ವನ್ಯಜೀವಿಗಳ ನಿರ್ವಹಣೆಗೆ ಬೇಕಿರುವುದು ವಿಜ್ಞಾನವೇ ಹೊರತು ಭಾವನೆಗಳಲ್ಲ: ಉಲ್ಲಾಸ್ ಕಾರಂತ್

ರಾಜ್ಯದಲ್ಲಿ ಮನುಷ್ಯ- ಪ್ರಾಣಿಗಳ ಸಂಘರ್ಷದ ಪ್ರಕರಣಗಳು ಏರಿಕೆಯಾಗುತ್ತಿದ್ದು, ಅರಣ್ಯ ಪ್ರದೇಶಗಳು ಕುಸಿತ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಂರಕ್ಷಣಾ ಆದ್ಯತೆಗಳ ಮರು ಜೋಡಣೆ ಅಗತ್ಯ ಎನ್ನುತ್ತಾರೆ ಜೀವಶಾಸ್ತ್ರಜ್ಞ ಮತ್ತು ಸಂರಕ್ಷಣಾಧಿಕಾರಿ ಡಾ ಕೆ ಉಲ್ಲಾಸ್ ಕಾರಂತ್.
ಡಾ. ಉಲ್ಲಾಸ್ ಕಾರಂತ್
ಡಾ. ಉಲ್ಲಾಸ್ ಕಾರಂತ್

ರಾಜ್ಯದಲ್ಲಿ ಮನುಷ್ಯ- ಪ್ರಾಣಿಗಳ ಸಂಘರ್ಷದ ಪ್ರಕರಣಗಳು ಏರಿಕೆಯಾಗುತ್ತಿದ್ದು, ಅರಣ್ಯ ಪ್ರದೇಶಗಳು ಕುಸಿತ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಂರಕ್ಷಣಾ ಆದ್ಯತೆಗಳ ಮರು ಜೋಡಣೆ ಅಗತ್ಯ ಎನ್ನುತ್ತಾರೆ ವನ್ಯಜೀವಿ ಅಧ್ಯಯನ ಕೇಂದ್ರದಿಂದ ಖ್ಯಾತ ಹುಲಿ ಜೀವಶಾಸ್ತ್ರಜ್ಞ ಮತ್ತು ಸಂರಕ್ಷಣಾಧಿಕಾರಿ ಡಾ ಕೆ ಉಲ್ಲಾಸ್ ಕಾರಂತ್. 

ದಿ ನ್ಯೂ ಸಂಡೇ ಎಕ್ಸ್ ಪ್ರೆಸ್ ನ ಸಂಪಾದಕರು ಹಾಗೂ ಸಿಬ್ಬಂದಿಗಳ ಜೊತೆಗಿನ ಸಂವಹನದಲ್ಲಿ ಉಲ್ಲಾಸ್ ಕಾರಂತ್ ವನ್ಯಜೀವಿ ಹಾಗೂ ಮನುಷ್ಯ ಸಂಘರ್ಷದ ಬಗ್ಗೆ ಹಾಗೂ ಅದಕ್ಕೆ ಕಂಡುಕೊಳ್ಳಬೇಕಾದ ಪರಿಹಾರಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದು, ಸ್ವಯಂಪ್ರೇರಣೆಯಿಂದ ಆ ಕೆಲಸ ತೆಗೆದುಕೊಳ್ಳುತ್ತಿದ್ದ ಅರಣ್ಯವಾಸಿಗಳಿಗೆ ಪುನರ್ವಸತಿ ಕಲ್ಪಿಸುವಲ್ಲಿ ಕರ್ನಾಟಕ ಹಿಂದೆ ಮುಂದಿತ್ತು, ಆದರೆ ಈಗ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಿಗಿಂತ ಹಿಂದುಳಿದಿದೆ. ವನ್ಯಜೀವಿ ನಿರ್ವಹಣೆಯಲ್ಲಿ ಭಾವನೆಗಳಿಗಿಂತ ವಿಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಒತ್ತಿ ಹೇಳಿದ್ದಾರೆ. 

