ಭಾರತದಲ್ಲಿ ಚಿರತೆಗಳಿಗೆ ಮನುಷ್ಯರ ಭಯವಿಲ್ಲವೇ? ಇದಕ್ಕೆ ವೈರಸ್ ಕಾರಣವೇ?
ದೇಶದಲ್ಲಿನ ಚಿರತೆಗಳು ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದು, ದೊಡ್ಡ ಬೆಕ್ಕುಗಳು ಮನುಷ್ಯರ ಮೇಲಿನ ಭಯ ಇಲ್ಲದಂತಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇದು ಚಿರತೆಗಳು ಆಗಾಗ್ಗೆ ಆಹಾರಕ್ಕಾಗಿ ಜನವಸತಿ ಪ್ರದೇಶಕ್ಕೆ ಪ್ರವೇಶಕ್ಕೆ ಕಾರಣವಾಗಬಹುದು.
Published: 16th February 2023 08:08 PM | Last Updated: 18th February 2023 03:16 PM | A+A A-

ಚಿರತೆ ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿನ ಚಿರತೆಗಳು ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದು, ದೊಡ್ಡ ಬೆಕ್ಕುಗಳು ಮನುಷ್ಯರ ಮೇಲಿನ ಭಯ ಇಲ್ಲದಂತಾಗಿದೆ ಎಂದು ತಜ್ಞರು ಹೇಳಿದ್ದಾರೆ. ಇದು ಚಿರತೆಗಳು ಆಗಾಗ್ಗೆ ಆಹಾರಕ್ಕಾಗಿ ಜನವಸತಿ ಪ್ರದೇಶಕ್ಕೆ ಪ್ರವೇಶಕ್ಕೆ ಕಾರಣವಾಗಬಹುದು. ಸಾಕು ನಾಯಿಗಳ ಬೇಟೆಯು (ಕ್ಯಾನಿಸ್ ಲೂಪಸ್ ಫ್ಯಾಮಿಲಿಯರಿಸ್) ಸಾಂಕ್ರಾಮಿಕ ಸೋಂಕು ಪ್ರಮುಖ ಸಂಭಾವ್ಯ ಮಾರ್ಗವಾಗಿದೆ ಎನ್ನಲಾಗಿದೆ.
ಇತ್ತೀಚಿನ ದಿನಗಳಲ್ಲಿ, ಚಿರತೆ-ಮಾನವ ಸಂಘರ್ಷ ತುಂಬಾ ಸಾಮಾನ್ಯವಾಗಿದ್ದು, ಹೆಚ್ಚಿನ ಜನರು ಇದನ್ನು ಗಮನಿಸುವುದಿಲ್ಲ: ಜೈಪುರ ಜಿಲ್ಲೆಯ ಜಮ್ವರಮ್‌ಗಢ ಪ್ರದೇಶದಲ್ಲಿ ಇತ್ತೀಚೆಗೆ ಒಂದೂವರೆ ವರ್ಷದ ಬಾಲಕನನ್ನು ಚಿರತೆ ಕೊಂದಿದೆ. ಫೆಬ್ರವರಿ 10 ರಂದು ಕರ್ನಾಟಕದ ಮೈಸೂರು ಜಿಲ್ಲೆ ಹಾಗೂ ಮಹಾರಾಷ್ಟ್ರದ ಸತಾರಾ ಜಿಲ್ಲೆಯಿಂದ ವರದಿಯಾಗಿತ್ತು. ವಸತಿ ಪ್ರದೇಶಕ್ಕೆ ನುಗ್ಗಿದ್ದ ಚಿರತೆಗಳನ್ನು ನಂತರ ಸೆರೆ ಹಿಡಿಯಲಾಗಿತ್ತು.
ಫೆಬ್ರವರಿ 8 ರಂದು, ಕಾಡು ಚಿರತೆಯೊಂದು ದೆಹಲಿ-ಎನ್‌ಸಿಆರ್‌ನ ಗಾಜಿಯಾಬಾದ್ ನ್ಯಾಯಾಲಯಕ್ಕೆ ಪ್ರವೇಶಿಸಿತು. ಇದು ಎಂಟು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಾಯಿ ಸುತ್ತ ರಕ್ತ ಚೆಲ್ಲಿದ್ದ ದಿಗ್ಭ್ರಮೆಗೊಂಡ ಚಿರತೆ ನ್ಯಾಯಾಲಯದ ಮೂಲೆಯೊಂದರಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ ದೃಶ್ಯ ಕೂಡಾ ವೈರಲ್ ಆಗಿತ್ತು.
