ್ಲಾ ಶಸಾಸ್ತ್ರಗಳನ್ನು ತ್ಯಜಿಸುತ್ತಿದ್ದವು. ಇದರಿಂದ ಕಾರ್ಯಕ್ರಮ ಕೊನೆಯಲ್ಲಿ ಎಲ್ಲಾ ಘರ್ಷಣೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡು ಕ್ರೀಡಾಪಟುಗಳು, ಅವರ ಕುಟುಂಬಗಳು ಮತ್ತು ಸಂದರ್ಶಕರು ಯಾವುದೇ ತೊಂದರೆಯಿಲ್ಲದೆ ಮನೆಗೆ ಮರಳುತ್ತಿದ್ದರು. 

ಆಧುನಿಕ ಇತಿಹಾಸದಲ್ಲಿ  2018 ರ ಚಳಿಗಾಲದ ಒಲಂಪಿಕ್ಸ್‌  ಉದ್ಘಾಟನಾ ಸಮಾರಂಭದಲ್ಲಿ ಕೊರಿಯಾ ದೇಶಗಳು ಒಟ್ಟಾಗಿ ನಡೆಯುವ ಮೂಲಕ ಜನರಲ್ಲಿ ಸ್ಪೂರ್ತಿಯನ್ನುಂಟು ಮಾಡಿದವು.  ಜನರನ್ನು ಒಂದುಗೂಡಿಸುವುದು ಹಾಗೂ ಜನರಲ್ಲಿ ಪ್ರೇರಣೆಯನ್ನುಂಟು ಮಾಡುವುದು ಕ್ರೀಡಾಕೂಟದ ಪ್ರಮುಖ ಉದ್ದೇಶವಾಗಿರುತ್ತದೆ.  ಪ್ರತಿ ಬೇಸಿಗೆ ಸಂದರ್ಭದಲ್ಲಿ ಐಪಿಎಲ್ ನಮ್ಮನ್ನು ಆಕರ್ಷಿಸುತ್ತದೆ. ಐಪಿಎಲ್ ಮಾದರಿಯಲ್ಲಿ ಗದಗ ಪ್ರೀಮಿಯರ್ ಲೀಗ್ ಕೂಡಾ ನಡೆಯುತ್ತದೆ. ಗದಗ ಕ್ರಿಕೆಟ್ ಲೀಗ್ ಸೇರಿದಂತೆ ಸಾಂಪ್ರದಾಯಿಕ ಕ್ರೀಡೆಗಳ ಸ್ಪರ್ಧೆಗಳನ್ನು ಹೊಂದಿರುವ ಗದಗ ಹಬ್ಬ ನಗರ ಮತ್ತು ಗ್ರಾಮೀಣ ಜನರನ್ನು ಆಕರ್ಷಿಸುತ್ತಿದೆ.

ಗದಗ ಸಾಂಸ್ಕೃತಿಕ  ಅಕಾಡೆಮಿ ಆಯೋಜಿಸಿರುವ ಈ ಕ್ರೀಡಾ ಸಂಭ್ರಮ ಗ್ರಾಮೀಣ ಮತ್ತು ನಗರ ಪ್ರದೇಶದ ಯುವ ಜನತೆ ಪ್ರತಿಭೆ ಪ್ರದರ್ಶಿಸಲು ವೇದಿಕೆ ಕಲ್ಪಿಸುತ್ತದೆ. ಕ್ರಿಕೆಟ್ ಅಲ್ಲದೆ, ದೇಸಿ ಆಟಗಳಾದ ಕೇರಂ, ಲಗೋರಿ, ದಂಗಲ್, ಬುಗುರಿ, ಮತ್ತು ಮಾರ್ಬಲ್ಸ್ ಜೊತೆಗೆ ಕ್ರಿಕೆಟ್, ಖೋ-ಖೋ, ಫುಟ್‌ಬಾಲ್, ಕಬಡ್ಡಿ, ಕರಾಟೆ ಮತ್ತು ಇತರ ಒಳಾಂಗಣ ಮತ್ತು ಹೊರಾಂಗಣ ಆಟಗಳನ್ನು ಆಯೋಜಿಸಲಾಗುತ್ತದೆ.

ಈ ಬಾರಿ ಗದಗ ಜಿಲ್ಲೆಯಾದ್ಯಂತ 130 ತಂಡಗಳು ಭಾಗವಹಿಸಿದ್ದು, ಕ್ರೀಡೆಯನ್ನು ಜನಪ್ರಿಯಗೊಳಿಸಲು ಮತ್ತು ಮುಖ್ಯವಾಗಿ ಜನರನ್ನು ಒಗ್ಗೂಡಿಸಲು ಜಿಸಿಎಲ್ ನೆರವಾಗಿದೆ. ಗದಗ ಸಾಂಸ್ಕೃತಿಕ ಅಕಾಡೆಮಿಯಡಿ 2011ರಲ್ಲಿ ಅನಿಲ್ ಮೆಣಸಿನಕಾಯಿ ಗದಗ ಕ್ರಿಕೆಟ್ ಲೀಗ್ ಗೆ ಚಾಲನೆ ನೀಡಿದ್ದರು. ಸ್ಥಳೀಯ ಉದ್ಯಮಿಗಳು ಕೆಲವೊಂದು ತಂಡಗಳನ್ನು ಪ್ರಾಯೋಜಿಸುವುದರೊಂದಿಗೆ ಗದಗ ಸಾಂಸ್ಕೃತಿಕ ಅಕಾಡೆಮಿ ಇತರ ವೆಚ್ಚಗಳನ್ನು ಭರಿಸುತ್ತದೆ. 