"ಮಾನವ-ವಜ್ಯಜೀವಿಗಳ ಸಂಘರ್ಷಗಳನ್ನು ಗಣನೀಯವಾಗಿ ತಡೆಯುವ, ವನ್ಯಜೀವಿಗಳ ಆವಾಸಸ್ಥಾನಗಳನ್ನು ವಿಸ್ತರಿಸುವ ಮತ್ತು ಅಭಿವೃದ್ಧಿಯ ಕೊರತೆ ಮತ್ತು ವನ್ಯಜೀವಿಗಳೊಂದಿಗೆ ದೀರ್ಘಕಾಲಿಕ ಸಂಘರ್ಷದಿಂದ ಬಳಲುತ್ತಿರುವ ಕುಟುಂಬಗಳ ಜೀವನ ಮತ್ತು ಜೀವನೋಪಾಯವನ್ನು ಸುಧಾರಿಸುವ ಈ ಮಹತ್ವದ ಕ್ರಮವನ್ನು ನಿರ್ಲಕ್ಷ್ಯಿಸಿದ್ದಾರೆ ಎಂದು ಕಾರಂತ್ ಅಭಿಪ್ರಾಯಪಟ್ಟಿದ್ದಾರೆ.
 
ಸಂದರ್ಶನದ ಪ್ರಮುಖಾಂಶಗಳು ಹೀಗಿವೆ....

ಮಾನವ-ಹುಲಿ ಸಂಘರ್ಷದ ಪ್ರಕರಣಗಳು ಏಕೆ ಹೆಚ್ಚುತ್ತಿವೆ? ಇದಕ್ಕೆ ಸಂಖ್ಯೆ ಹೆಚ್ಚುತ್ತಿರುವುದು ಕಾರಣವೇ? ಅಥವಾ ಅವುಗಳ ಆವಾಸಸ್ಥಾನಗಳು ಕುಗ್ಗುತ್ತಿರುವ ಕಾರಣವೇ?

ಮೊದಲನೆಯದು ಇದು ಭಾರತದ ಭೂಪ್ರದೇಶದ ಶೇಕಡಾ 1 ಕ್ಕಿಂತ ಕಡಿಮೆ ಇರುವ ಕೆಲವು ಮೀಸಲುಗಳಿಗೆ ಸೀಮಿತವಾದ ಸ್ಥಳೀಯ ಸಮಸ್ಯೆಯಾಗಿದೆ. ವಿಪರ್ಯಾಸವೆಂದರೆ  ಈ ಸಂಘರ್ಷಗಳು ಎದುರಾಗುತ್ತಿರುವ ಭಾರತದ ಭಾಗಗಳಲ್ಲಿ ಅರಣ್ಯಗಳು ಕಡಿಮೆ ವಿಸ್ತಾರವಾಗಿದೆ. ಆದರೆ ಮಾನವ ಪ್ರಭಾವಗಳಿಂದ ಮತ್ತು ಪಶ್ಚಿಮ ಘಟ್ಟಗಳಂತಹ ಪ್ರದೇಶಗಳಲ್ಲಿ ಮತ್ತು ಮಧ್ಯಪ್ರದೇಶ ಮತ್ತು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಹೆಚ್ಚು ಆರ್ಥಿಕ ಅಭಿವೃದ್ಧಿ ಇರುವೆಡೆಗಳಿಗಿಂತ ಉತ್ತಮವಾಗಿ ರಕ್ಷಿಸಲ್ಪಟ್ಟಿದೆ. ಇದಕ್ಕೆ ವ್ಯತಿರಿಕ್ತವಾಗಿ, ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಈಶಾನ್ಯ ಗುಡ್ಡಗಾಡು ರಾಜ್ಯಗಳ ಹೆಚ್ಚು ವಿಸ್ತಾರವಾದ ಕಾಡುಗಳಲ್ಲಿ, ಬಹಳ ಕಡಿಮೆ ಸಂಘರ್ಷವಿದೆ. ಕಳಪೆ ರಕ್ಷಣೆಯ ಕಾರಣದಿಂದ ಸ್ಥಳೀಯರು ಹೆಚ್ಚು ಬೇಟೆಯಾಡುವಿಕೆಯ ಪರಿಣಾಮದಿಂದ ಬೇಟೆ ಮತ್ತು ಹುಲಿಗಳ ಜನಸಂಖ್ಯೆಯು ನಾಶವಾಗಿದೆ. ಅಂತಹ ಘರ್ಷಣೆಗಳು ಇರುವ ಸಣ್ಣ ಪ್ರದೇಶಗಳಲ್ಲಿ, ಕಳೆದ 50 ವರ್ಷಗಳಲ್ಲಿ ವನ್ಯಜೀವಿಗಳನ್ನು ಮರಳಿ ತರುವಲ್ಲಿ ನಮ್ಮ ಯಶಸ್ಸಿಗೆ ನಾವು ಬೆಲೆ ತೆರಬೇಕಾಗುತ್ತದೆ. ಆದ್ದರಿಂದ, ವನ್ಯಜೀವಿಗಳು ಎಲ್ಲೆಡೆ ಹಿಂತಿರುಗಿವೆ ಮತ್ತು ಅದನ್ನು ದೊಡ್ಡ ಸಮಸ್ಯೆ ಎಂದು ನೀವು ಹೇಳಲು ಸಾವಾಗುವುದಿಲ್ಲ.