ಚಿರತೆಯ ಅಸಹನೆಯ ವರ್ತನೆಗೆ ಸಿಡಿವಿ ರೋಗ ಕಾರಣ ಎಂದು ಹೊಸ ಅಧ್ಯಯನದಲ್ಲಿ ತಿಳಿದುಬಂದಿದೆ. ಸಿಡಿವಿಯನ್ನು ಕ್ಯಾನೈನ್ ಮೊರ್ಬಿಲ್ಲಿವೈರಸ್ ಎಂದೂ ಕರೆಯುತ್ತಾರೆ. ಇದು ಮಾಂಸಾಹಾರಿ ಪ್ರಾಣಿಗಳಲ್ಲಿ 'ದಿಗ್ಭ್ರಮೆ' ಮತ್ತು 'ಭಯ ಕಳೆದುಕೊಳ್ಳುವಂತೆ ನರಗಳ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ- ಪ್ರಾಣಿ ಸಂಘರ್ಷ ಪ್ರಕರಣಗಳು: 3 ವರ್ಷಗಳಲ್ಲಿ 63 ಚಿರತೆಗಳ ಸೆರೆ
'ನೇಪಾಳದಲ್ಲಿನ ಹುಲಿಗಳು ಮತ್ತು ಚಿರತೆಗಳಲ್ಲಿ ಸಿಡಿವಿ' ಅಧ್ಯಯನ ಜನವರಿ 28 ರಂದು ಅಂತಾರಾಷ್ಟ್ರೀಯ ಜರ್ನಲ್ ನಲ್ಲಿ ಪ್ರಕಟವಾಗಿತ್ತು. ಇದರಲ್ಲಿ 2020-2022ರ ನಡುವೆ ಸಿಡಿವಿಯೊಂದಿಗೆ ಮಾರಣಾಂತಿಕ ನರ ಸಮಸ್ಯೆಯ ಕಾಯಿಲೆಯಿಂದ ಬಳಲುತ್ತಿದ್ದ ಆರು ಭಾರತೀಯ ಚಿರತೆಗಳನ್ನು ನೇಪಾಳಕ್ಕೆ ನೀಡಲಾಗಿತ್ತು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಭಾರತದ ಮಾಂಸಾಹಾರಿಗಳಾದ ಹುಲಿ ಮತ್ತು ಚಿರತೆಗಳು ಸಹ ಅಪಾಯಕಾರಿ ವೈರಸ್‌ನಿಂದ ಸೋಂಕಿಗೆ ಒಳಗಾಗಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. ರೇಬಿಸ್‌ನ ಸಂದರ್ಭದಲ್ಲಿ ಸಿಡಿವಿ-ಸೋಂಕಿತ ಪ್ರಾಣಿಗಳು ಮನುಷ್ಯರ ಭಯವನ್ನು ಕಳೆದುಕೊಳ್ಳುವುದು ಸಾಧ್ಯ ಎಂದು ಭಾರತೀಯ ವನ್ಯಜೀವಿ ಸಂಸ್ಥೆ ಡೀನ್ ಡಾ. ಡಾ. ಯದ್ವೇಂದ್ರದೇವ್ ಝಾಲಾ ತಿಳಿಸಿದ್ದಾರೆ.
ಪ್ರಸ್ತುತ ಉಪಖಂಡದಾದ್ಯಂತ ಸಿಡಿವಿ ರೋಗವಿದೆ ಎಂದು ಭಾರತೀಯ ವನ್ಯಜೀವಿ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಸಿಂಹ, ತೋಳ, ನರಿ, ಹುಲಿ, ಚಿರತೆ ಮತ್ತು ಕತ್ತೆಕಿರುಬಗಳಲ್ಲಿ ಸಿಡಿವಿ ಪತ್ತೆ ಹಚ್ಚಿರುವುದಾಗಿ ಝಾಲಾ ಹೇಳುತ್ತಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್‌ಪಿ ಯಾದವ್ ಕೂಡಾ ಮಾಂಸಾಹಾರಿ ಪ್ರಾಣಿಗಳಲ್ಲಿ ಸಿಡಿವಿ-ಪ್ರೇರಿತ ಅಸಹಜ ನಡವಳಿಕೆಯನ್ನು ಒಪ್ಪುತ್ತಾರೆ.
ಸಿಡಿವಿ ಹೇಗೆ ಕಾರ್ಯನಿರ್ವಹಿಸುತ್ತದೆ?