ಅಕ್ಟೋಬರ್‌ನಲ್ಲಿ ಗದಗದ ಹೊರಾಂಗಣ ಕ್ರೀಡಾಂಗಣದಲ್ಲಿ ಗದಗ ಕ್ರಿಕೆಟ್ ಲೀಗ್ ನಡೆಸಲು ನಿರ್ಧರಿಸಲಾಗಿತ್ತು, ಆದರೆ ನಿರಂತರ ಮಳೆಯಿಂದಾಗಿ ಡಿಸೆಂಬರ್‌ಗೆ ಮುಂದೂಡಲಾಯಿತು. ಗದಗ ಪಟ್ಟಣದ ಎಲ್ಲಾ 35 ವಾರ್ಡ್‌ಗಳ ತಂಡಗಳು ಮತ್ತು ಜಿಲ್ಲೆ ಮತ್ತು ಸುತ್ತಮುತ್ತಲಿನ ತಾಲೂಕಿನ ಗ್ರಾಮಗಳು ಭಾಗವಹಿಸಿದ್ದವು. ಆರಂಭದಲ್ಲಿ, ಕ್ರಿಕೆಟ್ ಪಂದ್ಯಗಳು ಸಾಧಾರಣ ಪ್ರೇಕ್ಷಕರನ್ನು ಆಕರ್ಷಿಸಿದವು, ಆದರೆ ಜನವರಿ ಎರಡನೇ ವಾರದ ಹೊತ್ತಿಗೆ, ಸಾವಿರಾರು ಜನರು ಸೇರಲು ಪ್ರಾರಂಭಿಸಿದರು. ಗ್ರಾಮಾಂತರ ಪ್ರದೇಶಗಳಿಂದ ಜನರು ಟ್ರ್ಯಾಕ್ಟರ್‌ಗಳಲ್ಲಿ ತಮ್ಮ ತಂಡಗಳನ್ನು ಬೆಂಬಲಿಸಲು ತೆರಳಿದರು. ಉತ್ತೇಜಿಸಲು ಪಾಲ್ಗೊಳ್ಳುವವರಿಗೆ  ಪ್ರವೇಶ ಉಚಿತವಾಗಿದೆ. ಕೆಲವು ಕೇಬಲ್ ಟಿವಿ ಚಾನೆಲ್‌ಗಳು ಟಿವಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಲೈವ್ ಸ್ಟ್ರೀಮ್ ಮಾಡುತ್ತವೆ.

ಗದಗ ಪಟ್ಟಣದ ವಾಣಿಜ್ಯೋದ್ಯಮಿ ಕಾಂತೇಶ ಹಾನಗಲ್ ಮಾತನಾಡಿ, ಗದಗ ಕ್ರಿಕೆಟ್ ಲೀಗ್ ಈಗ ಸಾಕಷ್ಟು ಜನರನ್ನು ಆಕರ್ಷಿಸುತ್ತಿದೆ. ಸ್ಥಳೀಯ ಆಟಗಾರರನ್ನು ಪ್ರೋತ್ಸಾಹಿಸಲು ಮತ್ತು ಬೆಂಬಲಿಸಲು ಇಂತಹ ಕಾರ್ಯಕ್ರಮಗಳನ್ನು ಆಗಾಗ್ಗೆ ನಡೆಸಬೇಕು. ಗದಗ ಕಲ್ಚರಲ್ ಅಕಾಡೆಮಿ ಉತ್ತಮ ಕೆಲಸ ಮಾಡುತ್ತಿದೆ ಮತ್ತು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಆಟಗಾರರು ಭಾಗವಹಿಸುವ ಭರವಸೆ ಇದೆ ಎಂದರು. 

ಮೆಣಸಿನಕಾಯಿ ಮಾತನಾಡಿ,  ಜಿಸಿಎಲ್‌ನ ಮೂರನೇ ಆವೃತ್ತಿ ಆಯೋಜಿಸಿದ್ದೇವೆ ಮತ್ತು ಈ ಬಾರಿ, ವಿಶೇಷವಾಗಿ ಗ್ರಾಮೀಣ ಪ್ರದೇಶದಿಂದ ಯುವಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಗ್ರಾಮೀಣ ಭಾಗದ ಕೆಲ ಮಹಿಳೆಯರು ದೇಸಿ ಕ್ರೀಡಾ ಸ್ಪರ್ಧೆಗಳಲ್ಲಿ ಆಸಕ್ತಿ ತೋರಿದರು. ಗದಗವನ್ನು ಕ್ರೀಡಾ ನಗರವನ್ನಾಗಿ ಮಾಡಲು ನಮ್ಮ ಸಂಸ್ಥೆ ಶ್ರಮಿಸುತ್ತಿದೆ. ನಮ್ಮ ಆಟಗಾರರು ಈಗ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ ಮತ್ತು ನಾವು ಉತ್ತಮ ವೇದಿಕೆಯನ್ನು ಒದಗಿಸಿದರೆ, ಯುವಕರು ಉನ್ನತ ಎತ್ತರವನ್ನು ತಲುಪಬಹುದು ಎಂದರು. 

ಗದಗ ಹಬ್ಬ ಎಂದು ಕರೆಯಲ್ಪಡುವ ಗದಗ ಉತ್ಸವವನ್ನು ಕಳೆದ ಆಗಸ್ಟ್‌ನಲ್ಲಿ  ಸಾಂಪ್ರದಾಯಿಕ ಪಗಡೆ ಆಟದೊಂದಿಗೆ ಪ್ರಾರಂಭಿಸಲಾಯಿತು. ಜಿಲ್ಲೆಯ ಹಿರಿಯ ನಾಯಕರಾದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹಾಗೂ ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com