ಇದನ್ನೂ ಓದಿ: ನೀವು ಬಳಸುತ್ತಿರುವ ಜೇನುತುಪ್ಪ ಶುದ್ಧವಾಗಿದೆಯೇ..? ಪರೀಕ್ಷಿಸಲು ಬರುತ್ತಿದೆ ಪ್ರಯೋಗಾಲಯಗಳು!
 
ಹಾಗಾದರೆ ಸಂಘರ್ಷ ಏಕೆ ಹೆಚ್ಚಿದೆ?
ಕೆಲವೆಡೆ ಪ್ರಾಣಿಗಳ ಸಾಂದ್ರತೆ ಹೆಚ್ಚಿರುವುದು ಒಂದು ಕಾರಣ. ಉದಾಹರಣೆಗೆ, 1960 ರ ದಶಕದಲ್ಲಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ 100 ಕ್ಕಿಂತ ಕಡಿಮೆ ಕಾಡು ಹುಲಿಗಳು ಇದ್ದವು, ಇಂದು ಅವುಗಳ ಸಂಖ್ಯೆ 300 ಕ್ಕಿಂತ ಹೆಚ್ಚಾಗಿವೆ. ಪ್ರಾಣಿಗಳು ಬರುತ್ತಿವೆ ಮತ್ತು ನಾವು ಅವುಗಳನ್ನು ಆಹಾರ ಮತ್ತು ನೀರು ಇತ್ಯಾದಿಗಳನ್ನು ಒದಗಿಸುವ ಮೂಲಕ ಅವುಗಳ ನೈಸರ್ಗಿಕ ಆವಾಸಸ್ಥಾನಗಳಲ್ಲಿ ಇರಿಸಬೇಕಾಗಿದೆ ಎಂಬುದು ನಮ್ಮ ಸಾಮಾನ್ಯ ತಪ್ಪು ಗ್ರಹಿಕೆಯಾಗಿದೆ. ನಾವು ಪ್ರಾಣಿಗಳಿಗೆ ಆಹಾರದ ವ್ಯವಸ್ಥೆ ಮಾಡುವ ಅಗತ್ಯವಿಲ್ಲ. ವನ್ಯ ಪ್ರಾಣಿಗಳು ಸಾಕು ಪ್ರಾಣಿಗಳಲ್ಲ. ಕೆಲವೊಮ್ಮೆ ಆನೆಗಳು ನೀರು ಅಥವಾ ಕಬ್ಬಿನಂತಹ ಬೆಳೆಗಳಿಗೆ ಆಕರ್ಷಿತವಾಗುತ್ತವೆ. ಕಾರಣಗಳು ಎಲ್ಲಾ ಕಡೆ ಒಂದೇ ಆಗಿರುವುದಿಲ್ಲ. ಇತರ ಸ್ಥಳಗಳಲ್ಲಿ ಸಂಪರ್ಕಗಳು ಮತ್ತು ಆವಾಸಸ್ಥಾನಗಳು ಮುರಿದುಹೋಗಿವೆ ಮತ್ತು ಅತಿಕ್ರಮಣಗಳು ನಡೆಯುತ್ತಿವೆ ಇದು ವಿಶೇಷವಾಗಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಜಾರಿಗೊಳಿಸಿದ ನಂತರ ಉಂಟಾಗಿರುವ ಪರಿಸ್ಥಿತಿಯಾಗಿದೆ. ವನ್ಯಜೀವಿ ಪ್ರದೇಶಗಳಿಗೆ ಒಳನುಗ್ಗುವ ಅಭಿವೃದ್ಧಿ ಯೋಜನೆಗಳು, ಆ ಪ್ರದೇಶಗಳಿಗೆ ಜನರ ಒಳಹರಿವನ್ನು ತರುವ ಕಾರಣದಿಂದ ಸಂಘರ್ಷ ಏರ್ಪಡುತ್ತದೆ.