ಇದನ್ನು ಸ್ಥೂಲವಾಗಿ ಮೂರು ಹಂತಗಳಾಗಿ ವರ್ಗೀಕರಿಸಲಾಗಿದೆ. ಆರಂಭಿಕ ಹಂತದಲ್ಲಿ ಜ್ವರ ಮತ್ತು ರೋಗ ನಿರೋಧಕ ಶಕ್ತಿ ಕುಂದಿರುತ್ತದೆ. ವೈರಸ್ ಅಂಗಾಂಶಕ್ಕೆ ಸೋಂಕು ಉಂಟುಮಾಡಿದಾಗ ತೀವ್ರವಾದ ಹಂತ ತಲುಪುತ್ತದೆ. ಪರಿಣಾಮವಾಗಿ ಕಣ್ಣುಗಳು ಮತ್ತು ಮೂಗುಗಳಿಂದ ನೀರು ಸೋರುವುದು, ಉಸಿರಾಟದ ತೊಂದರೆ ಮತ್ತಿತರ ಸಮಸ್ಯೆಗಳು ಬರುತ್ತದೆ. ಕೆಲ ಪ್ರಾಣಿಗಳು ಈ ಹಂತದಲ್ಲಿ ಸಾವನ್ನಪ್ಪುತ್ತವೆ, ಆದರೆ, ಮತ್ತೆ ಇತರ ಪ್ರಾಣಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತವೆ ಎಂದು ಅಧ್ಯಯನ ಹೇಳುತ್ತದೆ. ಮೂರನೇ ಹಂತದಲ್ಲಿ ಪ್ರಾಣಿಗಳಲ್ಲಿ ನರದ ಸಮಸ್ಯೆ ಉಂಟಾಗುತ್ತದೆ. 2003 ರಲ್ಲಿ ರಷ್ಯಾದಲ್ಲಿಆರಂಭಿಕವಾಗಿ ಸಿಡಿವಿ ಪತ್ತೆಯಾಯಿತು. ನಂತರ ಇಂಡೋನೇಷ್ಯಾ ಮತ್ತು ಭಾರತದಲ್ಲಿನ ಹುಲಿಗಳು ಮತ್ತು ಚಿರತೆಗಳಲ್ಲಿ ಈ ರೋಗ ಗುರುತಿಸಲಾಯಿತು. ಈ ರೋಗ ಉಂಟುಮಾಡುವರಲ್ಲಿ ನಾಯಿಗಳು ಪ್ರಮುಖವಾಗಿವೆ ಎಂದು ಹೇಳುವ ನಾಗಪುರ ಹುಲಿಕೇಂದ್ರದ ಪ್ರೊ. ನಿಶಿಕಾಂತ್ ಮುಖರ್ಜಿ, ಸಿಡಿವಿ ಕಾಯಿಲೆಯ ಅಪಾಯವನ್ನು ತಗ್ಗಿಸಲು ರೇಬಿಸು ಚುಚ್ಚುಮದ್ದು ಮಾತ್ರ ಉಪಯುಕ್ತ ತಂತ್ರವಾಗಿದೆ ಎನ್ನುತ್ತಾರೆ.
ಇದನ್ನೂ ಓದಿ: ಜನ-ಕೇಂದ್ರಿತ ಪರಿಹಾರಗಳು ಬರಬೇಕು: ಚಿರತೆಗಳ ದಾಳಿ ಕುರಿತು ತಜ್ಞರು ಅಭಿಮತ
ಮಾರಣಾಂತಿಕ ವೈರಸ್
ಕ್ಯಾನೈನ್ ಡಿಸ್ಟೆಂಪರ್ ವೈರಸ್ (ಸಿಡಿವಿ) ದೊಡ್ಡ ಬೆಕ್ಕುಗಳಿಗೆ ಮನುಷ್ಯರ ಬಗ್ಗೆ ಕಡಿಮೆ ಭಯಪಡುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಚಿರತೆ ಆಗಾಗ್ಗೆ ಆಹಾರಕ್ಕಾಗಿ ಜನವಸತಿಗಳನ್ನು ಪ್ರವೇಶಿಸಲು ಕಾರಣವಾಗಬಹುದು. ಸಾಕು ನಾಯಿಗಳ ಬೇಟೆಯು ಸಾಂಕ್ರಾಮಿಕ ವೈರಸ್ ಪಡೆಯುವ ಪ್ರಮುಖ ಮಾರ್ಗವಾಗಿದೆ. 2020-22ರ ನಡುವೆ ನೇಪಾಳಕ್ಕೆ ನೀಡಲಾದ 6 ಭಾರತೀಯ ಚಿರತೆಗಳಲ್ಲಿ ನರ ಸಮಸ್ಯೆ ಪತ್ತೆಯಾಗಿದೆ ಎಂದು ಅಧ್ಯಯನ ತಿಳಿಸುತ್ತದೆ. ಈ ಸೋಂಕಿತ ಪ್ರಾಣಿಗಳಲ್ಲಿ ವಿಶಿಷ್ಠ ರೋಗ ಲಕ್ಷಣ ಕಂಡುಬರುತ್ತವೆ.