ಮನುಷ್ಯ-ವನ್ಯಜೀವಿಗಳ ಸಂಘರ್ಷವನ್ನು ಪರಿಣಾಮಕಾರಿ ನಿರ್ವಹಣೆ ಮಾಡಲಾಗುತ್ತಿಲ್ಲ ಎನ್ನುತ್ತೀರ ಏಕೆ?

ಇಂತಹ ಪರಿಸ್ಥಿತಿಗಳಲ್ಲಿ ಸರ್ಕಾರಿ ಅಧಿಕಾರಿಗಳು ಇಕ್ಕಟ್ಟಿನಲ್ಲಿ ಸಿಲುಕುತ್ತಾರೆ. ಒಂದೆಡೆ ಸಮಸ್ಯೆಯಾಗಿರುವ ಹುಲಿಗಳನ್ನು ಹತ್ಯೆ ಮಾಡಲು ಸ್ಥಳೀಯರಿಂದ ಒತ್ತಡವಿರುತ್ತದೆ. ಉದಾಹರಣೆಗೆ ಇತ್ತೀಚೆಗೆ ಕೆಲವು ನರಭಕ್ಷಕ ಹುಲಿಗಳ ಘಟನೆಗಳು ವರದಿಯಾಗಿತ್ತು. ಈ ಸಮಸ್ಯೆ ಮನುಷ್ಯರ ಗುಂಪು ಹುಲಿಗಳನ್ನು ಮೂಲೆಗುಂಪು ಮಾಡಿ ಅದರ ಮೇಲೆ ದಾಳಿ ನಡೆಸುವುದಕ್ಕಿಂತಲೂ ವಿಭಿನ್ನವಾಗಿರುತ್ತದೆ. ಆ ಹುಲಿಗಳು ಅದರ ಪಾಡಿಗೆ ಅದನ್ನು ಹೋಗಲು ಬಿಟ್ಟರೆ ಅದರಿಂದ ಯಾವುದೇ ಅಪಾಯ ಉಂಟಾಗುವುದಿಲ್ಲ. ಆದರೆ ಅವುಗಳಿಗೆ ಮನುಷ್ಯನ ಬಗ್ಗೆ ಇರುವ ಸಹಜ ಭಯ ಕಳೆದುಕೊಂಡರೆ, ನರಭಕ್ಷಕನಾಗುತ್ತದೆ. ಇಂತಹ ಘಟನೆಗಳು ನಡೆದಾಗ ಮನುಷ್ಯನ ಮೇಲೆ ಹುಲಿ ದಾಳಿ ನಡೆದರೆ ನೀವು ಹೊಂದಿರುವ ಯಾವುದೇ ಸಾಧನದಿಂದ ಕೊಲ್ಲಬೇಕು ಬೇರೆ ಪರಿಹಾರ ಇರುವುದಿಲ್ಲ. ಅದರೆ ಇಂತಹ ಪರಿಸ್ಥಿತಿಗಳಲ್ಲಿ ಅಧಿಕಾರಿಗಳಿಗೆ  ಸಮಸ್ಯೆಗೆ ಹೆಚ್ಚು ಹತ್ತಿರುವ ಇರುವ ಸ್ಥಳೀಯರ ಹೊರತಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿ ಹಕ್ಕುಗಳ ಗುಂಪುಗಳಿಂದ ಹೆಚ್ಚು ಒತ್ತಡ ಇರುವುದರಿಂದ ಅಧಿಕಾರಿಗಳು ಹಿಂಜರಿಯುತ್ತಾರೆ. ನರಭಕ್ಷಕ ಹುಲಿಗಳನ್ನು ಬೇರೆಡೆ ಬಿಡಲು ಜಾಗವಿಲ್ಲ. ಅವುಗಳನ್ನು ಬಿಡುವುದು ಇನ್ನೂ ಅಪಾಯಕಾರಿ, ಏಕೆಂದರೆ ಅದು ಪರಿಚಯವಿಲ್ಲದ ಭೂಪ್ರದೇಶದಲ್ಲಿ ಇನ್ನಷ್ಟು ವ್ಯಾಪಕವಾಗಿ ಅಲೆದಾಡುತ್ತದೆ. ರಾಜ್ಯ ಯೋಚನೆ ಮಾಡುವ ರೀತಿಯಲ್ಲಿ ಇಂತಹ ಸಂಘರ್ಷ ಉಂಟುಮಾಡುವ ಹುಲಿಗಳನ್ನು ಸೆರೆ ಹಿಡಿಯುವುದೆಂದರೆ ಇಂತಹ ಎಷ್ಟು ಹುಲಿಗಳನ್ನು ಸೆರೆಹಿಡಿಯುತ್ತೀರಿ? ಮೃಗಾಲಯದಲ್ಲಿ ಪ್ರಾಣಿಗಳನ್ನು ಇರಿಸುವುದು ಸಮಸ್ಯೆಯ ವ್ಯಾಪ್ತಿಯ ದೃಷ್ಟಿಯಿಂದ ಸೂಕ್ತವಲ್ಲ ಹಾಗೂ ಹುಲಿಗಳು ನಿರ್ದಿಷ್ಟ ವಯಸ್ಸಿನ ನಂತರ ಸೆರೆಯಲ್ಲಿರಲು ಒಗ್ಗುವುದಿಲ್ಲ. ಸಂಘರ್ಷ ಉಂಟುಮಾಡುವ ಹುಲಿಗಳ ಕ್ಷಿಪ್ರ ಹತ್ಯೆಯ ಮತ್ತೊಂದು ಸಮಸ್ಯೆ ಎಂದರೆ, ಜನರು ದಯೆಯ ತಪ್ಪು ತಿಳುವಳಿಕೆಯಿಂದ ನ್ಯಾಯಾಲಯದ ಮೊರೆ ಹೋಗುವುದಾಗಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿಸಿಎ) ಸಹ ಆದೇಶ ಹೊರಡಿಸಿದ್ದು, ಸ್ಥಳೀಯ ಅಧಿಕಾರಿಗಳು ಮೊದಲು ಹುಲಿಗಳನ್ನು ಪ್ರಜ್ಞಾಹೀನಗೊಳಿಸಬೇಕು, ಅದೂ ಸಾಧ್ಯವಾಗದೇ ಇದ್ದಲ್ಲಿ ಹುಲಿಯನ್ನು ಹತ್ಯೆ ಮಾಡಬೇಕು ಹೇಳಿದೆ. ಇದು ಅಪ್ರಾಯೋಗಿಕವಾಗಿದೆ. ಇಂತಹ ಆದೇಶಗಳು ಹಾಗೂ ಕೋರ್ಟ್ ಆದೇಶಗಳು ಸ್ಥಳೀಯ ಅಧಿಕಾರಿಗಳಿಗೆ ತೊಡಕಾಗುತ್ತದೆ, ವನ್ಯಜೀವಿಗಳ ನಿರ್ವಹಣೆಗೆ ಬೇಕಿರುವುದು ವಿಜ್ಞಾನವೇ ಹೊರತು ಭಾವನೆಗಳಲ್ಲ".

ಸರ್ಕಾರ ಅರಣ್ಯ ನಿರ್ವಹಣೆಯಲ್ಲಿ ಯಶಸ್ವಿಯಾಗಿದೆಯೇ? ಸಾಕಷ್ಟು ಮಾಡುತ್ತಿದೆಯೇ?

ಬೇರೆ ಏಷ್ಯಾದ ದೇಶಗಳಿಗೆ ಹೋಲಿಕೆ ಮಾಡಿದಲ್ಲಿ, 1960 ಹಾಗೂ 70 ರಿಂದಲೂ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದರ ಪರಿಣಾಮ ನಾವು ಉತ್ತಮ ಕೆಲಸ ಮಾಡುತ್ತಿದ್ದೇವೆ. ಮಾಧ್ಯಮಗಳೂ ವಿಷಯಗಳನ್ನು ಪ್ರಸ್ತಾಪಿಸುತ್ತವೆ. ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತ ಸಂರಕ್ಷಣೆಗಾಗಿ ಹೆಚ್ಚು ಹಣ ಖರ್ಚು ಮಾಡಿದೆ. ಆದರೂ ಒಂದಷ್ಟು ಕೊರತೆಗಳಿವೆ. ಕೆಲವು ರಾಜ್ಯಗಳು ಉತ್ತಮ ಕೆಲಸ ಮಾಡುತ್ತಿವೆ, ಇದೆಲ್ಲಾ ರಾಜಕೀಯ ನಾಯಕತ್ವವನ್ನಾಧರಿಸಿವೆ ಹಾಗೂ ಅಧಿಕಾರಿಗಳನ್ನಾಧರಿಸಿವೆ. ಕರ್ನಾಟಕ 1970 ಹಾಗೂ 80 ರ ವೇಳೆಯಲ್ಲಿ ಅತ್ಯುತ್ತಮವಾಗಿತ್ತು. ಗದಗದಿಂದ ಅರಣ್ಯ ಸಚಿವರಾಗಿದ್ದ ಕೆಹೆಚ್ ಪಾಟೀಲ್ ಭಾರತದ ಶ್ರೇಷ್ಠ ಸಂರಕ್ಷಣಾವಾದಿಗಳಾಗಿದ್ದರು. ಈಗ ಅಂತಹ ಆಸಕ್ತಿ ಯಾರಿಗೂ ಉಳಿದಿಲ್ಲ. ವನ್ಯಜೀವಿಗಳ ಬಗ್ಗೆ ಈಗ ಆಸಕ್ತಿ ಕಡಿಮೆಯಾಗಿದೆ, ಇದು ಎನ್ ಜಿಒಗಳಿಗೂ ಅನ್ವಯವಾಗುತ್ತದೆ.

ಭಾರತಕ್ಕೆ ಚೀತಾಗಳನ್ನು ತರುವುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಭಾರತಕ್ಕೆ ಚೀತಾಗಳನ್ನು ತರುವುದರ ದೃಷ್ಟಿಕೋನ ಉತ್ತಮವಾದದ್ದು, ಆದರೆ ಯೋಜನೆ ಜಾರಿಗೊಳಿಸುತ್ತಿರುವ ರೀತಿ, ಯೋಜನೆಯನ್ನು ಯಶಸ್ವಿಯಾಗಿಸುವುದಿಲ್ಲ. ಮನುಷ್ಯರು, ಚಿರತೆಗಳು ಹಾಗೂ ಹುಲಿಗಳಿಲ್ಲದ  15,000–20,000 ಸ್ಕ್ವೇರ್ ಕಿ.ಮೀ ಪ್ರದೇಶವನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. 20-30 ವರ್ಷಗಳ ಕಾಲ ಇಂತಹ ಶ್ರಮ ವಹಿಸಿದ ಬಳಿಕ ಚೀತಾಗಳನ್ನು ಕರೆತರಬೇಕಾಗುತ್ತದೆ. ಆದರೆ ಇಲ್ಲಿ ಅದು ಕುದುರೆಯ ಮೊದಲು ಬಂಡಿ ತಂದಂತಾಗುತ್ತಿದೆ. 700 ಸ್ಕ್ವೇರ್ ಕಿ.ಮೀ ಅಭಯಾರಣ್ಯವನ್ನು ಗಿರ್ ನ ಸಿಂಹಗಳಿಗೆ ಎರಡನೇ ಆವಾಸಸ್ಥಾನವಾಗಿಸಲು ಉದ್ದೇಶಿಸಲಾಗಿತ್ತು. ಆದರೆ ಆ ಯೋಜನೆಯನ್ನು ಕೈಬಿಟ್ಟು ಈಗ ಆ ಪ್ರದೇಶಕ್ಕೆ ಚೀತಾಗಳನ್ನು ಕರೆತರಲಾಗಿದೆ. ಈಗಿರುವ ಚೀತಾಗಳು ಆವರಣದಲ್ಲೇ ಇರುವುದರಿಂದ ಕಾರ್ಯಸಾಧ್ಯವಾದ ಚೀತಾ ಸಂಖ್ಯೆಯನ್ನು ಪಡೆಯುವುದು ಕಷ್ಟಸಾಧ್ಯವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com